
ಬೆವರಿನಲ್ಲಿ ಜೈವಿಕ ಇಂಧನದ ಇರುವಿಕೆಯ ಬಗ್ಗೆ ಈಗಾಗಲೇ ಹಲವು ಸಂಶೋಧನೆಗಳು ತಿಳಿಸಿವೆ. ಬೆವರಿನ ಕಣಗಳಲ್ಲಿ ಲ್ಯಾಕ್ಟೇಟ್ ಎಂಬ ರಾಸಾಯನಿಕವಿದೆ. ಚರ್ಮಕ್ಕೆ ಲಗತ್ತಿಸುವ ಬ್ಯಾಂಡ್–ಏಯ್ಡ್ ತರಹದ ಒಂದು ಸ್ಟಿಕ್ಕರ್ ಇದರ ಜೊತೆ ಒಂದು ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ಶಕ್ತಿಯಾಗಿ ಪರಿವರ್ತಿಸುತ್ತದೆ. ಹಿಂದಿನ ಕಾಲದಲ್ಲಿ ಮನುಷ್ಯನ ಬೆವರು ಶಕ್ತಿ, ಶ್ರಮಗಳ ಸಂಕೇತವಾಗಿತ್ತು. ಬೆವರಿನಿಂದ ಶಕ್ತಿಯ ಉತ್ಪತ್ತಿಯಾಗುತ್ತದೆ ಎಂದಲ್ಲ, ಆದರೆ ಎಲ್ಲ ಶಕ್ತಿಗಳೂ ಬೆವರು ಸುರಿಸುವುದರಿಂದ – ಅಂದರೆ ಮನುಷ್ಯ ಪ್ರಯತ್ನದಿಂದ ಉತ್ಪತ್ತಿಯಾಗುತ್ತಿತ್ತು. ಕಾಲ ಬದಲಾಗಿದೆ. ಈಗ ಯಂತ್ರಗಳು ಮನುಷ್ಯನ ಬಹುತೇಕ […]