
ಅಮೆರಿಕದ ನೆಲದಲ್ಲಿ ಭಾರತೀಯ ಚಿಗುರು
Month : May-2023 Episode : Author :
Month : May-2023 Episode : Author :
Month : February-2023 Episode : ಯೋಧರ ವೀರಗಾಥೆಗಳು Author : ಎಸ್. ಎಸ್. ನರೇಂದ್ರಕುಮಾರ್
ಮೇಜರ್ ಡೇವಿಡ್ ಮಣ್ಲೂನ್ ಅವರು ಮಣಿಪುರಕ್ಕೆ ಸೇರಿದವರು. ಅವರ ಕುಟುಂಬ ನೆಲಸಿದ್ದು ಮೇಘಾಲಯದ ರಾಜಧಾನಿ ಶಿಲ್ಲಾಂಗ್ನಲ್ಲಿ. ಡೇವಿಡ್ ಅವರ ತಂದೆ ಮಣ್ಲೂನ್ ಖಮ್ಜಲಮ್ ಅವರೂ ಭಾರತೀಯ ಸೈನ್ಯದಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಸೈನಿಕ ತರಬೇತಿ ಪಡೆದ ಡೇವಿಡ್ ಅವರು ಸೇರ್ಪಡೆಗೊಂಡಿದ್ದು ನಾಗಾ ರೆಜಿಮೆಂಟಿನ ಮೊದಲನೇ ಬೆಟಾಲಿಯನ್ಗೆ. ಪ್ರಾರಂಭದ ಐದು ವರ್ಷ ಉತ್ತರ ಕಾಶ್ಮೀರದಲ್ಲಿ ಕಾರ್ಯ ಮಾಡಿ ಅನುಭವ ಸಂಪಾದಿಸಿದ ಡೇವಿಡ್, ಮುಂದೆ ನಿಯುಕ್ತಿಗೊಂಡಿದ್ದು ಈಶಾನ್ಯ ಭಾರತದ ಉಗ್ರ ನಿಯಂತ್ರಣ ಕಾರ್ಯಾಚರಣೆಗೆ. ಇಲ್ಲಿ ಅನೇಕ ನಾಗಾ […]
Month : February-2023 Episode : Author : ಹರ್ಷವರ್ಧನ ವಿ. ಶೀಲವಂತ
ಪಕ್ಷಿಗಳ ದೇಹದ ಗಾತ್ರಕ್ಕೆ ಅನುಗುಣವಾಗಿ, ಅತ್ಯಂತ ಕಡಮೆ ತೂಕದ ಪುಟ್ಟ ಅಲ್ಯೂಮಿನಿಯಂನ ಸಂಕೇತಾಕ್ಷರ ಕೆತ್ತಿದ `ರಿಂಗ್’ ಮತ್ತು `ಟ್ಯಾಗ್’ ತೊಡಿಸಿ, ಎಲ್ಲಿಯೋ ಯಾರಿಗೋ ಈ ಹಕ್ಕಿ ಗೋಚರಿಸಿ, ನಮಗೆ ಚಿತ್ರಸಮೇತ ಸಂದೇಶ ಕಳುಹಿಸಿದಾಗ, ಆ ಪುಟ್ಟ ಹಕ್ಕಿಯ ವಲಸೆಯನ್ನು ವೈಜ್ಞಾನಿಕವಾಗಿ ಅಭ್ಯಸಿಸಲು ಸಾಧ್ಯ. ಥೇಟ್ ಪುಟ್ಟ ಶೀಷೆಯಲ್ಲಿ ಸಂದೇಶ ತೇಲಿಬಿಟ್ಟಂತೆ! ವಲಸೆ ಹಕ್ಕಿಗಳ ವಿಳಾಸ ಹುಡುಕುತ್ತ.. ಉಂಗುರಗಳ ತೊಟ್ಟ ರೆಕ್ಕೆಯ ಮಿತ್ರರ ಪಾದಾನ್ವೇಷಣೆ! ಹಕ್ಕಿಗಳ ಲೋಕದೊಳಗೆ, ರೆಕ್ಕೆ ಮೂಡುವುದೆನಗೆ; ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ! – […]
Month : February-2023 Episode : Author : ಸತ್ಯನಾರಾಯಣ ಶಾನಭಾಗ್
