ಉತ್ಥಾನ ಜುಲೈ 2026ರ ಸಂಚಿಕೆಯಲ್ಲಿ ಪ್ರಕಟಿತ ಪ್ರೇಮಶೇಖರ್ ಅವರ ನೀಳ್ಗತೆ ಭಾಗ-1
Month : June-2026 Episode : Author :
Month : February-2026 Episode : Author : ಜಿ.ವಿ. ಅರುಣ
“ಅಮ್ಮಾ…!’’ ಪಿಂಕಿ ಕಿರುಚಿದಾಗಲೇ ಅವಳ ಅಮ್ಮನಿಗೆ ಗಾಬರಿಯಾಗಿತ್ತು. ಅಡುಗೆಮನೆಯಿಂದ ಮಗಳು ಕುಳಿತು ಹೋಂವರ್ಕ್ ಮಾಡುತ್ತಿದ್ದ ಕೋಣೆಗೆ ಓಡಿದರು. ಆ ಕೋಣೆಯಲ್ಲಿ ಅವಳು ಜಿರಳೆಯನ್ನು ಏನಾದರೂ ನೋಡಿ ಕೂಗಿರಬಹುದು ಎಂಬ ಅನುಮಾನ. ಅದನ್ನು ಕಂಡರೆ ತನಗೆ ಪಿಂಕಿಗಿಂತ ಹೆಚ್ಚು ಭಯ; ಮನೆಯಲ್ಲಿ ಬೇರೆ ಇನ್ನು ಯಾರೂ ಇಲ್ಲ. ಪಿಂಕಿಯನ್ನು ಹೊರಗೆಳೆದು ಆ ಕೋಣೆಯ ಬಾಗಿಲು ಹಾಕಿಬಿಡಬೇಕು. ಅನಂತರ ಆ ಬಾಗಿಲ ಕೆಳಗಿನ ಸಂದಿಯಿಂದ ಜಿರಳೆ ಏನಾದರೂ ಹೊರಗೆ ಬಂದುಬಿಡುತ್ತದೆಯೇ ಎಂದು ನೋಡುತ್ತ ಕುಳಿತಿರಬೇಕು. ಪಿಂಕಿಯ ತಂದೆ ಮನೆಗೆ ಬರುವವರೆಗೆ […]
Month : December-2024 Episode : Author : ಕೆ.ವಿ. ರಾಜಲಕ್ಷ್ಮಿ
ನಮಗೂ ಬೇರೆ ಎಲ್ಲಿಂದ ದುಡ್ಡು ಬರುತ್ತೆ? ದೇಶದ ಹಬ್ಬ, ನಾಡ ಹಬ್ಬ ಮತ್ತು ಸಾರ್ವಜನಿಕವಾಗಿ ಗಣೇಶೋತ್ಸವ ಇವಕ್ಕೆ ಮಾತ್ರ ಸಮ್ಮ ಸಂಘದಿಂದ ಒಂದು ಸ್ವಲ್ಪ ಹಣ ತೆಗೆದಿಡೋದು. ಉಳಿದದ್ದೆಲ್ಲ ಫಂಡ್ ರೈಸ್ ಮಾಡೋದೇ, ಬಿಟ್ರೆ ಬೇರೆ ದಾರಿ ಇಲ್ಲ’ ಸುಮ್ಮನೆ ತಲೆಯಾಡಿಸಿದೆ. ‘ನಮ್ಮ ಏರಿಯಾ ಮುಖಂಡರು ಹೆಲ್ಪ್ ಮಾಡ್ತಾರೆ, ಇಲ್ಲಿನ ಸಣ್ಣ ಪುಟ್ಟ ಸಮಸ್ಯೆ ಅಂದರೆ ಅವರನ್ನೇ ಹಿಡಿಯಬೇಕಲ್ಲ? ಅದಕ್ಕೆ ಅವರಿಗೂ ಇಂಥ ಸಮಾರಂಭಗಳಿಗೆ ಆಹ್ವಾನ ಕೊಡ್ತೀವಿ. ಇವತ್ತು ಅವರೂ ಬರೋವ್ರಿದ್ದಾರೆ. ನಾನು ಹೂಂಗುಟ್ಟಿದೆ. ‘ಇನ್ನೊಂದು ಸ್ವಲ್ಪ […]
Month : December-2024 Episode : Author : ರಾಜಶ್ರೀ ಟಿ. ರೈ, ಪೆರ್ಲ
