ಕೆರೆಗಳನ್ನು ಕಟ್ಟಿಸುವುದು, ಬೇಸಾಯಕ್ಕೆ ನೀರೊದಗಿಸುವುದು ಇಹಪರಗಳಲ್ಲಿ ಒಳ್ಳೆಯ ಸ್ಥಾನ, ಸದ್ಗತಿಗಳನ್ನು ನೀಡುವ ಕಾರ್ಯ ಎಂದು ನಮ್ಮ ಪೂರ್ವಿಕರು ನಂಬಿದ್ದರಿಂದ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪುರಾತನವಾದ ಕೆರೆಗಳು ಕಂಡುಬರುತ್ತವೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಹೆಚ್ಚಾಗುತ್ತಿದ್ದ ಕೃಷಿಭೂಮಿಗೆ ಅನುಗುಣವಾಗಿ ಕೆರೆ,...
೧೯೯೭ರಲ್ಲಿ ಹಲವಾರು ಕಡೆಗಳಲ್ಲಿ ನಡೆದಿದ್ದ ರಾಜಕೀಯ ರ್ಯಾಲಿಗಳಲ್ಲಿ ‘ದೇಶ್ ಕಾ ಪ್ರಧಾನಮಂತ್ರಿ ಕೈಸಾ ಹೋ?’ ಎಂಬ ಪ್ರಶ್ನೆಗೆ ಇನ್ನೊಂದು ಜನಸ್ತೋಮ ’ಅಟಲ್ ಬಿಹಾರಿ ಜೈಸಾ ಹೋ’ ಎಂದು ಉದ್ಗಾರಗಳನ್ನು ತೆಗೆಯುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ವಾಜಪೇಯಿ ಅವರು ಭಾಷಣವನ್ನು ಇನ್ನೇನು ಆರಂಭಿಸಬೇಕು...
ಒಂದು ರಾಷ್ಟ್ರದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನುವ ಒಂದು ಮಾತು ಪ್ರಸಿದ್ಧವೇ ಇದೆ. ಏಕೆಂದರೆ ಅವು ನಮ್ಮ ಮುಂದಿನ ಜನಾಂಗವಾದ ಇಂದಿನ ಮಕ್ಕಳ ಗರಡಿಮನೆಗಳು. ಆದರೆ ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಗೆ ಎಷ್ಟು ಮಹತ್ತ್ವವನ್ನು ನೀಡುತ್ತವೆ? ದೇಶದ ಸರ್ಕಾರಗಳಿಗೆ...
ಕರ್ನಾಟಕ ಶಾಸ್ತ್ರೀಯಸಂಗೀತದ ಧ್ರುವತಾರೆ ಶ್ರೀ ತ್ಯಾಗರಾಜರ ೨೫೦ನೇ ಜನ್ಮವರ್ಷದ ನೆನಪು ಶತಶತಮಾನಗಳಿಂದ ನಮ್ಮ ಪುಣ್ಯಭೂಮಿ ಭಾರತದೇಶದಲ್ಲಿ ಅನೇಕ ಸಾಧು-ಸಂತರು, ವಚನಕಾರರು, ದಾಸವರೇಣ್ಯರು ಜನಸಾಮಾನ್ಯರ ಜೀವನ ಸುಖಮಯವಾಗಲೆಂದೇ ಪ್ರಾದೇಶಿಕ ಭಾಷೆಗಳಲ್ಲಿ ಸರಳ, ಸುಂದರ ಸಾಹಿತ್ಯಗಳನ್ನು ರಚಿಸಿ ಭಕ್ತಿಯ ಪ್ರತಿಪಾದನೆ ಮಾಡುತ್ತ ಭವ್ಯ ಪರಂಪರೆಯನ್ನು...
