ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

  • ಕಾಲೇಜು ವಿದ್ಯಾರ್ಥಿಗಳಿಗಾಗಿ ’ಉತ್ಥಾನ’ ಪ್ರಬಂಧ ಸ್ಪರ್ಧೆ – 2023

  • ಉತ್ಥಾನ ಕಥಾ ಸ್ಪರ್ಧೆ 2023

  • ಬ್ರಿಟಿಷ್ ವಸಾಹತು ಸ್ಥಾಪನೆಯಲ್ಲಿ ಪ್ಲಾಸಿ ಯುದ್ಧ: ಕಾರಣಗಳು

  • ಕರ್’ನಾಟಕ’ ಕಲಿಸುವ ಪಾಠಗಳು

  • ಮ್ಯೋಗ್ಲಿಂಗ್ ಡೈರಿ ಮತ್ತು ಮತಾಂತರ ಚರಿತ್ರೆ

  • ಅಮೆರಿಕದ ನೆಲದಲ್ಲಿ ಭಾರತೀಯ ಚಿಗುರು

  • ಕ್ಷೀರಕ್ರಾಂತಿಯ ಯಶೋಗಾಥೆ ಲೇಖನಮಾಲೆ

  • ಉತ್ಥಾನ ದ ಚಂದಾದಾರರಾಗಿ

  • ಉತ್ಥಾನ ಸಂಕ್ರಾಂತಿ ವಿಶೇಷಾಂಕ 2023

  • ನೀವೂ ಉತ್ಥಾನದ ಚಂದಾದಾರರಾಗಿ…

  • ನಮ್ಮ ಮನೆಯಲ್ಲಿರಲಿ ರಾಷ್ಟ್ರೀಯ ಸಾಹಿತ್ಯ

  • ಸಾವರಕರ್ ಕುರಿತ ಸರಣಿ ಲೇಖನ

  • ಉತ್ಥಾನದ ಚಂದಾದಾರರಾಗಿ

  • ಸದಭಿರುಚಿಯ ಮಾಸಪತ್ರಿಕೆ ‘ಉತ್ಥಾನ’ದಲ್ಲಿ ಏನೇನಿರುತ್ತೆ

  • ಉತ್ಥಾನದ ಏಜೆಂಟರಾಗಿ. ಕನ್ನಡಿಗರ ಮನೆಮನೆಗೆ ತಲಪಿಸೋಣ

ಶ್ರೀ ಸಿದ್ಧಾರೂಢ ಸದ್ಗುರುನಾಥ; ಉದ್ಧಾರಾದೆವು ನಿಮ್ಮಿಂದ...
ಶ್ರೀ ಸಿದ್ಧಾರೂಢ ಸದ್ಗುರುನಾಥ; ಉದ್ಧಾರಾದೆವು ನಿಮ್ಮಿಂದ…

ದೈನಂದಿನ ಹೋರಾಟದಲ್ಲಿ ಬಸವಳಿದ ಜೀವಕ್ಕೆ ಮನುಷ್ಯತ್ವ, ಮಾಧವತ್ವ, ಒಳ್ಳೆಯತನದಲ್ಲಿ ನಂಬಿಕೆ, ದಾಸೋಹಕ್ಕಾಗಿ ಕಾಯಕ ತತ್ತ್ವಪರಿಪಾಲನೆ, ದುಡಿದೇ ಉಣ್ಣುವ ‘ಕಾಯಕವೇ ಕೈಲಾಸ’ ಎಂಬ ಅನುಭಾವದ ಅರಿವು, ಹೃದಯವೀಣೆಯ ತಂತಿ ಮೀಟಿದವರು ಸಿದ್ಧರು–ಸಾಧಕರು, ತಪಸ್ವಿಗಳು, ಅನುಭಾವಿಗಳು, ಶರಣರು, ವಚನಕಾರರು. ನಿತ್ಯದ ದಾಸರು, ಬದುಕಿನ ಮೌಲ್ಯಾದರ್ಶಗಳನ್ನು...

ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ!
ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ!

ಪಕ್ಷಿಗಳ ದೇಹದ ಗಾತ್ರಕ್ಕೆ ಅನುಗುಣವಾಗಿ, ಅತ್ಯಂತ ಕಡಮೆ ತೂಕದ ಪುಟ್ಟ ಅಲ್ಯೂಮಿನಿಯಂನ ಸಂಕೇತಾಕ್ಷರ ಕೆತ್ತಿದ `ರಿಂಗ್’ ಮತ್ತು `ಟ್ಯಾಗ್‍’ ತೊಡಿಸಿ, ಎಲ್ಲಿಯೋ ಯಾರಿಗೋ ಈ ಹಕ್ಕಿ ಗೋಚರಿಸಿ, ನಮಗೆ ಚಿತ್ರಸಮೇತ ಸಂದೇಶ ಕಳುಹಿಸಿದಾಗ, ಆ ಪುಟ್ಟ ಹಕ್ಕಿಯ ವಲಸೆಯನ್ನು ವೈಜ್ಞಾನಿಕವಾಗಿ ಅಭ್ಯಸಿಸಲು...

ಸ್ವಾತಂತ್ರ್ಯ ಶರಣ್ಯ ಶ್ರೀ ಅರವಿಂದರ ಪಾದಾರವಿಂದಗಳಲ್ಲಿ…
ಸ್ವಾತಂತ್ರ್ಯ ಶರಣ್ಯ ಶ್ರೀ ಅರವಿಂದರ ಪಾದಾರವಿಂದಗಳಲ್ಲಿ…

ಪ್ರವಾಸ ಕಥನ ಮಹರ್ಷಿ ಅರವಿಂದರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 15ರಿಂದ ಅವರ ತಪೋನುಷ್ಠಾನದಿಂದ ಪುನೀತವಾದ ಪುಣ್ಯಭೂಮಿ ಪುದುಚೇರಿಯ ಅರವಿಂದೊ ಆಶ್ರಮದಲ್ಲಿ ವಿಶೇಷ ಕಾರ್ಯಕ್ರಮಗಳು ಸಪ್ತಾಹಪೂರ್ತಿ ಏರ್ಪಾಡಾಗಿದ್ದವು. ಮಹರ್ಷಿ ಅರವಿಂದರು 21 ವರ್ಷಗಳ ಕಾಲ ಕರ್ಮಸಿದ್ಧಾಂತ ಬೋಧಿಸಿದ ಮತ್ತು ಅಧ್ಯಾತ್ಮ...

ಭಾರತೀಯ ಅಸ್ಮಿತೆ ಮತ್ತು ಪ್ರಾಗೈತಿಹಾಸಿಕ ತಾಣಗಳ ಸಂರಕ್ಷಣೆ
ಭಾರತೀಯ ಅಸ್ಮಿತೆ ಮತ್ತು ಪ್ರಾಗೈತಿಹಾಸಿಕ ತಾಣಗಳ ಸಂರಕ್ಷಣೆ

ಪ್ರಾಗೈತಿಹಾಸಿಕ ಕಾಲಮಾನದಲ್ಲಿ ನಮ್ಮ ರಾಜ್ಯದಲ್ಲಿ ಏನೆಲ್ಲಾ ನಡೆದಿರಬಹುದು ಎನ್ನುವುದು ಕುತೂಲಹಲಕಾರಿ ಅಷ್ಟೇ ರೋಚಕವಾದ ಇತಿಹಾಸ, ಅಲ್ಲಲ್ಲ ಪ್ರಾಗಿತಿಹಾಸ. ಲಭ್ಯವಿರುವ ಮಾಹಿತಿಯ ಪ್ರಕಾರ ಕರ್ನಾಟಕ ಒಂದರಲ್ಲೇ ೫೦ಕ್ಕೂ ಹೆಚ್ಚು ಪ್ರಾಗೈತಿಹಾಸಿಕ ತಾಣಗಳಿವೆ. ಇವು ಸುಮಾರು ೨ ಲಕ್ಷ ವರ್ಷದಿಂದ ೧೦ ಸಾವಿರ ವರ್ಷಗಳಷ್ಟು...