ಭಾರತದಿಂದ ಅನೇಕ ಸಂತರು ಮಹಾತ್ಮರು ಅಮೆರಿಕದ ನೆಲದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯ ಬೀಜಗಳನ್ನು ಬಿತ್ತಿದರು. ೧೯೦೨ರಲ್ಲಿ ಅಮೆರಿಕದಲ್ಲಿ ಕಾಲಿಟ್ಟ ಯುವ ಸಂತ ಸ್ವಾಮಿ ರಾಮತೀರ್ಥರು ಆನ್ವಯಿಕ ವೇದಾಂತದ ತತ್ತ್ವಗಳನ್ನು ಪ್ರಸಾರ ಮಾಡಿದರು. ಭಾರತೀಯ ವಿದ್ಯಾರ್ಥಿಗಳನ್ನು ಅಮೆರಿಕದ ವಿಶ್ವವಿದ್ಯಾಲಯಗಳಿಗೆ ಕರೆತರಲು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ಗಳನ್ನು ಸ್ಥಾಪಿಸಲು ಅವರು ವಿಶೇಷ ಪ್ರಯತ್ನ ಮಾಡಿದರು. ಆಮೇಲಿನ ಕಾಲಘಟ್ಟದಲ್ಲಿ ಪರಮಹಂಸ ಯೋಗಾನಂದ, ಪ್ರಸಿದ್ಧ ಬೀಟಲ್ ಮ್ಯೂಸಿಕ್ ಬ್ಯಾಂಡ್ನ ಮೇಲೆ ವಿಶೇಷ ಪ್ರಭಾವ ಬೀರಿದ್ದ ಮಹರ್ಷಿ ಮಹೇಶಯೋಗಿ, ಹರೇ ಕೃಷ್ಣ […]
Month : February-2023 Episode : Author : ಎಚ್ ಮಂಜುನಾಥ ಭಟ್
ಹಗಲಿಗಿಂತ ಮುಖ್ಯವಾಗಿ ನಿಶ್ಶಬ್ದ ರಾತ್ರಿಯಲ್ಲಿ ಜನಸಮುದಾಯದ ಪ್ರಜ್ಞೆಯನ್ನು ಆಳುವ ಯಕ್ಷಗಾನದ (ಕನ್ನಡದ) ನೆಲವೇ ಆಗಿದ್ದ ಕುಂಬಳೆ–ಕಾಸರಗೋಡು ಪರಿಸರದಿಂದ ಬಂದವರು ಸುಂದರರಾವ್. ತೆಂಕುತಿಟ್ಟು ಯಕ್ಷಗಾನಕ್ಕೆ ಈಗಲೂ ಆ ಭಾಗ ದೊಡ್ಡ ಸಂಖ್ಯೆಯಲ್ಲಿ ಕಲಾವಿದರನ್ನು ಒದಗಿಸುತ್ತಿದೆ. ಆದರೆ ಈಗ ಅಲ್ಲಿ ಭಾಷೆಯೊಂದಿಗೆ ಧರ್ಮೀಯ (ಮತೀಯ) ಆಕ್ರಮಣ ಕೂಡ ನಡೆಯುತ್ತಿದ್ದು, ಯಕ್ಷಗಾನದ ಪ್ರದರ್ಶನಗಳು ನಡೆಯುವುದು, ಆ ಮೂಲಕ ಪ್ರೇಕ್ಷಕ ವರ್ಗದ ಬೆಳವಣಿಗೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಬಲ್ಲ ಸ್ನೇಹಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಎಣೆಯಿಲ್ಲದ ಮಾತುಗಾರಿಕೆಯ ಮೂಲಕ ಯಕ್ಷಗಾನ, ತಾಳಮದ್ದಳೆಗಳ […]
Month : February-2023 Episode : Author : ಎಸ್.ಆರ್. ರಾಮಸ್ವಾಮಿ
ಕಳೆದ ಐದೂವರೆ ದಶಕಗಳಿಂದ ವಿಜಾಪುರದ ಜ್ಞಾನಯೋಗಾಶ್ರಮವನ್ನು ವಾಸ್ತವ್ಯವನ್ನಾಗಿಸಿಕೊಂಡಿದ್ದ ಸಿದ್ಧೇಶ್ವರಸ್ವಾಮಿಗಳು ತಮ್ಮ ಅಷ್ಟೂ ಸಮಯವನ್ನು ಧ್ಯಾನ, ಅಧ್ಯಯನ, ಚಿಂತನೆ, ಪ್ರವಚನಗಳಿಗೆ ವಿನಿಯೋಗಿಸುತ್ತಿದ್ದರು. ಸರಳಜೀವಿಯಾಗಿದ್ದ ಸ್ವಾಮಿಗಳು ಎಂದೂ ಯಾರಿಂದಲೂ ಏನನ್ನೂ ಸ್ವೀಕರಿಸದೆ ಸತತವೂ ಭಗವದ್ಭಾವದಲ್ಲಿ ಆತ್ಮಾರಾಮರಾಗಿರುತ್ತಿದ್ದುದು ಜನಜನಿತವೇ ಆಗಿತ್ತು. ಅವರಿಗಿದ್ದ ‘ಆಸ್ತಿ’ಯೆಂದರೆ ಅವರು ಸತತ ಅಧ್ಯಯನ–ಚಿಂತನೆಗಳಿಂದ ಗಳಿಸಿಕೊಂಡಿದ್ದ ಜ್ಞಾನರಾಶಿಯಷ್ಟೆ. “ಇಂಗ್ಲಿಷ್ ಬಾರದ ನಾನು ಹೆಚ್ಚು ಓದಿಕೊಳ್ಳಲಾಗಲಿಲ್ಲ. ನೀನಾದರೋ ಪ್ರತಿಭಾಶಾಲಿ. ಧಾರ್ಮಿಕತೆಯ ಸಂದೇಶವನ್ನು ನೀನು ಸಾಗರಗಳಾಚೆಗೂ ತಲಪಿಸಬೇಕು” ಎಂದಿದ್ದ ಗುರುಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಆದೇಶವನ್ನು ಸಿದ್ಧೇಶ್ವರಸ್ವಾಮಿಗಳು ಅನುಪಮವಾಗಿ ಈಡೇರಿಸಿದರು. ಅವರನ್ನು ‘ಶತಮಾನದ […]
Month : February-2023 Episode : Author :
ಪರಿಸರಸ್ವಾಸ್ಥ್ಯ ಕುಸಿಯುತ್ತಿರುವುದರಿಂದುಂಟಾಗುತ್ತಿರುವ ಸಮಸ್ಯೆಗಳ ಅರಿವು ಈಗ ಜಗತ್ತಿಗೆಲ್ಲ ಆಗಿದೆ. ಆದರೆ ಇದುವರೆಗೆ ಬಹುಮಟ್ಟಿಗೆ ಯಾರಾರನ್ನೋ ಕಾರಣವಾಗಿಸುವುದು, ಪರಿಹಾರವನ್ನು ತಾಂತ್ರಿಕತೆಗಳಲ್ಲಿ ಅರಸುವುದು ಮೊದಲಾದವೇ ನಡೆದಿವೆ. ಈಗಲಾದರೋ ಎಲ್ಲೆಡೆ ಹವಾಮಾನವೈಪರೀತ್ಯ, ಹಿಮನದಿಗಳು ಕರಗುತ್ತಿರುವುದು, ಸಮುದ್ರಮಟ್ಟ ಏರುತ್ತಿರುವುದು, ಅಕಾಲಿಕ ಮಳೆ, ಭೂಕುಸಿತ ಮೊದಲಾದ ವಿದ್ಯಮಾನಗಳು ಹಿಂದಿಗಿಂತ ಹೆಚ್ಚು ಆತಂಕವನ್ನು ಸೃಷ್ಟಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಳೆದ ವಿಶ್ವ ಪರಿಸರ ದಿನ (ಜೂನ್ ೫) ಮೊದಲಾದ ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಪ್ರವರ್ತಿಸುತ್ತ ಬಂದಿರುವ ‘ಮಿಷನ್ ಲೈಫ್’ ಸೂತ್ರಾವಳಿ ಎಲ್ಲರ ಚಿಂತನೆಗೂ ಅನುಷ್ಠಾನಕ್ಕೂ ಅರ್ಹವಾಗಿದೆ. […]
Month : February-2023 Episode : Author : ಬಿ.ಎನ್. ಶಶಿಕಿರಣ್
ಪೌರಾಣಿಕ ವಸ್ತುಗಳಲ್ಲಿ ವಿಸ್ತೃತ ಕಥನಕ್ಕೆ ಒಗ್ಗುವ ಸನ್ನಿವೇಶಗಳೆಂಬ ಋಕ್ಕುಗಳನ್ನು ಗ್ರಹಿಸಿ, ಅವನ್ನು ಸಾಮವಾಗಿ ಉಪಬೃಂಹಣ ಮಾಡಿ ರಸಮಯ ಕಾದಂಬರಿಗಳಾಗಿ ದೇವುಡು ರಚಿಸಿದ್ದಾರೆ. ಇದೇ ಒಂದು ಸಾಧನೆ. ಇದೊಂದು ಪ್ರಯೋಗವಾಗಿ ಮಾತ್ರ ಉಳಿಯದೆ ಮೊದಲ ಪ್ರಯತ್ನದಲ್ಲಿಯೇ ಸೀಮೋಲ್ಲಂಘನ ಮಾಡಿದುದು ವಿಸ್ಮಯವೇ ಸರಿ. ಇಂದಿಗೂ ಕೂಡ ಕನ್ನಡದಲ್ಲಿ ಮಾತ್ರವಲ್ಲ, ಇನ್ನಿತರ ಭಾರತೀಯ ಭಾಷೆಗಳಲ್ಲಿಯೂ ದೇವುಡು ಅವರ ಈ ನಿಟ್ಟಿನ ಕಾದಂಬರಿಗಳನ್ನು ಮೀರಿಸುವ ರಚನೆಗಳು ಬಂದಿಲ್ಲವೆಂದು ತಜ್ಞರು ಹೇಳುತ್ತಾರೆ. ದೇವುಡು ನರಸಿಂಹಶಾಸ್ತ್ರಿಗಳು ರಚಿಸಿದ ‘ಮಹಾಬ್ರಾಹ್ಮಣ,’ ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಎಂಬ ‘ಮಹಾತ್ರಯ’ದ […]
Month : February-2023 Episode : Author :
ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಲಸಃ | ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ || – ಭಗವದ್ಗೀತಾ, ೧೮:೨೮ “ಅಜಾಗರೂಕತೆ, ಸಂಸ್ಕಾರಹೀನತೆ, ಅವಿನಯ, ಶಠತೆ, ಕಾರ್ಯಶೀಲತೆ ಇಲ್ಲದಿರುವುದು, ಆಲಸ್ಯ, ನಿಷ್ಕಾರಣ ವಿಷಾದಪಡುವುದು, ದೀರ್ಘಸೂತ್ರತೆ – ಈ ಸ್ವಭಾವಗಳನ್ನು ಬೆಳೆಸಿಕೊಂಡವನು ‘ತಾಮಸ ಕರ್ತ’ನೆನಿಸುತ್ತಾನೆ.” ಆಗಬೇಕಾದ ಕೆಲಸಗಳಿಂದ ವಿಮುಖರಾಗುವುದು, ಕಲ್ಪಿತ ಕಾರಣಗಳನ್ನು ಮುಂದೊಡ್ಡಿ ನಿರ್ಣಯಗಳನ್ನು ಮುಂದಕ್ಕೆ ಹಾಕುವುದು, ಏನೋ ತೊಂದರೆಯಾಗುತ್ತದೆಂದು ಶಂಕೆಪಟ್ಟು ನಿಷ್ಕ್ರಿಯರಾಗಿರುವುದು – ಇಂತಹ ದೀರ್ಘಸೂತ್ರತೆಯು ವೈಯಕ್ತಿಕ ವಹಿವಾಟುಗಳಲ್ಲಿಯೂ ಸಾರ್ವಜನಿಕ ಕ್ಷೇತ್ರಗಳಲ್ಲಿಯೂ ಅದಕ್ಷತೆಯಲ್ಲಿ ಪರಿಣಮಿಸುತ್ತದೆ. […]
Month : February-2023 Episode : Author :
ರಾತ್ರಿಯಾವರಿಸಿತು. ಚಂದ್ರನೂ ಕಾಣುತ್ತಿರಲಿಲ್ಲ. ಮುಂದೆ ಏನೆಂಬುದು ರಾಜನಿಗೆ ಕಾಣದಷ್ಟು ಕಗ್ಗತ್ತಲು. ಕುದುರೆ ತನ್ನನ್ನು ಖಂಡಿತ ಕಾಡಿನಿಂದ ಹೊರಗೆ ಕರೆದೊಯ್ಯುತ್ತದೆ ಎಂದು ಯೋಚಿಸಿದ. ಅದು ಹಾಗೂ–ಹೀಗೂ ಕೊನೆಗೆ ಕಾಡಿನಿಂದಾಚೆ ಬಂದಿತು. ಸುತ್ತಲೂ ನೋಡಿದ. ಅಕ್ಕಪಕ್ಕ ಯಾವುದೇ ಹಳ್ಳಿಯ ಸುಳಿವಿರಲಿಲ್ಲ. ಆಕಾಶವೆಲ್ಲ ಮೋಡದಿಂದ ಮುಸುಕಿತ್ತು. ಮಳೆ ಸುರಿಯಲಾರಂಭಿಸಿತು. ಇಂದು ಅರಮನೆಗೆ ಹಿಂತಿರುಗಲಾರೆ ಎಂದು ಚಿಂತೆ ಹತ್ತಿತು. ಇಲ್ಲೇ ಯಾವುದಾದರೂ ಹಳ್ಳಿಯಲ್ಲಿ ತಂಗುವುದೆAದು ತರ್ಮಾನಿಸಿದ. ಆದರೆ ಹಳ್ಳಿ ಯಾವ ದಿಕ್ಕಿಗಿದೆ ಎನ್ನುವುದು ತಿಳಿಯಲಿಲ್ಲ. ಕುದುರೆ ಮುಂದೆ ಹೋಗುತ್ತಲೇ ಇತ್ತು. ಬಹಳ ವರ್ಷಗಳ […]