ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ದೀಪ್ತಿ

ದೀಪ್ತಿ

ದೀಪ್ತಿ

ಯಸ್ಯ ವಾಙ್ಮನಸೀ ಶುದ್ಧೇ ಸಮ್ಯಗ್ಗುಪ್ತೇ ಚ ಸರ್ವದಾ | ಸ ವೈ ಸರ್ವಮವಾಪ್ನೋತಿ ವೇದಾಂತೋಪಗತಂ ಫಲಮ್ || – ಮನುಸ್ಮೃತಿ “ಯಾರ ಮಾತೂ ಮನಸ್ಸೂ ಪರಿಶುದ್ಧವಾಗಿವೆಯೋ ಮತ್ತು ಸಂಪೂರ್ಣ ನಿಯಂತ್ರಣದಲ್ಲಿವೆಯೋ ಅಂಥವನು ವೇದಾಂತಶಾಸ್ತ್ರದಲ್ಲಿ ನಿರೂಪಿತವಾಗಿರುವ ಎಲ್ಲ ಫಲವನ್ನೂ ಪಡೆಯುತ್ತಾನೆ.” ಯಾವುದೊ ಕಾರ್ಯದಿಂದ ಕ್ಲೇಶದ ಅನುಭವ ಉಂಟಾಗುವುದು ಆ ಕಾರ್ಯದ ಹಿಂದಿರುವ ಮನಸ್ಸು ಶಬಲಿತವಾಗಿದ್ದಾಗ. ಗುರು ಗೋವಿಂದಸಿಂಹರ ಮನಸ್ಸು ವಿರಕ್ತಿಗೊಳಗಾಗಿತ್ತು. ಮಕ್ಕಳೂ ಸೇರಿದಂತೆ ತನ್ನವರೆಲ್ಲರನ್ನೂ ಕಳೆದುಕೊಂಡಿದ್ದರು. ಇನ್ನೂ ಬದುಕಿರುವುದರಲ್ಲಿ ಅರ್ಥವಿಲ್ಲವೆನಿಸತೊಡಗಿತ್ತು. ತಮ್ಮ ಉಯಿಲನ್ನು ಬರೆದರು. ಅದರಲ್ಲಿ ಒಕ್ಕಣಿಸಿದರು: “ನನ್ನವರೆಲ್ಲರ […]

ದೀಪ್ತಿ

ನಮೋಸ್ತು ಕೋಪದೇವಾಯ ಸ್ವಾಶ್ರಯಜ್ವಾಲಿನೇ ಭೃಶಮ್ | ಕೋಪ್ಯಸ್ತು ಮಮ ವೈರಾಗ್ಯದಾಯಿನೇ ಲೋಕಬೋಧಿನೇ || “ತನಗೆ ಆಶ್ರಯ ನೀಡಿದವನನ್ನೇ ಸುಟ್ಟುಹಾಕುವ ಕೋಪವೆಂಬ ದೇವತೆಗೆ ನಮಸ್ಕಾರ. ಏಕೆಂದರೆ ಕೋಪವು ನನಗೆ ವೈರಾಗ್ಯವನ್ನೂ ವಿವೇಕವನ್ನೂ ಕಲಿಸುತ್ತದೆ.” ಕೇಡು ಮಾಡಿದವರಿಗೆ ಪ್ರತೀಕಾರ ಮಾಡಬೇಕೆನಿಸುವುದು ಪ್ರಕೃತಿಸಹಜ. ಆದರೆ ಇಂತಹ ದ್ವೇಷ-ಸೇಡುಗಳ ಮನೋವೃತ್ತಿಯನ್ನು ಮೀರುವುದು ಆತ್ಮಸಂಸ್ಕಾರಕಾರಿ. ಪ್ರಸಿದ್ಧ ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್‌ನನ್ನು ಕೆಲವು ದುಷ್ಟರು ಕೊಲ್ಲಲು ಯತ್ನಿಸಿದರು. ಅದೃಷ್ಟವಶಾತ್ ಅದು ಫಲಿಸಲಿಲ್ಲ. ಆದರೆ ಅದನ್ನು ರಾಮಪ್ರಸಾದ್ ಮರೆಯಲಿಲ್ಲ; ಹೇಗಾದರೂ ಅದಕ್ಕೆ ಸೇಡನ್ನು ತೀರಿಸಬೇಕೆಂದು ದೃಢಚಿತ್ತನಾದ, ಅದನ್ನು […]

