
ಒಬ್ಬ ವ್ಯಕ್ತಿ ಜೀವನ್ಮುಖಿಯಾಗಿ ಸಮಾಜಮುಖಿಯಾದರೆ ಇಡೀ ಸಮಾಜವನ್ನು ಬದಲಿಸಲು ಸಾಧ್ಯವಿದೆ. ಸಮಾಜಕ್ಕೆ ಉಪಯೋಗವಾಗುವ ಮನುಷ್ಯನ ಸಣ್ಣ ಪ್ರಯತ್ನವಾದರೂ ಅದರಿಂದ ಆಗುವ ಪರಿಣಾಮ ಮಾತ್ರ ಬಹುದೊಡ್ಡದು. ವ್ಯಕ್ತಿಯ ಒಂದು ಉಪಕಾರ ಸಮಾಜದಲ್ಲಿ ಬಹುದೊಡ್ಡ ಕ್ರಾಂತಿಯನ್ನೆ ತರಬಹುದು. ‘ನನ್ನೊಬ್ಬನಿಂದ ಈ ಸಮಾಜ ಸುಧಾರಣೆ ಸಾಧ್ಯವೇ?’ ಎಂಬುದಾಗಿ ನಮಗೆ ಹಲವು ಬಾರಿ ಅನ್ನಿಸುತ್ತದೆ. ಆದರೆ ಮನುಷ್ಯನೊಬ್ಬ ಮನಸ್ಸು ಮಾಡಿದರೆ ಏನೂ ಮಾಡಬಹುದು. ಒಬ್ಬ ವ್ಯಕ್ತಿಯಿಂದ ಸಾಮಾಜಿಕ ಅನಿಷ್ಟಗಳು ದೂರವಾದದ್ದು, ಸಾಮಾಜಿಕ ಪರಿವರ್ತನೆಯಾದ ಉದಾಹರಣೆಗಳು ಸಾಕಷ್ಟಿದೆ. ಮನುಷ್ಯ ಹುಟ್ಟುವಾಗ ಒಬ್ಬಂಟಿಯಾಗಿ ಹುಟ್ಟುತ್ತಾನೆ. ಸಾಯುವಾಗಲೂ […]