
ಒಂದು ಕಣ್ಣು ಕಣ್ಣಲ್ಲ, ಒಂದು ಮಗು ಮಗುವಲ್ಲ ಎನ್ನುವುದು ನಮ್ಮ ಕಾಲದ ಗಾದೆಯಾದರೆ ‘ಮಗುವೆಂದರೇ ಹೊರೆ, ಎರಡಾದರೆ ಗಾಯದ ಮೇಲೆ ಬರೆ’ ಎನ್ನುವುದು ಈಗಿನವರ ಉದ್ಗಾರ. ಮಗು ಆಗುವುದೇ ಅಪರೂಪ ಎಂದಿರುವಾಗ ಒಡಹುಟ್ಟಿದವರೊಡನೆ ಒಡನಾಡುವ ಭಾಗ್ಯವಾದರೂ ಎಲ್ಲಿ? ಕುಟುಂಬದ ಜ್ಯೋತಿಯಂತೆ ಮಗಳು. ಆಕೆ ಆ ಮನೆಯ ಸಂಪ್ರದಾಯ, ಪರಂಪರೆ ಸಂಸ್ಕೃತಿಗಳನ್ನೆಲ್ಲ ಅಮ್ಮನಿಂದ ಕಲಿಯುತ್ತಾಳೆ. ತನ್ನಮ್ಮ ಅದೆಷ್ಟು ಜಾಣ್ಮೆಯಿಂದ ಗೃಹಕೃತ್ಯಗಳನ್ನು ನಿಭಾಯಿಸುತ್ತಾಳೆ ಎಂಬುದನ್ನು ಗಮನಿಸುತ್ತಿರುವ ಹುಡುಗಿಯ ಒಳಗಿರುವ ‘ಅಮ್ಮ’ ಸಕಾಲದಲ್ಲಿ, ಸಂದರ್ಭೋಚಿತವಾಗಿ ಎಚ್ಚೆತ್ತುಕೊಳ್ಳುತ್ತಾಳೆ. ಈ ಮನೆಯ ಅಕ್ಕ ಮುಂದೆ […]