
-ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಕಜೆಯವರು ತಮ್ಮ ವೃತ್ತಿಯಲ್ಲಿ ಛಾಲೆಂಜ್ ಹಾಕುವುದು ಬೇರೆಯವರೊಂದಿಗಲ್ಲ, ತನ್ನೊಂದಿಗೇ. ಯಾವುದೇ ಸಂಕ್ಲಿಷ್ಟವಾದ ಕೇಸ್ ಬಂದರೂ ಸವಾಲಾಗಿ ಸ್ವೀಕರಿಸುತ್ತಾರೆ. ಯಶೋಭಾಜನರೂ ಆಗುತ್ತಾರೆ. ಅವರೇ ಹೇಳುವಂತೆ ಆಯುರ್ವೇದ ವೈದ್ಯನಿಗೆ ಚಿಕಿತ್ಸೆಗೆ ರೋಗಸೀಮೆ ಇಲ್ಲ. ಆತ ಸೀಮಾತೀತ. ಎಲ್ಲ ಬಗೆಯ ಎಲ್ಲ ಅವತಾರದ ವ್ಯಾಧಿಗಳಿಗೂ ಆತ ಧನ್ವಂತರಿಯಾಗಬೇಕು. ಕಳೆದ ೨೩ ವರ್ಷಗಳಲ್ಲಿ ಮೂರು ಲಕ್ಷಕ್ಕೂ ಹೆಚ್ಚು ರೋಗಿಗಳು ಇವರಿಂದ ಚಿಕಿತ್ಸೆ ಪಡೆದು ಸಾಂತ್ವನವನ್ನು ಕಂಡುಕೊಂಡಿದ್ದಾರೆ. ಡಾ. ಗಿರಿಧರ ಕಜೆಯವರ ಅವಿರತಕರ್ಮಶೀಲತೆಯ ಪ್ರಧಾನಕಾರಣವೆಂದರೆ ಅವರ ಮುಖದಲ್ಲಿರುವ ನಿತಾಂತ ಪ್ರಸನ್ನತೆ. […]