
ಸಾಮಾನ್ಯವಾಗಿ ಪತ್ನಿಯಾದವಳು ಏನಾದರೂ ಸಲಹೆ ಕೊಡುವ ಪ್ರಯತ್ನ ಮಾಡಿದರೆ ‘ನಿನಗೇನು ಗೊತ್ತಾಗುತ್ತದೆ, ಬಾಯಿ ಮುಚ್ಚು’ ಎಂಬ ಭಂಡ ಉತ್ತರ ಕೊಡುವವರು ಇದ್ದೇ ಇರುತ್ತಾರೆ. ಅಮ್ಮಂದಿರು ಮಕ್ಕಳಿಗೇನಾದರೂ ತಿಳಿಯ ಹೇಳುವ ಪ್ರಯತ್ನ ಮಾಡಿದರೂ ‘ಅವಳಿಗೇನು ಗೊತ್ತಾದೀತು’ ಎಂದು ಅಮ್ಮನನ್ನು ಕೇವಲ ಮಾಡುವ ಅಪ್ಪಂದಿರೂ ಇಲ್ಲದಿಲ್ಲ. ಪರಸ್ಪರರನ್ನು ಗೌರವಿಸಿಕೊಂಡು ಬಾಳುವ ಮನೆಯ ಮಕ್ಕಳೂ ಅದನ್ನೇ ಕಲಿಯುತ್ತಾರೆ. ಅನಾದರವನ್ನೇ ಕಂಡು ಬೆಳೆದವರು ಮುಂದೆ ಸಂಗಾತಿಯಾದವರನ್ನು ಅವಗಣನೆ ಮಾಡುವುದನ್ನು ಕಲಿಯುತ್ತಾರೆ. ಕಟುಕ ಸಾಕಿದ ಗಿಣಿಗೂ ಋಷಿ ಸಾಕಿದ ಗಿಣಿಗೂ ವ್ಯತ್ಯಾಸವೇನೆಂದು ನಮಗೆ ತಿಳಿದೇ […]