ಆ ಕರಾಳ ಘಟನೆ ನಡೆದದ್ದು ಇಂದಿಗೆ ನೂರು ವ? ಹಿಂದೆ – ೧೩ ಏಪ್ರಿಲ್ ೧೯೧೯ರಂದು. ಆ ಅತ್ಯಂತ ಭಯಾನಕ ಮಾರಣಹೋಮ ನಡೆಸಿದ ಜನರಲ್ ಡೈಯರ್ ಭಾವಿಸಿದುದು ತಾನು ಬ್ರಿಟಿ? ಸಾಮ್ರಾಜ್ಯವನ್ನು ಅವಸಾನದಿಂದ ಉಳಿಸಿದೆನೆಂದು. ಆದರೆ ಪರಿಣಾಮ ಅದಕ್ಕೆ ವಿರುದ್ಧವೇ ಆಯಿತು....
ಜಗದ್ವಿಖ್ಯಾತ ಅಧ್ಯಾತ್ಮ ಲೇಖಕ ಪೌಲೋ ಕೊಯ್ಲೋ ಈಚೆಗೆ ಒಂದು ಸಂದರ್ಭದಲ್ಲಿ ಹೇಳಿದ: ನಾನು ಭಗವದ್ಗೀತೆಯನ್ನು ಓದಿದೊಡನೆಯೆ ಅದರ ಬಗೆಗೆ ನನಗೆ ಅತಿಶಯ ಪ್ರೇಮ ಉಂಟಾಯಿತು. ಬದುಕಿನ ಎಲ್ಲ ಸಂದರ್ಭಗಳಿಗೂ ಅದು ಸಾಕಾಗುತ್ತದೆ ಎನಿಸಿತು. ವಿಶ್ವದ ರಹಸ್ಯವನ್ನು ಅರಿಯಲು, ನಿಮ್ಮ ವಿಧಿಯನ್ನು ಗೊಣಗದೆ...
ಭಾರತೀಯ ಪಾರಂಪರಿಕ ಕಲೆಯ ಅನನ್ಯತೆಯೆಂದರೆ ಧಾರ್ಮಿಕತೆ ಮತ್ತು ಕಲೆಗಳ ಪರಸ್ಪರ ಅನ್ಯೋನ್ಯಾಶ್ರಯವನ್ನು ಚಿತ್ರಕಲೆ ಮತ್ತು ಶಿಲ್ಪಕಲೆಗಳು ಬಿಂಬಿಸಿರುವುದು. ಪಾರಲೌಕಿಕ ಜಿಜ್ಞಾಸೆ, ಧಾರ್ಮಿಕತೆ, ಕಲೆ – ಇವು ಮೂರೂ ಸಮ್ಮಿಳಿತವಾಗಿರುವುದು ಇಲ್ಲಿಯ ವಿಶೇಷತೆ. ಮಂತ್ರದರ್ಶನ, ತತ್ತ್ವಜಿಜ್ಞಾಸೆ, ಸೌಂದರ್ಯಾನುಭೂತಿ – ಇವು ಒಂದರ ಮೇಲೆ ಇನ್ನೊಂದು ಹೇಗೆ...
ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರಸರ್ಕಾರ ಅಭಿವೃದ್ಧಿಗೆಂದು ಸಾಲುಸಾಲಾಗಿ ಘೋಷಿಸುತ್ತಿರುವ ಅನೇಕ ಯೋಜನೆಗಳು ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಅಚ್ಚುಕಟ್ಟಾಗಿ ಮಾಡಲೇಬೇಕಾದ ಮತ್ತು ಹೊಸಹೊಸ ರಸ್ತೆಗಳನ್ನು ನಿರ್ಮಿಸಲೇಬೇಕಾದ ಪರಿಸ್ಥಿತಿಗೆ ದೇಶವನ್ನು ತಂದು ನಿಲ್ಲಿಸಿವೆ. ಯೂರೋಪಿನ ಅನೇಕ ದೇಶಗಳು ಅತ್ಯುತ್ತಮ ರಸ್ತೆಗಳನ್ನು ಹೊಂದಿವೆ, ಏಕೆಂದರೆ ಆ ದೇಶಗಳು ಮುಂದುವರಿದಿವೆ ಎಂಬುದು ಸಾಮಾನ್ಯರ ಅನಿಸಿಕೆ. ಆದರೆ ಭಾರತ ದರ್ಶನ ಖ್ಯಾತಿಯ ವಿದ್ಯಾನಂದ...
ಹೊಸಬಗೆಯ ಸ್ತ್ರೀವಾದವು ಅಸ್ತಿತ್ವಕ್ಕೆ ಬಂದ ಬಳಿಕ ಜಗತ್ತಿನ ಹಲವು ದೇಶಗಳಲ್ಲಿ ಅದು ಬಗೆಬಗೆಯ ಪರಿಣಾಮಗಳನ್ನು ಉಂಟುಮಾಡಿದೆ. ಭಾರತದಲ್ಲಿ ಅದು ಕೆಲವರ ಮೂಲಕ ಉಗ್ರಸ್ತ್ರೀವಾದದ ರೂಪವನ್ನು ಪಡೆದುಕೊಂಡಿತು. ಮಾತ್ರವಲ್ಲ, ಕೇಂದ್ರದ ಯುಪಿಎ ಸರ್ಕಾರದ ಹತ್ತು ವರ್ಷ (೨೦೦೪-೧೪)ಗಳ ಅವಧಿಯಲ್ಲಿ ಅದಕ್ಕೆ ಅಧಿಕಾರಸ್ಥಾನದ ನಿಕಟ...
ಸ್ವಯಂಪ್ರೇರಣೆಯಿಂದ ಸಾವನ್ನು ಆಹ್ವಾನಿಸುವವರಿಗೆ ಸಮಾಧಿಬೆಟ್ಟವು ಅತ್ಯಂತ ನೆಚ್ಚಿನ ತಾಣವಾಗಿತ್ತು. ದೇಹದಂಡನೆಕಾರರೇ ಇತಿಹಾಸ ನಿರ್ಮಿಸಿದ ಇಂತಹ ಇನ್ನೊಂದು ಕೇಂದ್ರ ಪ್ರಪಂಚದಲ್ಲಿಲ್ಲ. ಈ ಎಲ್ಲ ಘಟನೆಗಳನ್ನು ಶಾಸನಗಳಲ್ಲಿ ದಾಖಲಿಸಿ ಇಟ್ಟ ಇನ್ನೊಂದು ಬೆಟ್ಟ ಕೂಡ ನಮ್ಮ ನಾಡಿನಲ್ಲಿ ಸಿಗದು. ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಶ್ರವಣಬೆಳ್ಗೊಳವು...
ಸುಪ್ರಸಿದ್ಧ ಜೈನ ತೀರ್ಥಕ್ಷೇತ್ರ ಶ್ರವಣಬೆಳಗೊಳವು ಒಂದು ಐತಿಹಾಸಿಕ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ. ಪ್ರಸ್ತುತ ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನಮಠದ ಮಠಾಧ್ಯಕ್ಷರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ. ಜೈನಧರ್ಮದ ಸಾಂಸ್ಕೃತಿಕ ಮಹೋತ್ಸವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕವನ್ನು ಹನ್ನೆರಡು ವರ್ಷಗಳಿಗೆ ಒಮ್ಮೆ ನಡೆಸುವುದು ಸಂಪ್ರದಾಯ....
