ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫೆಬ್ರವರಿ 2023 > ರಾಜನೂ ಭಿಕ್ಷುಕನೇ!

ರಾಜನೂ ಭಿಕ್ಷುಕನೇ!

ರಾತ್ರಿಯಾವರಿಸಿತು. ಚಂದ್ರನೂ ಕಾಣುತ್ತಿರಲಿಲ್ಲ. ಮುಂದೆ ಏನೆಂಬುದು ರಾಜನಿಗೆ ಕಾಣದಷ್ಟು ಕಗ್ಗತ್ತಲು. ಕುದುರೆ ತನ್ನನ್ನು ಖಂಡಿತ ಕಾಡಿನಿಂದ ಹೊರಗೆ ಕರೆದೊಯ್ಯುತ್ತದೆ ಎಂದು ಯೋಚಿಸಿದ. ಅದು ಹಾಗೂಹೀಗೂ ಕೊನೆಗೆ ಕಾಡಿನಿಂದಾಚೆ ಬಂದಿತು. ಸುತ್ತಲೂ ನೋಡಿದ. ಅಕ್ಕಪಕ್ಕ ಯಾವುದೇ ಹಳ್ಳಿಯ ಸುಳಿವಿರಲಿಲ್ಲ. ಆಕಾಶವೆಲ್ಲ ಮೋಡದಿಂದ ಮುಸುಕಿತ್ತು. ಮಳೆ ಸುರಿಯಲಾರಂಭಿಸಿತು. ಇಂದು ಅರಮನೆಗೆ ಹಿಂತಿರುಗಲಾರೆ ಎಂದು ಚಿಂತೆ ಹತ್ತಿತು. ಇಲ್ಲೇ ಯಾವುದಾದರೂ ಹಳ್ಳಿಯಲ್ಲಿ ತಂಗುವುದೆAದು ತರ್ಮಾನಿಸಿದ. ಆದರೆ ಹಳ್ಳಿ ಯಾವ ದಿಕ್ಕಿಗಿದೆ ಎನ್ನುವುದು ತಿಳಿಯಲಿಲ್ಲ. ಕುದುರೆ ಮುಂದೆ ಹೋಗುತ್ತಲೇ ಇತ್ತು.

ಬಹಳ ವರ್ಷಗಳ ಹಿಂದೆ ಅನೂಪ್‌ಸಿಂಹನೆಂಬ ರಾಜನಿದ್ದ. ಅವನು ಅನೂಪ್ ನಗರದ ಅರಸು. ಅವನಿಗೆ ಅನೇಕ ಅರಮನೆಗಳಿದ್ದವು. ಲೆಕ್ಕವಿಲ್ಲದಷ್ಟು ನೌಕರರು-ಚಾಕರರು. ಆದರೆ ಅವನಿಗೆ ಸಂತೋಷ-ಖುಷಿ ಇರಲಿಲ್ಲ. ಅವನು ದೊಡ್ಡ ಸೈನ್ಯವನ್ನೂ ಹೊಂದಿದ್ದ. ಅಕ್ಕಪಕ್ಕದ ರಾಜ್ಯಗಳ ಮೇಲೆ ದಾಳಿ ಮಾಡುತ್ತಿದ್ದ. ಅವುಗಳನ್ನು ಗೆದ್ದು ತನ್ನ ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿದ್ದ. ರಾಜನಿಗೆ ಬೇಟೆಯಾಡುವ ಹವ್ಯಾಸವಿತ್ತು. ಒಂದು ದಿನ ಬೇಟೆಯಾಡಲು ಕಾಡಿಗೆ ಹೋದ. ಅನೇಕ ಮಂದಿ ಸೇವಕರೂ ಹೊರಟರು. ಕಾಡು ಬಹಳ ದೂರವಿತ್ತು. ಎಲ್ಲರೂ ಚುರುಕಾದ ಕುದುರೆಗಳನ್ನೇರಿದರು.