ಶ್ರೀರಂಗಂ, ತಿರುಮಲ ಮತ್ತು ಮೇಲುಕೋಟೆಯ ತಿರುನಾರಾಯಣ ದೇವಸ್ಥಾನಗಳ ದಿನನಿತ್ಯದ ಆಡಳಿತಾತ್ಮಕ ಚಟವಟಿಕೆಗಳನ್ನು ಶ್ರೀಮದ್ ರಾಮಾನುಜರು ವ್ಯವಸ್ಥಿತಗೊಳಿಸಿದರು. ಶ್ರೇಷ್ಠ ಪ್ರಬಂಧನಕಾರರಾದ ಶ್ರೀಮದ್ ರಾಮಾನುಜರು ಮನಸ್ಸು-ಮನಸ್ಸುಗಳನ್ನು ಬೆಸೆಯುವಲ್ಲಿ ಬಳಸಿದ ಪ್ರಬಂಧನಶಾಸ್ತ್ರದ ತತ್ತ್ವಗಳು ಇಂದಿಗೂ ನಮಗೆ ಆದರ್ಶಪ್ರಾಯವಾಗಿವೆ. ಈ ವರ್ಷ ನಾವು ಶ್ರೀಮದ್ ರಾಮಾನುಜರ ಜನ್ಮಸಹಸ್ರಮಾನೋತ್ಸವವನ್ನು...
ಭಗವಂತನು ಜೀವರನ್ನು ಉದ್ಧಾರಮಾಡುವುದಿರಲಿ; ಭಗವಂತನನ್ನೇ ಆಚಾರ್ಯರು ಉದ್ಧಾರಮಾಡಿದರಂತೆ! ಕೆಟ್ಟದೃಷ್ಟಿಗಳೆಂಬ ಹಳ್ಳದಲ್ಲಿ ಬಿದ್ದು ಅಸಹಾಯನಾಗಿ ಒದ್ದಾಡುತ್ತಿದ್ದ ಪರಬ್ರಹ್ಮನನ್ನು ರಾಮಾನುಜರು ಕೈಹಿಡಿದು ಮೇಲೆತ್ತಿ ಬದುಕಿಸಿದರಂತೆ! ಲೇ: ಶಾಸ್ತ್ರಚೂಡಾಮಣಿ ವಿದ್ಯಾಲಂಕಾರ ಪ್ರೊ|| ಸಾ.ಕೃ. ರಾಮಚಂದ್ರರಾವ್ ಪ್ರಚಲಿತ ಶ್ರೀವೈ಼ಷ್ಣವಸಂಪ್ರದಾಯಕ್ಕೆ ರಾಮಾನುಜಾಚಾರ್ಯರೇ ಪ್ರವರ್ತಕರು; ಆ ಜನಾಂಗವನ್ನು ರೂಢಿಸಿದವರು ಅವರೇ. ಮತತ್ರಯಗಳಲ್ಲಿ...
ಹತ್ತನೆಯ ಶತಮಾನದ ವೇಳೆಗೆ ಅದ್ವೈತಪಂಥದ ವಿಕೃತಾಭಾಸಗಳೂ ಭಕ್ತಿಮಾರ್ಗದ ಬಗೆಗೆ ತಿರಸ್ಕಾರಗಳೂ ಹುಟ್ಟಿಕೊಂಡಿದ್ದ ಪರಿಸರದಲ್ಲಿ ಅದ್ವೈತದರ್ಶನಕ್ಕೂ ಭಕ್ತಿಸಾಧನೆಗೂ ವಿರೋಧವಿಲ್ಲವೆಂದು ಸಾರಿದ ಅವತಾರಪುರುಷರು, ಶ್ರೀರಾಮಾನುಜರು. ವಿಶಿಷ್ಟಾದ್ವೈತವೆಂಬ ಸಮನ್ವಯಮಾರ್ಗದಲ್ಲಿ ಆಚಾರ್ಯರು ವೇದೋಪನಿಷತ್ಸಾಹಿತ್ಯವನ್ನು ಮಾತ್ರವಲ್ಲದೆ ದ್ರಾವಿಡ ಅನುಭಾವಿಗಳ ಪ್ರಬಂಧವಾಙ್ಮಯವನ್ನೂ ವ್ಯಾಪಕವಾಗಿ ಬಳಸಿಕೊಂಡು ಪ್ರಸಿದ್ಧರಾದರು. ಭಕ್ತರ ಹೃದಯವೇ ದೇವರ...
