dordoz.com rajwap.me chic porn monde tv pulpo69 साड ी के साथ नंगी फिल म anybunny.mobi hotmoza.tv sikwap.mobi assmgp hot asses kartun.xnxx.hindi.hd fuskator com video videos xxx desi porn real couple bedroom leaked mms saxxyvido big booty white girls rape mom in son 6indianxxx.mobi justindianporn.org redwap 3gpkings.info pornfactory.info freejavporn.mobi

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಜುಲೈ 2017 > ಲೋಕಕೆ ಬಿಡುವಿಲ್ಲ ನಿನ್ನ ಬಗ್ಗೆ ಚಿಂತಿಸುತಿರಲು

ಲೋಕಕೆ ಬಿಡುವಿಲ್ಲ ನಿನ್ನ ಬಗ್ಗೆ ಚಿಂತಿಸುತಿರಲು

ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊ|
ಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗು||
ಚಿಣ್ಣರಾಟವೆನೆ ನೋಡುತೆ ನಿನ್ನ ಪಾಡುಗಳ|
ತಣ್ಣಗಿರುವನು ಶಿವನು – ಮರುಳ ಮುನಿಯ||
ಡಿ.ವಿ.ಜಿ. (ಮ.ಮು. ಕಗ್ಗ ೩೭)

ಜೀ ತೂರಾರು ದಿಗ್ಭ್ರಾಂತನಾಗಿ ನಿಂತುಬಿಟ್ಟ. ಬಿಳಿಕೋಟು ಹಾಕಿದ ಆಸ್ಪತೆಯ ಆ ದಾಕ್ಟರ್ ಸಾಹೇಬ ಲಾಖಿಯ ಬಗ್ಗೆ ಏನು ಹೇಳುತ್ತಿದ್ದಾನೆನ್ನುವುದು ಅವನ ಕಿವಿತಮಟೆಯ ಮೇಲೆ ಫಿರಂಗಿ ಗುಂಡಿನಂತೆ ಅಪ್ಪಳಿಸಿದ್ದ? ಗೊತ್ತಾದದ್ದು. ಮುಂದಿನದೇನೂ ಅವನ ತಲೆಗೆ ಹೋಗಲೇ ಇಲ್ಲ.

ಲಾಖಿ ಇಲ್ಲ. ತನ್ನ ಲಾಖಿ, ಹದಿನೈದು ವ? ತನ್ನೊಂದಿಗೆ ಈ ಬದುಕಿನ ಎಲ್ಲ ಕಷ್ಟ-ಸುಖಗಳ ಬಂಡಿಗೆ ಮೂಕೆತ್ತಿನಂತೆ ಹೆಗಲುಕೊಟ್ಟು ಬಸವಳಿದ ಲಾಖಿ ಇನ್ನಿಲ್ಲ. ಯಾವ ಮಾಯದಲ್ಲೋ ಕಣ್ಣೀರಿನಿಂದ ತುಂಬಿಕೊಂಡ ಮಬ್ಬುಗಣ್ಣುಗಳನ್ನಗಲಿಸಿ ಅತ್ತಿತ್ತ ನೋಡಿದ. ಅಲ್ಲಿ ಕೆಲವು ಮಾರಡಿ ದೂರದಲ್ಲಿ ಪುಟ್ಟ ಇಮಲಿ ಕಾಗದದ ತಾಟಿನಲ್ಲಿ ಯಾರೋ ಹಾಕಿಕೊಟ್ಟಿದ್ದ ತುಂಡು ಸಮೋಸದ ಚೂರುಗಳನ್ನು ಪುಟ್ಟ ಜಗ್ಯಾನ ಬಾಯಿಗಿಡಲು ಪ್ರಯತ್ನಿಸುತ್ತಿದ್ದಳು. ಜಗ್ಯಾ ಸಮೋಸ ಖಾರವಿದ್ದುದರಿಂದಲೋ ಏನೋ ಕಣ್ಣು ಮೂಗಿನಲ್ಲಿ ನೀರಿಳಿಸುತ್ತಾ ತಲೆಯಲುಗಿಸುತ್ತಿದ್ದುದೂ ಇಮಲಿ ಥೇಟು ಲಾಖಿಯಂತೆಯೇ ತನ್ನ ಹರಿದ ಲಂಗದ ಚುಂಗಿನಿಂದ ಅವನ ಕಣ್ಣು ಮೂಗನ್ನೊರೆಸಿ ಸಮಾಧಾನಪಡಿಸುತ್ತಿದ್ದುದೂ ಕಂಡು ಜೀತೂವಿನ ಹೊಟ್ಟೆಯಲ್ಲಿ ಬೆಂಕಿಬಿದ್ದಂತಾಯಿತು. ’ಲಾಖಿ.. ಈ ಪುಟ್ಟ ಮಕ್ಕಳನ್ನ ಬಿಟ್ಟು ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂತು? ನೋಡಲ್ಲಿ ಜಗ್ಯಾ ಅಳುತ್ತಿದ್ದಾನೆ ಇಮಲಿಗೂ ಹಸಿವಾಗಿದೆ. ಇನ್ನೇನು ಅವರಿಬ್ಬರು ಮಾ…ಎನ್ನುತ್ತಾ ನಿನ್ನನ್ನ ಹುಡುಕಿಕೊಂಡು ಬಂದುಬಿಡುತ್ತಾರೆ. ಲಾಖೀ..ನಿನಗೇಕೆ ಕೇಳುತ್ತಿಲ್ಲ?’ ಜೀತೂ ಮೌನದಲ್ಲೇ ಲಾಖಿಯನ್ನು ಮಾತಾಡಿಸುತ್ತಿದ್ದ. ಅ?ರಲ್ಲೇ ಆ ದಾಕ್ಟರ್ ಸಾಹೇಬನಿಗೆ ಜೀತೂವಿನ ತುಂಬಿದ ಕಣ್ಣುಗಳನ್ನೂ ಅವನ ದಯನೀಯ ನೋಟಕ್ಕೆ ಗುರಿಯಾಗಿದ್ದ ಇಮಲಿ, ಜಗ್ಯಾರನ್ನೂ ನೋಡಿ ಕನಿಕರವೆನಿಸಿರಬೇಕು. ಮೆಲ್ಲನೆ ಜೀತೂನ ಭುಜ ತಟ್ಟಿ ಎಚ್ಚರಿಸಿದ. ಜೀತೂ ಮತ್ತೆ ಈ ಲೋಕಕ್ಕೆ ಬಂದ. ಆ ಬಿಳಿಕೋಟಿನವನ ಹಿಂದೆ ಗೋಣು ಬಗ್ಗಿಸಿ ಆಸ್ಪತ್ರೆ ಎನ್ನುವ ಆ ಕೊಳಕು ಕಟ್ಟಡದೊಳಗೆ ಮೂಕಪಶುವಿನಂತೆ ನಡೆದ. ಅಲ್ಲಿ ಆ ಉದ್ದಾನುದ್ದದ ಪಡಸಾಲೆಯಲ್ಲೆ ಅಲ್ಲಲ್ಲಿ ಕುಳಿತು ಕೊಳಕು ಬಟ್ಟೆಯಲ್ಲಿ ಕಟ್ಟಿತಂದ ಬುತ್ತಿ ಬಿಚ್ಚಿ ತಿನ್ನುತ್ತಿರುವವರು, ಆಕಾಶಕ್ಕೆ ಕಣ್ಣು ನೆಟ್ಟು ಪ್ರಪಂಚದ ಆಗುಹೋಗುಗಳೇ ಗೊತ್ತಿಲ್ಲದೆ ಕಲ್ಲಿನಂತೆ ಕುಳಿತವರು, ಪಾನಿನ ರಸ ಉಗಿದುಗಿದು ಕೆಂಬಣ್ಣಕ್ಕೆ ತಿರುಗಿದ್ದ ಕಲ್ಲು ಕಂಬಗಳಿಗೊರಗಿ ಕಣ್ಣೀರನ್ನೊರಸಿಕೊಳ್ಳುತ್ತಾ ದಯನೀಯ ನೋಟ ಬೀರುತ್ತಾ ಒಳಗಿರುವವರ ಬಗ್ಗೆ ಸುದ್ದಿ ತಿಳಿಯಲು ಕಾತರರಾಗಿರುವವರು ಒಬ್ಬರೇ ಇಬ್ಬರೇ. ಇವರುಗಳ ಸಂಬಂಧಿಕರು ಯಾರಿದ್ದಾರೋ, ಪೋಟ್ ಎನ್ನುವ ಈ ಕುಗ್ರಾಮದ ಸರಕಾರಿ ಆಸ್ಪತ್ರೆಯ ವಾರ್ಡುಗಳಲ್ಲಿ ಒಳಗೆ ನರಳುತ್ತಿರುವ ತಮ್ಮ ಹೆಂಡತಿಯೋ ಗಂಡನೋ ಮಕ್ಕಳೋ ಅಪ್ಪ ಅಮ್ಮನೋ ಅಜ್ಜಿ ತಾತನೋ. ಜೀತೂರಾಮನ ಕಣ್ಣಮುಂದೆ ಸಂಬಂಧಗಳ ಪಟ್ಟಿ ಸಂಕಟಮೋಚನನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಬಿಳಿಕೋಟಿನ ಸಾಹೇಬ ಅಲ್ಲೇ ಬಿದಿರಿನ ಚಾಪೆ ಅಡ್ಡಗಟ್ಟಿಸಿದ್ದ ಮೂಲೆಯಲ್ಲಿ ನಿಂತ. ಜೀತೂ ತಾನೂ ಯಾಂತ್ರಿಕವಾಗಿ ನಿಂತ. ಅಲ್ಲಿ ಆ ಬಿದಿರ ಚಾಪೆಯ ಮರೆಯಲ್ಲಿ ಹರಕು ಜಮಖಾನೆಯ ಮೇಲೆ ಲಾಖಿ ತಣ್ಣಗೆ ಕಣ್ಮುಚ್ಚಿ ಮಲಗಿಬಿಟ್ಟಿದ್ದಳು. ಲಾಖಿಯನ್ನು ಅಲ್ಲಿ ನೋಡಿದ ಜೀತೂ ಕ್ಷಣ ಕಾಲ ಎಲ್ಲ ಮರೆತು ಲಾಖೀ.. ನೀನು ಸರಿಹೋಗಿಬಿಟ್ಟೆಯಾ, ಏಳು ಮನೆಗೆ ಹೋಗೋಣ ಎಂದು ಆತುರಪಡಿಸಿದ. ಉಹೂಂ ಲಾಖಿ ಕಣ್ತೆರೆಯಲಿಲ್ಲ; ಮಿಸುಕಾಡಲೂ ಇಲ್ಲ. ಜೀತೂ ಮತ್ತೆಮತ್ತೆ ಕರೆದವ ಅಲ್ಲೇ ಮೊಣಕಾಲೂರಿ ಕುಳಿತು ಅವಳ ಭುಜ ಹಿಡಿದು ಅಲುಗಾಡಿಸಿದ. ತಣ್ಣಗೆ ಕೊರೆವ ಅವಳ ಮೈ ಸೋಕಿದ್ದೇ ಜೀತೂಗೆ ದಾಕ್ಟರ ಸಾಹೇಬನ ಮಾತು ನೆನಪಾಯಿತು. ಇನ್ನೆಲ್ಲಿಯ ಲಾಖಿ? ಇಲ್ಲಿರುವದು ಬರೀ ಅವಳ ನಿರ್ಜೀವ ದೇಹ ಅ?. ’ಲಾಖೀ… ಲಾಖೀ.. ಒಮ್ಮೆ ಎದ್ದುಬಿಡು ಇನ್ನುಮೇಲೆ ನೀನು ಹೇಳಿದಂತೆ ನಾನು ಕೇಳುತ್ತೇನೆ, ನಾನು ಶರಾಬು ಕುಡಿಯುವುದು ನಿನಗಿ?ವಿಲ್ಲ ತಾನೆ ಇಗೋ ಇನ್ನು ಮುಂದೆ ಶರಾಬಿನ ಬಾಟಲಿ ಮುಟ್ಟಿದರೆ ನಿನ್ನಾಣೆ’ ಎಂದವನೆ ಅವಳ ತಲೆಯ ಮೇಲೆ ಕೈ ಇರಿಸಿದ. ಎಣ್ಣೆಗಾಣದೆ ಗಂಟುಗಂಟಾದ ಅವಳ ಕೂದಲು ಕೈಗೆ ಸಿಕ್ಕಿತು.