ವರದಾನವಾದ ಝಾ ಸಮಿತಿ ವರದಿ
ವರದಾನವಾದ ಝಾ ಸಮಿತಿ ವರದಿ

ಕೆಲವು ಪ್ರಧಾನಿಗಳಂತೆಯೇ ರಾಜೀವ್‌ಗಾಂಧಿ ಅವರೊಂದಿಗೆ ಕೂಡ ಡಾ|| ಕುರಿಯನ್ ಅವರಿಗೆ ಆತ್ಮೀಯ ಸಂಬಂಧವಿತ್ತು. “ರಾಜೀವ್ ಒಳ್ಳೆಯ ಮನುಷ್ಯ. ಕಾಂಪ್ಲಿಕೇಶನ್ ಇಲ್ಲದ ವ್ಯಕ್ತಿ. ಆತ ಮಾಡಿದ ಏಕೈಕ ತಪ್ಪೆಂದರೆ ಎಲ್ಲ ಬಗೆಯ ಭ್ರಷ್ಟ ಮಂತ್ರಿಗಳನ್ನು ತನ್ನ ಸುತ್ತ ಇಟ್ಟುಕೊಂಡದ್ದು. ಒಮ್ಮೆ ಏನನ್ನೋ ಉದ್ಘಾಟಿಸಲು...

ದೇಶದ ಜನತೆಯ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ
ದೇಶದ ಜನತೆಯ ಬಾಯಿ ಮುಚ್ಚಿಸಿದ ಕಾಂಗ್ರೆಸ್ ಸರ್ಕಾರದ ತುರ್ತುಪರಿಸ್ಥಿತಿ

ತುರ್ತುಪರಿಸ್ಥಿತಿಯ ವೇಳೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದಿಂದ ಯಾವೆಲ್ಲ ದೌರ್ಜನ್ಯಗಳು ನಡೆದವು; ಪ್ರಜಾಪ್ರಭುತ್ವ ವ್ಯವಸ್ಥೆಗೆ ಎಂತಹ ಶೋಚನೀಯ ಸ್ಥಿತಿಯನ್ನು ತಂದೊಡ್ಡಲಾಗಿತ್ತು; ಸಂವಿಧಾನಕ್ಕೆ ಎಂತಹ ನಗೆಪಾಟಲು ಪರಿಸ್ಥಿತಿಯನ್ನು ಉಂಟುಮಾಡಲಾಗಿತ್ತು ಎನ್ನುವ ಕುರಿತು ತುರ್ತುಪರಿಸ್ಥಿತಿಯನ್ನು ಹೇರಿ ೪೮ ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಇನ್ನೊಮ್ಮೆ ನೋಡುವುದು ಕಾಲೋಚಿತ...

ಪ್ರಜಾಪ್ರಭುತ್ವ ಸತ್ತ್ವವಂತವಾಗಿದೆಯೇ?
ಪ್ರಜಾಪ್ರಭುತ್ವ ಸತ್ತ್ವವಂತವಾಗಿದೆಯೇ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಮೊದಲನೆಯ ಭಾಗವಾದರೆ, ಅನಂತರ ಸರ್ಕಾರದ ಪಾತ್ರ. ಚುನಾವಣೆ ವ್ಯವಸ್ಥೆಯ ಮೂಲಕ ಆಡಳಿತದ ಭಾಗವಾಗಲು ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಗಾಂಧಿಯವರು ಹೇಳಿದ್ದರು: “ಬಲ ಇರುವವರಿಗೆ ನೀಡುವಷ್ಟೆ ಅವಕಾಶವನ್ನು ಬಲಹೀನರಿಗೂ ಪ್ರಜಾಪ್ರಭುತ್ವ ನೀಡುತ್ತದೆ ಎಂದು ನಾನು...