ಈಗ, ಮಾನವಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ, ಇಂಡಿಯನ್ ಕೌನ್ಸಿಲ್ ಆಫ಼್ ಹಿಸ್ಟಾರಿಕಲ್ ರೀಸರ್ಚ್ ಕೈಗೊಂಡಿರುವ ಸಮೀಕ್ಷೆಯಲ್ಲಿ, ಈ ಸೇತುವೆ ಮಾನವನಿರ್ಮಿತ ಎಂದು ಖಚಿತವಾಗಿ ತಿಳಿದುಬಂದಲ್ಲಿ, ಈ ಭೂಮಿಯ ಮೇಲೆ ರಾಜ್ಯವಾಳಿದ ಚಕ್ರವರ್ತಿ ರಾಮನಿಂದ ನಿರ್ಮಿತವಾದ ಈ ಸೇತುವೆ ೭೦೦೦ ವರ್ಷಗಳಷ್ಟು ಹಿಂದಿನ ಕಾಲಘಟ್ಟಕ್ಕೆ...
ಕೆಲವು ವೃತ್ತಿಗಳಲ್ಲಿರುವವರು ಪರಿಶುದ್ಧರಾಗಿ ಇರಬೇಕೆಂದು ಸಮಾಜ ನಿರೀಕ್ಷಿಸುತ್ತದೆ; ಮುಖ್ಯವಾಗಿ ಸಮಾಜಕ್ಕೆ ಬೋಧಿಸುವ ಅಥವಾ ತಿಳಿವಳಿಕೆ ಹೇಳುವಂತಹ ಸ್ಥಾನಗಳಲ್ಲಿ ಇರುವವರು. ಒಂದು ನೆಲೆಯಲ್ಲಿ ಅರ್ಚಕರು, ಪುರೋಹಿತರು ಅಂತಹ ಸ್ಥಾನದಲ್ಲಿದ್ದರೆ, ಮಕ್ಕಳಿಗೆ ಪಾಠ ಹೇಳುವ ಅಧ್ಯಾಪಕರು, ಪ್ರಾಚಾರ್ಯರು ಖಂಡಿತವಾಗಿಯೂ ಅಂತಹ ಸ್ಥಾನದಲ್ಲಿರುತ್ತಾರೆ. ಮಕ್ಕಳು ಮುಖ್ಯವಾಗಿ...
ಭಾರತದ ನಾಗರಿಕತೆ, ಇತಿಹಾಸ, ಅದರಲ್ಲೂ ಮುಖ್ಯವಾಗಿ ಋಗ್ವೇದದಂತಹ ಲಭ್ಯ ಪ್ರಾಚೀನ ಸಾಹಿತ್ಯದ ಕಾಲವು ಯೇಸುಕ್ರಿಸ್ತನ ಜನನಕಾಲದ ಸ್ವಲ್ಪ ಆಚೀಚೆ ಇರಬಹುದೇ ಹೊರತು, ಬಹಳಷ್ಟು ಹಿಂದೆ ಹೋಗುವಂತಿಲ್ಲ ಎಂಬ ಹಟಕ್ಕೆ ಬಿದ್ದ ಪಾಶ್ಚಾತ್ಯ, ವಿಶೇಷವಾಗಿ ಇಂಗ್ಲೆಂಡ್ಮೂಲದ ಇತಿಹಾಸಕಾರರು ಎಂತಹ ಆಭಾಸವನ್ನು ಸೃಷ್ಟಿಸಿದ್ದಾರೆಂದರೆ ಕ್ರಿಸ್ತಪೂರ್ವದ ಮೌರ್ಯಸಾಮ್ರಾಜ್ಯ, ಹಾಗೆಯೆ ಅದರ ಜೊತೆಗಿದ್ದ ಚಾಣಕ್ಯನ...