ಕಾಲದ ಶಿಖೆ ಹಿಡಿದು, ಸ್ವಲ್ಪ ವಿರಮಿಸಿ ನಡೆ ಎನ್ನಲು ಅದು ಕೈಗೆ ಸಿಗುತ್ತಾ? ದಿನ, ತಿಂಗಳು, ವರ್ಷ ಎಂದು ಅದು ಸಲೀಸಾಗಿ ಅಂಗನವಾಡಿ ಮಗುವಿನಂತೆ ಮುಂಬರುವುದನ್ನು ಗ್ರಹಿಸದೆ ಬಿರುಸಿನ ಹೊಸ ಹೆಜ್ಜೆ ಇಡುತ್ತಿರುವಾಗ ಪಟೇಲರ ಗಾಯ ಒಂದಿಷ್ಟು ಮಾಸಿತ್ತು. ಇನ್ನೂ ಹರೆಯ ಇಳಿಯದ ದೇಹ ಕಾಮನೆಯ ಕಾವಿಗೆ ಕರಗದೆ ಇದ್ದೀತೇ? ಮಗನ ಬಾಲಲೀಲೆಯಲ್ಲಿಯೇ ಪಟೇಲರು ಮೈಮರೆತರು ಎಂದು ಊರವರು ಅಂದುಕೊಂಡಿದ್ದರೆ ಕುಡುಕ ತ್ಯಾಂಪುವಿನ ಮಗಳು ವಿಧವೆ ಪಾರು ಜೊತೆ ಪಟೇಲರ ಒಡನಾಟದ ಸುದ್ದಿ ಊರ ಮಂದಿಯ ಮಾತಿನ […]
Month : December-2024 Episode : Author : ಸಂಪತ್ ಸಿರಿಮನೆ
ನಿಂಗ್ ಇಷ್ಟ ಇಲ್ದೇ ಇರೂದನ್ನ ಬಿಡುಕ್ಕಲ್ಲ ಬಂದಿರೋದು ಇಲ್ಲಿಗೆ. ನೀನ್ ತುಂಬಾ ಹಚ್ಕೊಂಡಿರೂದನ್ನ ಬಿಡ್ಬೇಕು, ಯಾವ್ದು ಇಲ್ದೇ ನೀನ್ ಬದುಕಕ್ಕಾಗಲ್ಲ ಅನ್ಕೊಂಡರ್ತೀಯೋ ಅದನ್ನ ಬಿಡ್ಬೇಕು, ಬೇಡದೇ ಇರೂದನ್ನ ಕೊಡೋದು ದಾನ ಅಲ್ಲ, ಬೇಕಾಗಿರೂದನ್ನ ಕೊಡ್ಬೇಕು, ಅದು ತ್ಯಾಗ. ಕಾಮ, ಕ್ರೋಧ, ಲೋಭ, ಮೋಹ ಇವನ್ನೆಲ ಬಿಡ್ಬೇಕು ಅನ್ನೋದು ಪದ್ಧತಿ, ಆದ್ರೆ ಇವತ್ತಿನ್ ಕಾಲದಲ್ಲಿ ಅದನ್ನೆಲ್ಲ ಬಿಟ್ಟು ಯಾವೋನ್ ಬದುಕ್ತಾನೆ, ಅದಕ್ಕೆ ಕೊನೇಪಕ್ಷ ಯಾವ್ದಾದ್ರೂ ಒಂದು ವಿಷಯಾನ ಬಿಡೂದು ಆಚಾರ. ನೀನ್ ಏನೂ ಬಿಡ್ದೇ ಇದ್ರೂ ರ್ವಾಗಿಲ್ಲ, ಆದ್ರೆ […]
Month : November-2024 Episode : Author : ಪೂರ್ಣಿಮಾ ರವಿ
ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಸೂರಜ್ ಶಾಪಿಂಗ್ ಅದೂ ಇದೂ ಅಂತ ಬ್ಯುಸಿ ಆದ. ಬರಬರುತ್ತ ಅನನ್ಯಳಿಗೆ ಮೆಸೇಜ್ ಮಾಡುವುದು, ಕಾಲ್ ಮಾಡುವುದು ಕಡಮೆಯಾಯಿತು. ಇದರಿಂದ ಅನನ್ಯಳಿಗೆ ಏನೋ ಖಾಲಿ ಖಾಲಿ ಅನ್ನಿಸತೊಡಗಿತು. ಯಾವುದರಲ್ಲೂ ಮನಸ್ಸಿಲ್ಲ ತಾನು ಸೂರಜ್ನನ್ನು ಅಷ್ಟೊಂದು ಹಚ್ಚಿಕೊಂಡುಬಿಟ್ಟಿದ್ದೀನಾ ಅನ್ನೋ ಸಂದೇಹ ಕಾಡತೊಡಗಿತು. ಅವಳಿಗೇ ಅರಿವಿಲ್ಲದಂತೆ ಸೂರಜ್ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ಅವನನ್ನು ತಿರಸ್ಕರಿಸಿ ತಪ್ಪು ಮಾಡಿದೆ ಎನಿಸತೊಡಗಿತು. ಸೂರಜ್ಗೆ ಈಗಲೂ ನನ್ನ ಮೇಲೆ ಪ್ರೀತಿ ಇದೆ, ಅವನು ನನ್ನನ್ನು ಖಂಡಿತಾ ಒಪ್ಪಿಕೊಳ್ಳುತ್ತಾನೆ, ಅವನ […]
Month : November-2024 Episode : Author : ಜಯರಾಮಾಚಾರಿ
ಸದಾ ಯಾವುದಾದರೂ ಕನ್ನಡ ಕೆಲಸದಲ್ಲಿ ಬ್ಯುಸಿಯಾಗಿದ್ದ ವೀರಭದ್ರಪ್ಪನವರಿಗೆ ಸಂಘದ ಕೆಲಸಗಳಲ್ಲೂ ಕೂಡ ಪಾಲ್ಗೊಳ್ಳಬೇಕೆಂಬ ಆಸೆಯಿತ್ತು, ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಮತ್ತು ಅಧ್ಯಕ್ಷನ ಬಾಲವಾಗಿರುವ ಬಾಲನ ಕಿರಿಕಿರಿಗೆ ಸ್ವಲ್ಪ ದೂರವೇ ಉಳಿದಿದ್ದರು, ಎದುರು ಸಿಕ್ಕವರೆಲ್ಲ “ಏನ್ರಿ ಸಾಹಿತಿಗಳೇ ಯಾಕೆ ಸಂಘದಲ್ಲಿ ಜಾಸ್ತಿ ಇನ್ವಾಲ್ವ್ ಆಗ್ತಾ ಇಲ್ವಂತೆ, ನಿಮ್ಮಂತೋರು ಆಗಬೇಕು ಕಣ್ರೀ, ಅಲ್ಲಿರೋರಿಗಂತೂ ಎದೆ ಸಿಗುದ್ರೆ ನಾಲಕ್ ಅಕ್ಷರ ಇಲ್ಲ, ಆ ರಮಾಕಾಂತ ಮುಂದಿನ ಸಲ ವೆಲ್ಫೇರ್ ಅಸೋಸಿಯೇಷನ್ಗೆ ನಿಲ್ತಾನೆ ಅದಕ್ಕೆ ಹೆಸರು ಮಾಡಕ್ಕೆ ದುಡ್ಡು ಮಾಡ್ಕಳ್ಲಕ್ಕೇ ಕನ್ನಡಸಂಘಕ್ಕೆ ಬಂದಿರೋದು, […]
Month : November-2024 Episode : Author : ಡಾ. ಬಿ. ಜನಾರ್ದನ ಭಟ್
ಡೀಗೋ ಮತ್ತು ಸಂಗಡಿಗರು ಮಲಪು ತೀರದಿಂದ ಯಾರೋ ಒಬ್ಬನನ್ನು ಎತ್ತಿಹಾಕಿಕೊಂಡು ಬರುತ್ತಿರುವುದನ್ನು ದೂರದಿಂದಲೇ ದುರ್ಬೀನು ಇಟ್ಟುಕೊಂಡು ನೋಡುತ್ತಿದ್ದ ನಾವಿಕರು ಮಸ್ಕರೇನ್ಯಾಸನಿಗೆ ತಿಳಿಸಿದ್ದರು. ಹಾಗಾಗಿ ಅವನೂ ಕುತೂಹಲದಿಂದಲೇ ದೋಣಿಯ ಆಗಮನವನ್ನು ನಿರೀಕ್ಷಿಸುತ್ತಿದ್ದ. ದೋಣಿ ಹಡಗಿನ ಪಕ್ಕಕ್ಕೆ ಬಂದು ಅದರಲ್ಲಿದ್ದವರೆಲ್ಲ ಹಡಗಿಗೆ ಹತ್ತಿದಾಗ ವಿಜಯಧ್ವಜ ಸ್ವಾಮಿಗಳನ್ನು ಕೂಡ ಹಡಗಿನ ಅಟ್ಟಕ್ಕೆ ಹತ್ತಿಸಿದರು. ಸ್ವಾಮಿಗಳು ಕೋಪ, ಭಯ ಹಾಗೂ ಆತಂಕಗಳಿಂದ ಏದುಸಿರುಬಿಡುತ್ತಿದ್ದರು. ದೇವರು ಇದು ಯಾವ ಪರೀಕ್ಷೆಯನ್ನು ತಮಗಾಗಿ ಏರ್ಪಡಿಸಿದ್ದಾನೆಂದು ಅವರಿಗೆ ತಿಳಿಯಲಿಲ್ಲ. ಅಥವಾ ಯಾವ ತಪ್ಪಿಗಾಗಿ ಈ ಶಿಕ್ಷೆ ತನಗೆ […]