ಎಷ್ಟು ಚಂದವಿತ್ತು ಒಂದಾನೊಂದು ಕಾಲದಲ್ಲಿ ಲಾಖಿಯ ಕೂದಲು, ಅವಳು ಕೋಪ ಮಾಡಿಕೊಂಡಾಗಲೆಲ್ಲ ವಾರೆನೋಟ ಬೀರುತ್ತಾ ಇದೇ ಕೂದಲನ್ನು ತನ್ನ ಬಲಗೈಯ ತೋರು ಬೆರಳಿಗೆ ಸುತ್ತಿಕೊಳ್ಳುತ್ತಿದ್ದಳಲ್ಲ. ಲಾಖೀ, ’ನಾನು ಕುಡಿದು ಬಂದು ನಿನ್ನ ಕಾಡಿದಾಗ ನೀನು ಜೋರು ಧ್ವನಿ ತೆಗೆದು ಮಾತಾಡುತ್ತಿದ್ದೆ. ಆಗೆಲ್ಲಾ ನಾನು ಮತಿಗೆಟ್ಟು ನಿನ್ನ ಇದೇ ಕೂದಲು ಹಿಡಿದೆಳೆದು ಎ? ಬಾರಿ ನಿನ್ನ ಕಣ್ಣಲ್ಲಿ ನೀರು ತರಿಸಿದ್ದೇನಲ್ಲವೆ? ಇಲ್ಲ, ಇನ್ನು ಮುಂದೆ ಹೀಗೆಲ್ಲಾ ಮಾಡುವುದಿಲ್ಲ. ಲಾಖಿ ಒಮ್ಮೆ ಕಣ್ಣು ಬಿಡು. ನಿನ್ನ ಇಮಲಿ, ಜಗ್ಯಾ ಇಬ್ಬರೂ ಕಾಯುತ್ತಿದ್ದಾರೆ. ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎ?ಂದು ಮಲಗುತ್ತೀಯ, ನಡೀ’ ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನು ನೋಡಿ, ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು ’ತಮ್ಮಾ ನೀನು ಎ? ಎಬ್ಬಿಸಿದ್ರೂ ಅವಳಿನ್ನು ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ’ ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು. ’ಓ …ಇ? ಹೊತ್ತು ತಾನು ಕೇಳಿದ್ದು ನೋಡಿದ್ದು ಯಾವುದೂ ಕನಸಲ್ಲ. ಲಾಖಿ ನಿಜಕ್ಕೂ ಸತ್ತೇ ಹೋದಳೆ… ಮುಂದೇನು ಗತಿ ತನ್ನ ಚಿಕ್ಕ ಮಕ್ಕಳ ಗತಿಯೇನು?’ ಎನ್ನುತ್ತಾ ಮತ್ತೆ ಕಲ್ಲಾದ. ದಾದಿಗೆ ಅವನ ಪರಿಸ್ಥಿತಿ ನೋಡಿ ಅಯ್ಯೋ ಎನಿಸಿದರೂ, ಸರಕಾರಿ ಆಸ್ಪತ್ರೆಯ ಈ ಕಾರಿಡಾರಿನಲ್ಲಿ ಇಂತಹ ಎ? ಸಾವುಗಳನ್ನೂ, ರೋಧನವನ್ನೂ ದಿನೇದಿನೇ ನೊಡಿ ಅಭ್ಯಾಸವಾದದ್ದರಿಂದಲೋ ಏನೋ, ’ಸಾಕು ನಿಲ್ಲಿಸು, ಎಳೆಯಮಕ್ಕಳ ಥರ ಆಡಬೇಡ, ಮೊದಲು ಇದನ್ನು ಇಲ್ಲಿಂದ ತಗೊಂಡು ಹೋಗುವ ವ್ಯವಸ್ಥೆ ಮಾಡು. ಬಹಳ ಹೊತ್ತು ನಾವಿಲ್ಲಿ ಹೆಣವನ್ನು ಇಟ್ಟುಕೊಳ್ಳಲು ಆಗಲ್ಲ. ದೊಡ್ಡ ಸಾಹೇಬರು ಬಂದರೆ ನನ್ನನ್ನು ಬೈಯ್ತಾರ?’ ಎಂದು ಗದರಿದಳು.

ಜೀತೂ ಎದ್ದು ಕಣ್ಣೊರೆಸಿಕೊಂಡ. ಹೌದಲ್ಲ ಲಾಖಿಯನ್ನು ಊರಿಗೆ ಕರೆದೊಯ್ದು ಸಂಸ್ಕಾರಕ್ಕೆ ವ್ಯವಸ್ಥೆ ಮಾಡಬೇಕಲ್ಲ? ಏನೋ ನೆನಪಾಗಿ ಜೇಬಿನಲ್ಲಿ ಕೈಯಾಡಿಸಿದ. ಹತ್ತುರೂಪಾಯಿ ನೋಟೊಂದು ಹೊರಬಂತು. ಬೇರೆ ಸಂದರ್ಭದಲ್ಲಾಗಿದ್ದರೆ ಆ ಹತ್ತು ರೂಪಾಯಿಯ ನೋಟು ಜೀತೂಗೆ ಸಾವಿರ ರೂಪಾಯಿಯಂತೆ ಕಾಣುತ್ತಿತ್ತೇನೋ, ಈಗ ಅದು ಅಣಕಿಸಿ ನಕ್ಕಂತಾಯಿತು. ಈ ಹತ್ತು ರೂಪಾಯಿ ಸಾಕಾಗುತ್ತದೆಯೆ? ನೆನ್ನೆ ತಾನೆ ಕೂಲಿ ಮಾಡಿ ಬಂದ ನೂರು ರೂಪಾಯಿ ಜೇಬಿನಲ್ಲಿತ್ತು. ಸಂಜೆಯವರೆಗೆ ಹೇಗೋ ನಿಯಂತ್ರಿಸಿಕೊಂಡಿದ್ದ ಜೀತೂವಿನ ಕಾಲ್ಗಳು ಅವನಿಗೇ ಅರಿವಿಲ್ಲದಂತೆ ಶರಾಬುಖಾನೆಯತ್ತ ಒಯ್ದಿದ್ದವಲ್ಲ; ಉಳಿದದ್ದು ಈ ಹತ್ತೇ ರೂಪಾಯಿ. ಊರಿಗೆ ಹೋದರೆ ಅವರಿವರನ್ನು ಕೇಳಿ ಮಣ್ಣಿಗೆ ವ್ಯವಸ್ಥೆ ಮಾಡಬಹುದು, ನೋಡೋಣ ಎಂದು ಎದ್ದವನಿಗೆ ಲಾಖಿಯ ಸಾವಿನ ದುಃಖ ತಾತ್ಕಾಲಿಕವಾಗಿ ಕಣ್ಮರೆಯಾಗಿ ಈಗ ಅವಳನ್ನು ಊರಿಗೆ ಕರೆದೊಯ್ಯುವ ಹೊಸ ಸಮಸ್ಯೆ ಎದುರಾಯಿತು. ಲಾಖಿಯನ್ನು ಇಲ್ಲಿಗೆ ಕರೆತರುವಾಗ ಅವಳು ಎದೆನೋವೆಂದು ನರಳುತ್ತಿದ್ದವಳು ಅರೆಬರೆ ಎಚ್ಚರದಿಂದಿದ್ದಳು. ಬಸ್ಸಿನ ಮುಖವನ್ನೇ ಕಾಣದ ತನ್ನ ಕುಗ್ರಾಮದಿಂದ ಸರಿಸುಮಾರು ಎಂಟು ಮೈಲು ದೂರದ ಈ ಸರ್ಕಾರಿ ಪ್ರಾಥಮಿಕ ಚಿಕಿತ್ಸಾಲಯಕ್ಕೆ ಹಾದಿಯಲ್ಲಿ ಹೋಗುತ್ತಿದ್ದ ಯಾವುದೋ ಲಾರಿಗೆ ಕೈಯೊಡ್ಡಿ ಲಾಖಿಯ ಪರಿಸ್ಥಿತಿಯನ್ನು ವಿವರಿಸಿ ಕಾಡಿ ಬೇಡಿ ಡ್ರೈವರನ ಸಹಾಯದಿಂದ ಅವಳನ್ನೆತ್ತಿ ಲಾರಿಯ ಹಿಂಬದಿಯಲ್ಲಿ ಮಲಗಿಸಿದ್ದ. ಮಾನವೀಯತೆಗಾಗಿ ಜೀತೂವಿನ ಬಳಿ ಒಂದು ಕಾಸನ್ನೂ ಕೇಳದ ಆ ಲಾರಿಯವ ಈ ಆಸ್ಪತ್ರೆಯ ಬಳಿ ಅವಳನ್ನು ಇಳಿಸಲು ನೆರವಾದವನೆ ಭರ್ರನೆ ಹೊರಟುಹೋಗಿದ್ದ.

