
ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ರಾಜ್ಯ ಮಟ್ಟದ ವಾರ್ಷಿಕ ಕಥಾಸ್ಪರ್ಧೆ 2024ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶಭಟ್ಟ ಕೊಪ್ಪಲತೋಟ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ. ಉತ್ಥಾನ ಮಾಸಪತ್ರಿಕೆ ಆಯೋಜಿಸಿದ ವಾರ್ಷಿಕ ಕಥಾಸ್ಪರ್ಧೆ ೨೦೨೪ರಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿದಂತೆ ಒಟ್ಟು ೪೧೨ ಕಥೆಗಳು ಭಾಗವಹಿಸಿದ್ದವು. ಲೇಖಕ, ಪತ್ರಕರ್ತರಾದ ಪ್ರೊ|| ಎನ್.ಎಸ್. ಶ್ರೀಧರಮೂರ್ತಿ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದರು. ಮೊದಲನೆ ಬಹುಮಾನವನ್ನು (ರೂ. ೧೫,೦೦೦) ಶ್ರೀ ಗಣೇಶಭಟ್ಟ ಕೊಪ್ಪಲತೋಟ ಅವರ ’ತೀರ್ಪು’ ಎಂಬ ಕಥೆ […]