ಕರ್ ‘ನಾಟಕ’ ಕಲಿಸುವ ಪಾಠಗಳು
ಕರ್ ‘ನಾಟಕ’ ಕಲಿಸುವ ಪಾಠಗಳು

ಯಾವುದೇ ರಾಜಕೀಯ ಪಕ್ಷಕ್ಕೆ ಅದರದೇ ಆದ ಸಣ್ಣದೋ ದೊಡ್ಡದೋ ನಿಷ್ಠಾವಂತ ಬೆಂಬಲಿಗರ ಗುಂಪೊಂದಿರುತ್ತದೆ. ಅವರು ತಮ್ಮ ಪಕ್ಷದ ಸರ್ಕಾರದಿಂದ ಪುಕ್ಕಟೆ ಸೌಲಭ್ಯಗಳನ್ನು ಬಯಸುವುದಿಲ್ಲ. ಅವರು ನಿರೀಕ್ಷಿಸುವುದು ಸ್ಥಾಪಿತ ಮೌಲ್ಯಗಳಿಗೆ ತಮ್ಮ ಪಕ್ಷ ಹಾಗೂ ಸರ್ಕಾರದ ನಿರಂತರ ನಿಷ್ಠೆಯನ್ನಷ್ಟೇ. ಬಿಜೆಪಿಯ ಆ ಬಗೆಯ...

ಜನಸಂಖ್ಯೆಯ ಹೆಚ್ಚಳ
ಜನಸಂಖ್ಯೆಯ ಹೆಚ್ಚಳ

ಜನಸಂಖ್ಯೆಯ ಪ್ರಮಾಣದಲ್ಲಿ ಚೀಣಾವನ್ನು ಭಾರತ ಹಿಂದಿಕ್ಕಬಹುದೆಂಬ ಸಂಭವಮಂಡನೆ ಒಂದಷ್ಟು ಸಮಯದಿಂದ ಪ್ರಚಲಿತವಿತ್ತು. ಈ ಊಹನೆಯು ನಿಜವಾಗುತ್ತಿದೆಯೆಂಬ ಸೂಚನೆ ಇತ್ತೀಚೆಗೆ ಲಭಿಸಿದೆ. ಈ ವರ್ಷದ (೨೦೨೩) ನಡುಭಾಗದ ವೇಳೆಗೆ ಭಾರತದ ಜನಸಂಖ್ಯೆ ಚೀಣಾದ್ದಕ್ಕಿಂತ ಮೂವತ್ತು ಲಕ್ಷದಷ್ಟು ಅಧಿಕವಾಗಬಹುದು – ಎಂಬ ಅಂದಾಜನ್ನು ಇದೀಗ...

ಸಂಗೀತಸಾಹಸಿ: ಎಂ. ಬಾಲಮುರಳೀಕೃಷ್ಣ
ಸಂಗೀತಸಾಹಸಿ: ಎಂ. ಬಾಲಮುರಳೀಕೃಷ್ಣ

ಬಾಲಮುರಳಿಯವರ ಪ್ರತಿಭೆಯ ಬಗೆಗೆ ಮಾತನಾಡುವಾಗ ಅವರ ಸಮಕಾಲೀನರನ್ನು ನಾವು ಗಮನಿಸಲೇಬೇಕು. ಏಕೆಂದರೆ ಒಂದು ವಸ್ತುವಿನ ಮೌಲ್ಯಮಾಪನವು ನಡೆಯುವುದು ಅದಕ್ಕೆ ಸಂಬಂಧಪಟ್ಟ ವಾತಾವರಣದಲ್ಲಿಯೇ. ನಿರ್ವಾತದಲ್ಲಿ ಯಾವ ಮೌಲ್ಯಮಾಪನವೂ ನಡೆಯುವುದಿಲ್ಲ. ಇಂತಿದ್ದರೂ ಎಲ್ಲ ಮೌಲ್ಯಮಾಪನಗಳೂ ಸಾಪೇಕ್ಷ. ಹೀಗಾಗಿ ಬಾಲಮುರಳೀಕೃಷ್ಣರನ್ನು ಕಾಳಿದಾಸನ ಕವಿತೆಗೋ ಕುಮಾರವ್ಯಾಸನ ಕವಿತೆಗೋ...

