ಉತ್ಥಾನ ಅಕ್ಟೋಬರ್ ೨೦೧೫
Month : October-2015 Episode : Author :
Month : October-2015 Episode : Author :
Month : October-2015 Episode : Author :
ಸರ್ಕಾರಿ ಶಾಲೆಗಳು ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಮೆಯಾಗುತ್ತಿದೆ. ಕೂಲಿ ಮಾಡುವವರು, ಸೊಪ್ಪು ಮಾರುವವರು, ಮನೆಕೆಲಸ ಮಾಡುವವರು ಕೊನೆಗೆ ಸಮಾಜದ ಅತಿಕೆಳಸ್ತರದ ಕುಟುಂಬಗಳೂ ಕೂಡ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಬಯಸುತ್ತಿದ್ದಾರೆ. ಯಾಕೆ ಹೀಗೆ? ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ವಿತರಣೆ, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳು, ಮಕ್ಕಳನ್ನು ಶಾಲೆಗೆ ಕರೆತರಲು ಸರ್ಕಾರ ರೂಪಿಸಿರುವ ಯೋಜನೆಗಳು – ಕೂಲಿಯಿಂದ ಶಾಲೆಗೆ, ಬಾ ಬಾಲೆ ಶಾಲೆಗೆ, ಪ್ರತಿಭಾ ಪ್ರದರ್ಶನ, ಚಿಣ್ಣರಮೇಳ – ಇತ್ಯಾದಿಗಳು ಮಕ್ಕಳನ್ನು […]
Month : October-2015 Episode : Author : ಶ್ರೀ ಚಂದ್ರಶೇಖರೇಂದ್ರಸರಸ್ವತೀ ಸ್ವಾಮಿಗಳು ಕಾಂಚಿ
ಬ್ರಾಹ್ಮಣರ ಅವನತಸ್ಥಿತಿ ಕುರಿತು ಆಗಾಗ ಕೇಳುತ್ತೇವೆ. ಇದು ಉಂಟಾದದ್ದು ಹೇಗೆ? ಪಾಶ್ಚಾತ್ಯ ಜೀವನದ ಆಡಂಬರದಿಂದ ಆಕರ್ಷಿತರಾಗಿ ಅವರು ಶಾಸ್ತ್ರೋಕ್ತಮಾರ್ಗದಿಂದ ದೂರ ಸರಿಯದಿದ್ದಿದ್ದರೆ ಹೀಗೆ ಆಗುತ್ತಿತ್ತೆ? ಅವರು ಬೇರೆಯವರಿಂದ ಪರಿತ್ಯಕ್ತರಾಗಲಿಲ್ಲ; ಅವರೇ ಸಹಜಮಾರ್ಗ ಬಿಟ್ಟು ಹೊರಕ್ಕೆ ಹೋಗಿದ್ದಾರೆ. ಆಗಿಹೋದ ಪೀಳಿಗೆಯವರು ಹೇಗೆ ನಡೆದುಕೊಳ್ಳಬೇಕಾಗಿತ್ತೆಂದು ಯೋಚಿಸಿ ಪ್ರಯೋಜನವಿಲ್ಲ. ಈಗಿನ ಪೀಳಿಗೆಯವರು ತಮ್ಮ ವಿಹಿತ ಕರ್ತವ್ಯಾಚರಣೆಗಳಿಗೆ ಗಮನ ಕೊಡಲಿ. ಧನಮೋಹಾದಿಗಳಿಗೆ ಬಲಿಯಾದರೆ ಇತರರ ಅಸೂಯೆಗೆ ಗುರಿಯಾಗಿ ನಾವು ಧರ್ಮಚ್ಯುತರಾಗುವುದಷ್ಟೆ ಪ್ರಯೋಜನ. ನಮ್ಮ ಧರ್ಮದ ಬಗೆಗೆ ನಾವು ನಿಷ್ಠೆಯನ್ನೂ ಹೆಮ್ಮೆಯನ್ನೂ ಬೆಳೆಸಿಕೊಳ್ಳಬೇಕು, ಅಲ್ಲವೆ? […]
Month : October-2015 Episode : Author : ಶ್ರೀಹರ್ಷ ಪೆರ್ಲ
ಪ್ರಾಚೀನ ಕಾಲದಲ್ಲಿ ಕೊಡು-ಕೊಳ್ಳುವ ವಸ್ತುಗಳಿಗೆ ವಸ್ತುಗಳನ್ನೇ ಬದಲಾಯಿಸುವ, ಕೆಲಸಕ್ಕೆ ಅನ್ನ/ವಸ್ತ್ರ ನೀಡುವ ಮೂಲಕ ಪ್ರಚಲಿತದಲ್ಲಿದ್ದ ದುಡ್ಡು ಅನೇಕ ಸ್ಥಿತ್ಯಂತರಗಳನ್ನು ಕಂಡು ನಾಣ್ಯ, ನೋಟು ಹಾಗೂ ಚೆಕ್ಗಳಿಗೆ ಬದಲಾಗಿರುವುದು ಈಗ ಇತಿಹಾಸ. ದಾಪುಗಾಲಿಡುತ್ತಿರುವ ತಂತ್ರಜ್ಞಾನದ ಜೊತೆಯಲ್ಲಿ, ದುಡ್ಡೂ ಸುಮ್ಮನೆ ಕುಳಿತಿಲ್ಲ. ಕಂಪ್ಯೂಟರ್, ಅಂತರ್ಜಾಲ, ಮೊಬೈಲುಗಳನ್ನೆಲ್ಲ ಆವರಿಸಿ ತರಂಗಗಳ ಮೂಲಕ ರವಾನೆಯಾಗುತ್ತದೆ, ಕ್ಷಣಾರ್ಧದಲ್ಲಿ ವಿಶ್ವದ ಇನ್ನೊಂದು ಮೂಲೆ ತಲಪುತ್ತದೆ.
