ನಗೆಹನಿಗಳು

ಕೇಳಿಕೊಂಡು

ಕಾರ್ಯದರ್ಶಿ:         ಸರ್, ‘ಮಾತನಾಡುವ ಸ್ವಾತಂತ್ರ್ಯ ಪ್ರತಿಯೊಬ್ಬರ ಹಕ್ಕು’ – ಎಂಬುದರ ಬಗ್ಗೆ ನೀವು ಒಂದು    ಭಾಷಣ ಮಾಡಬೇಕು.

ರಾಜಕಾರಣಿ:          ಒಂದು ನಿಮಿಷ ಕೂತಿರಿ! ಹಾಗೆ ಭಾಷಣ                 ಮಾಡಬಹುದೋ ಬೇಡವೋ ಎಂಬುದನ್ನು ಒಳಗೆ ಹೋಗಿ ನನ್ನ ಹೆಂಡತಿಯನ್ನು ಕೇಳಿಕೊಂಡು ಬಂದುಬಿಡುತ್ತೇನೆ.

***

ರಾಣಿ ತರಹ

ಹೆಂಡತಿ   :               ರೀ, ನಿಮಗೆ ರಾಣಿ ಅನ್ನೋ ಮೊದಲನೇ ಹೆಂಡತಿ          ಇರುವ ವಿಷಯ ನಮ್ಮ ಮದುವೆಗೆ ಮುಂಚೆ ನನಗ್ಯಾಕೆ           ಹೇಳ್ಲಿಲ್ಲ?

ಗುಂಡ      :               ಹೇಳಿದ್ನಲ್ಲ ಚಿನ್ನ….

ಹೆಂಡತಿ   :               ರೀ ಸುಳ್ಳು ಹೇಳಬೇಡಿ, ಯಾವಾಗ ಹೇಳಿದ್ರಿ?

ಗುಂಡ      :               ನಿನ್ನ ರಾಣಿ ತರಹ ನೋಡ್ಕೋತೀನಿ

                                ಅಂತ ಹೇಳಿದ್ನಲ್ಲ?

***

ಒಳ್ಳೆಯ ಹೆಣ್ಣು

ರಾಯರು                :               ನನ್ನ ಮಗಳಿಗೆ ಒಬ್ಬ ಒಳ್ಳೆಯ ಗಂಡು ನೋಡು                                        ಎಂದು ಹೇಳಿದ್ದೆನಲ್ಲ; ನೋಡಿದೆಯಾ?

ಗುಂಡ      :               ಒಳ್ಳೆಯ ಗಂಡುಗಳಿಗೇನು ಕಡಮೆ? ಬೇಕಾದಷ್ಟು

                                ಇದ್ದಾರೆ.

ರಾಯರು                :               ಮತ್ತೆ ಯಾಕೆ ಕರೆದುಕೊಂಡು ಬಂದಿಲ್ಲ?

ಗುಂಡ      :               ಅವರೆಲ್ಲ ಒಳ್ಳೆಯ ಹೆಣ್ಣು ಬೇಕೂಂತ ಇದ್ದಾರೆ!

Facebook
X
WhatsApp
Print
Email