ದೇಶಭಕ್ತಿ ಮತ್ತು ರಾಷ್ಟ್ರೀಯತೆ ಎರಡೂ ಹೆಚ್ಚುಕಡಮೆ ಒಂದೇ ಎಂಬುದು ಒಂದು ವಾದ. ಕೆಲವು ಅನುಭವಗಳು ಇವೆರಡರ ನಡುವಿನ ವ್ಯತ್ಯಾಸವನ್ನು ಶ್ರುತಪಡಿಸಬಲ್ಲವು. ಈಚೆಗೆ ಒಮ್ಮೆ, ಸಾಹಿತ್ಯ ಸಂಬಂಧಿತ ಕಾರ್ಯಕ್ರಮವೊಂದಕ್ಕೆ ಕರ್ನಾಟಕದ ಕೆಲವರು ಮಧ್ಯಪ್ರದೇಶದ ರೇವಾಕ್ಕೆ ಹೋಗಿದ್ದರು. ಹೋದವರಲ್ಲಿ ಅರವತ್ತು ದಾಟಿದ ಪ್ರೌಢರ ಸಂಖ್ಯೆಯೇ ಅಧಿಕ. ಅಲ್ಲಿಯ ಒಂದು ಪತ್ರಿಕೋದ್ಯಮ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಸತಿವ್ಯವಸ್ಥೆಯನ್ನು ಮಾಡಿದ್ದರು. ಅದೊಂದು ಸಾಮೂಹಿಕ ಸರಳ ವ್ಯವಸ್ಥೆ. ಹೆಚ್ಚಿನ ವ್ಯವಸ್ಥೆಯ ಅಪೇಕ್ಷೆಯಿರುವವರು ತಾವೇ ಖಾಸಗಿಯಾಗಿ ವಸತಿವ್ಯವಸ್ಥೆಯನ್ನು ಮಾಡಿಕೊಳ್ಳಬಹುದು ಎಂದೂ ಸಂಘಟಕರು ಮುಂಚೆಯೇ ತಿಳಿಸಿದ್ದರು. ಅಲ್ಲಿಯ ವ್ಯವಸ್ಥೆಯನ್ನು […]
ದೈಶಿಕ ಗಡಿಯ ಮೀರಿ
Month : February-2026 Episode : Author : ನಾರಾಯಣ ಶೇವಿರೆ










