
ರಾತ್ರಿಯಾವರಿಸಿತು. ಚಂದ್ರನೂ ಕಾಣುತ್ತಿರಲಿಲ್ಲ. ಮುಂದೆ ಏನೆಂಬುದು ರಾಜನಿಗೆ ಕಾಣದಷ್ಟು ಕಗ್ಗತ್ತಲು. ಕುದುರೆ ತನ್ನನ್ನು ಖಂಡಿತ ಕಾಡಿನಿಂದ ಹೊರಗೆ ಕರೆದೊಯ್ಯುತ್ತದೆ ಎಂದು ಯೋಚಿಸಿದ. ಅದು ಹಾಗೂ–ಹೀಗೂ ಕೊನೆಗೆ ಕಾಡಿನಿಂದಾಚೆ ಬಂದಿತು. ಸುತ್ತಲೂ ನೋಡಿದ. ಅಕ್ಕಪಕ್ಕ ಯಾವುದೇ ಹಳ್ಳಿಯ ಸುಳಿವಿರಲಿಲ್ಲ. ಆಕಾಶವೆಲ್ಲ ಮೋಡದಿಂದ ಮುಸುಕಿತ್ತು. ಮಳೆ ಸುರಿಯಲಾರಂಭಿಸಿತು. ಇಂದು ಅರಮನೆಗೆ ಹಿಂತಿರುಗಲಾರೆ ಎಂದು ಚಿಂತೆ ಹತ್ತಿತು. ಇಲ್ಲೇ ಯಾವುದಾದರೂ ಹಳ್ಳಿಯಲ್ಲಿ ತಂಗುವುದೆAದು ತರ‍್ಮಾನಿಸಿದ. ಆದರೆ ಹಳ್ಳಿ ಯಾವ ದಿಕ್ಕಿಗಿದೆ ಎನ್ನುವುದು ತಿಳಿಯಲಿಲ್ಲ. ಕುದುರೆ ಮುಂದೆ ಹೋಗುತ್ತಲೇ ಇತ್ತು. ಬಹಳ ವರ್ಷಗಳ […]