ಸರ್ಕಾರಿ ಆಸ್ಪತ್ರೆಯಲ್ಲಿ ಶವ ಸಾಗಿಸುವ ವಾಹನ ಇರುತ್ತದೆಂದು ಯಾರೋ ಎಂದೋ ಮಾತನಾಡಿಕೊಂಡದ್ದು ನೆನಪಾಗಿ ಜೀತೂ ಆ ಬಿಳಿ ಸೀರೆಯ ದಾದಿಯ ಹಿಂದೆ ಓಡಿದ. ’ಅಕ್ಕಾ ಮತ್ತೆ ನನ್ನ ಹೆಂಡತಿಯನ್ನು ಊರಿಗೆ ಕರೆದುಕೊಂಡು ಹೋಗಬೇಕಲ್ಲ. ಇಲ್ಲಿ ಏನಾದರೂ ಗಾಡಿ ಸಿಗುತ್ತಾ?’ ಎಂದವನ ಮುಗ್ಧ ಪ್ರಶ್ನೆಗೆ ಆ ದಾದಿಗೆ ನಗಬೇಕೋ ಅಳಬೇಕೋ ತಿಳಿಯದಾಯಿತು. ಬಾಡಿ ತೆಗೆದುಕೊಂಡು ಹೋಗಬೇಕು ಎಂದೇ ಕೇಳಿ ಅಭ್ಯಾಸವಾಗಿ ಹೋಗಿದ್ದ ಅವಳ ಕಿವಿಗಳಿಗೆ ’ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಬೇಕು’ ಎನ್ನುವ ಮಾತುಗಳು ಬೆರಗನ್ನುಂಟುಮಾಡಿದವು. ’ಅಯ್ಯೋ ಹುಚ್ಚಪ್ಪಾ, ಇದು ಬಾಡಿ ಸಾಗಿಸೋ ಗಾಡಿ ಇಡೋ ಅ? ದೊಡ್ಡ ಆಸ್ಪತ್ರೆಯಲ್ಲ, ನೀನೇ ಏನಾದರು ವ್ಯವಸ್ಥೆ ಮಾಡಿಕೋಬೇಕು, ಹೊರಗೆ ವಿಚಾರಿಸು’ ಎಂದವಳೇ ಒಳಗೆ ನಡೆದಳು. ಜೀತೂನ ಸಣ್ಣ ಆಸೆ ಅಲ್ಲೇ ಮಣ್ಣಾಯಿತು. ಬೇರೆ ವ್ಯವಸ್ಥೆ ಎಂದರೆ ದುಡ್ಡೆಂಬ ದುಡ್ಡು ಕಣ್ಣ ಮುಂದೆ ಕುಣಿಯಲಾರಂಭಿಸಿತು. ಇಮಲಿ ಆಗಲೇ ವಿಷಯದ ಅರಿವಾಗಿ ಅಮ್ಮನ ಮುಂದೆ ಕುಳಿತು ಅಳಲಾರಂಭಿಸಿದ್ದಳು. ಜಗ್ಯಾಗೆ ಸಾವೆಂಬುದಿನ್ನೂ ಅರಿವಾಗದ ವಯಸ್ಸು. ಏನೋ ಅರ್ಥವಾಗದೆ ಅಮ್ಮನ ಕೈ ಹಿಡಿದುಕೊಂಡು ಕುಳಿತುಬಿಟ್ಟಿದ್ದ. ಮಗಳ ತಲೆ ಸವರಿ ’ಈಗ ಬಂದೆ’ ಎಂದವನೇ ಆಸ್ಪತ್ರೆಯಿಂದ ಹೊರಗೆ ಬಂದು ಅಲ್ಲೇ ಮೂಲೆಯಲ್ಲಿದ್ದ ಪಾನ್ ಅಂಗಡಿಯ ಬಳಿಗೆ ಹೋಗಿ ನಿಂತ. ಯಾವ ಪಾನ್ ಕೊಡಲಿ ಎಂಬ ಅಂಗಡಿಯಾತನ ಪ್ರಶ್ನೆಗೆ ಜೀತೂನ ಅಸಹಾಯಕ ನೋಟವೆ ಉತ್ತರವಾಗಿ ತನ್ನನ್ನು ತಾನು ಕ್ಷಣ ಸಂಭಾಳಿಸಿಕೊಂಡವನೇ ’ಅಣ್ಣಾ, ಹೀಗೆ ಹೀಗೆ ಆಗಿಹೋಗಿದೆ, ಊರಿಗೆ ಹೋಗಬೇಕು. ಏನಾದರೂ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೋ’ ಎಂದು ಗೋಗರೆದ. ಅಂಗಡಿಯವ ಕ್ಷಣ ಯೋಚಿಸಿದವನೇ ’ನಿನ್ನ ನೋಡಿದರೆ ಪಾಪ ಅನಿಸುತ್ತದೆ. ಸಾಮಾನ್ಯವಾಗಿ ಇಲ್ಲಿಂದ ನಿನ್ನೂರಿನ ದೂರಕ್ಕೆ ಹೆಣ ಸಾಗಿಸಲು ಒಂದೂವರೆ ಸಾವಿರವಾದರೂ ಕೇಳ್ತಾರೆ, ಆದರೆ ನಿನ್ನ ಹತ್ರ ಅ? ಇರೋ ಹಾಗೆ ಕಾಣಲ್ಲ. ಒಂದೈನೂರು ಕಡಮೆ ಮಾಡಿಸಿಕೊಡ್ತೀನಿ. ನನ್ನ ಸ್ನೇಹಿತನದೇ ಗಾಡಿ ಇದೆ. ಅ?ದರೂ ಜೋಡಿಸಿಕೊಂಡು ಬಾ. ನಾನಿಲ್ಲೇ ಇರ್ತೀನಿ’ ಎಂದವನು ಕ?ದಲ್ಲಿರುವ ಒಂದು ಜೀವಕ್ಕೆ ತನ್ನ ಕೈಲಾದ ಸಹಾಯ ಮಾಡಿದ ಭಾವದಲ್ಲಿ ಮತ್ತೆ ತನ್ನ ಗಿರಾಕಿಗಳತ್ತ ತಿರುಗಿದ. ಜೀತೂನ ತಲೆ ಗಿರ್ರೆಂದಿತು. ’ಸಾವಿರ ರೂಪಾಯಿ! ಎಲ್ಲಿಂದ ತರುವುದು? ತನ್ನನ್ನೇ ತಾನು ಒತ್ತೆಯಿಟ್ಟರೂ ಈ ಊರಿನಲ್ಲಿ ಕಾಸು ಸಿಕ್ಕೀತೆ? ಗುರುತಿಲ್ಲ ಪರಿಚಯವಿಲ್ಲ’ ಎಂದು ಕಂಗಾಲಾಗಿ ಅಲ್ಲಿಂದಾಚೆ ಬಂದ.

ಆಸ್ಪತ್ರೆಯ ಮುಂದೆ ಬರುವವರನ್ನೆಲ್ಲಾ ಕರೆದೊಯ್ಯಲಿಕ್ಕಾಗಿಯೇ ಇರುವ ಉದ್ದಾನುದ್ದ ರಸ್ತೆಯ ಮೇಲೆ ಥರಾವರಿ ವಾಹನಗಳು ಭರ್ರನೆ ಹೋಗುತ್ತಿದ್ದುದ್ದನ್ನು ನೋಡಿ, ಹೊಸ ಆಲೋಚನೆ ಹೊಳೆದಂತೆ ರಸ್ತೆ ಬದಿಗೆ ನಿಂತು ಹೋಗಿ ಬರುವ ವಾಹನಗಳಿಗೆಲ್ಲ ಕೈಮಾಡಲಾರಂಭಿಸಿದ. ಜೀತೂನ ಕೆದರಿದ ತಲೆ, ಮಾಸಿದ ಬಟ್ಟೆ, ಚಪ್ಪಲಿಯಿಲ್ಲದ ಬರಿಗಾಲು ನೋಡಿಯೇ ಫಳಫಳನೆ ಹೊಳೆವ ವಾಹನಗಳು ನಿಲ್ಲಿಸಿದರೆ ಎಲ್ಲಿ ಮೈಲಿಗೆಯಾಗುವುದೋ ಎಂದು ಹೆದರಿ ಧೂಳೆಬ್ಬಿಸುತ್ತಾ ಮರೆಯಾದವು. ಒಂದೆರಡು ಲಾರಿ ಚಾಲಕರು ಕುತೂಹಲದಿಂದ ನಿಲ್ಲಿಸಿದರೂ ಲಾಖಿಯ ಹೆಣ ಹೊತ್ತೊಯ್ಯುವ ವಿ?ಯ ಕೇಳಿಯೇ ಹಾವುಮೆಟ್ಟಿದವರಂತೆ ಬೆಚ್ಚಿ ಜೀತೂನ ಕ್ಷಮೆ ಕೇಳಿ ತಮ್ಮತಮ್ಮ ದಾರಿಹಿಡಿದು ಹೊರಟೇ ಹೋದರು. ಜೀತೂ ಹಠ ಬಿಡದವನಂತೆ ವಾಹನಗಳಿಗೆ ಕೈಮಾಡುತ್ತಲೇ ಇದ್ದ. ಫಕ್ಕನೆ ಯಾರೋ ಕೈಹಿಡಿದು ಎಳೆಯುತ್ತಿರುವ ಅರಿವಾಗಿ ಜೀತೂ ಎಚ್ಚರಗೊಂಡು ನೋಡಿದ. ಇಮಲಿ ಕಣ್ಣೀರಲ್ಲಿ ತೊಯ್ದ ಮುಖ ಹೊತ್ತು ನಿಂತಿದ್ದಳು. ಬೇಗ ಅಮ್ಮನನ್ನು ಕರೆದುಕೊಂಡು ಹೋಗಬೇಕೆಂದೂ, ಇಲ್ಲವಾದರೆ ದೊಡ್ಡ ಸಾಹೇಬರು ಬಂದರೆ ಕೂಗಾಡುತ್ತಾರೆಂದೂ ಎಚ್ಚರಿಸಿದ ದಾದಿ ಅಮ್ಮನನ್ನು ಆ ಆಸ್ಪತ್ರೆಯ ಹೊರಗಿರುವ ಮರದ ಕೆಳಗೆ ತಂದು ಮಲಗಿಸಿದ್ದಾರೆಂದೂ, ಅಲ್ಲಿ ಅಮ್ಮ ಮಲಗಲು ಚಾಪೆ ಸಹಾ ಇಲ್ಲದೆ ಮಣ್ಣಿನ ಮೇಲೆ ಮಲಗಿದ್ದಾಳೆಂದೂ ಅಳುತ್ತಳುತ್ತಲೇ ವರದಿ ಒಪ್ಪಿಸಿದ ಇಮಲಿ ಜಗ್ಯಾನೊಬ್ಬನನ್ನೇ ಬಿಟ್ಟು ಬಂದಿರುವ ನೆನಪಾಗಿ ಮತ್ತೆ ಓಡಿಹೋದಳು.