ಬೆಂಗಳೂರಿನ ಕೈಕೊಂಡ್ರನಹಳ್ಳಿ ಕೆರೆ ಪುನಶ್ಚೇತನಗೊಂಡ ಕಥೆ ನಗರೀಕರಣದ ಧಾವಂತದಲ್ಲಿ ಅನೇಕ ಕೆರೆಗಳು ಕುಖ್ಯಾತಿಯನ್ನೂ ತಂದುಕೊಟ್ಟಿವೆ. ಇವೆಲ್ಲವುಗಳ ನಡುವೆ ಪರಿಸರದ ಬಗ್ಗೆ ಕಾಳಜಿಯುಳ್ಳ ಒಂದಿಷ್ಟು ನಾಗರಿಕರ ಪ್ರಯತ್ನದಿಂದ ಕಸ ಕೊಳಚೆಯ ತೊಟ್ಟಿಗಳಾಗಿದ್ದ ಕೆರೆಗಳು ಪುನಃ ’ಕೆರೆ’ಗಳಾಗಿ ಪುನಶ್ಚೇತನಗೊಂಡ ಉದಾಹರಣೆಗಳೂ ಇವೆ. ಉದ್ಯಾನನಗರಿಯೆಂದು ಹೆಸರಾದ...
ಒಂದುಕಾಲದಲ್ಲಿ ಕೆರೆಗಳ ಊರಾಗಿದ್ದ ಬೆಂಗಳೂರು ಆಧುನಿಕತೆಯ ಓಟದಲ್ಲಿ ನೀರಿನ ಮೂಲಗಳನ್ನು ತನ್ನೊಡಲೊಳಗೆ ಸೇರಿಸಿಕೊಳ್ಳುತ್ತಾ ಸ್ಪರ್ಧೆಗೆ ಬಿದ್ದಿತು. ಉತ್ತಮಸ್ಥಿತಿಯಲ್ಲಿರುವ ಕೆರೆಗಳನ್ನು ಕಾಣುವುದೇ ಅಸಾಧ್ಯ ಎನ್ನುವ ಕಾಲಘಟ್ಟಕ್ಕೆ ಬಂದು ನಿಂತಿತು. ಆದರೆ ಪ್ರಕೃತಿ ಎಂದಿಗೂ ಮಾನವನ ಹಾಗೆ ಅಲ್ಲ. ವಿಷವನ್ನುಣಿಸಿದ ಮಾನವನಿಗೆ ಅಮೃತವನ್ನೇ ನೀಡಲು...
ಈ ಜಲಾಶಯವನ್ನು ಸೃಷ್ಟಿಸಿದ ಮೇಲೂ ಬ್ರಹ್ಮದೇವನಿಗೆ ಸುಧೆಯನ್ನು ಸೃಷ್ಟಿಸುವ ಆವಶ್ಯಕತೆ ಏನಿತ್ತೋ ತಿಳಿಯದು. ಈ ಸರಸಿಯ ನೀರೇನು ಅಮೃತಕ್ಕಿಂತ ಕಮ್ಮಿಯೇ? ಇದೂ ಅಮೃತದಂತೆಯೆ ಎಲ್ಲ ಇಂದ್ರಿಯಗಳನ್ನು ತಣಿಸುತ್ತದೆ ಬಾಣಭಟ್ಟನ ಸಂಸ್ಕೃತ ಗದ್ಯಕೃತಿ ’ಕಾದಂಬರಿ’ಯಲ್ಲಿ ಅಚ್ಛೋದ ಎನ್ನುವ ಸರೋವರದ ವರ್ಣನೆ ತುಂಬ ಪ್ರಸಿದ್ಧವಾದದ್ದು....
ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದೊಳಾದ ಭಾಗ್ಯವ ಹರಿ ಸಮರ್ಪಣೆ ಮಾಡಿ ಬದುಕಿರೊ… ಪುರಂದರದಾಸರ ಈ ತತ್ತ್ವಪದ ತ್ಯಾಗಜೀವನದ ಪ್ರತೀಕವಾಗಿದೆ. ತನಗಾಗಿ ಬದುಕದೆ ಇತರರಿಗಾಗಿ ಬದುಕುವ ಪಾಠವನ್ನು ಹೇಳುತ್ತದೆ. ಹಸು ತನ್ನ ಹಾಲನ್ನು ತಾನು ಕುಡಿಯುವುದಿಲ್ಲ. ಮರ...
ಕೆರೆಗಳು ಅತ್ಯಂತ ಹಳೆಯದಾದ ಮಾನವನಿರ್ಮಿತ ರಚನೆ. ಕೆರೆಅಂಗಳ, ಹಳ್ಳಗಳು, ತೂಬು, ಕೋಡಿ, ಕಾಲುವೆಗಳು, ಅಚ್ಚುಕಟ್ಟು ಮುಂತಾದ ಅನೇಕ ಅಂಗಗಳನ್ನೊಳಗೊಂಡ ಕೆರೆವ್ಯವಸ್ಥೆ ಬಹೋಪಯೋಗಿ. ಮುಖ್ಯವಾಗಿ ನೀರಾವರಿ, ಕುಡಿಯುವ ನೀರು, ಅಂತರ್ಜಲಮಟ್ಟ ಕಾಪಾಡುವಿಕೆ, ಮೀನುಗಾರಿಕೆ, ಫಲವತ್ತಾದ ಹೂಳು, ಮರಳು, ಇಟ್ಟಿಗೆ ಹಾಕಲು ಮಣ್ಣು….. ಮುಂತಾದ...
ಇಂದಿನ ದಿನಗಳಲ್ಲಿ ಕೆರೆಗಳು ಬಹಳಷ್ಟು ಸುದ್ದಿಯಲ್ಲಿವೆ; ಆದರೆ ಅದು ತಪ್ಪು ಕಾರಣಗಳಿಗಾಗಿ ಎಂಬುದು ಬೇಸರದ ವಿಷಯ. ಒಂದು ಕಾಲದಲ್ಲಿ ಕರ್ನಾಟಕದಾದ್ಯಂತ ಕಾಡುಗಳ ಜೊತೆ ಬೆಸೆದುಕೊಂಡ ಪವಿತ್ರತಾಣಗಳಾಗಿದ್ದ ಅವು ಇಂದು ಯಾರ ಸೊತ್ತೂ ಅಲ್ಲ ಎಂಬಂತೆ ಅನಾಥವಾಗಿವೆ; ಮತ್ತು ಬಹಳಷ್ಟು ಕಡೆ ಅವುಗಳ...
ಇದೀಗ ನಾವು ನಮ್ಮ ಕೆರೆಗಳನ್ನು ಉಳಿಸಲು ಏನನ್ನು ಮಾಡಬೇಕು ಎಂಬುದನ್ನು ಪುನರ್ವಿಮರ್ಶಿಸುವುದು ಅನಿವಾರ್ಯ. ಒಂದೊಮ್ಮೆ ನಮ್ಮ ಸಂಪ್ರದಾಯದ ಆಚರಣೆಗಳನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ ಕೆರೆಗಳ ಜೊತೆಗೆ ಇನ್ನೂ ಏನನ್ನು ಕಳೆದುಕೊಳ್ಳಲು ಹೊರಟಿದ್ದೇವೆ ಎನ್ನುವುದು ಕಾಣಿಸುತ್ತದೆ… ಇಂದು ನಾವು ಆಧುನಿಕತೆ ಹೆಸರಿನಲ್ಲಿ ನಮ್ಮ...