ಡಾ|| ವರ್ಗೀಸ್ ಕುರಿಯನ್ - ಆಪರೇಶನ್ ಫ್ಲಡ್: ರಾಷ್ಟ್ರಮಟ್ಟಕ್ಕೆ ವಿಸ್ತರಣೆ
ಡಾ|| ವರ್ಗೀಸ್ ಕುರಿಯನ್ – ಆಪರೇಶನ್ ಫ್ಲಡ್: ರಾಷ್ಟ್ರಮಟ್ಟಕ್ಕೆ ವಿಸ್ತರಣೆ

“ಮ್ಯಾನೇಜರಾಗಿ ಇಲ್ಲಿ ನನ್ನ ಕೆಲಸವೆಂದರೆ ಡೈರಿಗೆ ಹಾಲು ನೀಡುವ ರೈತರಿಗೆ ತೃಪ್ತಿಯಾಗುವಂತೆ ನಡೆದುಕೊಳ್ಳುವುದು. ಉತ್ಪಾದನೆ ಹೆಚ್ಚಿಸುವುದಕ್ಕಾಗಿ ನಾನು ರೈತರಿಗೆ ಮೂಲಸವಲತ್ತು ಒದಗಿಸಬೇಕಿತ್ತು. ಅವರಿಗೆ ಲಾಭವಾಗುವಂತೆ ಉತ್ಪಾದನೆಯನ್ನು ಹೆಚ್ಚಿಸಬೇಕಿತ್ತು. ಅವರು ಒದಗಿಸಿದ ಹಾಲನ್ನು ನಾನು ಖರೀದಿಸಲೇಬೇಕಿತ್ತು. ಇದು ರೈತರ ಬೇಡಿಕೆಗಳಿಗೆ ಸದಾ ಸ್ಪಂದಿಸುವ...

ಸ್ವಾತಂತ್ರ್ಯಸಂಗ್ರಾಮದಲ್ಲಿ ‘ವಿದುರಾಶ್ವತ್ಥ’ಹೋರಾಟದ ನೆನಪು
ಸ್ವಾತಂತ್ರ್ಯಸಂಗ್ರಾಮದಲ್ಲಿ ‘ವಿದುರಾಶ್ವತ್ಥ’ಹೋರಾಟದ ನೆನಪು

ವಿದುರಾಶ್ವತ್ಥದಲ್ಲಿ ವಿದುರನಾರಾಯಣನ ಪೂಜೆಯಲ್ಲಿ ತೊಡಗಿದ್ದ ಗರ್ಭಿಣಿ ಗೌರಮ್ಮನಿಗೆ ಗುಂಡು ಬಡಿದು ಸ್ಥಳದಲ್ಲೇ ಮಡಿದಳೆಂಬ ವಾರ್ತೆ ಎಲ್ಲೆಡೆ ಹರಡಿತು. ಈ ಹತ್ಯಾಕಾಂಡ ಕರಾಳ ಇತಿಹಾಸವನ್ನು ಸೃಷ್ಟಿಸಿತು. ಈ ಘಟನೆಯನ್ನು ಗಾಂಧಿ ಸೇರಿದಂತೆ ಹಲವು ಮಂದಿ ಹಿರಿಯ ರಾಷ್ಟ್ರೀಯ ನಾಯಕರು ಖಂಡಿಸಿದರು. ಅದರ ಬೆನ್ನಲ್ಲೇ...

ವರ್ಚಸ್ಸು ಬೆಳೆಯುತ್ತಹೋಗುವ ನಾಯಕ ನರೇಂದ್ರ ಮೋದಿ
ವರ್ಚಸ್ಸು ಬೆಳೆಯುತ್ತಹೋಗುವ ನಾಯಕ ನರೇಂದ್ರ ಮೋದಿ

ಪ್ರಧಾನಿ ಮೋದಿಯವರ ಚಿಂತನೆಗಳನ್ನು ತಿಳಿದವರಿಗೆ ದೀನದಯಾಳ್ ಉಪಾಧ್ಯಾಯರು ಹೇಳಿದ ‘ಅಂತ್ಯೋದಯ’ವೇ ಅವರ ಆಡಳಿತದ ಕೇಂದ್ರ ಎಂದು ತಿಳಿದಿರುತ್ತದೆ. ಜೊತೆಗೆ ಫಲಾನುಭವಿಗಳನ್ನು ಜಾತಿ-ಮತಗಳ ಆಧಾರದಲ್ಲಿ ಒಡೆಯುವುದಕ್ಕೆ ಬದಲಾಗಿ ಅವರ ನಡುವೆ ಒಗ್ಗಟ್ಟು ತರುವುದು ಇವರ ಕ್ರಮ. ಜಾತಿಯ ವಾಸ್ತವಗಳು, ಅದರಲ್ಲೂ ವಿಶೇಷವಾಗಿ ದಲಿತರು,...

