ಒಡಿಸ್ಸಾದಲ್ಲಿರುವ ಪುರಿ ಜಗನ್ನಾಥ ಮಂದಿರ, ಕೋನಾರ್ಕದ ಸೂರ್ಯ ಮಂದಿರ ಜಗತ್ಪ್ರಸಿದ್ಧ; ಭಕ್ತರು, ಇತಿಹಾಸಪ್ರೇಮಿಗಳು, ವಾಸ್ತುಶಿಲ್ಪ ಪ್ರಿಯರು ಜೀವನದಲ್ಲಿ ಒಂದು ಬಾರಿಯಾದರೂ ಸಂದರ್ಶಿಸಲು ಬಯಸುವ ಸ್ಥಳವಿದು. ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲೂ ಹಲವಾರು ಮಂದಿರಗಳಿವೆ. ಇವು ಭಕ್ತರ, ಪ್ರವಾಸಿಗರ ಮನಸೆಳೆದರೂ ಹೆಚ್ಚೇನೂ ಗೌಜೆಬ್ಬಿಸದೆ ಹೋಗಿರಬಹುದು; ಆದರೆ ಮಂದಿರಗಳ ಇತಿಹಾಸ ಅರಿತಾಗ ಅದರ ವಾಸ್ತುಶಿಲ್ಪದ ಸೌಂದರ್ಯ ನೋಡಿದಾಗ ಮೂಕವಿಸ್ಮಿತರಾಗುವುದು ಖಂಡಿತ. ಇಂತಹದ್ದೇ ಅನುಭವ ನಮಗಾಗಿದ್ದು ಇತ್ತೀಚೆಗೆ ಭುವನೇಶ್ವರದಲ್ಲಿರುವ ಮಂದಿರಗಳಿಗೆ ಭೇಟಿ ಕೊಟ್ಟಾಗ. ಭುವನೇಶ್ವರವನ್ನು ‘ಭಾರತದ ಮಂದಿರಗಳ ನಗರ’ ಎಂದೂ ಕರೆಯುತ್ತಾರೆ. ಅಂದ […]










