
ಬಿಡಾರಂ ಕೃಷ್ಣಪ್ಪನವರು ಅತ್ಯುತ್ತಮ ಗಾಯಕ, ಎತ್ತರದ ಆಕರ್ಷಕ ವ್ಯಕ್ತಿತ್ವ, ಲಕ್ಷ್ಯ- ಲಕ್ಷಣಗಳಲ್ಲಿ ಸಮನಾದ ಪಾಂಡಿತ್ಯದಿಂದ, ಸ್ಫುಟವಾದ ಉಚ್ಚಾರಣೆಯಿಂದ ಅರ್ಥವನ್ನರಿತು ಹಾಡುವ ಕಾಳಜಿ ಹೊಂದಿದ್ದವರು… ೧೮೬೬ರ ಕೃಷ್ಣಜನ್ಮಾಷ್ಟಮಿಯಂದು ಜನಿಸಿದ ಕಾರಣ ತಮ್ಮ ಮಗುವಿಗೆ ’ಕೃಷ್ಣ’ ಎಂದು ಹೆಸರನ್ನಿಟ್ಟರು ವಿಶ್ವನಾಥಯ್ಯ ಮತ್ತು ಸರಸ್ವತಿಬಾಯಿ ದಂಪತಿಗಳು. ವಿಶ್ವನಾಥಯ್ಯನವರು ಉಡುಪಿಯ ಬಳಿಯಿರುವ ನಂದಳಿಕೆ ಎಂಬಲ್ಲಿ ವಾಸವಾಗಿದ್ದ ಕೊಂಕಣಿ ಮಾತೃಭಾಷೆಯನ್ನಾಡುತ್ತಿದ್ದ ಗೌಡಸಾರಸ್ವತ ಪಂಗಡಕ್ಕೆ ಸೇರಿದವರಾಗಿದ್ದರು ಹಾಗೂ ಧರ್ಮಸ್ಥಳದ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಹೆಸರನ್ನು ಗಳಿಸಿದ್ದರು. ಯದುವಂಶ ರಾಜರು ಕಲೆಗೆ ಪ್ರೋತ್ಸಾಹ […]