ಕೆರೆಗಳನ್ನು ಕಟ್ಟಿಸುವುದು, ಬೇಸಾಯಕ್ಕೆ ನೀರೊದಗಿಸುವುದು ಇಹಪರಗಳಲ್ಲಿ ಒಳ್ಳೆಯ ಸ್ಥಾನ, ಸದ್ಗತಿಗಳನ್ನು ನೀಡುವ ಕಾರ್ಯ ಎಂದು ನಮ್ಮ ಪೂರ್ವಿಕರು ನಂಬಿದ್ದರಿಂದ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪುರಾತನವಾದ ಕೆರೆಗಳು ಕಂಡುಬರುತ್ತವೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಹೆಚ್ಚಾಗುತ್ತಿದ್ದ ಕೃಷಿಭೂಮಿಗೆ ಅನುಗುಣವಾಗಿ ಕೆರೆ,...
ಹೀಗೊಂದು ಕಾಲವಿತ್ತು. ಊರಿನಲ್ಲಿ ಮನೆಯ ಗಂಡಸರನ್ನು ಬೆಳಗ್ಗೆ ಅವರವರ ಕೆಲಸಕಾರ್ಯಗಳಿಗೆ ಕಳಿಸಿಕೊಟ್ಟ ಮೇಲೆ, ಊರಿನ ಹೆಣ್ಣುಮಕ್ಕಳು, ಹೆಂಗಸರು ತೊಳೆಯಲಿರುವ ಬಟ್ಟೆಗಳನ್ನು, ಪಾತ್ರೆಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಕೆರೆಯ ಕಡೆಗೆ ದೌಡಾಯಿಸುತ್ತಿದ್ದರು. ಅಲ್ಲಿ ಎಲ್ಲರೂ ಜೊತೆಯಾಗಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತ ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ, ಸ್ನಾನಮಾಡುವ...
ನಿವೇದಿತಾರವರಿಗೆ ಹಿಂದೂಧರ್ಮದ ಶ್ರೇಷ್ಠತೆಯ ಸ್ಥಾಪನೆಯು ಆದ್ಯತೆಯ ಸಂಗತಿಯಾಗಿದ್ದೀತೇ ವಿನಾ ತಮ್ಮ ವ್ಯಕ್ತಿಪ್ರತಿಷ್ಠೆ ಬೆಳೆಯಬೇಕೆಂಬುದಾಗಿರಲಿಲ್ಲ. ಅನೇಕ ಸಂದರ್ಭಗಳಲ್ಲಿ ತಮಗೆ ಒಂದಷ್ಟು ಹೆಸರನ್ನು ತಂದುಕೊಡಬಹುದಾಗಿದ್ದ ಸನ್ನಿವೇಶಗಳನ್ನು ಅವರು ಪ್ರಯತ್ನಪೂರ್ವಕ ನಿವಾರಿಸುತ್ತಿದ್ದುದೂ ಉಂಟು. ನಿವೇದಿತಾರವರು ಸ್ವಾಮಿಜೀಯವರ ಬಗೆಗೆ ಬೆಳೆಸಿಕೊಂಡಿದ್ದ ಭಕ್ತಿಭಾವನೆಯು ಕೇವಲ ಆಕ?ಣೆಯ ಕಾರಣದಿಂದಲ್ಲ. ಅದರಲ್ಲಿ...
ಈ ಜಲಾಶಯವನ್ನು ಸೃಷ್ಟಿಸಿದ ಮೇಲೂ ಬ್ರಹ್ಮದೇವನಿಗೆ ಸುಧೆಯನ್ನು ಸೃಷ್ಟಿಸುವ ಆವಶ್ಯಕತೆ ಏನಿತ್ತೋ ತಿಳಿಯದು. ಈ ಸರಸಿಯ ನೀರೇನು ಅಮೃತಕ್ಕಿಂತ ಕಮ್ಮಿಯೇ? ಇದೂ ಅಮೃತದಂತೆಯೆ ಎಲ್ಲ ಇಂದ್ರಿಯಗಳನ್ನು ತಣಿಸುತ್ತದೆ ಬಾಣಭಟ್ಟನ ಸಂಸ್ಕೃತ ಗದ್ಯಕೃತಿ ’ಕಾದಂಬರಿ’ಯಲ್ಲಿ ಅಚ್ಛೋದ ಎನ್ನುವ ಸರೋವರದ ವರ್ಣನೆ ತುಂಬ ಪ್ರಸಿದ್ಧವಾದದ್ದು....
