ಬೆಂಗಳೂರು, ಜುಲೈ 30, 2024: ಉತ್ಥಾನ ಮಾಸಪತ್ರಿಕೆಯು ಕಳೆದ 5 ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯ 2024ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಕಥೆಯು 3,000 ಪದಮಿತಿಯಲ್ಲಿ ಇರಬೇಕು. ಮತ್ತು ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟಣೆ ಅಥವಾ ಸ್ವೀಕೃತವಾಗಿರಬಾರದು. ಕಥೆ ತಲುಪಲು ಕೊನೆಯ ದಿನಾಂಕ: ಅಕ್ಟೋಬರ್ 10, 2024
ಬಹುಮಾನಗಳು:
- ಮೊದಲನೆಯ ಬಹುಮಾನ ರೂ. 15,000
- ಎರಡನೆಯ ಬಹುಮಾನ ರೂ. 12,000
- ಮೂರನೆಯ ಬಹುಮಾನ ರೂ. 10,000
- ಐದು ಮೆಚ್ಚುಗೆಯ ಬಹುಮಾನಗಳು ತಲಾ ರೂ. 2,000
ಕಥಾ ಸ್ಪರ್ಧೆಯ ನಿಯಮಗಳು:
- ಕಥೆ 3,000 ಪದಗಳ ಮಿತಿಯಲ್ಲಿ ಇರಬೇಕು.
- ಕಥೆಗಳು ಸ್ವತಂತ್ರವಾಗಿರಬೇಕು. ಬೇರೆಲ್ಲೂ ಪ್ರಕಟಣೆ ಅಥವಾ ಸ್ವೀಕೃತವಾಗಿರಬಾರದು.
- ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.
- ಕಥೆಯನ್ನು ಪೋಸ್ಟ್ ಮೂಲಕ ಅಥವಾ ನುಡಿ/ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: [email protected]
- ಲೇಖಕರು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜೊತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜೊತೆಗೆ ಲೇಖಕರ ಭಾವಚಿತ್ರವೂ ಇರಬೇಕು.
- ತೀರ್ಪುಗಾರರ ಮೌಲ್ಯನಿರ್ಣಯಾನಂತರ ಫಲಿತಾಂಶವನ್ನು ’ಉತ್ಥಾನ’ದಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ಮಾತ್ರ ಪತ್ರ ಬರೆದು ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು.
- ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
ಕಥೆಗಳು ತಲುಪಲು ಕೊನೆಯ ದಿನಾಂಕ: ಅಕ್ಟೋಬರ್ 10, 2024
ವಿಳಾಸ: ಸಂಪಾದಕರು, ’ಉತ್ಥಾನ’ ವಾರ್ಷಿಕ ಕಥಾ ಸ್ಪರ್ಧೆ – 2024, ’ಕೇಶವ ಶಿಲ್ಪ’, ಕೆಂಪೇಗೌಡನಗರ, ಬೆಂಗಳೂರು- 560 004 ದೂರವಾಣಿ: 77954 41894 ಇ-ಮೇಲ್: [email protected]
ಕಥೆಗಳು ತಲುಪಲು ಕೊನೆಯ ದಿನಾಂಕ: ಅಕ್ಟೋಬರ್ 10, 2024