ಕೆರೆಗಳನ್ನು ಕಟ್ಟಿಸುವುದು, ಬೇಸಾಯಕ್ಕೆ ನೀರೊದಗಿಸುವುದು ಇಹಪರಗಳಲ್ಲಿ ಒಳ್ಳೆಯ ಸ್ಥಾನ, ಸದ್ಗತಿಗಳನ್ನು ನೀಡುವ ಕಾರ್ಯ ಎಂದು ನಮ್ಮ ಪೂರ್ವಿಕರು ನಂಬಿದ್ದರಿಂದ ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಪುರಾತನವಾದ ಕೆರೆಗಳು ಕಂಡುಬರುತ್ತವೆ. ವಿಜಯನಗರ ರಾಜರ ಆಳ್ವಿಕೆಯ ಕಾಲದಲ್ಲಿ ಬೆಳೆಯುತ್ತಿದ್ದ ಜನಸಂಖ್ಯೆ, ಹೆಚ್ಚಾಗುತ್ತಿದ್ದ ಕೃಷಿಭೂಮಿಗೆ ಅನುಗುಣವಾಗಿ ಕೆರೆ,...
೧೯೯೭ರಲ್ಲಿ ಹಲವಾರು ಕಡೆಗಳಲ್ಲಿ ನಡೆದಿದ್ದ ರಾಜಕೀಯ ರ್ಯಾಲಿಗಳಲ್ಲಿ ‘ದೇಶ್ ಕಾ ಪ್ರಧಾನಮಂತ್ರಿ ಕೈಸಾ ಹೋ?’ ಎಂಬ ಪ್ರಶ್ನೆಗೆ ಇನ್ನೊಂದು ಜನಸ್ತೋಮ ’ಅಟಲ್ ಬಿಹಾರಿ ಜೈಸಾ ಹೋ’ ಎಂದು ಉದ್ಗಾರಗಳನ್ನು ತೆಗೆಯುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ವಾಜಪೇಯಿ ಅವರು ಭಾಷಣವನ್ನು ಇನ್ನೇನು ಆರಂಭಿಸಬೇಕು...
ಒಂದು ರಾಷ್ಟ್ರದ ಭವಿಷ್ಯ ಅದರ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎನ್ನುವ ಒಂದು ಮಾತು ಪ್ರಸಿದ್ಧವೇ ಇದೆ. ಏಕೆಂದರೆ ಅವು ನಮ್ಮ ಮುಂದಿನ ಜನಾಂಗವಾದ ಇಂದಿನ ಮಕ್ಕಳ ಗರಡಿಮನೆಗಳು. ಆದರೆ ನಮ್ಮ ಸರ್ಕಾರಗಳು ಶಿಕ್ಷಣ ಇಲಾಖೆಗೆ ಎಷ್ಟು ಮಹತ್ತ್ವವನ್ನು ನೀಡುತ್ತವೆ? ದೇಶದ ಸರ್ಕಾರಗಳಿಗೆ...
– ಬಿ.ಪಿ. ಪ್ರೇಮ್ಕುಮಾರ್ ಹೊರಜಗತ್ತಿನೊಂದಿಗೆ ಚಿತ್ತಗಾಂವ್ನ ಸಂಪರ್ಕಕೊಂಡಿಗಳನ್ನು ಧ್ವಂಸಗೊಳಿಸುವ ಮೊದಲಸುತ್ತಿನ ಕ್ರಿಯಾಯೋಜನೆಯ ಯಶಸ್ವಿ ಪೂರೈಕೆಯ ನಂತರ ‘ಮಾಡು ಮತ್ತು ಮಡಿ’ ಎಂಬ ಧ್ಯೇಯವಾಕ್ಯದೊಂದಿಗೆ ಚಿತ್ತಗಾಂವ್ನ ಕ್ರಾಂತಿಕಾರಿಗಳ ಅಚಲ ಹೋರಾಟ ಗರಿಗೆದರಿದುದು ಈಗಲೇ! ಬೆನ್ನು ಹತ್ತಿರುವ ಪೆÇಲೀಸ್ನಾಯಿಗಳಿಗೆ ವಾಸನೆಯೂ ಸಿಗದಂತೆ ಪೂರ್ವಸಿದ್ಧತೆಯನ್ನು ನಡೆಸುತ್ತಿದ್ದ...