ದೀಪ್ತಿ

ದಾತೃಯಾಚಕಯೋರ್ಭೇದಃ ಕರಾಭ್ಯಾಮೇವ ದರ್ಶಿತಃ | ಏಕಸ್ಯ ಗಚ್ಛತಾಧಸ್ತಾದುಪರ್ಯನ್ಯಸ್ಯ ತಿಷ್ಠತಾ || – ಬೃಹತ್ಕಥಾ “ಕೆಳಗೆ ಮುಂದಕ್ಕೆ ಮೇಲ್ಮುಖವಾಗಿ ಚಾಚಿರುವ ಕೈಯಿಂದ, ಮತ್ತು ಮೇಲಿರುವ ಇನ್ನೊಬ್ಬನ ಕೈ ಕೆಳಮುಖವಾಗಿ ಚಾಚಿರುವುದರಿಂದ – ಹೀಗೆ ದಾನಿಗೂ ಯಾಚಕನಿಗೂ ನಡುವಣ ವ್ಯತ್ಯಾಸವಿರುವುದು ಕೈಗಳ ವಿನ್ಯಾಸದಲ್ಲಷ್ಟೆ.” ವೈಶ್ವಿಕ ವ್ಯವಸ್ಥೆಯ ದೃಷ್ಟಿಯಿಂದ ಪರಿಶೀಲಿಸುವಾಗ ಕೊಡುವವನು, ತೆಗೆದುಕೊಳ್ಳುವವನು ಎಂಬ ರೀತಿಯ ಭೇದಗಣನೆಗೆ ಹೆಚ್ಚು ಅರ್ಥವಿರದೆಂದು ಸೂಚಿಸಲು ಮೇಲಣ ಉಕ್ತಿ ಹೊರಟಿದೆ. ಒಂದು ಊರಿನಲ್ಲಿ ಸಜ್ಜನನೊಬ್ಬನಿದ್ದ. ಕೊಡುಗೈ ದಾನಿ ಎಂದು ಅವನ ಪ್ರಸಿದ್ಧಿ ಇದ್ದಿತು. ದಾನ ಕೊಡುವಾಗ […]

ದೀಪ್ತಿ

ಅನಿರ್ವೇದಂ ಚ ದಾಕ್ಷ್ಯಂ ಚ ಮನಸಶ್ಚಾಪರಾಜಯಂ | ಕಾರ್ಯಸಿದ್ಧಿಕರಾಣ್ಯಾಹುಃ ತಸ್ಮಾದೇತದ್ ಬ್ರವೀಮ್ಯಹಂ || – ರಾಮಾಯಣ, ಕಿಷ್ಕಿಂಧಾಕಾಂಡ ಬೇಸರಿಸದ ಉತ್ಸಾಹ, ದಕ್ಷತೆ, ಸೋಲನ್ನೊಪ್ಪದ ದಾರ್ಢ್ಯ – ಇವು ಕಾರ್ಯಸಿದ್ಧಿಗೆ ಅನಿವಾರ್ಯವೆಂದು ತಿಳಿದವರು ಹೇಳುತ್ತಾರೆ. ಅದನ್ನೇ ನಾನು ನಿಮಗೂ ಹೇಳುತ್ತಿದ್ದೇನೆ. ಅಂಗದನು ವಾನರರಿಗೆ ಹೇಳುವ ಪ್ರೇರಕ ವಚನ ಇದು. ಯಾರಲ್ಲಿ ಇಂತಹ ಕಾರ್ಯಮಗ್ನತೆ ಇರುತ್ತದೋ ಅವರು ಸಫಲರಾಗುವುದು ನಿಶ್ಚಿತ. ಗ್ರೀಸ್ ದೇಶದ ಥ್ರೇಸ್ ಪ್ರಾಂತದಲ್ಲಿ ಒಬ್ಬ ಬಡ ಹುಡುಗ. ಕಾಡಿನಲ್ಲಿ ಕಟ್ಟಿಗೆಗಳನ್ನಾಯ್ದು ತಂದು ಹೊರೆಗಳಾಗಿ ಕಟ್ಟಿ ಮಾರಿ ಜೀವನ […]

