
‘ಒಬ್ಬ ಕವಿ ಗೌರವಿಸಬಹುದಾದ ಸಂಗೀತದ ಬಗೆ ಇದ್ದರೆ ಅದು ಸುಗಮ ಸಂಗೀತ’ ಎಂದು ಶ್ಲಾಘಿಸುವ ಭಟ್ಟರು ಸಂಗೀತ ಹುಟ್ಟುವುದೇ ಕವಿತೆಯ ದರ್ಶನದಿಂದ ಎಂದಿದ್ದಾರೆ. ಯಾರೋ ಒಬ್ಬರು ಪಂಡಿತರು ಒಮ್ಮೆ ಇದನ್ನು ಲೈಟ್ ಮ್ಯೂಸಿಕ್ ಎಂದಾಗ ಅಲ್ಲಿದ್ದ ಬಾಲಮುರಳಿಕೃಷ್ಣ ಅವರು, ‘Light music is the music that gives you light’ ಎಂದು ತಿದ್ದಿದ್ದರಂತೆ. ಕವಿ ಪುತಿನ ಅವರು ಒಂದು ವಿಚಾರಸಂಕಿರಣದಲ್ಲಿ “ಸುಗಮಸಂಗೀತ ಲಘುನೆಲೆಯದು ಎಂಬ ಭಾವನೆ ಅನೇಕ ಸಂಗೀತ ವಿದ್ವಾಂಸರಲ್ಲಿದೆ; ಶಾಸ್ತ್ರೀಯ ಸಂಗೀತ ಡಿಗ್ರಿಯಾದರೆ ಸುಗಮಸಂಗೀತ […]