
ಮುಖವರ್ಣಿಕೆಯಲ್ಲಿ ತೊಡಗಿಸಿಕೊಂಡಿರುವ ಕಲಾವಿದನ ಚಿತ್ರವಿರುವ ಮುಖಪುಟವೇ ಪರಕಾಯ ಪ್ರವೇಶಕ್ಕೆ ನಮ್ಮನ್ನು ಅಣಿಯಾಗಿಸುತ್ತದೆ. ದಂಡಕ, ವಿಕರ್ಣ, ಸುದೇಷ್ಣಾ, ರಥಕಾರ, ಭದ್ರ, ಪ್ರಾತಿಕಾಮಿ, ಅಶ್ವಸೇನ, ಸಾರಥಿ, ರುಮಾ, ರುರು, ಸಾಲ್ವ, ಕೌರವ, ಪರೀಕ್ಷಿತ ಹೀಗೆ ಪಾತ್ರಗಳು ನಮ್ಮೊಂದಿಗೆ ಮಾತನಾಡುತ್ತವೆ. ಪುರಾಣದ ಮೌನವನ್ನು ತುಂಬುವ ಒಂದು ಪ್ರಯತ್ನ ಇದು ಎಂದವರು ಕಲ್ಚಾರರು. ಹೌದು, ಮಾತನಾಡಲೇ ಬೇಕಾದ ಹಲವು ಮೌನಗಳು ಇಲ್ಲಿ ದನಿಯೆತ್ತುತ್ತವೆ.ಮಾನವ ಶ್ರೇಷ್ಠನಾಗಬೇಕಿದ್ದ ದಂಡಕ, ಮನುವಿನ ಮೊಮ್ಮಗ ಶುಕ್ರಾಚಾರ್ಯರ ಮಗಳನ್ನು ಬಲಾತ್ಕರಿಸಿ ಶಾಪಗ್ರಸ್ತನಾಗಿ ಸಾಯುವ ಘಳಿಗೆಯಲ್ಲಿ ಅವನಲ್ಲಿ ಹುಟ್ಟಿದ ಪ್ರಶ್ನೆ ನಮ್ಮನ್ನು […]