ಬೆಳ್ಳಗಿರುವುದೆಲ್ಲ ಹಾಲಲ್ಲ
ಬೆಳ್ಳಗಿರುವುದೆಲ್ಲ ಹಾಲಲ್ಲ

ಮಾಧ್ಯಮಗಳ ಮೂಲಕ ಹೊಮ್ಮುವುದೆಲ್ಲ ಯಥಾರ್ಥವೆಂದು ಜನರು ಸ್ವೀಕರಿಸುವ ಪ್ರವೃತ್ತಿಗೆ ಹಿಂದಿನ ವರ್ಷಗಳಲ್ಲಿದ್ದಷ್ಟು ದಾಢ್ರ್ಯ ಈಗ ಉಳಿದಿಲ್ಲ. ಎಲೆಕ್‍ಟ್ರಾನಿಕ್ ಮಾಧ್ಯಮಗಳು ಪಡೆದುಕೊಂಡಿರುವ ವ್ಯಾಪ್ತಿಯಿಂದಾಗಿ ಈಗ ಜನರಿಗೆ ಲಭ್ಯವಿರುವ ಆಯ್ಕೆಗಳು ಹೆಚ್ಚಾಗಿವೆ. ಇದು ಒಳ್ಳೆಯ ಬೆಳವಣಿಗೆ. ಹೆಚ್ಚು ಜನರಲ್ಲಿ ಜಾಗೃತಿಯೂ ವಿಮರ್ಶನಪ್ರಜ್ಞೆಯೂ ಬೆಳೆದಲ್ಲಿ ಎಷ್ಟೊ...

ಬಿಡದೆ ಕಾಡುವ ಚಂದಮಾಮಾ!
ಬಿಡದೆ ಕಾಡುವ ಚಂದಮಾಮಾ!

ಚಂದಮಾಮಾ ಎಂದ ಕೂಡಲೇ ನೆನಪಾಗುವುದು ತಿಂಗಳಿಗೊಮ್ಮೆ ಬರುತ್ತಿದ್ದ ಮಕ್ಕಳ ಮಾಸಪತ್ರಿಕೆ. ಈಗಿನ ಮಧ್ಯವಯಸ್ಕ ತಲೆಮಾರಿನವರ ಬಾಲ್ಯದ ಸಂಗಾತಿ ಈ ಮಾಸಪತ್ರಿಕೆ. ಹಳೆಯ ಚಂದಮಾಮಾ ಕಥೆಗಳೇ ಹಾಗೆ. ಮಕ್ಕಳು ಬಿಡಿ ದೊಡ್ಡವರನ್ನೇ ಸಮ್ಮೋಹನಗೊಳಿಸುತ್ತಿದ್ದ ಪುಸ್ತಕವದು. ಮುಖಪುಟ ಚಿತ್ರ, ಒಳಗೆ ಕಥೆಗಳ ನಡುವೆ ಇರುತ್ತಿದ್ದ...

ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ
ಮಹತ್ತಿನ ಉಪಾಸನೆ ದೇವುಡು ನರಸಿಂಹಶಾಸ್ತ್ರಿಗಳ ‘ಮಹಾತ್ರಯ’ದ ಸಂಸ್ತವ

ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ...