Month : October-2015 Episode : Author :
‘ಪಾರಮಾರ್ಥಿಕ ಪದಕೋಶ’ ಸಂಸ್ಕೃತದಲ್ಲಿಯೂ ಕನ್ನಡ ಮೊದಲಾದ ಭಾಷೆಗಳಲ್ಲಿಯೂ ನಿಘಂಟುರಚನೆಗೆ ಹಲವು ಶತಮಾನಗಳ ಇತಿಹಾಸವಿದೆ. ಬಹುಸಂಖ್ಯೆಯ ನಿಘಂಟುಗಳು ಒಂದಾನೊಂದು ಭಾಷೆಯ ಹೆಚ್ಚಿನ ಶಬ್ದಗಳನ್ನು ಒಂದೆಡೆ ಪರಿಚಯ ಮಾಡಿಕೊಡುವ ಉದ್ದೇಶದವು. ಆದರೆ ಒಂದೊಂದು ಜ್ಞಾನಾಂಗವೂ ಅತ್ಯಂತ ವಿಸ್ತಾರವೂ ಸಂಕೀರ್ಣವೂ ಆಗಿರುವುದರಿಂದ ಆಯಾ ಜ್ಞಾನಾಂಗಕ್ಕೇ ವಿಶೇಷವಾದ ಪರಿಭಾಷೆ ಬೆಳೆದಿರುತ್ತದೆ. ಇಂತಹ ಎಲ್ಲ ಪಾರಿಭಾಷಿಕ ಶಬ್ದಗಳನ್ನೂ ಸಾಮಾನ್ಯ ನಿಘಂಟುವಿನಲ್ಲಿ ಅಳವಡಿಸುವುದು ದುಃಸಾಧ್ಯ. ಹಾಗೆ ಮಾಡಿದಲ್ಲಿ ನಿಘಂಟುವಿನ ಮೂಲೋದ್ದೇಶವಾದ ಸಾರ್ವಜನಿಕ ಉಪಯುಕ್ತತೆಗೆ ಭಂಗ ಬರಲೂಬಹುದು. ಹೀಗಾಗಿ ಸಾಮಾನ್ಯವರ್ಗದ ನಿಘಂಟುಗಳಲ್ಲಿ ಪ್ರತ್ಯೇಕ ಜ್ಞಾನಾಂಗಗಳಿಗೆ ಸಂಬಂಧಿಸಿದ ಪ್ರಮುಖವಾದ […]
Month : October-2015 Episode : Author : ಭಾಗ್ಯರೇಖಾ ದೇಶಪಾಂಡೆ ಭಾಗ್ಯರೇಖಾ ದೇಶಪಾಂಡೆ
Month : October-2015 Episode : Author :
ಒಂದು ದಟ್ಟವಾದ ಕಾಡಿನಲ್ಲಿ ಒಂದು ದೊಡ್ಡ ಹಾವು ವಾಸವಾಗಿತ್ತು. ಅದು ಪಕ್ಷಿಗಳ ಮೊಟ್ಟೆ, ಕಪ್ಪೆ ಹಾಗೂ ಹಲ್ಲಿ ಮುಂತಾದ ಸಣ್ಣಸಣ್ಣ ಜೀವಜಂತುಗಳನ್ನು ತಿಂದು ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿತ್ತು. ರಾತ್ರಿಯೆಲ್ಲ ಅದು ಆಹಾರಕ್ಕಾಗಿ ಕಾಡಿನಲ್ಲಿ ಅತ್ತಿತ್ತ ತಿರುಗಿ ಹುಡುಕಾಟ ನಡೆಸುತ್ತಿತ್ತು; ಮತ್ತು ಹಗಲಿನ ವೇಳೆಯಲ್ಲಿ ತನ್ನ ಬಿಲದ ಒಳಗೆ ಹೊಕ್ಕು ನಿದ್ರಿಸುತ್ತಿತ್ತು.