Month : October-2024 Episode : Author : ಮೇದಿನಿ ಕೆಸವಿನಮನೆ
ಜನರ ಮಾತಿಗೇಕೆ ಬೆಲೆ ಕೊಡುವುದು? ಹೇಗೂ ನಾವೀಗ ಅರಮನೆಯಲ್ಲಿ ಇಲ್ಲ. ಇರುವುದು ಈ ಆಶ್ರಮದಲ್ಲಿ. ವೃದ್ಧ ಗಂಡನಿಗೆ ಕಣ್ಣಾಗಿ, ಅವನ ಶುಷ್ರೂಷೆ ಮಾಡುತ್ತ ದಿನಕಳೆಯುವುದೇ ನನ್ನ ಕಾಯಕ. ಅದರಿಂದಾದರೂ ನಾನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಲಿ. ಯಾರಿಗೂ ತೊಂದರೆ ಕೊಡಬಾರದು, ಎಲ್ಲರನ್ನೂ ಗೌರವಿಸುತ್ತ, ಕಾಳಜಿ ಮಾಡುತ್ತ ಬದುಕಬೇಕೆಂದು ಪಿತಾಶ್ರೀ, ಮಾತೃಶ್ರೀ ನನಗೆ ಬಾಲ್ಯದಿಂದಲೂ ಕಲಿಸಿದ್ದು ಸಾರ್ಥಕವಾಯಿತು. ಹಾಗೆಯೇ ಬದುಕಲು ತೊಡಗಿದ್ದೆ. ಮದುವೆಯೆಂಬುದು ಒಬ್ಬೊಬ್ಬರಿಗೆ ಒಂದೊಂದು ಭಾವವನ್ನು ತರುತ್ತದೆಯಂತೆ. ಸಂಗಾತಿ ದೊರೆಯುವ ಖುಷಿ, ಕಷ್ಟ ಸುಖ ಸಾಂಗತ್ಯಕ್ಕೆ ಜೊತೆಗಾರರೊಬ್ಬರು ಸಿಗುವ […]
Month : October-2024 Episode : Author :
ಇತಿಹಾಸದ ಅದೆಷ್ಟು ಅಮೂಲ್ಯ ದಾಖಲೆಗಳ ಅರಿವಿಲ್ಲದೆ ಆ ಕಲ್ಲುಗಳ ಮೇಲೆಯೇ ನಮ್ಮ ಜನ ಬಟ್ಟೆ ತೊಳೆಯುತ್ತಿಲ್ಲವೆ? ದೇವಸ್ಥಾನಗಳ ಅಪರೂಪದ ಶಿಲ್ಪಗಳನ್ನು ಹಾಳುಮಾಡಿಲ್ಲವೆ? ಸಾವಿರಾರು ವರ್ಷಗಳ ಪುರಾತನ ಗೋಡೆಗಳ ಮೇಲೆ ‘ಶಿಲ್ಪಾ ಲವ್ ಶಿವಣ್ಣ’ ಎಂದು ತಮ್ಮ ಅಮರಪ್ರೇಮವನ್ನು ಕೆತ್ತಿ ಅವುಗಳನ್ನು ಹಾಳುಮಾಡಿಲ್ಲವೆ ಎಂದುಕೊಳುತ್ತಾ… “ಪುಣ್ಯಕ್ಕೆ ಸುಣ್ಣ ಅಷ್ಟೇ ಬಳಿದಿದ್ದಾರೆ, ಗುಡಿಯ ಕಲ್ಲನ್ನು ಕಿತ್ತುಹಾಕ್ಕೊಂಡ್ಹೋಗಿ ಮನೆಗೆ ಹಾಸುಗಲ್ಲೊ, ಬುನಾದಿಗೋ ಹಾಕಿಲ್ಲವಲ್ಲ ಸಾರ್, ಅದಕ್ಕೆ ಖುಷಿಪಡಿ” ಎಂದ ಕೆಂಪರಾಜು. ಕರ್ಣನೂ ವಿಷಾದದ ನಗೆ ನಕ್ಕ. ಈ ಜಗತ್ತಿನಲ್ಲಿರೋ ಜನರಿಗೆಲ್ಲ ದುಡ್ಡು […]