ದೀಪ್ತಿ

ಯೋ ಧ್ರುವಾಣಿ ಪರಿತ್ಯಜ್ಯ ಅಧ್ರುವಾಣಿ ನಿಷೇವತೇ | ಧ್ರುವಾಣಿ ತಸ್ಯ ನಶ್ಯಂತಿ ಅಧ್ರುವಂ ನಷ್ಟಮೇವ ಚ||                              – ಪಂಚತಂತ್ರ “ನಮ್ಮ ಲಕ್ಷ್ಯವು ಯಾವಾಗಲೂ ಉನ್ನತ ತತ್ತ್ವದ ಕಡೆಗೆ ಇರಬೇಕು. ಸ್ಥಿರವಾದುದನ್ನು ಬಿಟ್ಟು ಯಾರು ಸಣ್ಣಪುಟ್ಟ ಸಾಧನೆಗಳಿಂದಲೇ ತೃಪ್ತರಾಗುತ್ತಾರೋ ಅವರದು ವ್ಯರ್ಥ ಪ್ರಯಾಸ. ಅವರಿಗೆ ದೊಡ್ಡದೇನೂ ಲಭಿಸುವುದಿಲ್ಲ; ಅಲ್ಪವಾದವಂತೂ ತಾವಾಗಿ ನಶಿಸಿರುತ್ತವೆ.” ಭಾರತದ ಸಸ್ಯಶಾಸ್ತ್ರಜ್ಞರಲ್ಲಿ ಮೂರ್ಧನ್ಯಭೂತರಾದವರು ಬೀರಬಲ್ ಸಾಹನೀ (೧೮೯೧-೧೯೪೯). ಅವರು ವಿದ್ಯಾರ್ಥಿದಶೆಯಲ್ಲಿದ್ದಾಗ ನಡೆದ ಘಟನೆ ಇದು. ಬಿ.ಎಸ್ಸಿ. ಪರೀಕ್ಷೆಗಾಗಿ ಅವರು ಹೋದರು. ಅವರ ಕೈಗೆ ಬಂದ […]

ದೀಪ್ತಿ

ಶಾಂತಿಖಡ್ಗಃ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ | ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ || – ಮಹಾಭಾರತ, ಉದ್ಯೋಗಪರ್ವ “ಶಾಂತಿ ಎಂಬ ಖಡ್ಗಾಯುಧ ಯಾರ ಕೈಯಲ್ಲಿ ಇದೆಯೋ ಅಂತಹವನಿಗೆ ದುಷ್ಟನೂ ಕ್ರೂರಿಯೂ ಏನು ಹಾನಿ ಮಾಡಿಯಾನು? ಹುಲ್ಲಿನ ಮೇಲೆ ಬೀಳದಿರುವ ಬೆಂಕಿ ತಾನಾಗಿ ಶಾಂತವಾಗಿಬಿಡುತ್ತದೆ.” ಹುಲ್ಲು ಗ್ರಾಸವಾಗಿ ದೊರೆತರೆ ಮಾತ್ರ ಬೆಂಕಿಯ ಪ್ರತಾಪಕ್ಕೆ ಅವಕಾಶವಾಗುತ್ತದೆ. ರವೀಂದ್ರನಾಥ ಠಾಕೂರರು ಯಾವುದೊ ಗಂಭೀರ ಬರಹದಲ್ಲಿ ತಲ್ಲೀನರಾಗಿದ್ದರು. ಸಮಯ ನಡುರಾತ್ರಿ ದಾಟಿತ್ತು. ಏನನ್ನಾದರೂ ದೋಚಿಕೊಂಡು ಹೋಗಲು ಕಳ್ಳನೊಬ್ಬ ಕತ್ತಿ ಝಳಪಿಸುತ್ತ […]

