
ಪ್ರಚಲಿತ -ಎಸ್.ಆರ್.ಆರ್. ಸಂಸತ್ತಿನಲ್ಲಿ ಮಸೂದೆಯನ್ನು ಮಂಡಿಸುವುದಕ್ಕೆ ಮುಂಚೆ ವಿದ್ಯಾರ್ಥಿಗಳ ಮತ್ತು ತರುಣರ ಅಭಿಪ್ರಾಯವನ್ನು ಸಂಗ್ರಹಿಸುವುದಕ್ಕಾಗಿ ನಡೆದ ವ್ಯಾಪಕ ಸಮೀಕ್ಷೆಯಿಂದ ಹೊರಪಟ್ಟ ಮಾಹಿತಿ ಆಲೋಚನೆಗೆ ಅರ್ಹವಾಗಿದೆ: ವಿದ್ಯಾರ್ಥಿ ಸಮುದಾಯದಲ್ಲಿ ಸುಮಾರು ಶೇ. ೬೭ರಷ್ಟು ಮಂದಿಯ ಅಭಿಪ್ರಾಯ ವಿವಾಹಕ್ಕೆ ಯೋಗ್ಯ ವಯಸ್ಸು ೨೮ ರಿಂದ ೩೦ ವರ್ಷ – ಎಂದಿತ್ತು. ಕೇಂದ್ರಸರ್ಕಾರದ ಯಾವುದೇ ಯೋಜನೆಯೋ ಮಸೂದೆಯೋ ಮಂಡಿತವಾದರೂ ಅದನ್ನು ವಿರೋಧಿಸಬೇಕೆಂಬ ಪ್ರವೃತ್ತಿ ಈಗ ಬೆಳೆದಿದೆ. ಯಾವುದೇ ಧೋರಣೆಯಿಂದ ಯಾರೋ ಕೆಲವರಿಗೆ ಅಸಮಾಧಾನವಾಗುವ ಸಂಭವ ಇದ್ದೇ ಇರುತ್ತದೆ. ಆದರೆ ಈಗ ನಡೆಯುತ್ತಿರುವುದು […]