ದೀನದಯಾಳ ಉಪಾಧ್ಯಾಯ ಏಕಾತ್ಮ ಮಾನವತೆ
ದೀನದಯಾಳ ಉಪಾಧ್ಯಾಯ ಏಕಾತ್ಮ ಮಾನವತೆ

ನಮ್ಮ ಶಾಲೆ-ಕಾಲೇಜುಗಳ ಪಠ್ಯಪುಸ್ತಕಗಳು ಈಗಲೂ ಕೂಡ ಪಾಶ್ಚಾತ್ಯ ದೇಶಗಳೊಂದಿಗೆ ನಮ್ಮನ್ನು ಹೋಲಿಸಿಕೊಂಡು ನಮ್ಮಲ್ಲಿ ಕೀಳರಿಮೆಯನ್ನು ಬೆಳೆಸುವಂತಹ ಕೆಲಸವನ್ನು ಮಾಡುತ್ತಿವೆ ಎನಿಸುತ್ತದೆ. ಅಮೆರಿಕದ ಪ್ರಜೆಗಳ ತಲಾ ಆದಾಯ ಇಷ್ಟು; ಭಾರತೀಯರದ್ದು ಇಷ್ಟು ಮಾತ್ರ. ಆಹಾರ, ಬಟ್ಟೆ ಮುಂತಾದವುಗಳ ಬಳಕೆಯ ವಿಚಾರದಲ್ಲೂ ಅಷ್ಟೆ. ಅಲ್ಲಿ...

ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’
ಕಂಪೆನಿ ಸರ್ಕಾರವನ್ನು ನಡುಗಿಸಿದ ’ಸಂನ್ಯಾಸಿ ಆಂದೋಲನ’

ಟಿಪ್ಪು ಸುಲ್ತಾನ್ ದೇಶಪ್ರೇಮಿಯೋ ಅಲ್ಲವೋ? ಆತ ನಡೆಸಿದ್ದು ಸ್ವಾತಂತ್ರ್ಯ ಹೋರಾಟವೋ ಅಲ್ಲವೋ ಎನ್ನುವುದು ನಮ್ಮಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿದೆ. ಇತ್ತೀಚೆಗೆ ನಮ್ಮಲ್ಲಿ ಸಾಮಾನ್ಯವಾಗಿ ಕಾಣುವಂತೆ ಇದನ್ನು ಎರಡೂ ಕಡೆಯಿಂದ ಬಹಳ ಶಕ್ತಿಶಾಲಿಯಾಗಿ ವಾದಿಸಲಾಗುತ್ತದೆ. ಕೆಲವರದ್ದು ಕೇವಲ ವಾದಕ್ಕಾಗಿ ವಾದ ಅನ್ನಿಸಿದರೂ ಕೂಡ...

ಕೂಡಿಸಿ ನೆಲೆಗೊಳಿಸುವ ಯೋಗ
ಕೂಡಿಸಿ ನೆಲೆಗೊಳಿಸುವ ಯೋಗ

ವಿಶ್ವದ ಪ್ರತಿಯೊಂದು ಜೀವವೂ ತತ್ತ್ವತಃ ಅಪರಿಮಿತ ಶಕ್ತಿಗಳ ಆಗರ. ವಿಕಾಸ ಮತ್ತು ವಿನಾಶ – ಇದು ಜೀವಸಮುದಾಯರೂಪೀ ಪ್ರಪಂಚದ ಬಹುಮುಖ್ಯ ಲಕ್ಷಣ. ಈ ವಿಕಾಸ-ವಿನಾಶಗಳ ಕಾರಣಸಾಮಗ್ರಿಯಾಗಿ ಅವುಗಳ ನಡುವೆ ಲಾಳಿಯಾಡುವ ವಿಶಿಷ್ಟ ತತ್ತ್ವವೇ ಮನಸ್ಸು. ಕಣ್ಣಿಗೆ ಕಾಣದೆಯೂ ಕೈಗೆ ಸಿಗದೆಯೂ ಆಂತರ್ಯದಲ್ಲಿ...

ಬ್ರಿಟಿಷರ ಅನ್ಯಾಯದ ತೆರಿಗೆಯ ಸ್ಮಾರಕ ’ಸುಂಕದ ಬೇಲಿ’
ಬ್ರಿಟಿಷರ ಅನ್ಯಾಯದ ತೆರಿಗೆಯ ಸ್ಮಾರಕ ’ಸುಂಕದ ಬೇಲಿ’

ಬ್ರಿಟಿಷ್ ಆರ್ಥಿಕ ತಜ್ಞ ಆಂಗಸ್ ಮ್ಯಾಡಿಸನ್ ಪ್ರಪಂಚದ ಎಲ್ಲ ಭಾಗಗಳ ಆರ್ಥಿಕ ಇತಿಹಾಸದ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದಾತ. ಆತನ ವರದಿಯಂತೆ ೨೦೦೦ ವರ್ಷಗಳ ಹಿಂದೆ ಭಾರತದ ಜಿಡಿಪಿ ೩೩% ಇತ್ತು. ಒಂದು ಸಾವಿರ ವರ್ಷಗಳ ಹಿಂದೆ ೨೫% ಇತ್ತು. ಬ್ರಿಟಿಷರು...

ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾದ ಆದರ್ಶರು
ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾದ ಆದರ್ಶರು

ಬೆಂಗಳೂರಿನ ಸಾಹಿತ್ಯ ಸಿಂಧು ಪ್ರಕಾಶನದವರು ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ ’ದೀಪ್ತ ಶೃಂಗಗಳು’. ದೀಪ್ತ ಎಂದರೆ ಪ್ರಕಾಶಿಸುವ, ಹೊಳೆಯುವ ಎಂದು ಅರ್ಥ. ಶೃಂಗಗಳು ಎಂದರೆ ಶಿಖರಗಳು. ಸಮಾಜದಲ್ಲಿ ಕೋಟ್ಯಾಂತರ ವ್ಯಕ್ತಿಗಳಿದ್ದರೂ ಕೆಲವರು ತಮ್ಮ ಜ್ಞಾನದಿಂದ, ಸೇವೆಯಿಂದ, ಕಲಾ ಪ್ರೌಢಿಮೆಯಿಂದ ಸ್ತುತ್ಯ ಚರಿತದಿಂದ...

ಮಾತನಾಡಲೇ ಬೇಕಾದ ಹಲವು ಮೌನಗಳ ದನಿ ’ಪರಕಾಯ ಪ್ರವೇಶ’
ಮಾತನಾಡಲೇ ಬೇಕಾದ ಹಲವು ಮೌನಗಳ ದನಿ ’ಪರಕಾಯ ಪ್ರವೇಶ’

ಮುಖವರ್ಣಿಕೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದನ ಚಿತ್ರವಿರುವ ಮುಖಪುಟವೇ ಪರಕಾಯ ಪ್ರವೇಶಕ್ಕೆ ನಮ್ಮನ್ನು ಅಣಿಯಾಗಿಸುತ್ತದೆ. ದಂಡಕ, ವಿಕರ್ಣ, ಸುದೇಷ್ಣಾ, ರಥಕಾರ, ಭದ್ರ, ಪ್ರಾತಿಕಾಮಿ, ಅಶ್ವಸೇನ, ಸಾರಥಿ, ರುಮಾ, ರುರು, ಸಾಲ್ವ, ಕೌರವ, ಪರೀಕ್ಷಿತ ಹೀಗೆ ಪಾತ್ರಗಳು ನಮ್ಮೊಂದಿಗೆ ಮಾತನಾಡುತ್ತವೆ. ಪುರಾಣದ ಮೌನವನ್ನು ತುಂಬುವ ಒಂದು...

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಿದೆಯೇ?
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಿದೆಯೇ?

ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮತಧರ್ಮಗಳ ಸ್ವಾತಂತ್ರ್ಯ, ಮುಂತಾದವು ಬಹಳ ಅದ್ಭುತವಾದ ಸಾಮಾಜಿಕ-ರಾಜಕೀಯ ಪರಿಕಲ್ಪನೆಗಳು. ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪ್ರಶ್ನೆ ಬಂದಾಗ ಇಂದಿರಾ ಗಾಂಧಿಯವರ ವಿಷಯವು ಬರಲೇಬೇಕಾಗುತ್ತದೆ. ಯಾವುದೇ ಸಿದ್ಧಾಂತವಿಲ್ಲದೆ,  ರೀತಿ-ನೀತಿಗಳಿಲ್ಲದೆ ಮತ್ತು ಕೇವಲ ಅಧಿಕಾರದಲ್ಲಿ ಮುಂದುವರಿಯುವ ದುಷ್ಟ ಉದ್ದೇಶದಿಂದ ಅವರು ತುರ್ತುಪರಿಸ್ಥಿತಿಯನ್ನು ಘೋಷಿಸಿದರು....

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