1897ರ ಆರಂಭದಲ್ಲಿ ಮೊತ್ತಮೊದಲಬಾರಿ ಭಾರತದಲ್ಲಿ ಕಾಲಿರಿಸುತ್ತಿದ್ದಂತೆ ನಿವೇದಿತಾರನ್ನು ಎದುರುಗೊಂಡ ದೃಶ್ಯಾವಳಿ ಆಕೆಗೆ ಪೂರ್ತಿ ಅಪರಿಚಿತವಾಗಿತ್ತು: ದೇಹದ ಕೆಲವು ಭಾಗಗಳನ್ನ? ಆಚ್ಛಾದಿಸಿದ್ದ ವಿಚಿತ್ರ ದಿರಸುಗಳನ್ನು ಧರಿಸಿದ್ದವರು ಕೆಲವರಾದರೆ ನಿಲುವಂಗಿ ಧರಿಸಿದ್ದವರು ಕೆಲವರು. ಕೆಲವರ ತಲೆಗಳನ್ನು ಬಗೆಬಗೆಯ ಮುಂಡಾಸುಗಳು ಕವಿದಿದ್ದರೆ ಕೆಲವರ ಕಿವಿಗಳಲ್ಲಿ ಹೊಳೆಯುವ ಹತ್ತಕಡಕು. ಕೆಲವರ ತಲೆಗೂದಲು ಹೆರಳಿಗಾಗುವ? ಇಳಿಬಿದ್ದಿದ್ದರೆ ಕೆಲವರದು ಸೊಂಪಾದ ದಾಡಿ. ಮೂಲೆಯಲ್ಲೊಂದೆಡೆ ಅದಾವುದರ ಬಗೆಗೂ ಲಕ್ಷ್ಯವೇ ಇಲ್ಲದ ಭಸ್ಮಧಾರಿ ಸಾಧುವೊಬ್ಬನ ಧ್ಯಾನಸ್ಥ ಭಂಗಿ. ನಾನು ಯಾವುದೊ ವಿಚಿತ್ರ ಲೋಕಾಂತರಕ್ಕೆ ಬಂದಿದ್ದೇನೆ ಎಂದು ಆಕೆಗೆ ಅನಿಸಿದ್ದರೆ […]
ಉದ್ಬೋಧನ ಪರ್ವ
Month : March-2018 Episode : ನಿವೇದಿತಾ ಭಾಗ- 5 Author : ಎಸ್.ಆರ್. ರಾಮಸ್ವಾಮಿ