ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > 2015 > March

ಮುಗಿಲಿನತ್ತ ಉಗುಳು

ಸ್ವಾಮಿ ವಿವೇಕಾನಂದರು ಅಮೆರಿಕದಲ್ಲಿದ್ದಾಗ ಒಬ್ಬ ಕ್ರೈಸ್ತಪಾದರಿಯ ಮನೆಗೆ ಅಭ್ಯಾಗತರಾಗಿ ಹೋಗಿದ್ದರು. ಆತ ಒಂದು ಮೇಜಿನ ಮೇಲೆ ಬೈಬಲ್ ಮೊದಲಾದ ಗ್ರಂಥಗಳನ್ನು ಪೇರಿಸಿ ಅವೆಲ್ಲದರ ಕೆಳಗೆ ಭಗವದ್ಗೀತೆಯನ್ನು ಇಟ್ಟಿದ್ದ. ಅದರ ಕಡೆಗೆ ಅವಹೇಳನಕರವಾಗಿ ಬೊಟ್ಟುಮಾಡಿ ಆತ ಹೇಳಿದ: “ನೋಡಿ, ನಿಮ್ಮ ಭಗವದ್ಗೀತೆ ಎಲ್ಲಕ್ಕಿಂತ ಕೆಳಗಿನ ಸ್ಥಾನದಲ್ಲಿದೆ.” ಸ್ವಾಮಿಜೀ ಕ್ಷಣಮಾತ್ರವೂ ತಡವರಿಸದೆ ಬಾಣದಂತೆ ಉತ್ತರಿಸಿದರು: “ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಭಗವದ್ಗೀತೆಯು ಎಲ್ಲಕ್ಕಿಂತ ಕೆಳಗೆ ಸ್ಥಿರವಾಗಿ ಇರುವುದರಿಂದಲೇ ಉಳಿದೆಲ್ಲ ಗ್ರಂಥಗಳೂ ಹೀಗೆ ನಿಲ್ಲುವುದು ಸಾಧ್ಯವಾಗಿದೆ.”

ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ನಾಡೋಜ ಎಸ್.ಆರ್. ರಾಮಸ್ವಾಮಿ ಅವರಿಗೆ ಸ್ನೇಹಾಭಿವಂದನ

ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ನಾಡೋಜ ಎಸ್.ಆರ್. ರಾಮಸ್ವಾಮಿ ಅವರಿಗೆ ಸ್ನೇಹಾಭಿವಂದನ

‘ನಾಡೋಜ’ ಪುರಸ್ಕೃತ ಎಸ್.ಆರ್. ರಾಮಸ್ವಾಮಿ ಅವರಿಗೆ ರಾಷ್ಟ್ರೋತ್ಥಾನ ಪರಿಷತ್ “ಸ್ನೇಹಾಭಿವಂದನ” ಕಾರ್ಯಕ್ರಮವನ್ನು  ಮಾರ್ಚ್ ೨೭ರಂದು ಆಯೋಜಿಸಲಾಯಿತು. ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಹಾಗೂ ನಿಘಂಟು ತಜ್ಞ ನಾಡೋಜ ಶತಾಯುಷಿ ಪ್ರೊ| ಜಿ.ವೆಂಕಟಸುಬ್ಬಯ್ಯ ಅವರು ಉಪಸ್ಥಿತರಿದ್ದು, ಶುಭಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಮೈ.ಚ. ಜಯದೇವ್, ಸಂಸ್ಕೃತ ಪ್ರಾಧ್ಯಾಪಕರು ಹಾಗೂ ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ|| ಎಂ.ಕೆ. ಶ್ರೀಧರ್, ವಿಜಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾಗಿರುವ ಸೂರ್ಯಪ್ರಕಾಶ್ ಪಂಡಿತ್,ಬೆಂಗಳೂರಿನ ಹಿರಿಯ ವಕೀಲರು ಮತ್ತು ತೆರಿಗೆ ಸಲಹೆಗಾರರೂ ವಿಶ್ವ […]

ದೀಪ್ತಿ

ಯಥಾ ನದೀನಾಂ ಪ್ರಭವಃ ಸಮುದ್ರಃ ಯಥಾssಹುತೀನಾಂ ಪ್ರಭವೋ ಹುತಾಶನಃ | ಯಥೇಂದ್ರಿಯಾಣಾಂ ಪ್ರಭವಂ ಮನೋsಪಿ ತಥಾ ಪ್ರಭುರ್ನೋ ಭಗವಾನುಪೇಂದ್ರಃ || – ಭಾಸ : ಮಧ್ಯಮವ್ಯಾಯೋಗ “ಎಲ್ಲ ನದಿಗಳ ಹರಿವೂ ಸಮುದ್ರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಲ್ಲ ಆಹುತಿಗಳೂ ಯಜ್ಞೇಶ್ವರನನ್ನು ಸೇರುತ್ತವೆ. ಎಲ್ಲ ಇಂದ್ರಿಯಕಾರ್ಯಗಳೂ ಮನಸ್ಸಿನಿಂದಲೇ ಸಂಚಾಲಿತವಾಗುವವು. ಅದರಂತೆ ಮನುಷ್ಯರ ಎಲ್ಲ ಚಟುವಟಿಕೆಗಳೂ ಸಫಲಗೊಳ್ಳುವುದು ಉಪೇಂದ್ರ ಎಂದರೆ ವಿಷ್ಣುವಿನ ಅನುಗ್ರಹದಿಂದ.”

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