Month : October-2015 Episode : Author :
ಉಷ್ಟ್ರಾಸನ ಮತ್ತು ಧನುರಾಸನ ಇವುಗಳು ಪೃಷ್ಠ, ಭುಜ ಹಾಗೂ ಬೆನ್ನಿನ ಭಾಗದಲ್ಲಿ ಶೇಖರವಾಗಿರುವ ಕೊಬ್ಬನ್ನು ಬಹುಬೇಗ ಕರಗಿಸುತ್ತವೆ. ಇವು ಹಿಂದಕ್ಕೆ ಬಾಗಿ ಮಾಡುವ ಆಸನಗಳು. ಆದ್ದರಿಂದ ಆಸನದ ಸ್ಥಿತಿಗೆ ಹೋಗುವಾಗ ಉಸಿರನ್ನು ತೆಗೆದುಕೊಳ್ಳುತ್ತಾ ಹೋಗಬೇಕು ಮತ್ತು ಸ್ಥಿತಿಯಿಂದ ಮರಳುವಾಗ ಉಸಿರನ್ನು ಬಿಡುತ್ತಾ ಬರಬೇಕು. ಉಷ್ಟ್ರಾಸನ ಅಭ್ಯಾಸಕ್ರಮ ಮೊದಲಿಗೆ ಕಾಲುಗಳನ್ನು ಹಿಂದಕ್ಕೆ ಮಡಿಸಿಕೊಂಡು ಮಂಡಿಗಳ ಮೇಲೆ ನಿಂತುಕೊಳ್ಳಬೇಕು. ಮಂಡಿಗಳ ಮತ್ತು ಪಾದಗಳ ನಡುವಿನ ಅಂತರ ಸುಮಾರು ಅರ್ಧ ಅಡಿಯಷ್ಟು ಇರಬೇಕು. ಅನಂತರ ಎರಡೂ ಕೈಗಳನ್ನು ಮೇಲಕ್ಕೆತ್ತಿ ಸೊಂಟವನ್ನು ಮುಂದಕ್ಕೆ […]
Month : October-2015 Episode : Author :
ಉಡುಗೊರೆ ಕವಿತಾ: ರೀ…. ಮೊನ್ನೆ ರಕ್ಷಾಬಂಧನ ಹಬ್ಬಕ್ಕೆ ನಮ್ಮಣ್ಣನಿಗೆ ರಾಖಿ ಕಟ್ಟಿದ್ದಕ್ಕೆ ೧೦ ಗ್ರಾಂ ಚಿನ್ನ ಕೊಡಿಸಿದ ಗೊತ್ತೇನ್ರಿ! ಸವಿತಾ: ಅಯ್ಯೋ ಅದೇನ್ ಮಹಾ ಬಿಡ್ರಿ, ನಾನು ರಾಖಿ ಕಟ್ಟಿದ್ದಕ್ಕೆ ನನ್ನ ತಮ್ಮ ೧೦ ಮೂಟೆ ಈರುಳ್ಳಿ ಕಳ್ಸಿದಾನೆ! ಯೋಗ್ಯತೆ ಹುಡುಗಿ ತಂದೆ: ಹುಡುಗ ಏನ್ ಮಾಡಿಕೊಂಡಿದ್ದಾನೆ? ಪುರೋಹಿತರು: ಒಂದು ಹತ್ತು ಎಕರೆ ಈರುಳ್ಳಿ ಬೆಳೆಯೋ ಭೂಮಿ ಇದೆ… ಹುಡುಗಿ ತಂದೆ: ಹೌದಾ! ಮತ್ತೆ ಹೆಣ್ಣುತೋರಿಸೋ ಕಾರ್ಯಕ್ರಮ ಯಾವಾಗ ಇಟ್ಕೊಳ್ಳೋಣಾಂತೀರಾ!? ಸೇಫ್ಟಿಗೆ ರಾಯರು: ೨೦ ಕಿ.ಗ್ರಾಂ. ಈರುಳ್ಳಿ […]
Month : October-2015 Episode : Author : ಸತ್ಯಬೋಧ