ದೀಪ್ತಿ

ಸತ್ಯಧರ್ಮಾರ್ಯವೃತ್ತೇಷು ಶೌಚೇ ಚೈವಾರಮೇತ್ಸದಾ | ಶಿಷ್ಯಾಂಶ್ಚ ಶಿಷ್ಯಾದ್ಧರ್ಮೇಣ ವಾಗ್ಬಾಹೂದರಸಂಯತಃ ||                                 – ಮನುಸ್ಮೃತಿ “ಸತ್ಯಪಥದಲ್ಲಿ, ಧರ್ಮಾಚರಣೆಯಲ್ಲಿ, ಶುಚಿಯಾಗಿರುವುದರಲ್ಲಿಯೇ ಸದಾ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಅನುಚರರನ್ನೂ ಧರ್ಮಮಾರ್ಗದಲ್ಲಿಯೆ ನಡೆಯುವಂತೆ ಪ್ರೋತ್ಸಾಹಿಸಬೇಕು. ಮಾತು, ತೋಳು, ಹೊಟ್ಟೆ – ಇವನ್ನು ಹತೋಟಿಯಲ್ಲಿರಿಸಿಕೊಂಡಿರಬೇಕು.” ಹೊರಮೈಯನ್ನು ಸಾಬೂನಿನಿಂದಲೋ ಅಂಥ ಅನ್ಯ ಪರಿಕರಗಳಿಂದಲೋ ತಿಕ್ಕಿ ಶುಚಿಗೊಳಿಸಿಕೊಳ್ಳುತ್ತೇವೆ. ಅದರಂತೆ ನಮ್ಮ ಒಳಗಿನ ಅಂಗಗಳ ಪಾರಿಶುದ್ಧ್ಯವನ್ನೂ ಕಾಪಾಡಿಕೊಳ್ಳಬೇಕಲ್ಲವೆ? ಹೊರಗಿನ ಮೈಗೆ ಕೊಳೆ-ಕಸರು ತಗಲುತ್ತಿರುವಂತೆ ಒಳಗಿನ ಅಂಗಗಳಾದ ಮನಸ್ಸು-ಬುದ್ಧಿಗಳಿಗೂ ಮಾಲಿನ್ಯ ಮೆತ್ತಿಕೊಳ್ಳುವ ಅವಕಾಶಗಳಿಗೆ ಕೊರತೆಯಿಲ್ಲ. ಇವಾದರೋ ಸೂಕ್ಷ್ಮರೂಪದವು. ಯಾರನ್ನೋ ನಿಂದನೆ […]

ದೀಪ್ತಿ

ತೃಣಾನಿ ನೋನ್ಮೂಲಯತಿ ಪ್ರಭಂಜನೋಮೃದೂನಿ ನೀಚೈಃ ಪ್ರಣತಾನಿ ಸರ್ವಶಃ |ಸಮಚ್ಛ್ರಿತಾನೇನ ತನೂನ್ ಪ್ರಬಾಧತೇಮಹಾನ್ ಮಹತ್ಯೇವ ಕರೋತಿ ವಿಕ್ರಮಮ್ || – ಹಿತೋಪದೇಶ “ಕೆಳಕ್ಕೆ ಬಗ್ಗಿ ತಗ್ಗಿರುವ ಹುಲ್ಲನ್ನು ಬಿರುಗಾಳಿ ಉತ್ಪಾಟನ ಮಾಡುವುದಿಲ್ಲ. ಬಿರುಗಾಳಿಯು ನಾಶಪಡಿಸಲೆಳಸುವುದು ಎತ್ತರದ ಮರಗಳನ್ನೇ. ಪ್ರಬಲರು ಪರಾಕ್ರಮ ಮೆರೆಯುವುದು ಪ್ರಬಲರಿಗೆದುರಾಗಿಯೇ.”ಬೇರೆಯವರ ಗಮನಸೆಳೆಯದೆ ಸೌಮ್ಯವಾಗಿರುವುದರಲ್ಲಿ ಗುಣವಿದೆಯೆಂದು ಮೇಲಣ ಪದ್ಯದಲ್ಲಿ ಧ್ವನಿಸಲಾಗಿದೆ. ಗಾತ್ರ ಅಥವಾ ಬೃಹತ್ತ್ವದಿಂದ ಎಲ್ಲ ಸಂದರ್ಭಗಳಲ್ಲಿಯೂ ಅನುಕೂಲವಾಗಲಾರದು.ಚೀಣೀ ತಾತ್ತ್ವಿಕ ಕನ್‍ಫ್ಯೂಶಿಯಸ್ ಉತ್ಕ್ರಮಣಾವಸ್ಥೆಯಲ್ಲಿದ್ದಾಗ ಅವನ ಅನುಯಾಯಿಗಳು ಆ ಮಹನೀಯನ ಅಂತಿಮ ಸಂದೇಶ ಬೇಕೆಂದು ಆಗ್ರಹಿಸಿದರು. ಕನ್‍ಫ್ಯೂಶಿಯಸ್ ತನ್ನ […]