ಸೂರ್ಯಾಸ್ತವರಿಯದ ಸಾಮ್ರಾಜ್ಯದ ಪೂರ್ವದಿಗಂತದಲ್ಲಿ ಮೂಡಿದ ಕ್ರಾಂತಿಯ ಸೂರ್ಯೋದಯದ ರಥವನ್ನು ಏರಿದವನು ಸೂರ್ಯಸೇನ್! ಸೂರ್ಯಸೇನನ ರಥಕ್ಕೆ ಕಟ್ಟಿದ ಅಶ್ವಗಳಲ್ಲಿ ಅಂಬಿಕಾ ಚಕ್ರವರ್ತಿ, ನಿರ್ಮಲ್ ಸೇನ್, ಗಣೇಶ ಘೋಷ್, ಅನಂತಸಿಂಗ್ ಮತ್ತು ಲೋಕನಾಥ ಬಾಲ್ ಒಂದೊಂದೂ ಅಪ್ರತಿಮ ಜಾತ್ಯಶ್ವಗಳಿದ್ದಂತೆ. ಇವರೊಂದಿಗೆ ಎಂದಿಗೂ ಹಿಂದೆಬೀಳದೆ ಸರಿಸಾಟಿಯಾಗಿ...
ಇಸ್ರೋದ ಪ್ರತಿಯೊಂದು ಉಡಾವಣೆಯೂ ಆಶಾವಾದ ಮತ್ತು ಭರವಸೆಯ ಕಥೆಯಾಗಿದೆ. ನವೆಂಬರ್ 29, 2018ರಂದು ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯ (ಇಸ್ರೋ) ಭಾರತದ ‘ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್’ (ಪಿಎಸ್ಎಲ್ವಿ-ಸಿ43) ಮೂಲಕ 30 ಉಪಗ್ರಹಗಳನ್ನು ಹಾರಿಸಿತು. ಇಸ್ರೋದ ಈ ಉಡಾವಣೆಯ ಪ್ರಮುಖ ಉಪಗ್ರಹವು...
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2018ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯ ಮೇಲಿಂದ ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ – “2022ರ ಒಳಗಾಗಿ ಭಾರತೀಯ ವಿಜ್ಞಾನಿಗಳು ಅಂತರಿಕ್ಷಕ್ಕೆ ‘ಗಗನಯಾನ’ವನ್ನು ಕಳುಹಿಸಲು ನಿಶ್ಚಯಿಸಿದ್ದಾರೆ; ಮಾತ್ರವಲ್ಲ, ಅಂತರಿಕ್ಷಕ್ಕೆ ಭಾರತೀಯ ಬಾಹ್ಯಾಕಾಶ ಯಾನಿಗಳನ್ನೂ ಕೂಡ ಕಳುಹಿಸುವ ಯೋಜನೆಯೂ...
‘ಅಗ್ನಿಗರ್ಭದ ಪ್ರಸವ ವೇದನೆ’ ಬ್ರಿಟಿಷ್ ಆಡಳಿತದ ವಿರುದ್ಧ ನಡೆದ ಹೋರಾಟಗಳು ಹಲವು. ಪ್ರತಿಯೊಂದು ಹೋರಾಟವೂ ತನ್ನದೇ ಆದ ಮಹತ್ತ್ವವನ್ನು ಪಡೆದಿದೆ. 1930 ಏಪ್ರಿಲ್ 30ರಂದು ನಡೆದ ಚಿತ್ತಗಾಂವ್ ಶಸ್ತ್ರಾಗಾರ ಪ್ರಕರಣವು ಬ್ರಿಟಿಷರಲ್ಲಿ ತಲ್ಲಣವನ್ನು ಮೂಡಿಸಿತ್ತು. ಶಿಕ್ಷಕರಾಗಿದ್ದ ಸೂರ್ಯಸೇನ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರನ್ನು...