ಜೀತೂ ಭಾರವಾದ ಹೆಜ್ಜೆ ಹೊತ್ತು ಮತ್ತೆ ಆಸ್ಪತ್ರೆಯತ್ತ ನಡೆದ. ಕನಿಕರದ ಕಣ್ಣುಗಳ ಆ ಬಿಳಿಕೋಟಿನ ದಾಕ್ಟರ್ ಸಾಹೇಬ ನೆನಪಾದ. ಆತ ದೊಡ್ಡ ಸಾಹೇಬನಂತೂ ಆಗಿರಲಿಕ್ಕಿಲ್ಲ. ತನ್ನ ಬಳಿ ಎ? ನಯವಾಗಿ ಮಾತಾಡಿದ್ದನಲ್ಲ. ಆತನೇನಾದರೂ ಸಹಾಯ ಮಾಡಬಹುದೆ ಎನಿಸಿ ಆಸ್ಪತ್ರೆಯ ಕಾರಿಡಾರಿನ ಉದ್ದಕ್ಕೂ ಓಡಾಡಿದ. ಉಹೂಂ, ಆತ ಎಲ್ಲೂ ಕಾಣಲಿಲ್ಲ. ಮತ್ತೆ ಅದೇ ಬಿಳಿ ಸೀರೆಯ ದಾದಿ ಕಂಡವಳು ಜೀತೂನ ಮುಖದಲ್ಲಿನ ಅಸಹಾಯಕತೆಯನ್ನೂ ಲಾಖಿಯ ಶವದ ಬಳಿ ಏನೂ ಅರಿಯದಂತೆ ಆಡುತ್ತಿರುವ ಜಗ್ಯಾ ಹಾಗೂ ಪೆಚ್ಚುಮೋರೆ ಹಾಕಿಕೊಂಡಿದ್ದ ಇಮಲಿಯನ್ನು ನೋಡಿದವಳಿಗೆ ಪರಿಸ್ಥಿತಿ ಅರ್ಥವಾಗಲು ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ರವಿಕೆಯೊಳಗಿಂದ ಬೆವರಿ ಮುದ್ದೆಯಾಗಿದ್ದ ನೂರರ ಒಂದು ನೋಟನ್ನು ಮಾತಾಡದೆ ಜೀತೂನ ಕೈಗಿರಿಸಿ ಬೇಗ ಲಾಖಿಯ ಶವ ಸಾಗಿಸಲು ವ್ಯವಸ್ಥೆ ಮಾಡಲು ಮತ್ತೊಮ್ಮೆ ಎಚ್ಚರಿಸಿ ಮುಂದೆ ಹೋದಳು. ಜೀತೂನ ಕಣ್ಣುಗಳಲ್ಲಿ ಬೆಳಕು ಕಾಣಿಸಿತು. ಮರುಕ್ಷಣ ಈ ಇ? ಕಡಮೆ ದುಡ್ಡಿನಿಂದ ಏನಾಗುತ್ತದೆ ಎನಿಸಿ ಪೆಚ್ಚಾದ. ಲಾಖಿಯ ಕಡೆಗೊಮ್ಮೆ ನೋಡಿದ. ಇದಾವುದರ ಪರಿವೆಯೇ ಇಲ್ಲದಂತೆ ಬಿದ್ದುಕೊಂಡಿದ್ದಳವಳು.

ಇತ್ತೀಚೆಗಷ್ಟೇ ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದ ಕೆಂಪು ರಂಗಿನ ಚಮಕಿ ಹಾಕಿದ ಸೀರೆಯನ್ನು ಲಾಖಿ ಅದೆಷ್ಟು ಆಸೆಗಣ್ಣಿನಿಂದ ನೋಡಿದ್ದಳಲ್ಲ ಕೊನೆಗೂ ತನಗೆ ನೂರಾ ಐವತ್ತು ರೂಪಾಯಿಯ ಆ ಸೀರೆಯನ್ನು ಅವಳಿಗೆ ಕೊಡಿಸಲಾಗಲೇ ಇಲ್ಲ ಎನಿಸಿ ಅವನ ಕಣ್ಣುಗಳಲ್ಲಿ ನೀರುಕ್ಕಿತು. ಅಂದು ಅವನ ಕೈಲಿ ಬಿಹಾರಿ ಸಾಹೇಬರ ಗೋಡೋನಿನಲ್ಲಿ ವಾರವಿಡೀ ಲೋಡು ಇಳಿಸಿ ಸಂಪಾದಿಸಿದ್ದ ಐನೂರು ರೂಪಾಯಿಗಳೇನೋ ಇದ್ದವು. ಆದರೆ ಅವನ ಮುಂದೆ ಖರ್ಚಿನ ದೊಡ್ಡ ಪಟ್ಟಿಯೇ ಇತ್ತಲ್ಲ. ಇಮಲಿಗೊಂದು ಅಗ್ಗದ ಲಂಗ ರವಿಕೆ, ಜಗ್ಯಾನಿಗೆ ಶರಟು, ಚಡ್ಡಿ, ರೊಟ್ಟಿಗೆ ಹಿಟ್ಟು, ಎಣ್ಣೆ, ತನಗೆರಡು ಕಟ್ಟು ಬೀಡಿ ಎಂದು ಕಾಸು ಖಾಲಿಯಾದದ್ದೇ ತಿಳಿದಿರಲಿಲ್ಲ. ಕೊನೆಗೆ ಲಾಖಿ ಯಾವಾಗಲೂ ಬಾಯಿ ಚಪ್ಪರಿಸಿ ತಿನ್ನುತ್ತಿದ್ದ ಬ್ರೆಡ್ ಪಕೋಡವನ್ನು ಮಾತ್ರ ಕೊಡಿಸಲು ಸಾಧ್ಯವಾಗಿದ್ದು ಜೀತೂನಲ್ಲಿ ಲಾಖಿಯ ಬಗ್ಗೆ ಅಪಾರ ಕರುಣೆ ಹುಟ್ಟಿಸಿತ್ತು. ಪಾಪದವಳು ಇ? ಪಟ್ಟ ಒಂದು ಸೀರೆಯನ್ನು ಬೇಕೇಬೇಕು ಎಂದು ಹಠ ಮಾಡಲಿಲ್ಲ. ಈ ಸಲ ಕೈಗೆ ದುಡ್ಡು ಬಂದರೆ ಮೊದಲು ಲಾಖಿಗೆ ಆ ಕೆಂಪು ರಂಗಿನ ಚಮಕಿ ಸೀರೆಯನ್ನೇ ಮೊದಲು ತರುವುದು. ಆದರೆ ಅವಳಿಗೆ ಮೊದಲೇ ತಿಳಿಯಬಾರದು. ತಾನು ಇದ್ದಕ್ಕಿದ್ದಂತೆ ಅವಳ ಕಣ್ಣ ಮುಂದೆ ಸೀರೆ ಹಿಡಿದಾಗ ಅವಳ ಕಣ್ಣುಗಳು ಖುಷಿಯಿಂದ ಅರಳುವುದನ್ನು ನೋಡಬೇಕು ಎಂದು ಮನಸ್ಸಿನಲ್ಲೇ ತೀರ್ಮಾನ ತೆಗೆದುಕೊಂಡಿದ್ದ ಜೀತೂ ರಾಮನಿಗೆ ಕೊನೆಗೂ ಆ ಘಳಿಗೆ ಒದಗಿ ಬರಲೇ ಇಲ್ಲ. ಸಿಕ್ಕರೆ ಕೂಲಿ ಕೆಲಸ ಇಲ್ಲದಿದ್ದರೆ ಅವರಿವರ ಹತ್ತಿರ ಕೂತು ನಿಂತು ಹರಟೆ ಹೊಡೆಯುವ ಜೀತೂರಾಮನಿಗೆ ಎಂದೂ ಇದ್ದ ಜಾಗ ಬಿಟ್ಟು ದೊಡ್ಡ ಶಹರಕ್ಕೆ ಕೆಲಸ ಹುಡುಕಿಕೊಂಡು ಹೋಗಬೇಕೆಂದು ಅನಿಸಿಯೇ ಇರಲಿಲ್ಲ. ಲಾಖಿಯೇ ಆಗಾಗ ಈ ಬಗ್ಗೆ ಮಾತಾಡುತ್ತಿದ್ದಳಾದರೂ ಜೀತೂ ಇದು ನನ್ನ ಅಪ್ಪ, ಅಜ್ಜ, ಮುತ್ತಜ್ಜ ಬಾಳಿದ ಊರು ಬಿಟ್ಟು ನಾನೆಲ್ಲೂ ಬರಲಾರೆ ಎಂದು ಕಡ್ಡಿ ತುಂಡುಮಾಡಿದಂತೆ ಹೇಳಿ ಮಾತಿಗೆ ಮಾತು ಬೆಳೆದು ತೀರಾ ಲಾಖಿಯ ಮೇಲೆ ಕೈಯೆತ್ತುವವರೆಗೂ ಹೋಗಿಬಿಡುತ್ತಿದ್ದರಿಂದ ಲಾಖಿಯೇ ಸುಮ್ಮನಾಗಿಬಿಡುತ್ತಿದ್ದಳು. ಇಲ್ಲಿ ಊರಲ್ಲಿ ಸಾಲಕ್ಕೆ ಸಾರಾಯಿಯೂ ಹರಟೆಗೆ ಅಡ್ಡದಾರಿಯ ಸ್ನೇಹಿತರೂ ಇದ್ದಾಗ ಜೀತೂರಾಮ ಊರು ಬಿಟ್ಟು ಬಂದಾನಾದರೂ ಹೇಗೆ? ಜೊತೆಗೆ ತೀರಾ ಮೈಮುರಿಯುವ ದುಡಿತವನ್ನು ಅವನೆಂದೂ ಇ?ಪಡುತ್ತಲೇ ಇರಲಿಲ್ಲ. ಲಾಖಿಯೇ ಆಗಾಗ ಅಕ್ಕಪಕ್ಕದ ಹಳ್ಳಿಗಳ ಹೊಲದಲ್ಲೋ ಅನುಕೂಲಸ್ತರ ಮನೆಗಳಲ್ಲೋ ಕೆಲಸಮಾಡಿ ಸಂಸಾರದ ಹೊಟ್ಟೆ ನೋಡಿಕೊಳ್ಳುತ್ತಿದ್ದಳು. ಹಾಗೆಂದು ಅವಳಿಗೆ ಸಿಗುತ್ತಿದ್ದುದೂ ಪುಡಿಗಾಸೇ ವಿನಾ ಮೂರಂಕಿಯ ಮೊತ್ತವೂ ಅಲ್ಲ. ಮೊದಮೊದಲು ಜೀತೂರಾಮ ಹೀಗೆ ಲಾಖಿ ಕೆಲಸಕ್ಕೆ ಹೋಗುವುದನ್ನು ವಿರೋಧಿಸಿ ಕೂಗಾಡಿದರೂ, ಮಕ್ಕಳು ಊಟಕ್ಕಾಗಿ ತನ್ನನ್ನು ಕಾಡದೇ ಇರುವುದೂ, ಮನೆಯ ಸಣ್ಣಪುಟ್ಟ ಖರ್ಚುಗಳೆಲ್ಲ ತನ್ನಿಂದ ಲಾಖಿಯ ಹೆಗಲಿಗೆ ಜರುಗಿದ್ದು ಗಮನಿಸಿ, ಒಳಗೊಳಗೇ ಸುಖಿಸುತ್ತಾ, ಉಳಿದ ದುಡ್ಡಿನಲ್ಲಿ ಇನ್ನೂ ಒಂದೆರಡು ಬಾಟಲು ಹೆಚ್ಚಾಗಿಯೇ ಏರಿಸುತ್ತಿದ್ದ. ಏನೇ ಇದ್ದರೂ ಲಾಖಿಗೆ ಜೀತೂರಾಮನೇ ದೇವರು, ಜೀತೂಗೆ ಲಾಖಿಯೇ ದೇವತೆ ಎಂದು ಅವರಿವರು ಹಾಸ್ಯ ಮಾಡುವ? ಅನ್ಯೋನ್ಯತೆಯಿದ್ದದ್ದು ಸುಳ್ಳಲ್ಲ. ಎಲ್ಲ ಏಳು-ಬೀಳುಗಳ ಮಧ್ಯೆಯೂ ಸಂಸಾರ ತೇಲುತ್ತಲೆ ಸಾಗಿತ್ತು. ಅಂಥದ್ದರಲ್ಲಿ ಈ ಲಾಖಿ ಹೀಗೆ ಎಂದೂ ಇಲ್ಲದವಳೂ ಎದೆ ನೋವೆಂದು ಒದ್ದಾಡಿದವಳು ಇದ್ದಕ್ಕಿದ್ದಂತೆ ಕೈಬಿಟ್ಟು ಹೊರಟುಬಿಡುತ್ತಾಳೆಂದು ಕನಸಲ್ಲೂ ಊಹಿಸದ ಜೀತೂರಾಮ ದಿಗ್ಭ್ರಮೆಗೆ ಒಳಗಾಗಿದ್ದ. ಲಾಖಿ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದೇ ಕ?ವಾಗಿರುವಾಗ ಈ ದುಡ್ದಿನ ಸಮಸ್ಯೆ ಬೇರೆ!

