ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ನವೆಂಬರ್ 2015 > ಬೆಳಕಿನ ಪರ್ವ

ಬೆಳಕಿನ ಪರ್ವ

ದೀಪಾವಳಿ ಮರಳಿ ಬಂದಿದೆ.

Punik Shetty 2

ಚಿತ್ರ: ಪುನೀಕ್ ಶೆಟ್ಟಿ

ಇದು ದೀಪಗಳ ಹಬ್ಬ. ಕತ್ತಲು ಮತ್ತು ಬೆಳಕಿನ ಸಂಬಂಧವನ್ನು ಸಾರುವ ದೀಪಾವಳಿ ನಮಗೆ ಹಲವು ರೀತಿಯಲ್ಲಿ ಮಹತ್ತ್ವದ್ದು. ಈ ಹಬ್ಬವನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತೇವೆ. ಪ್ರತಿಯೊಬ್ಬರೂ ತಮ್ಮಲ್ಲಿರುವ ತಾಮಸ ಗುಣಗಳನ್ನು ಕಳೆದುಕೊಂಡು, ದೈವೀಸಂಪತ್ತನ್ನು ಹೆಚ್ಚಿಸಿಕೊಳ್ಳಲು ದೃಢಸಂಕಲ್ಪವನ್ನು ತೊಡುವಂಥ ಅರ್ಥಪೂರ್ಣ ಹಬ್ಬ ಇದಾಗಬೇಕು. ಸಮಸ್ಯೆಯೆಂದರೆ, ಭೌತಿಕಸಂಪತ್ತನ್ನು ಬಾಚಿಕೊಳ್ಳುವ ಆತುರದಲ್ಲಿ ತಾಮಸ ಪ್ರವೃತ್ತಿ ಯಾವುದು, ಯಾವುದು ದೈವೀಸಂಪತ್ತು ಎಂಬುದನ್ನು ತಾಳೆನೋಡುವ ತಾಳ್ಮೆಯೇ ಇಲ್ಲದಿರುವುದು. ಭೌತಿಕಸಂಪತ್ತಿನ ಸಂಗ್ರಹ ಜೀವನದಲ್ಲಿ ಸೌಖ್ಯವನ್ನು ಹೊಂದುವುದಕ್ಕಾದರೂ ಅದರ ಕ್ರೋಡೀಕರಣದಲ್ಲಿ ಧರ್ಮದ ನೆಲಗಟ್ಟಿನ ಆಧಾರ ಇದ್ದರಷ್ಟೆ ಸ್ಥಿರಸುಖ ಲಭ್ಯವಾದೀತು. ಇನ್ನೂ ಉನ್ನತಸ್ತರವನ್ನು ಹೊಂದಬೇಕಾದರೆ ಅಧ್ಯಾತ್ಮದ ಅನುಸಂಧಾನವೂ ಇರಬೇಕಾಗುತ್ತದೆ.

ಅಂತರಂಗವನ್ನು ಜ್ಞಾನದ ಬೆಳಕಿನಿಂದ ಬೆಳಗಿ ಕೊಳ್ಳಬೇಕು. ಆದರೆ ಜ್ಞಾನದ ಆಕರಗಳನ್ನೇ ನಿರಾಕರಿಸುವ, ಅಗೌರವದಿಂದ ನೋಡುವ ಪ್ರವೃತ್ತಿ ಸಮಾಜದ ಕೆಲ ವರ್ಗಗಳಲ್ಲಿ ದಿನೇದಿನೇ ಬೆಳೆಯುತ್ತಿರುವುದು ಆತಂಕಕಾರಕ ಲಕ್ಷಣ. ಭೋಗಸಾಮಗ್ರಿಗಳನ್ನು ಸಂಗ್ರ ಹಿಸಲು ಅನುಕೂಲಕರವಾದ ತಂತ್ರಗಾರಿಕೆಯನ್ನು ಹೊಂದುವುದನ್ನೇ ವಿದ್ಯಾಲಾಭ ಎಂದು ತಿಳಿದುಕೊಂಡವರ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಸಮಾಧಾನಕರ ಸಂಗತಿಯಲ್ಲ. ಈ ಎರಡೂ ಪ್ರವೃತ್ತಿಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತವೆ.

ನಮ್ಮ ಸುತ್ತಲಿನ ಜಗತ್ತು ತೀವ್ರಗತಿಯಲ್ಲಿ ಬದಲಾಗು ತ್ತಿದೆ. ಆದರೆ, ಬದಲಾವಣೆಯ ಗಿರಕಿಗೆ ಧರ್ಮದ ಆಧಾರವಿರಬೇಕು, ಅದು ಮೌಲ್ಯಕೇಂದ್ರಿತವಾಗಿರಬೇಕು; ಸಾಮರಸ್ಯದ ಸಹಬಾಳ್ವೆಗೆ ಪೂರಕವಾಗಿರಬೇಕು. ಆರೋಗ್ಯಕರ ಪೀಳಿಗೆ ಮುಂಬರಿಯಬೇಕು. ಅದಕ್ಕಾಗಿ ಒಂದಷ್ಟು ಬೆಲೆಯನ್ನು ತೆರಲೂ ಸಿದ್ಧವಾಗಿರಬೇಕು. ಅದು ಪ್ರತಿಯೊಬ್ಬ ಆದರ್ಶ ನಾಗರಿಕನ ಕರ್ತವ್ಯವೂ ಕೂಡ.

ಕಳೆದ ಸಂಕ್ರಾಂತಿಯಿಂದ ಆರಂಭಿಸಿ `ಉತ್ಥಾನ’ ಮಾಸಪತ್ರಿಕೆಯಲ್ಲಾಗುತ್ತಿರುವ ಬದಲಾವಣೆಗಳನ್ನು ನೀವು ಗಮನಿಸಿರಬಹುದು. ಆಕಾರ, ವಿನ್ಯಾಸ, ಒಳಹೂರಣಗಳಲ್ಲಿ ನಾವೀನ್ಯವಿದ್ದರೂ ನಂಬಿದ ಧ್ಯೇಯ, ಮೌಲ್ಯಗಳ ಕುರಿತು ನಾವು ಯಾವುದೇ ರೀತಿಯಲ್ಲಿ ರಾಜಿಯಾಗಿಲ್ಲ ಎಂಬುದನ್ನೂ ಗಮನಿಸಬೇಕು. `ಉತ್ಥಾನ’ದ ಓದುಗರು, ಅಭಿಮಾನಿಗಳು ಇದನ್ನು ಪ್ರೀತಿಯಿಂದ ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ನಮ್ಮದು.

ಹೊಸ ದೀಪಾವಳಿ ನಮ್ಮ ಎಲ್ಲ ಓದುಗರಿಗೂ, ಅಭಿ ಮಾನಿಗಳಿಗೂ, ಹಿತೈಷಿಗಳಿಗೂ, ಲೇಖಕರಿಗೂ ಹಾಗೂ ಜಾಹೀರಾತುದಾರರಿಗೂ ಶುಭವನ್ನು ತರಲಿ ಎಂದು ಹಾರೈಸುತ್ತೇವೆ.

                – ಸಂಪಾದಕ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