ಚುನಾವಣೆ ಪ್ರಕಟವಾಗುವುದಕ್ಕಿಂತ ಮೊದಲಿನ ಮಾತು; ನಾನು ದೇಶದ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆ ಸಂದರ್ಭಗಳಲ್ಲಿ ಮೊದಲಬಾರಿಗೆ ಮತದಾನ ಮಾಡುವವರು, ಎರಡನೇ ಸಲ ಮತದಾನ ಮಾಡುವವರು ಹಾಗೂ ಮೂರನೇ ಸಲ ಮತದಾನ ಮಾಡುವವರ ಜೊತೆಗೆ ಮಾತನಾಡುತ್ತಿರುವಾಗ, ಮೀಡಿಯಾ ಆಗಲಿ, ಪ್ರಚಾರ ಸಾಮಗ್ರಿಗಳಾಗಲಿ ಈ ವರ್ಗದ...
ದೇಶದ ಜನತೆ ತಮಗೆ ಬೇಕಾದ ಸರ್ಕಾರವನ್ನು ತಾವೇ ಚುನಾಯಿಸಿಕೊಳ್ಳುವ ಹಬ್ಬ, ಜನತಂತ್ರದ ಮಹಾ ಉತ್ಸವ – 2019ರ ಮಹಾಚುನಾವಣೆ ಮುಗಿದಿದೆ. ಫಲಿತಾಂಶವೂ ಬಂದಿದೆ. ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬುದು ಖಾತ್ರಿಗೊಂಡಿದೆ. ಈಬಾರಿ ಭಾರತೀಯ ಜನತಾಪಕ್ಷ ನೇತೃತ್ವದ ‘ಭಾರತೀಯ ಜನತಾಂತ್ರಿಕ ಒಕ್ಕೂಟ’ (ಎನ್ಡಿಎ)...
ಭಾರತೀಯರ ’ರಾಮರಾಜ್ಯ’ ಕಲ್ಪನೆಯ ಕೇಂದ್ರವ್ಯಕ್ತಿಯಾದ ರಾಮ ಒಬ್ಬ ಕಳಂಕರಹಿತ, ಶುದ್ಧ, ಸರ್ವಗುಣಸಂಪನ್ನನಾದ, ತನ್ನ ಪ್ರಜೆಗಳ ಯೋಗಕ್ಷೇಮಕ್ಕೆ ಬದ್ಧನಾಗಿದ್ದ ದೊರೆ. ಯಾವುದೋ ಪ್ರತ್ಯೇಕ ಮತಶ್ರದ್ಧೆ ಇರದಿದ್ದ ರಾಮ ತನ್ನ ಸಮಸ್ತ ನಾಗರಿಕರನ್ನು ಸಮಾನವಾಗಿ ಕಾಣುತ್ತಿದ್ದ. ಆತನಿಗೆ ’ರಾಜಧರ್ಮ’ವೇ ಧರ್ಮವಾಗಿತ್ತು. ಕೈಗಾರಿಕಾ ಕ್ರಾಂತಿ ಹಾಗೂ...
ಆ ಕರಾಳ ಘಟನೆ ನಡೆದದ್ದು ಇಂದಿಗೆ ನೂರು ವ? ಹಿಂದೆ – ೧೩ ಏಪ್ರಿಲ್ ೧೯೧೯ರಂದು. ಆ ಅತ್ಯಂತ ಭಯಾನಕ ಮಾರಣಹೋಮ ನಡೆಸಿದ ಜನರಲ್ ಡೈಯರ್ ಭಾವಿಸಿದುದು ತಾನು ಬ್ರಿಟಿ? ಸಾಮ್ರಾಜ್ಯವನ್ನು ಅವಸಾನದಿಂದ ಉಳಿಸಿದೆನೆಂದು. ಆದರೆ ಪರಿಣಾಮ ಅದಕ್ಕೆ ವಿರುದ್ಧವೇ ಆಯಿತು....