“ಯಪ್ಪಾ, ಅಲ್ಲಿ ದಾಗುಟ್ರು ಬೈತಾ ಇದ್ದಾರೆ. ಅಮ್ಮನ್ನ ಬೇಗ ಇಲ್ಲಿಂದ ತೆಗೆದ್ಕೊಂಡು ಹೋಗಬೇಕಂತೆ” ಇಮಲಿ ಕೈಹಿಡಿದು ಜಗ್ಗಿದಾಗ ಜೀತೂರಾಮ ಮತ್ತೆ ಪ್ರಪಂಚಕ್ಕೆ ಬಂದ. ಒಂದು ಕ್ಷಣ ಅವನಿಗೆ ಇಮಲಿಯ ಮೇಲೆ ಭಯಂಕರ ಸಿಟ್ಟು ಉಕ್ಕಿ ಬಂತು. ಹಾಳಾದವಳು ಹೀಗಾ ಮಾಡುವುದು? ಇದ್ದಾಗಲೆಲ್ಲ ಏನೇ ಕ? ಬಂದರೂ ಹೆಗಲು ಕೊಡುತ್ತಿದ್ದವಳು ಹೀಗೆ ಹೆಗಲಿಗೇ ಹೊರೆಯಾಗಿಬಿಟ್ಟಳಲ್ಲ ಎಂದು ಅವುಡುಗಚ್ಚಿದ. ಲಾಖಿಯ ಶಾಂತಮುಖ ಕಣ್ಣ ಮುಂದೆ ತೇಲಿ ಬಂದು ಕೂಡಲೇ ಜೀತೂರಾಮ ಗಲ್ಲ ಬಡಿದುಕೊಂಡ. ಇ? ವ? ಎಲ್ಲ ಕ?ಕ್ಕೂ ಜೊತೆಯಾಗಿ ಮಕ್ಕಳು, ಮನೆ, ಗಂಡ ಎಂದು ಜೀವ ತೇಯುತ್ತಾ ಎಲ್ಲಾ ಆಸೆಗಳನ್ನೂ ಅದುಮಿಟ್ಟುಕೊಂಡು ಜೊತೆಗೆ ನಡೆದವಳ ಬಗ್ಗೆ ತಾನು ಸಿಟ್ಟಾಗುವುದೆ? ಅಳುತ್ತಿದ್ದ ಇಮಲಿಯತ್ತ ನೋಡಿದ. ಲಾಖಿಯದೇ ತದ್ರೂಪು. ಅರೇ ತಾನಿ? ದಿನ ಗಮನಿಸಿಯೇ ಇರಲಿಲ್ಲವಲ್ಲ ಎಂದುಕೊಂಡವನೇ ಬಾಗಿ ಅವಳನ್ನು ಎದೆಗೆ ಅಪ್ಪಿ ಹಿಡಿದು ಅಳತೊಡಗಿದ. ಇಮಲಿಗೂ ತಡೆಯಲಾಗಲಿಲ್ಲ. ಲಾಖಿ ಇಲ್ಲ ಎಂದು ಗೊತ್ತಿದ್ದರೂ ಜಗ್ಯಾನ ಮುಖ ನೋಡಿ ಅಪ್ಪನ ಪೆಚ್ಚುಮೋರೆ ನೋಡಿ ತಡೆದುಕೊಂಡಿದ್ದವಳು ಈಗ ಜೀತೂರಾಮ ದನಿತೆಗೆದು ಅಳುತ್ತಲೇ ತಡೆಯಲಾಗದೆ ತಾನೂ ಅಳತೊಡಗಿದಳು. ಅಲ್ಲೇ ಬಿದ್ದಿದ್ದ ಸಣ್ಣಪುಟ್ಟ ಕಲ್ಲಿನ ಚೂರುಗಳನ್ನ ಆಯ್ದುಕೊಂಡು ಅತ್ತಿತ್ತ ಎಸೆಯುತ್ತಾ ಆಗಾಗ ಅಮ್ಮನ ಕಡೆ ನೋಡುತ್ತಾ ಇದ್ದ ಪುಟ್ಟ ಜಗ್ಯಾನಿಗೆ ಏನೊಂದೂ ಅರ್ಥವಾಗದೆ ತಾನೂ ಓಡಿ ಬಂದು ಇಬ್ಬರಿಗೂ ಜೋತು ಬಿದ್ದು ಅಳಲು ಶುರುಮಾಡಿದ.