ದೀಪ್ತಿ

ಮಂತ್ರೋ ಹಿ ಭಾವೇನ ಯುತೋ ಫಲಪ್ರದಃ ಮೌರ್ವ್ಯಾ ಸುಸಜ್ಜೀಕೃತಬಾಣವದ್ ಧ್ರುವಂ | ಭಾವೇನ ಹೀನಸ್ತು ವಿನಿಷ್ಫಲೋ ಭವೇತ್ ಕೀರಸ್ಯವಾಗೀರಿತರಾಮಶಬ್ದವತ್ || “ಲಕ್ಷ್ಯವಾಕ್ಯದಲ್ಲಿ ಭಾವಸಾಂದ್ರತೆಯನ್ನು ಹೊಗಿಸಿದಲ್ಲಿ ಮಾತ್ರ ಅದು ಫಲಪ್ರದವಾದೀತು, ಆಗ ಅದು ಸರಿಯಾಗಿ ಸಂಧಾನ ಮಾಡಿದ ಬಾಣದಂತೆ ಗುರಿಯನ್ನು ಮುಟ್ಟೀತು. ಭಾವದ ದಟ್ಟಣೆಯ ಕೊರತೆಯಿದ್ದಲ್ಲಿ ಯಾಂತ್ರಿಕ ಆಚರಣೆ ಫಲ ಕೊಡಲಾರದು – ಗಿಣಿಪಾಠದಂತೆ.” ಧ್ಯೇಯವಾಕ್ಯಗಳಿಗೋ ಆದೇಶಗಳಿಗೋ ಸಾಫಲ್ಯಸಾಧ್ಯತೆಯುಂಟಾಗುವುದು ಅವುಗಳಲ್ಲಿ ಭಾವಸಾಂದ್ರತೆಯ ಸಮಾಗಮವಾದಾಗ. ಭಾವನೆಯು ಗರ್ಭೀಕೃತವಾಗದಿದ್ದಲ್ಲಿ ಅನೂಚ್ಚಾರಣವೂ ಪುರಶ್ಚರಣವೂ ಯಾಂತ್ರಿಕಕ್ರಿಯೆಯಷ್ಟೆ ಆದೀತು. ‘ಅರ್ಚಕಸ್ಯ ಪ್ರಭಾವೇನ ಶಿಲಾ ಭವತಿ ಶಂಕರಃ’ […]

ದೀಪ್ತಿ

ಯಃ ಪ್ರಾಪ್ಯ ದುಷ್ಪ್ರಾಪಮಿದಂ ನರತ್ವಂ ಧರ್ಮಂ ನ ಯತ್ನೇನ ಕರೋತಿ ಮೂಢಃ | ಕ್ಲೇಶಪ್ರಬಂಧೇನ ಸ ಲಬ್ಧಮಬ್ಧೌ ಚಿಂತಾಮಣಿ ಪಾತಯತಿ ಪ್ರಮಾದಾತ್ ||                  – ಸೋಮಪ್ರಭಾಚಾರ್ಯನ ‘ಸೂಕ್ತಿಮುಕ್ತಾವಲಿ’ “ತುಂಬಾ ದುರ್ಲಭವಾದ ಮನುಷ್ಯಜನ್ಮವನ್ನು ಪಡೆದೂ ಯಾವನು ಧರ್ಮವನ್ನು ಆಚರಿಸುವುದಿಲ್ಲವೋ ಅವನದು ಮೂಢತನವೆಂದು ಹೇಳಬೇಕು. ಅಂಥವನ ಬದುಕು ಕಷ್ಟಪಟ್ಟು ಪಡೆದ ಅಮೂಲ್ಯ ಚಿಂತಾಮಣಿಯನ್ನು ಅಜಾಗರೂಕತೆಯಿಂದ ಸಮುದ್ರದಲ್ಲಿ ಬಿಸಾಡಿದ ಹಾಗೆ ಆಗುತ್ತದೆ.” ಒಬ್ಬ ವ್ಯಕ್ತಿಗೆ ತನಗೆ ಲಭಿಸಿರುವ ಮನುಷ್ಯಜನ್ಮ ಎಷ್ಟು ಅಮೂಲ್ಯವೆಂಬುದರ ಮನವರಿಕೆ ಇದ್ದಲ್ಲಿ ಅವನು ಜೀವನವನ್ನು ವ್ಯರ್ಥ […]

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