ಅಂದು ಚೌಡಯ್ಯ ಹಾಲಿನಲ್ಲಿ ಭರತನಾಟ್ಯದ ಕಾರ್ಯಕ್ರಮ ಚಾಲನೆಯಲ್ಲಿತ್ತು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದೆಯಿಂದ ನೃತ್ಯ ಪ್ರದರ್ಶನ. ವಿಶಾಲವಾದ ಸಭಾಂಗಣ ನಾಟ್ಯಪ್ರೇಮಿಗಳಿಂದ ತುಂಬಿಹರಿಯುತ್ತಿತ್ತು. ನರ್ತಕಿಯದು ಅಪ್ಸರೆಯಂತಹ ರೂಪ. ನಾಟ್ಯಕ್ಕೆಂದೇ ಹೇಳಿಮಾಡಿಸಿದಂತಹ ಅಂಗಸೌಷ್ಟವ. ಮಹಾನ್ ಗುರುಗಳಿಂದ ಪಡೆದ ವಿದ್ಯೆ ಎಲ್ಲ ಮೇಳೈಸಿ ಅವಳ ನೃತ್ಯ ಎಲ್ಲರನ್ನೂ ಸಮ್ಮೋಹಗೊಳಿಸಿತ್ತು. ತನ್ನಿನಿಯ ಕೃಷ್ಣನನ್ನು ಕಾಣದ ನಾಯಿಕೆ ತನ್ನೆಲ್ಲ ಹಾತೊರೆಗಳನ್ನು ಪ್ರಕಟಿಸುತ್ತ, ‘ಕೃಷ್ಣಾ ನೀ ಬೇಗನೆ ಬಾರೋ’ಎಂದು ಹಂಬಲಿಸುತ್ತ ಹೋದಳು. ಒಂದೊಂದು ಚರಣದಲ್ಲೂ ಭಾವತುಂಬಿದ ಸಂಚಾರೀಕ್ರಮದಲ್ಲಿ ಒಮ್ಮೆ ರಾಧೆಯಾಗಿ, ಮಾತೆ ಯಶೋದೆಯಾಗಿ ಮತ್ತೊಮ್ಮೆ ಸಮರ್ಪಣಾ ಭಾವದ […]
ಕೃಷ್ಣಾ ನೀ ಬೇಗನೆ ಬಾರೋ
Month : December-2020 Episode : Author : ಕುಮುದಾ ಪುರುಷೋತ್ತಮ್