ಕಾಳಿದಾಸನು ತನ್ನ ಕಾವ್ಯಗಳಲ್ಲಿ ಶಿವನನ್ನು ಅತ್ಯಂತ ಮನೋಹರವಾಗಿ ಚಿತ್ರಿಸಿದ್ದಾನೆ. ಅವನು ತನ್ನ ಮೂರೂ ನಾಟಕಗಳ ಮಂಗಳಪದ್ಯಗಳಲ್ಲಿ ಶಿವನನ್ನು ಸ್ತುತಿಸಿರುವುದು ಕಂಡುಬರುತ್ತದೆ. ಅದರ ಸ್ವಾರಸ್ಯವನ್ನು ಅರಿತಾಗ ಅವನ ಭಕ್ತಿಯು ಜ್ಞಾನಪೂರ್ವಕವಾದುದೆಂದು ಮನದಟ್ಟಾಗುತ್ತದೆ. ತನ್ನ ಮಹಾಕಾವ್ಯವಾದ ಕುಮಾರಸಂಭವದಲ್ಲಿ ಅವನು ಶಿವನನ್ನು ಹೇಗೆ ಚಿತ್ರಿಸಿದ್ದಾನೆ, ಅದರ...
ಪ್ರವೇಶಿಕೆ ಆಧುನಿಕಕಾಲದಲ್ಲಿ ಕರ್ಣಾಟಕದ ನಾಡು-ನುಡಿಗಳನ್ನು ರೂಪಿಸಿ, ಅವುಗಳ ಸಮೃದ್ಧಿ-ಸೌಂದರ್ಯಗಳಿಗಾಗಿ ಶ್ರಮಿಸಿದವರ ಪೈಕಿ ಡಿ.ವಿ. ಗುಂಡಪ್ಪನವರು (1887-1975) ಅಗ್ರಗಣ್ಯರು. ಋಷಿಕಲ್ಪರಾದ ಅವರ ವ್ಯಕ್ತಿತ್ವ-ವಿದ್ವತ್ತೆಗಳ ಬಗೆಗೆ, ಪ್ರತಿಭೆ-ಪ್ರಾಜ್ಞತೆಗಳ ಬಗೆಗೆ ಸಾಕಷ್ಟು ಪ್ರಮಾಣದಲ್ಲಿ ಮಾಹಿತಿ ಲಭ್ಯವಿದೆ; ಇದು ಕನ್ನಡಿಗರ ಭಾಗ್ಯ. ಆದರೆ ಡಿ.ವಿ.ಜಿ.ಯವರದು ಮಹಾಕಾವ್ಯೋಪಮವಾದ ಜೀವನ....
“ಸಾಹಿತ್ಯವಿಲ್ಲದೆ ಜೀವನವಿಲ್ಲ, ಜನಜೀವನವಿಲ್ಲದೆ ಸಾಹಿತ್ಯವಿಲ್ಲ” ಎನ್ನುವ ಮಾತಿನಂತೆ ಸಮಾಜದ ಸ್ವಾಸ್ಥ್ಯಕ್ಕೆ ಸಂಸ್ಕೃತಿಯುಕ್ತ ಸಾತ್ತ್ವಿಕ ಸಾಹಿತ್ಯಬೇಕು. ಸೌಹಾರ್ದಯುತ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಇಂತಹ ಸಾಹಿತ್ಯದ ಪಾತ್ರ ಮಹತ್ತರವಾದುದು.” ಸರ್ವರ ಹಿತವನ್ನು ಬಯಸುವುದು ಸಾಹಿತ್ಯ – ಎನ್ನುವುದು ಎಲ್ಲರ ಆಶಯ ಮತ್ತು ಹಂಬಲ ಕೂಡ....
ಪ್ರಾಥಮಿಕ ಶಾಲಾ ಹಂತದಲ್ಲಿ ನಾವೊಂದು ಕಥೆಯನ್ನು ಓದಿರುತ್ತೇವೆ. ಅದರಲ್ಲೊಬ್ಬ ದಯಾಪರನಾದ ರಾಜ. ತನ್ನ ಪ್ರಜೆಗಳಿಗೆ ಯಾವುದೇ ಅನ್ಯಾಯವಾಗಬಾರದು; ಆದರೂ ಅದಕ್ಕೆ ಕೂಡಲೇ ಪರಿಹಾರ ಸಿಗಬೇಕು. ಅದಕ್ಕಾಗಿ ಆತ ಒಂದು ವ್ಯವಸ್ಥೆಯನ್ನು ಮಾಡಿದ್ದ. ಅರಮನೆಯ ಮುಂದೆ ಒಂದು ಗಂಟೆ; ದೂರುಗಂಟೆ ಎಂದು ಅದಕ್ಕೆ...