ಎಲ್ಲರೂ ಕಾಡು ಸೇರುವ ವೇಳೆಗೆ ಬೆಳಗಾಗಿತ್ತು. ಬೇಟೆಯ ಹುಡುಕಾಟದಲ್ಲಿ ಎಲ್ಲರೂ ಕಾಡಿನಲ್ಲಿ ಸುತ್ತಾಡುತ್ತಿದ್ದರು. ಉಹುಂ, ಒಂದು ಬೇಟೆಯೂ ಸಿಗಲಿಲ್ಲ. ಇಷ್ಟರಲ್ಲಿ ರಾಜನ ಕಣ್ಣಿಗೆ ಜಿಂಕೆಯೊಂದು ಬಿದ್ದಿತು. ಅದನ್ನು ಆತ ಹಿಂಬಾಲಿಸಿದ. ಅದು ನಾಗಾಲೋಟದಿಂದ ಓಡಿತು. ರಾಜ ಕುದುರೆಯನ್ನು ಕೆಣಕಿದ. ಜಿಂಕೆಯನ್ನು ಹಿಂಬಾಲಿಸಿಕೊಂಡು ಓಡತೊಡಗಿತು. ಬಹಳ ದೂರದವರೆಗೆ ರಾಜ ಹಿಂಬಾಲಿಸಿದರೂ ಜಿಂಕೆ ಅದೆಲ್ಲೋ ಕಣ್ಣಿಗೆ ಕಾಣದಾಯಿತು. ರಾಜನಿಗೆ ಬೇಸರವಾಯಿತು. ಬಹಳ ಆಯಾಸಗೊಂಡ. ಅವನ (ಹಿಂಬಾಲಕರು) ಜೊತೆಗಾರರು ಬಹಳ ಹಿಂದೆ ಇದ್ದರು. ರಾಜನಿಗೆ ದಾರಿತಪ್ಪಿತು. ಜೋರಾಗಿ ಜೊತೆಗಾರರನ್ನು ಕೂಗಿದ. ಆದರೆ ಯಾರೂ ಉತ್ತರಿಸಲಿಲ್ಲ. ರಾಜ ಒಬ್ಬನೇ ಬಹಳ ಹೊತ್ತಿನವರೆಗೆ ಅಡ್ಡಾಡಿದ. ಹಗಲು ಕಳೆದು ಕತ್ತಲಾವರಿಸತೊಡಗಿತು. ರಾಜನಿಗೆ ಗಾಬರಿಯಾಯಿತು. ರಾತ್ರಿಯಾಗುವ ವೇಳೆಗೆ ಕಾಡಿನಿಂದ ಹೊರಹೋಗಲು ಬಯಸಿದ್ದ. ಕುದುರೆಯನ್ನು ಅಟ್ಟಿದ. ಅದೂ ಸಹ ಆಯಾಸದಿಂದ ಹೆಜ್ಜೆ ಹಾಕುತ್ತಿತ್ತು.

ರಾತ್ರಿಯಾವರಿಸಿತು. ಚಂದ್ರನೂ ಕಾಣುತ್ತಿರಲಿಲ್ಲ. ಮುಂದೆ ಏನೆಂಬುದು ರಾಜನಿಗೆ ಕಾಣದಷ್ಟು ಕಗ್ಗತ್ತಲು. ಕುದುರೆ ತನ್ನನ್ನು ಖಂಡಿತ ಕಾಡಿನಿಂದ ಹೊರಗೆ ಕರೆದೊಯ್ಯುತ್ತದೆ ಎಂದು ಯೋಚಿಸಿದ. ಅದು ಹಾಗೂ-ಹೀಗೂ ಕೊನೆಗೆ ಕಾಡಿನಿಂದಾಚೆ ಬಂದಿತು. ಸುತ್ತಲೂ ನೋಡಿದ. ಅಕ್ಕಪಕ್ಕ ಯಾವುದೇ ಹಳ್ಳಿಯ ಸುಳಿವಿರಲಿಲ್ಲ. ಆಕಾಶವೆಲ್ಲಾ ಮೋಡದಿಂದ ಮುಸುಕಿತ್ತು. ಮಳೆ ಸುರಿಯಲಾರಂಭಿಸಿತು. ಇಂದು ಅರಮನೆಗೆ ಹಿಂತಿರುಗಲಾರೆ ಎಂದು ಚಿಂತೆ ಹತ್ತಿತು. ಇಲ್ಲೇ ಯಾವುದಾದರೂ ಹಳ್ಳಿಯಲ್ಲಿ ತಂಗುವುದೆಂದು ತರ‍್ಮಾನಿಸಿದ. ಆದರೆ ಹಳ್ಳಿ ಯಾವ ದಿಕ್ಕಿಗಿದೇ ಎನ್ನುವುದು ತಿಳಿಯಲಿಲ್ಲ. ಕುದುರೆ ಮುಂದೆ ಹೋಗುತ್ತಲೇ ಇತ್ತು.

ಅಕಸ್ಮಾತ್ ರಾಜನಿಗೆ ದೂರದಲ್ಲಿ ಬೆಳಕು ಕಂಡಿತು. ಆ ಬೆಳಕಿನತ್ತಲೇ ಹೋದ. ಅಲ್ಲೊಂದು ಹಳ್ಳಿ ಕಂಡಿತು. ಹಳ್ಳಿಯ ಮೊದಲ ಮನೆಯ ಮುಂದೆಯೇ ಕುದುರೆಯಿಂದ ಇಳಿದ. ಬಾಗಿಲು ಶಬ್ದ ಮಾಡಿದ. ಮನೆಯೊಳಗಿನಿಂದ ಯಾರೋ – ‘ಯಾರು?’ ಕೇಳಿದರು.