ಭಾರತದ ಪ್ರಥಮ ಮಹಾಕಾವ್ಯ ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಕಥನದೊಂದಿಗೆ ಇದು ಸೀತೆಯ ಮಹೋನ್ನತ ಚರಿತೆಯೂ ಹೌದು ಎನ್ನುವ ಉಲ್ಲೇಖ ಕಾಣುತ್ತದೆ. “ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್….. ಚಕಾರ ಚರಿತವ್ರತಃ” (ಬಾಲಕಾಂಡ: ೪-೭). ಇಡೀ ಕಾವ್ಯದಲ್ಲಿ ಸೀತೆ ಸ್ವತಃ ಮಾತನಾಡುವುದು...
ರಾಮಾಯಣ ಮಹಾಭಾರತಗಳಂತಹ ಪ್ರಾಚೀನ ಕಾವ್ಯಗಳು ಕೇವಲ ಪುರಾಣಗಳೋ ಅಥವಾ ಐತಿಹ್ಯವೋ ಎನ್ನುವ ವಾದವಿವಾದಗಳೇನೇ ಇದ್ದರೂ, ಜನಪದಕ್ಕೆ ಈ ವಾದ-ವಿವಾದಗಳಿಗಿಂತ, ಅವು ಜೀವನದ ಆದರ್ಶ ಕಥಾನಕಗಳು ಎನ್ನುವುದೇ ಮುಖ್ಯವಾಗುತ್ತದೆ. ರಾಮನಂಥ ಪಿತೃವಾಕ್ಯ ಪರಿಪಾಲಕನಿದ್ದ, ಭರತನಂಥ ಭ್ರಾತೃಪ್ರೇಮಿಯಿದ್ದ, ಅವರ ಬದುಕಿನ ಆದರ್ಶಗಳು ಹೀಗಿದ್ದವು, ನಾವೂ...
ಶ್ರೀ ಶಂಕರ ಜಯಂತಿಯ ಪ್ರಯುಕ್ತ ಕಿರುನಾಟಕ [ದೃಶ್ಯ ೧ – ಮಂಡನಮಿಶ್ರ ಅವರ ಮನೆ. ಉಭಯಭಾರತಿ ಹೊಸ್ತಿಲು ತೊಳೆದು , ಅಂಗಳದಲ್ಲಿ ನೀರನ್ನು ಥಳಿ ಹೊಡೆದು ರಂಗವಲ್ಲಿ ಹಾಕಿ , ತುಳಸಿಗಿಡಕ್ಕೆ ನೀರು ಹಾಕಿ ನಮಿಸುತ್ತಾ ಪದ ಹೇಳುತ್ತಿರುವುದು.] ಪದ :...
ನಾವಿರುವ ಪರಿಸ್ಥಿತಿಯನ್ನು ನೆನೆಯುವುದಕ್ಕೇ ಭಯವಾಗುತ್ತಿತ್ತು. ನಮ್ಮ ಮನೆಯ ಹೆಣ್ಣು ನಮ್ಮ ಮನೆಯವರಿಂದಲೇ ಅಪಹರಿಸಲ್ಪಟ್ಟು ನಮ್ಮೂರಿನಲ್ಲೇ ಇದ್ದಾಳೆ. ಎಲ್ಲಿದ್ದಾಳೆಂದೂ ಗೊತ್ತಿದೆ. ಆದರೆ ಬಿಡಿಸಿ ತರುವುದು ಮಾತ್ರ ನಮ್ಮಿಂದಾಗದು. ಇದಕ್ಕಿಂತ ಕೆಟ್ಟ ಸನ್ನಿವೇಶ...