ಸಾಹಿತಿಯಾದವನು ಸಮಾಜದ ದೈನಂದಿನ ಬೆಳವಣಿಗೆಗಳಿಗೆ ತಿಳಿದೋ ತಿಳಿಯದೆಯೋ ಅತ್ಯಂತ ಸೂಕ್ಷ್ಮವಾಗಿ ಸ್ಪಂದಿಸುತ್ತಿರುತ್ತಾನೆ. ಡಾ|| ಎಸ್.ಎಲ್. ಭೈರಪ್ಪನವರಂತಹ ಮಹೋನ್ನತ ಸಾಹಿತಿಗಳ ವಿಷಯದಲ್ಲಿ ಆ ಮಾತನ್ನು ಹೇಳುವುದೇ ಬೇಡ. ಮುಖ್ಯವಾಗಿ ಯುಪಿಎ ಸರ್ಕಾರದ ಅವಧಿಯಲ್ಲಿ ಉಗ್ರಸ್ತ್ರೀವಾದ, ಅಂದರೆ ಹೆಣ್ಣು ಮಾಡುವುದೆಲ್ಲ ಸರಿ ಎಂಬ ಧೋರಣೆ...
ಬೌದ್ಧ ವಾಙ್ಮಯದಲ್ಲಿ ಗೌತಮಬುದ್ಧನ ಜೀವನಚರಿತ್ರೆಯನ್ನು ನಿರೂಪಿಸಿರುವ ಹಲವು ಕೃತಿಗಳು ಇವೆ. ತ್ರಿಪಿಟಕಗಳಲ್ಲಿ ಬುದ್ಧನ ಜೀವನವನ್ನು ಕುರಿತ ಹಲವು ವಿವರಗಳು ಬಂದಿವೆ. ಅವುಗಳ ಆಧಾರದ ಮೇಲೆ ರಚಿತವಾಗಿರುವವು ಆಮೇಲಿನ ಕಾಲದಲ್ಲಿ ಬಂದ ವ್ಯವಸ್ಥಿತ ಜೀವನಚರಿತ್ರೆಗಳು. ಅವುಗಳಲ್ಲಿ ಅಶ್ವಘೋಷರಚಿತ ‘ಬುದ್ಧಚರಿತ’ ಕಾವ್ಯವು ಶುದ್ಧ ಸಂಸ್ಕೃತ...
ಶಿವರಾಮ ಕಾರಂತರ ಕಾದಂಬರಿಗಳಲ್ಲಿ ವೃದ್ಧೆಯರಿಗೆ ವಿಶೇ಼ಷವಾದ ಒಂದು ಸ್ಥಾನವಿದೆ; ಮಾಗಿದ ಅನುಭವದ ಪ್ರತಿರೂಪಗಳಾಗಿ ಅವರು ಅಲ್ಲಿ ಬರುತ್ತಾರೆ. ದೇವನೂರು ಮಹಾದೇವ ಅವರ ಪ್ರಮುಖ ಕೃತಿ (ಕಾದಂಬರಿ) ’ಕುಸುಮಬಾಲೆ’ಯಲ್ಲಿ ಬರುವ ಜೋಗತಿಯರದ್ದು ಕೂಡ ಮಹತ್ತ್ವದ ಸ್ಥಾನವಾಗಿದೆ. ಇವು ಅಕಸ್ಮಿಕಗಳಲ್ಲ. ನಮ್ಮ ಜೀವನದಲ್ಲಿ, ಅದರ...
