
ಕಲೆ ಒಳಗಣ್ಣಿಗೆ ಮಾತ್ರ ಗೋಚರಗೊಳ್ಳುವ ಸತ್ಯ ಭಾರತೀಯ ಚಿತ್ರರಚನಾ ವಿಧಾನಗಳನ್ನು ಗಮನಿಸುವುದಾದರೆ, ’ವಿ?ಧರ್ಮೋತ್ತರ ಪುರಾಣ’ ಮತ್ತು ’ಚಿತ್ರಲಕ್ಷಣ’ ಗ್ರಂಥಗಳಲ್ಲಿ ಚಿತ್ರರಚನೆಗೆ ಅಗತ್ಯವಾದ ಲಕ್ಷಣಗಳನ್ನು ಸೂಚಿಸಲಾಗಿದೆ. ದೇವರ ಮತ್ತು ಮಾನವರ ಚಿತ್ರಗಳ ರಚನೆಯ ಲಕ್ಷಣಗಳ ವಿವರಗಳು ಅವುಗಳಲ್ಲಿ ಉಕ್ತವಾಗಿವೆ: ’ಯಥಾ ಸುಮೇರುಃ ಪ್ರವರೋ ನಗಾನಾಂ ಯಥಾಂಡಜಾನಾಂ ಗರುಡೋ ಪ್ರಧಾನಃ | ಯಥಾ ಜನಾನಾಂ ಪ್ರವರಃ ಕ್ಷಿತೀಶಃ ತಥಾ ಕಲಾನಾಮಿಹ ಚಿತ್ರಕಲ್ಪಃ || ಬೆಟ್ಟಗಳಲ್ಲಿ ಸುಮೇರು, ಹಾರುವ ಪಕ್ಷಿಗಳಲ್ಲಿ ಗರುಡ, ಮನುಷ್ಯರ ನಡುವೆ ರಾಜನು ಹೇಗೋ ಹಾಗೆ ವಿದ್ಯೆಗಳಲ್ಲಿ ಚಿತ್ರಕಲೆಯು; […]