ಮೊಗೆದು ಕೊಟ್ಟರೂ ಬತ್ತದ ಜೀವಜಲ ಪ್ರೀತಿ… ಹಂಚಿಬಿಡು… ಈಗ ಎಲ್ಲೆಲ್ಲೂ ಕ್ಷಾಮ… – ಅಮೃತಾ...
ಬೆವರಾಗಿಸಿ ನಾ ದುಡಿಯಬೇಕು ನಿನ್ನ ನಾಳೆಗಳಿಗಾಗಿ ಓ ತಾಯಿ ಭಾರತಿಯೇ, ನೀಡೆನಗೆ ಧೈರ್ಯವನು ಬಾಹುಬಲವನ್ನು ಶುದ್ಧಶೀಲವನು...
ಉತ್ಥಾನ ವಾರ್ಷಿಕ ಕಥಾಸ್ಪರ್ಧೆ ೨೦೧೩ರಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ ಎಲ್ಲರ ಬದುಕೂ ಒಂದು ತೆರೆದಿಟ್ಟ ಪುಸ್ತಕ. ಆ ಪುಸ್ತಕದಲ್ಲಿ ಎಷ್ಟು ಪುಟಗಳಿವೆ ಅಂತ ಯಾರಿಗೂ ಗೊತ್ತಿರೋಲ್ಲ. ಮುಂದಿನ ಪುಟದಲ್ಲಿ ಏನಿದೆ ಅಂತ ಗೊತ್ತಿಲ್ಲ. ನಾವು ಪುಟ ತೆಗೆಯೋ ಹಾಗಿಲ್ಲ. ಅದೇ...
ಮಸುಕು ಬೆಟ್ಟದ ದಾರಿ ಲೇಖಕರು: ಎಂ.ಆರ್. ದತ್ತಾತ್ರಿ ಪ್ರಕಾಶಕರು: ಮನೋಹರ ಗ್ರಂಥಮಾಲೆ, ಧಾರವಾಡ ಬೆಲೆ: ರೂ. ೩೦೦ ಚಿಕ್ಕಮಗಳೂರಿನ ಸುಂದರ ಪರಿಸರದಲ್ಲಿ ಮೂಡುವ `ಮಸುಕು ಬೆಟ್ಟದ ದಾರಿ’ ಕಾದಂಬರಿ ತನ್ನ ವಸ್ತುವಿನಿಂದಾಗಿ ಅನನ್ಯವಾಗಿದೆ. `ಹೈಪರ್ ಥೈಮೆಸ್ಟಿಕ್ ಸಿಂಡ್ರೋಮ್’ ಎಂಬ ವಿಚಿತ್ರ,...
ನಾಗರಾಜ, ಚಿಗರೆಯಮರಿ ಥರ ಛಂಗನೆ ಹೊರಗೆ ನೆಗೆಯುತ್ತಿದ್ದ ರಿಂಕುವಿನ ಹಿಂದೆ ಹದಿನೆಂಟರ ಹುಡುಗನಂತೆ ಛಲ್ಲಾಂಗ್ ಹಾಕಿ ಓಡಿದ. ಮನೆಯ ತಿರುವಿನಲ್ಲೇ ಜೋರಾಗಿ ನಗುವ ಶಬ್ದ ಕೇಳಿ ನಾಗರಾಜನ ಮುಖ ಗಂಟಿಕ್ಕಿತು. ಭುಸುಗುಟ್ಟತೊಡಗಿದ. ಒಂದಲ್ಲ…ಎರಡಲ್ಲ, ಮೂರು….! ಅದರಲ್ಲಿ, ಕೇಳಿಯೇ ಮರೆತುಹೋಗಿದ್ದ ಸೀತೆಯ...