ಈ ಜಲಾಶಯವನ್ನು ಸೃಷ್ಟಿಸಿದ ಮೇಲೂ ಬ್ರಹ್ಮದೇವನಿಗೆ ಸುಧೆಯನ್ನು ಸೃಷ್ಟಿಸುವ ಆವಶ್ಯಕತೆ ಏನಿತ್ತೋ ತಿಳಿಯದು. ಈ ಸರಸಿಯ ನೀರೇನು ಅಮೃತಕ್ಕಿಂತ ಕಮ್ಮಿಯೇ? ಇದೂ ಅಮೃತದಂತೆಯೆ ಎಲ್ಲ ಇಂದ್ರಿಯಗಳನ್ನು ತಣಿಸುತ್ತದೆ ಬಾಣಭಟ್ಟನ ಸಂಸ್ಕೃತ ಗದ್ಯಕೃತಿ ’ಕಾದಂಬರಿ’ಯಲ್ಲಿ ಅಚ್ಛೋದ ಎನ್ನುವ ಸರೋವರದ ವರ್ಣನೆ ತುಂಬ ಪ್ರಸಿದ್ಧವಾದದ್ದು....
ಕಾಳಿದಾಸನ ಮೇಘದೂತ (ಮೇಘಸಂದೇಶ) ಕಾವ್ಯವು ಸಂಸ್ಕೃತಸಾಹಿತ್ಯದಲ್ಲಿಯೇ ಅನನ್ಯವಾದುದು. ಎಷ್ಟುಮಟ್ಟಿಗೆ ಎಂದರೆ ಹತ್ತಾರು ’-ದೂತ’ ಅಥವಾ ’-ಸಂದೇಶ’ ಕಾವ್ಯಗಳ ಪರಂಪರೆಗೇ ಅದು ನಾಂದಿಯಾಯಿತು. ಭಾರತದ ಎಲ್ಲ ಭಾಷೆಗಳ ಸಾಹಿತ್ಯದ ಮೇಲೂ ಅದು ಗಾಢ ಪ್ರಭಾವವನ್ನು ಬೀರಿದೆ. ಪ್ರತಿ ಭಾಷೆಯಲ್ಲಿಯೂ ಮೇಘಸಂದೇಶದ ಹಲವು ಅನುವಾದಗಳು...
`ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎನ್ನುವುದು ನಮ್ಮ ಒಂದು ಗಾದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬರುವ ನವ್ಯಪಂಥದ ಬಗ್ಗೆ ಯೋಚಿಸುವಾಗ ಈ ಮಾತಿನಲ್ಲಿ ಬಹಳಷ್ಟು ಸತ್ಯವಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ನವ್ಯಪ್ರಜ್ಞೆಯ ಮೂಲಪುರು?ರು ಕವಿ ಪ್ರೊ| ಎಂ. ಗೋಪಾಲಕೃಷ್ಣ ಅಡಿಗರು. ೧೯೫೪ರಲ್ಲಿ...
ಭಾರತದ ಪ್ರಥಮ ಮಹಾಕಾವ್ಯ ರಾಮಾಯಣದಲ್ಲಿ ಮಹರ್ಷಿ ವಾಲ್ಮೀಕಿಗಳು ರಚಿಸಿರುವ ರಾಮಕಥನದೊಂದಿಗೆ ಇದು ಸೀತೆಯ ಮಹೋನ್ನತ ಚರಿತೆಯೂ ಹೌದು ಎನ್ನುವ ಉಲ್ಲೇಖ ಕಾಣುತ್ತದೆ. “ಕಾವ್ಯಂ ರಾಮಾಯಣಂ ಕೃತ್ಸ್ನಂ ಸೀತಾಯಾಶ್ಚರಿತಂ ಮಹತ್….. ಚಕಾರ ಚರಿತವ್ರತಃ” (ಬಾಲಕಾಂಡ: ೪-೭). ಇಡೀ ಕಾವ್ಯದಲ್ಲಿ ಸೀತೆ ಸ್ವತಃ ಮಾತನಾಡುವುದು...