ಅದಕ್ಕೆ ರಾಜ: “ಪ್ರವಾಸಿಗ, ರಾತ್ರಿ ತಂಗಲು ಸ್ಥಳ ಬೇಕಿದೆ” ಎಂದ. ಅದೊಂದು ರೈತನ ಮನೆ. ರೈತನ ಹೆಂಡತಿ ಬಾಗಿಲು ತೆರೆದಳು. ರಾಜನನ್ನು ಒಳಗೆ ಕರೆದಳು. ರೈತ ರ‍್ಯಾದೆಯಿಂದ ರಾಜನನ್ನು: ‘ಇದು ನಿಮ್ಮ ಮನೆಯೆಂದೇ ಭಾವಿಸಿ. ಆರಾಮವಾಗಿರಿ. ನಮ್ಮ ಮನೆಗೆ ಅತಿಥಿಗಳು ಬರೋದು ನಮ್ಮ ಅದೃಷ್ಟವೇ ಸರಿ’ ಎಂದು ಹೇಳಿದ.

ತಾನು ರಾಜನೆಂದು ಅವರಿಗೆ ಹೇಳಲಿಲ್ಲ. “ನಾನು ರಾಜನ ದೂತ. ಬಹಳ ದೂರದಿಂದ ಬಂದಿದ್ದೇನೆ. ನಗರಕ್ಕೆ ಹೋಗುತ್ತಿದ್ದೆ. ದಾರಿಯಲ್ಲಿ ಕತ್ತಲಾಯಿತು. ಮಳೆ ಬೇರೆ ಸುರಿಯತೊಡಗಿತು. ಹಾಗಾಗಿ ಇಲ್ಲಿರಬೇಕಾಯಿತು” ಎಂದು ಒಪ್ಪಿಸಿದ. ಅದಕ್ಕೆ ಆ ರೈತ- ‘ಮನೆಗೆ ಬಂದ ಅತಿಥಿ ದೇವರಿದ್ದಂತೆ. ದೂತನಾಗಿರಲಿ ಇಲ್ಲ ರಾಜನಾಗಿರಲಿ. ನಾವು ಪ್ರಾಮಾಣಿಕವಾಗಿ ತಮ್ಮ ಸೇವೆ ಮಾಡುತ್ತೇವೆ’ ಎಂದ.

ರೈತ ರಾಜನಿಗೆ ಬದಲಿಸಲು ಬಟ್ಟೆ ಕೊಟ್ಟ: “ಒದ್ದೆ ಬಟ್ಟೆ ಬದಲಿಸಿ ಇದನ್ನು ಉಟ್ಕೊಳ್ಳಿ. ನನ್ನ ಹೆಂಡತಿ ಈಗ ಅಡುಗೆ ಮಾಡ್ತಾಳೆ. ನಾನು ಅದುವರೆಗೆ ನಿಮ್ಮ ಕುದುರೆ ಗಮನಿಸ್ತೇನೆ” ಎಂದು ಹೇಳಿದ. ರೈತನ ಹೆಂಡತಿ ಬೇಗ ಅಡುಗೆ ಮಾಡಿದಳು. ಸಾಮಾನ್ಯವಾದ ಅಡುಗೆ. ಆದರೆ ರಾಜನಿಗೆ ವಿಪರೀತ ಹಸಿವು. ಆ ಸಾಮಾನ್ಯ ಊಟದಿಂದಲೇ ರಾಜನಿಗೆ ಖುಷಿಯೋ ಖುಷಿ. ರೈತ ಅತಿಥಿಗಳಿಗೆ ಹಾಸಿಗೆ ಹಾಸಿದ. ರಾಜ ಮಲಗುತ್ತಿದ್ದಂತೆಯೇ ನಿದ್ದೆ ಹತ್ತಿತು.

ರಾಜ ಬೆಳಗ್ಗೆ ಏಳುವಷ್ಟರಲ್ಲಿ ರೈತ ಮತ್ತು ಅವನ ಹೆಂಡತಿ ಎದ್ದಿದ್ದರು. ರಾಜನಿಗೆ ಹಣ್ಣು, ಬಿಸಿ ಹಾಲು ತಂದರು. ರೈತನನ್ನು ಕಂಡು ರಾಜಸೈನಿಕರು ಹಾಗೂ ಸೇವಕರಿಗೆ ಆಜ್ಞೆ ಮಾಡಿದ: “ಕೇವಲ ರೈತನಿಗಷ್ಟೇ ಅಲ್ಲ, ಇಡೀ ಹಳ್ಳಿಯ ಜನರಿಗೆಲ್ಲ ಸಹಾಯ ಮಾಡಿ. ಕ್ಷಾಮದಿಂದ ಅವರು ಬಳಲಿದ್ದಾರೆ. ಅವರಿಗೆಲ್ಲ ಏನೇನು ಸಹಾಯಬೇಕೋ ತಕ್ಷಣ ಎಲ್ಲ ಏರ್ಪಾಡು ಮಾಡಿ” ಎಂದು ಘೋಷಿಸಿದ.(ಆಂಗ್ಲ ಲೇಖನದ ಸಾದರ: ಕಲ್ಯಾಣಿ ಮೂರ್ತಿ)

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