ಅದೆ? ಹೊತ್ತು ಮೂವರೂ ಅದೇ ಸ್ಥಿತಿಯಲ್ಲಿದರೋ ಏನೊ. ದಾರಿಯಲ್ಲಿ ಹೋಗುವವರು ಬರುವವರೆಲ್ಲರ ಕನಿಕರದ ನೋಟಗಳಿಗೂ ಅವರನ್ನು ಸಂತೈಸುವ ಶಕ್ತಿ ಇರಲಿಲ್ಲವಾಗಿ ಆಸ್ಪತ್ರೆಯ ಮುಂದೆ ಇಂತಹ ದೃಶ್ಯಗಳು ಸರ್ವೇಸಾಮಾನ್ಯ ಪಾಪ ಇವರ ಕಡೆಯವರಾರೋ ತೀರಿಕೊಂಡಿರಬೇಕೆಂದುಕೊಂಡು ತಲೆಬಗ್ಗಿಸಿ ಹಾಗೇ ನಡೆದರು. ಇವರ ಅಳು ಆಸ್ಪತ್ರೆಯ ಒಳಗಿದ್ದ ಆ ಬಿಳಿಕೋಟಿನ ದಾಗಟ್ರಿಗೂ ಕೇಳಿಸಿರಬೇಕು ದಡಬಡಿಸಿ ಓಡಿಬಂದರೆ ನೊಡುವುದೇನು. ಅತ್ತ ಲಾಖಿ ಹಾಗೇ ಇದ್ದಲ್ಲೇ ಮಲಗಿದ್ದಾಳೆ
ಇತ್ತ ಇವರು ಮೂವರೂ ಲೋಕದ ಪರಿವೆಯಿಲ್ಲದವರಂತೆ ಅಳುವಿನಲ್ಲಿ ಮುಳುಗಿದ್ದಾರೆ. ಮೆಡಿಕಲ್ ಸೇರಿದಾಗಿನಿಂದ ಸಾವಿನ ಈ ನೋಟಕ್ಕೆ ಒಗ್ಗಿಹೋಗಿದ್ದ ಆ ದಾಗುಟ್ರು ಜೀತೂರಾಮನ ಹೆಗಲ ಮೇಲೆ ಕೈಯಿರಿಸಿ ಸಮಾಧಾನ ಹೇಳಲು ಬಾಯ್ತೆರೆಯುವ?ರಲ್ಲಿ ಅದೆಲ್ಲಿದ್ದಳೋ ಆ ದಾದಿಯೂ ಓಡಿ ಬಂದವಳೇ ಲಾಖಿಯ ಶವ ಸಾಗಿಸಲು ಪರದಾಡುತ್ತಿರುವ ಜೀತೂರಾಮನ ಅಸಹಾಯಕತೆಯನ್ನೂ ಎರೆಡೇ ಮಾತುಗಳಲ್ಲಿ ಹೇಳಿದಳು. ಆತನಿಗೆ ಏನು ಹೇಳಲೂ ತೋಚದಾಯಿತು. ಕೈ ಅನಾಯಾಸವಾಗಿ ಜೇಬಿನತ್ತ ಹೋಯಿತು. ಜೀತೂರಾಮ ಆ ದುಃಖದಲ್ಲೂ ಅದನ್ನು ಗಮನಿಸಿ ಕೊಂಚ ಹುರುಪುಗೊಂಡ. ಆರ್ಥನಾಗಿ ಇನ್ನೇನು ಕೈಯೊಡ್ಡಬೇಕೆನ್ನುವ?ರಲ್ಲಿ ದಾದಿ ಕೊಟ್ಟ ನೂರರ ನೋಟು ಅವನ ಅಂಗಿಯ ಹರಿದ ಕಿಸೆಯಿಂದ ಹೊರಗಿಣುಕಿದ್ದು ಡಾಕ್ಟರರಿಗೆ ಕಾಣಿಸಿಯೇ ಬಿಟ್ಟಿತು. ಆದರೂ ಖಾಲಿ ಕೈ ಹೊರಬರಲಾರದೆ ಹಾಗೇ ಐವತ್ತರ ನೋಟೊಂದು ಹೊರ ತಂದಿತು. ಸಿಕ್ಕ? ಸಾಕು ಎನ್ನುವ ಸ್ಥಿತಿಯಲ್ಲಿದ್ದ ಜೀತೂರಾಮ ತಟ್ಟನೇ ನೋಟು ಕಸಿದುಕೊಂಡ. ಲಾಖಿಯನ್ನು ನಾನು ಹೇಗಾದರೂ ಕರೆದೊಯ್ಯುತ್ತೇನೆ ಎಂದು ನಿರ್ಧರಿಸಿದ.

“ಸಾಹೇಬ್ರೆ ಅರ್ಧ ಗಂಟೆ ಟೇಮು ಕೊಡಿ, ನನ್ನ ಮಕ್ಕಳು ಇಲ್ಲೇ ಇರ್ತಾರೆ. ಹೀಗೆ ಹೋಗಿ ಹಾಗೆ ಬಂದು ಇವಳನ್ನು ಕರ್ಕೊಂಡು ಹೋಯ್ತೀನಿ.”

ಜೀತೂರಾಮನ ಕಣ್ಣುಗಳ ಅಸಹಾಯಕತೆಗೆ ಡಾಕ್ಟರೂ ದಾದಿಯೂ ಇಲ್ಲವೆನ್ನಲಾಗದಿದ್ದರೂ, ಇಂತಹ ಲೆಕ್ಕವಿಲ್ಲದ? ಕೇಸುಗಳನ್ನು ನೋಡಿದ್ದವರು ಕ್ಷಣ ಅನುಮಾನಿಸಿದರು. ಮೊದಲೇ ಕೈಯಲ್ಲಿ ಮೂರು ಕಾಸಿಲ್ಲ ಎನ್ನುತ್ತಿದ್ದಾನೆ. ಮತ್ತೆಲ್ಲಿ ತಲೆಗೆ ಬರುತ್ತದೋ.. ಜೀತೂರಾಮನಿಗೆ ಅರ್ಥವಾಯಿತು.

“ಸಾಹೇಬ್ರೆ ನಾ ಮೋಸ ಮಾಡಿ ಓಡಿಹೋಗ್ತೀನಿ ಎಂದು ಅಂದುಕೊಂಡಿದೀರಾ? ನಾನು ಬಡವಾ ಸರಿ, ಮೋಸಗಾರ ಅಲ್ಲ. ನನ್ನ ಲಾಖೀದು ಒಂದು ಆಸೆ ಇತ್ತು. ಅದಕ್ಕ?… ಈಗಲೆ ಬರ್ತೀನಿ” ಎಂದವನೇ ಅವರ ಉತ್ತರಕ್ಕೂ ಕಾಯದೆ ಭುಜದ ಮೇಲಿದ್ದ ಹರಿದ ಟವೆಲ್ಲಿನಿಂದ ಕಣ್ಣೀರು ಒರೆಸಿಕೊಂಡು ಓಡಿದ. ಇಮಲಿ ಇನ್ನೂ ಅಳುತ್ತಲೇ ಇದ್ದ ಜಗ್ಯಾನ ಕೈಹಿಡಿದು ಲಾಖಿಯ ಪಕ್ಕ ಕೂತಳು. ಬಿಳಿ ಉಡುಪಿನವರಿಬ್ಬರೂ ಇನ್ನೇನು ಮಾಡಲೂ ತೋಚದೆ ಒಳಗೆ ನಡೆದರು. ಇಮಲಿಗೊಂದೇ ಚಿಂತೆ. ಈ ಅಪ್ಪ ಹೋದದ್ದಾದರೂ ಎಲ್ಲಿಗೆ? ಅಮ್ಮ ನೋಡಿದರೆ ಮತ್ತೆ ಏಳಲಾರದ ಕಡೆ ಹೋಗಿದ್ದಾಳೆ. ಈ ಜಗ್ಯಾನೋ ಇನ್ನೂ ಕೂಸು. ಅಪ್ಪ ಬರದೇ ಇದ್ದರೆ? ಏನು ಮಾಡುವುದು? ಎಂದೇ ತಲೆ ಕೊರೆತ. ಇಮಲಿಯೇನೂ ತೀರಾ ದೊಡ್ಡ ವಯಸ್ಸಿನವಳಲ್ಲದಿದ್ದರೂ ಕ?ದ ಮಧ್ಯೆಯೇ ಬೆಳೆದಿದ್ದವಳಿಗೆ ಎಲ್ಲವೂ ಅರ್ಥವಾಗುತ್ತಿತ್ತು. ಲಾಖಿಗಂತೂ ಇಮಲಿ ಕಣ್ಣೇ ಆಗಿದ್ದಳಲ್ಲ. ಅಮ್ಮನ ದುಡಿತ ಅಪ್ಪನ ಕುಡಿತ ಎಲ್ಲವೂ ಅವಳಿಗೆ ತಿಳಿಯದ್ದೇನಲ್ಲ. ಆದರೂ ಅವರಿಬ್ಬರೂ ಸದಾ ನಗುನಗುತ್ತಾ ಇರುವುದನ್ನು ನೋಡಿದಾಗಲೆಲ್ಲ ಅಕ್ಕಪಕ್ಕದ ಮನೆಗಳಲ್ಲಿ ಗಂಡ-ಹೆಂಡಿರ ಜಗಳ ಹೊಡೆತದ ಸದ್ದು ಕೂಗಾಟ ಎಲ್ಲದರ ಮಧ್ಯೆ ತನ್ನ ಹರಕು ಜೋಪಡಿ ಸ್ವರ್ಗದಂತೆ ಇಮಲಿಗೆ. ಈ ಅಮ್ಮನಿಗೆ ಸದಾ ಮನೆಯದ್ದೇ ಚಿಂತೆ. ಇತ್ತೀಚೆಗೆಲ್ಲಾ ಬೇಗ ಸುಸ್ತಾಗುತ್ತಿದ್ದವಳು ಆಗಾಗ ಸ್ವಲ್ಪ ಎದೆನೋವೆಂದು ಮೂಲೆಹಿಡಿಯುತ್ತಿದ್ದರೂ ಅಪ್ಪ ಬರುವ ಹೊತ್ತಿಗೆ ಏನೂ ಇಲ್ಲದವಳಂತೆ ಎದ್ದು ಬಿಡುತ್ತಿದ್ದಳಲ್ಲ! ನಿಜವಾಗಲೂ ನೋವು ಕಡಮೆಯಾಗುತ್ತಿತ್ತೋ ಅಥವಾ ಅಪ್ಪನಿಗೆ ಗೊತ್ತಾಗಬಾರದು ಅಂತ ನಾಟಕ ಮಾಡುತ್ತಿದ್ದಳೋ ಇಮಲಿಗೆ ತಿಳಿಯುತ್ತಿರಲಿಲ್ಲ.

