
ಫೇಸ್ಬುಕ್ ಮೂಲಕ ಲಕ್ಷಾಂತರ ಮಂದಿಯ ಖಾಸಗಿ ಮಾಹಿತಿಗಳು ವಾಣಿಜ್ಯೋದ್ದೇಶದಿಂದ ಅನಧಿಕೃತವಾಗಿ ಬಳಕೆಗೊಂಡು ಬಿಡಿಬೀಸಾಗಿ ವಿತರಣೆಯಾಗುತ್ತಿದ್ದುದು ಬಯಲಾಗಿ ಎಲ್ಲೆಡೆ ಆತಂಕ ಸೃಷ್ಟಿಸಿದ್ದುದರ ಹಿಂದುಗೂಡಿ ಫೇಕ್-ನ್ಯೂಸ್ ಎಂಬ ವೈರಲ್- ಫೀವರ್ ವ್ಯಾಪಕವಾಗಿ ಹರಡಿರುವುದು ಚಿಂತೆ ತಂದಿದೆ. ಫೇಕ್-ನ್ಯೂಸ್ ಎಂದರೆ ಆಧಾರರಹಿತವಾದ ಕಪೋಲಕಲ್ಪಿತ ಸುಳ್ಳುಸುದ್ದಿಗಳು. ಇವುಗಳಿಂದ ಯಾರೋ ಕೆಲವರಿಗೆ ಅಗ್ಗದ ಮನರಂಜನೆ ದೊರೆಯುವಷ್ಟಕ್ಕೆ ಇವುಗಳ ಸಂಚಲನೆ ಸೀಮಿತಗೊಂಡಿದ್ದರೆ ಉಪೇಕ್ಷೆ ಮಾಡಬಹುದಿತ್ತೇನೋ. ಆದರೆ ಕೆಲವು ಫೇಕ್-ನ್ಯೂಸ್ಗಳು ಎಷ್ಟು ಪ್ರಮಾದಕರವೆಂದರೆ ಅವು ವ್ಯಾಪಕ ಸಂಘ?ಗಳಿಗೂ ಹಿಂಸಾಚರಣೆಗಳಿಗೂ ಕಾರಣವಾಗಿವೆ. ಹೀಗೆ ಇವನ್ನು ಒಂದು ವಿಷಾಕ್ತ ವ್ರಣವೆಂದೇ ಭಾವಿಸಬೇಕಾಗಿದೆ. ತಿಳಿದೂ ತಿಳಿದೂ ಬುಡವಿಲ್ಲದ ಕಲ್ಪಿತ ಸುದ್ದಿಗಳನ್ನು […]