ಈಚಿನ ದಶಕಗಳಲ್ಲಿ ಜೆನ್ ಪ್ರಸ್ಥಾನವು ವಿಶಾಲ ವಾಚಕವರ್ಗವನ್ನು ಆಕರ್ಷಿಸಿದೆ. ತಮಗಿರುವ ಜೆನ್ ಪರಿಚಯವನ್ನು ಮೆರೆಸುವುದು ಒಂದು ಮಟ್ಟದ ಫ್ಯಾಶನ್ ಆಗಿದೆಯೆಂದೂ ಹೇಳಬಹುದು. ಇದನ್ನು ತಪ್ಪೆನ್ನಬೇಕಾಗಿಲ್ಲ. ಒಂದು ಮುಖ್ಯ ಜ್ಞಾನಾಂಗದ ಹೊರಮೈಯ ಪರಿಚಯವಾದರೂ ಗಣನೀಯ ಪ್ರಮಾಣದ ಒಂದು ವರ್ಗಕ್ಕೆ ಲಭಿಸುವಂತಾಗಿರುವುದು ಅಪೇಕ್ಷಣೀಯವೇ. ಆದರೆ ಈ ಪ್ರವೃತ್ತಿಯಲ್ಲಿ ಒಂದು ಪರಿಮಿತಿಯೂ ಉಂಟು. ಜೆನ್ ಪರಂಪರೆಯಲ್ಲಿ ಪ್ರಚಲಿತವಾದ ಆಖ್ಯಾಯಿಕೆಗಳು ತಮ್ಮ ಘಟನಾ ಸ್ವಾರಸ್ಯಗಳಿಂದಾಗಿ ಹೆಚ್ಚು ಜನರನ್ನು ಆಕರ್ಷಿಸಿವೆ. ಸಾಮಾನ್ಯ ಓದುಗರ ಗಮನವು ಕುತೂಹಲಾಂಶಗಳಲ್ಲಿ ನೆಟ್ಟಿರುತ್ತದೆ. ಆ ಘಟನೆಗಳೂ ನಿಜಜೀವನ ಪ್ರಸಂಗಗಳೂ ಯಾವ […]
ಜೆನ್ ಅನುಭವ
Month : October-2019 Episode : Author : ಎಸ್.ಆರ್. ರಾಮಸ್ವಾಮಿ