ಸಣ್ಣ ಪುಟ್ಟ ವಿಚಾರಗಳನ್ನು ಜೀತೂರಾಮನ ಗಮನಕ್ಕೆ ತಂದು ಗಾಬರಿ ಮಾಡುವುದು ಲಾಖಿಗೂ ಬೇಕಿರಲಿಲ್ಲ. ಇನ್ನು ಆಸ್ಪತ್ರೆ ಎಂದರೆ ಮೈಲುಗಟ್ಟಲೆ ದೂರ ಹೋಗಬೇಕು. ಒಮ್ಮೆ ಹತ್ತಿದ ಓಡಾಟ ಹಾಗೇ ಮುಂದುವರಿದರೆ ಮನೆ ನಡೆಯುವುದು ಹೇಗೆ, ಮಕ್ಕಳನ್ನು ನೋಡಿಕೊಳ್ಳುವವರು ಯಾರು? ಎಂದೆಲ್ಲ ಲಾಖಿ ಯೋಚಿಸಿರಬೇಕು, ಇಮಲಿಗೂ ಅರ್ಥವಾಗದಂತೆ ಅವಳ ನೋವು ಮಾಯವೆ ಆಗಿಬಿಡುತ್ತಿದ್ದದ್ದು ನೆನೆದು ಇಮಲಿಯ ಕಣ್ಣಲ್ಲಿ ನೀರು ಸುರಿಯಿತು. ಮುಂದೆ? ಅಮ್ಮನಿಲ್ಲದ ಮನೆ! ಪಕ್ಕದ ಮನೆ ಇಚ್ಕೀಯ ಅಮ್ಮ ಅದೇನೊ ಜ್ವರ ಬಂದು ಸತ್ತ ಎರಡೇ ತಿಂಗಳಲ್ಲಿ ಅವಳಪ್ಪ ಹೊಸ ಹೆಂಗಸೊಂದನ್ನು ಕರೆದುಕೊಂಡು ಬಂದಿದ್ದ. ದಿನ ಬೆಳಗಾದರೆ ಆಕೆ ಇಚ್ಕೀಯನ್ನು ಬೈಯುವುದು, ಹೊಡೆಯುವುದು, ಅವಳು ಅಳುವುದು ಎಲ್ಲ ಸ್ಪ?ವಾಗಿಯೇ ಕೇಳುತ್ತಿತ್ತು. ಇಮಲಿ ಲಂಗದ ತುದಿಯಿಂದ ಕಣ್ಣೀರೊರೆಸಿಕೊಂಡಳು. ಅಪ್ಪನೂ ಬೇರೆ ಹೆಂಗಸನ್ನು ಕರೆತಂದರೆ? ನೆನೆದೇ ಅವಳಿಗೆ ಮತ್ತೆ ಅಳುವುಕ್ಕಿ ಬಂತು. “ಮಾ ..ಏಳು ಏಳು” ಎನ್ನುತ್ತಾ ಲಾಖಿಯ ಭುಜ ಹಿಡಿದು ಅಲುಗಾಡಿಸಿದಳು. ಲಾಖಿಯೇನು ಎದ್ದಾಳು? ಜಗ್ಯಾನಿಗೋ ಅರ್ಥವೇ ಆಗದೆ ’ಮಾ ಯಾಕೆ ಏಳಲ್ಲ? ಏನಾಗಿದೆ? ಇರು ಚೂಜಿ ಚುಚ್ಚಿದ್ರೆ ಏಳ್ತಾಳೆ’ ಎಂದವನೇ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಸಣ್ಣ ಕಡ್ಡಿಯ ಚೂರೊಂದನ್ನು ತೆಗೆದುಕೊಂಡು ಲಾಖಿಯ ತೋಳಿಗೆ ಚುಚ್ಚುವವನಂತೆ ಮಾಡಿದ. ಇಮಲಿ ತಟ್ಟನೆ ಕೈ ತಡೆದವಳೇ ಜಗ್ಯಾನ ತಲೆ ಸವರಿ ತನ್ನ ಮಡಿಲಲ್ಲಿ ಕುಳ್ಳಿರಿಸಿಕೊಂಡು ಮಾ ಇನ್ನು ಮುಂದೆ ಎಂದೂ ಏಳುವುದಿಲ್ಲ ಮಾತಾಡುವುದಿಲ್ಲ ಎಂದು ಅವನಿಗೆ ಅರ್ಥಮಾಡಿಸಲು ಪ್ರಯತ್ನ ಮಾಡುತ್ತಿರುವಾಗಲೇ ಜೀತೂರಾಮ ದೂರದ ತಿರುವಿನಲ್ಲಿ ಕಾಣಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಳು. ಅಪ್ಪ ನಮ್ಮ ಬಿಟ್ಟು ಹೋಗಿಲ್ಲ. ಹಾಗಾದರೆ ನಾನೇ ಭಯಪಟ್ಟೆ ಎಂದು ಜಗ್ಯಾನನ್ನು ಮಡಿಲಿನಿಂದ ಕೆಳಗಿಳಿಸಿ ಎದ್ದು ನಿಂತಳು.

ಬಿಸಿಲಿಗೆ ಬೆವರು ಧಾರೆಯಾಗಿ ಕಣ್ಣೀರ ಜೊತೆ ಸೇರಿ ಮುಖವನ್ನೆಲ್ಲ ತೋಯಿಸಿದ್ದರೂ ಲೆಕ್ಕಿಸದೆ ಜೀತೂರಾಮ ಓಡಿ ಬಂದ. ಕೈಯಲ್ಲಿ ಸಣ್ಣ ಪ್ಲಾಸ್ಟಿಕ್ ಕವರ್. ಜಗ್ಯಾನ ಹೊಟ್ಟೆಯ ಹಸಿವು ಭುಗಿಲ್ಲೆಂದಿರಬೇಕು. ಅಪ್ಪೋ ಅಪ್ಪೋ ಎಂದು ಓಡಿ ಹೋಗಿ ಜೀತೂರಾಮನ ಕಾಲುಗಳನ್ನು ತಬ್ಬಿಹಿಡಿದವನು ಆಸೆಯಿಂದ ಆ ಕವರಿಗೆ ಕೈಯೊಡ್ಡಿದ. ಜೀತೂರಾಮನಿಗೆ ಕರುಳಲ್ಲಿ ಕತ್ತರಿಯಾಡಿಸಿದಂತಾಯ್ತು. ಲಾಖೀ ನೀನಿದ್ದಿದ್ದರೆ ಈ ಮಕ್ಕಳು ಹೀಗೆ ಹಸಿವಿಂದ ಒದ್ದಾಡ್ತಾ ಇದ್ದರೇನೆ? ಏನೋ ಒಂದು ಹೊಂದಿಸಿ ಹೊಟ್ಟೆ ತಂಪು ಮಾಡ್ತಾ ಇದ್ದೆಯಲ್ಲ ಎಂದುಕೊಂಡೇ ಕವರಿಗೆ ಕೈ ಹಾಕಿದ ಜಗ್ಯಾನ ಆಸೆದುಂಬಿದ ಕಣ್ಣುಗಳು ಇಮಲಿಯ ಕುತೂಹಲದ ಕಣ್ಣುಗಳಿಗೆ ಕೆಂಪು ಬಣ್ಣದ ಫಳಫಳ ಹೊಳೆವ ನಕ್ಕಿ ಹಾಕಿದ ಬಟ್ಟೆ ಕಾಣಿಸಿತು. ಅವರಿಬ್ಬರಿಗೂ ಏನೂ ಅರ್ಥವಾಗಲಿಲ್ಲ. ತಿಂಡಿಯ ಆಸೆಯಲ್ಲಿದ್ದ ಜಗ್ಯಾನ ಮುಖದಲ್ಲಿ ನಿಧಾನವಾಗಿ ನಿರಾಸೆ ಆಕ್ರಮಿಸಿ ಕಣ್ಣುತುಂಬಿಕೊಳ್ಳತೊಡಗಿತು. ಇಮಲಿಗೆ ಆಶ್ಚರ್ಯ.

ಅಪ್ಪ ಯಾವುದೋ ಗಾಡಿಯ ವ್ಯವಸ್ಥೆ ಮಾಡಲು ಹೋಗಿದ್ದಾನೆಂದುಕೊಂಡರೆ ಇದೇನು ಹೊಸ ಬಟ್ಟೆ ತಂದ ಹಾಗಿದೆಯಲ್ಲ. ಅಮ್ಮ ನೋಡಿದರೆ ಹೀಗೆ! ಅಪ್ಪನ ಮುಖವನ್ನೇ ದಿಟ್ಟಿಸಿದಳು. ಜೀತೂರಾಮನ ಕಣ್ಣಿಗೆ ಕಲ್ಲಿನಂತೆ ಮಲಗಿದ್ದ ಲಾಖಿಯೊಬ್ಬಳೇ ಕಾಣುತ್ತಿದ್ದದ್ದು. ಲೋಕದ ಪರಿವೆಯಿಲ್ಲದವನಂತೆ ನಿಧಾನಕ್ಕೆ ಕೈಲಿದ್ದ ಬಟ್ಟೆ ಬಿಚ್ಚಿದ. ಕೆಂಪು ಬಣ್ಣದ ಹೊಳೆವ ಚಿತ್ತಾರದ ಸೀರೆ ಹೊಳೆಯುತ್ತಿತ್ತು. ಮೆಲ್ಲನೆ ಲಾಖಿಯ ತಲೆಯೆತ್ತಿ ಮಡಿಲಲ್ಲಿರಿಸಿಕೊಂಡ. ಸೀರೆಯನ್ನು ಇಮಲಿಯ ಕೈಗಿತ್ತು ಹಾಸಲು ಹೇಳಿದ. ಅರ್ಥವಾಗದ ಇಮಲಿ ತನಗೆ ಬಂದಂತೆ ನೆಲದ ಮೇಲೆ ಉದ್ದಕ್ಕೂ ಆ ಕೆಂಪು ಬಣ್ಣದ ಸೀರೆಯನ್ನು ಹಾಸಿದಳು. ರಾತ್ರಿ ಹೊತ್ತು ನೀಲಿಯಾಕಾಶದಲ್ಲಿ ನಕ್ಷತ್ರಗಳನ್ನ ನೋಡುತ್ತಿದ್ದ ಇಮಲಿಗೆ ಇಂದೇಕೋ ಆಕಾಶ ಕೆಂಪಾಗಿ ಕಂಡಂತಾಯಿತು. ಜೀತೂರಾಮ ಮೆಲ್ಲಗೆ ಲಾಖಿಯನ್ನೆತ್ತಿ ಸೀರೆಯ ಮೇಲೆ ಮಲಗಿಸಿ ತನಗೆ ಬಂದಂತೆ ಸುತ್ತಿದ. ಅಂತೂ ಲಾಖಿ ತನ್ನ ಇ?ದ ಹೊಳೆವ ಚಿತ್ತಾರದ ಸೀರೆ ಉಟ್ಟು ಮಲಗಿದಳು. ಮುಂದೇನು ಎನ್ನುವಂತೆ ಇಮಲಿ ಅಪ್ಪನ ಮುಖ ನೋಡಿದಳು. ಜಗ್ಯಾನಿಗೆ ತನ್ನ ಹಸಿವು ಮರೆತೇ ಹೋಗಿ ಆ ಕೆಂಪು ಸೀರೆಯಲ್ಲಿ ಅಮ್ಮ ತುಂಬಾ ಸುಂದರವಾಗಿ ಕಂಡಂತಾಗಿ ಬಾಗಿ ಲಾಖಿಯ ಕೆನ್ನೆಗೆ ಮುತ್ತಿಟ್ಟ. ಜೀತೂ ಮುಖ ಅತ್ತ ತಿರುಗಿಸಿದ.

