ಇಂಟರ್ನೆಟ್ ಮೂಲಕ ಮಾಹಿತಿ ಹುಡುಕಾಟ, ಈಮೈಲ್, ಚಾಟಿಂಗ್, ವಿಡಿಯೋ ವೀಕ್ಷಣೆ ಇತ್ಯಾದಿ ಮಾಡಬಹುದೆಂಬುದು ನಮಗೆ ತಿಳಿದಿದೆ. ಆದರೆ ಇಂಟರ್ನೆಟ್ ವ್ಯಾಪ್ತಿ ಬೆಳೆಯುತ್ತಲೇ ಹೋಗುತ್ತಿದೆ. ಇ-ಆಡಳಿತದಿಂದ ಹಿಡಿದು ವಧು- ವರಾನ್ವೇಷಣೆಯವರೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಎಲ್ಲಾ ರಂಗಕ್ಕೂ ನಾವು ಇಂಟರ್ನೆಟ್ ಬಳಸುತ್ತಲೇ ಬಂದಿದ್ದೇವೆ. ನಿಮ್ಮ ಸ್ಮಾರ್ಟ್ಫೋನ್ ಅಥವಾ ಕಂಪ್ಯೂಟರ್ ಬಳಸಿ, ಅದಕ್ಕಾಗಿಯೇ ಯಾವುದೇ ಆಪ್/ಸಾಫ್ಟ್ವೇರ್ ಬಳಸದೆ ಇಂಟರ್ನೆಟ್ಟಿನಲ್ಲಿ ಮಾಡಬಹುದಾದ ಕೆಲವು ಕೆಲಸಗಳು ಇಲ್ಲಿವೆ: ಆನ್-ಲೈನ್ ಶಾಪಿಂಗ್ ಫ್ಲಿಪ್ ಕಾರ್ಟ್, ಅಮಜಾನ್, ಸ್ನಾಪ್ಡೀಲ್ಗಳಂತಹ ತಾಣಗಳನ್ನು ಬಳಸಿ ಶಾಪಿಂಗ್ ಮಾಡುವುದು ಇದೀಗ […]