ಅಂತೂ ಲಾಖಿ ತನ್ನ ಇ?ದ ಸೀರೆ ಹೊದ್ದು ನೆಮ್ಮದಿಯಿಂದ ಮಲಗಿಬಿಟ್ಟಳು. ಪೇಟೆಬೀದಿಗೆ ಹೋಗಿ ಅಲ್ಲಿನ ಒಂದೆರಡು ಅಂಗಡಿಗಳಲ್ಲಿ ಕಾಡಿ ಬೇಡಿ, ಲಾಖಿಯ ವಿ?ಯ ತಿಳಿಸಿದ ಜೀತೂರಾಮ ಹಾಗೂ ಹೀಗೂ ನೂರ ನಲವತ್ತು ರೂಪಾಯಿಗೆ ಆ ಕೆಂಪು ಚಿತ್ತಾರದ ಸೀರೆ ತಂದಿದ್ದ. ಈಗವನಿಗೆ ಇನ್ನಾವುದರ ಪರಿವೆಯೂ ಇದ್ದಂತಿರಲಿಲ್ಲ. ಜೇಬಿನಲ್ಲಿ ತಡಕಾಗಿ ಇದ್ದ ಚಿಲ್ಲರೆ, ಸಣ್ಣ ಪುಟ್ಟ ನೋಟು ಸೇರಿಸಿ ಅಲ್ಲೇ ಬಿಸಿಯಾಗಿ ಸಮೋಸ, ಪೂರಿ ಕರಿಯುತ್ತಿದ್ದವನ ಬಳಿ ಹೋಗಿ ನಾಲ್ಕು ಸಮೋಸ, ಎರಡು ಪ್ಲೇಟು ಪೂರಿ ಬಾಜಿ ಕಟ್ಟಿಸಿಕೊಂಡು ಬಂದ. ಜಗ್ಯಾನ ಹೊಟ್ಟೆಯ ಹಸಿವು ಮತ್ತೆ ಕೆರಳಿ ಆತುರಾತುರವಾಗಿ ಕೈಯೊಡ್ಡಿದ. ಮಕ್ಕಳಿಬ್ಬರಿಗೂ ತಿಂಡಿ ಹಂಚಿ ಲಾಖಿಯ ತಲೆಯ ಬಳಿ ಕುಳಿತವನ ನೋಡಿ ಇಮಲಿಗೆ ಕರುಣೆ ಉಕ್ಕಿ ಬಂತು. ನಿಧಾನಕ್ಕೆ ಪೂರಿ ಮುರಿದು ಬಾಜಿಯಲ್ಲಿ ಅದ್ದಿ ಅಪ್ಪನ ಬಾಯಿಗಿಟ್ಟಾಗ ಜೀತೂರಾಮನಿಗೆ ಬೇಡವೆನ್ನಲಾಗಲಿಲ್ಲ. ಮೂವರೂ ತಿಂದು ಮುಗಿಸಿ ಆಸ್ಪತ್ರೆಯ ಆವರಣದಲ್ಲಿದ್ದ ನಲ್ಲಿಗೆ ಬೊಗಸೆಯೊಡ್ಡಿ ನೀರು ಕುಡಿದರು. ಜೀತೂರಾಮನ ಮೈಯಲ್ಲಿ ಹೊಸ ಶಕ್ತಿ ಬಂದಂತಾಯಿತು. ಮೆಲ್ಲನೆ ಲಾಖಿಯನ್ನು ಎರಡೂ ಕೈಗಳಲ್ಲಿ ಎತ್ತಿಕೊಂಡ. ಅರೇ ಎ? ಹಗುರವಾಗಿದ್ದವಳು ಈಗೆ? ಭಾರವಾಗಿಬಿಟ್ಟಳಲ್ಲ ಎನಿಸಿತು. ’ಇಲ್ಲ ಲಾಖೀ ನನಗಿಂತ ಜಾಸ್ತಿ ನಮ್ಮೆಲ್ಲರ ಭಾರ ಹೊತ್ತವಳು ನೀನು, ನೀನು ನನಗೆಂದೂ ಭಾರವಾಗಲು ಸಾಧ್ಯವಿಲ್ಲ. ನೀನು ಭಾರವೇ ಇಲ್ಲ.’ ಜೀತೂರಾಮ ಭರಭರನೆ ನಡೆದ. ಇಮಲಿ ಅರ್ಥವಾದವಳಂತೆ ಜಗ್ಯಾನ ಕೈ ಹಿಡಿದು ಅಪ್ಪನನ್ನ ಹಿಂಬಾಲಿಸಿದಳು. ’ಅಪ್ಪ ನೀನೆ? ಒಳ್ಳೆಯವನು. ಇನ್ನೊಂದು ಅಮ್ಮನ್ನ ಮಾತ್ರ ತರಬೇಡ. ಮನೆಕೆಲಸ ಎಲ್ಲ ನಾನೇ ಮಾಡ್ತೀನಿ. ಕೂಲಿಗೂ ಹೋಗ್ತೀನಿ. ಹೊಸ ಅಮ್ಮನ್ನ ಮಾತ್ರ ತರಬೇಡ’ …ಜೀತೂರಾಮನ ಕೆನ್ನೆಗೆ ಹೊಡೆದಂತಾಯ್ತು. ಆರ್ದ್ರಭಾವದಿಂದ ಇಮಲಿಯನ್ನೇ ನೋಡಿದ. ಅ? ಸಾಕಾಯ್ತು ಇಮಲಿಗೆ. ಅಪ್ಪ ಅಂತಹವನಲ್ಲ ಎಂದು ತೀರ್ಮಾನಿಸಿ ಸಮಾಧಾನದಿಂದ ನಡೆಯಲು ಗೋಳಾಡುತ್ತಿದ್ದ ಜಗ್ಯಾನನ್ನು ಕ?ಪಟ್ಟು ಸೊಂಟಕ್ಕೇರಿಸಿ ನಿಧಾನವಾಗಿ ಹೆಜ್ಜೆ ಹಾಕಿದಳು.

ಅಪ್ಪಿತಪ್ಪಿ ಎಂದಾದರೂ ತಾನು ಕೆಲಸ ಮಾಡುತ್ತಿದ್ದ ಮನೆಗಳಲ್ಲೋ ಗೋಡೆಗೆ ಮೆತ್ತಿದ್ದ ಸಿನೆಮಾದ ಪೋಸ್ಟರ್‌ಗಳಲ್ಲೋ ನಾಯಕ ನಾಯಿಕೆಯನ್ನು ಎತ್ತಿಕೊಂಡಿರುವ ಚಿತ್ರ ಕಣ್ಣಿಗೆ ಬಿದ್ದಾಗಲೆಲ್ಲ ಲಾಖಿಗೆ ಮದುವೆಯಾದ ಹೊಸತರಲ್ಲಿ ಜೀತೂರಾಮ ತನ್ನನ್ನೂ ಹೀಗೇ ಎತ್ತಿ ಹಿಡಿದು ಕಾಡುತ್ತಿದ್ದದ್ದು ನೆನಪಾಗಿ ಈಗಲೂ ಯಾವಾಗಲಾದರೂ ಹಾಗೆ ಮಾಡಬಾರದೆ ಎಂದು ಕನಸು ಕಾಣುತ್ತಿದ್ದಳು. ಆದರೆ ಮಕ್ಕಳು ಏನೆಂದುಕೊಂಡಾರು ನಾವು ಹೀಗೆ ಆಡಿದರೆ ಎಂದುಕೊಂಡು ಸುಮ್ಮನಾಗುತ್ತಿದ್ದಳು. ಈವತ್ತು ಮಾತ್ರ ಲಾಖಿಗೆ ಅದ್ಯಾವ ಸಂಕೋಚವೂ ಇರಲಿಲ್ಲ. ತನ್ನಿ?ದ ಹೊಸ ಸೀರೆಯುಟ್ಟು ಜೀತೂರಾಮನ ಕೈಗಳಲ್ಲಿ ಸ್ವರ್ಗ ಕಾಣುವವಳಂತೆ ನಿಶ್ಚಿಂತೆಯಿಂದ ಮಲಗಿಬಿಟ್ಟಿದ್ದಳು. ಜೀತೂರಾಮನಿಗೂ ಯಾರ ಪರಿವೆಯಿರದೆ ತನ್ನ ಲಾಖಿಯನ್ನೆತ್ತಿಕೊಂಡು ಭರಭರನೆ ಮುನ್ನಡೆದ. ಟಾರುರಸ್ತೆ ಮುಗಿದು ಹಳ್ಳಿಯ ಕಚ್ಚಾರಸ್ತೆ ಪ್ರಾರಂಭವಾಯಿತು. ಜೀತೂರಾಮನ ಕೈ ಸೋಲುತ್ತಾ ಬಂತು. ಲಾಖಿಯನ್ನು ಅಲ್ಲೇ ರಸ್ತೆಯ ಪಕ್ಕ ಮಲಗಿಸಿ ಹತ್ತು ನಿಮಿ? ಕುಳಿತುಕೊಂಡು ದಣಿವಾರಿಸಿಕೊಂಡ. ಇಮಲಿ ಅಲ್ಲೇ ಯಾವುದೋ ಅಂಗಡಿಯಲ್ಲಿ ಕೇಳಿ ಒಂದು ಹಳೆಯ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತಂದು ಅಪ್ಪನಿಗೆ ಕೊಟ್ಟಳು.

ಅಕ್ಕಪಕ್ಕ ನಡೆಯುವವರು ಹೊಸ ಸೀರೆಯಲ್ಲಿದ್ದ ಲಾಖಿಯನ್ನೂ ಮಗುವಿನಂತೆ ಅವಳನ್ನೆತ್ತಿಕೊಂಡು ಅತ್ತಿತ್ತ ನೋಡದೆ ನಡೆಯುತ್ತಿರುವ ಜೀತೂರಾಮನನ್ನೂ, ಅವನ ಹಿಂದೆಯೇ ಜಗ್ಯಾನ ಕೈಹಿಡಿದು ಆಗಾಗ ಕಣ್ಣೊರೆಸಿಕೊಳ್ಳುವ ಇಮಲಿಯನ್ನೂ ನೋಡಿ ಏನೂ ಗೊತ್ತಾಗದೆ ಹಾಗೇ ಮುಂದೆ ಸಾಗಹತ್ತಿದರು. ನಿ?ರುಣಿ ಬಿಸಿಲಿಗೆ ಬವಳಿ ಬಂದಂತೆ ಬಿದ್ದಿದ್ದ ರಸ್ತೆ ಜೀತೂರಾಮನ ಸಂಸಾರದ ಈ ಮೆರವಣಿಗೆ ನೋಡಿ ಒಳಗೊಳಗೇ ದುಃಖಿಸತೊಡಗಿತು.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