ಉತ್ಥಾನ ನವೆಂಬರ್ 2016
Month : November-2016 Episode : Author :
Month : November-2016 Episode : Author :
Month : November-2016 Episode : Author :
Month : November-2016 Episode : ರಾಗಮಾಲ ಕೃತಿಗಳು-2 Author : ಮಹೇಂದ್ರ ಡಿ.
ಭೈರವ್ ರಾಗವು ಶಿವನ ಮುಖಭಾವದ ಸಂಕೇತವಾದದ್ದು. ಈ ರಾಗ ಮುಂಜಾನೆ ಕಾಲದ್ದು. ಹೇಮಂತಋತುವಿನ ಈ ರಾಗದ ವರ್ಣ ಗಾಢ ಕೆಂಪು. ’ಸಂಗೀತರತ್ನಾಕರ’ದಲ್ಲಿ ಶುದ್ಧ ಭೈರವ್ ಎಂದೇ ರಾಗವನ್ನು ಉಲ್ಲೇಖಿಸಿದೆ. ಪುಂಡರೀಕವಿಠಲನ ಪ್ರಕಾರ ಮೊಟ್ಟಮೊದಲ ಪುರುಷರಾಗವೇ ಶುದ್ಧ ಭೈರವ್. ರಾಗಮಾಲಾ ಕಲಾಕೃತಿಗಳನ್ನು ಕುರಿತು ಕಳೆದ ಸಂಚಿಕೆಯಲ್ಲಿ ನೋಡಿದೆವು. ಈ ಬಾರಿ ಮತ್ತೆರಡು ರಾಗಗಳ ಕುರಿತು ಇರುವ ಚಿತ್ರಗಳನ್ನು ನೋಡೋಣ. ರಾಗಮಾಲಾ ಚಿತ್ರರಚನೆಯಲ್ಲಿ ಕಲಾವಿದನು ಸಂಗೀತವನ್ನು ಆಸ್ವಾದಿಸುವ ಮನಃಸ್ಥಿತಿಯೊಂದಿಗೆ, ಅದನ್ನು ದೃಶ್ಯರೂಪಕ್ಕೆ ಅಳವಡಿಸುವಾಗ ತನ್ನ ಸುತ್ತಲಿನ ಭೌಗೋಳಿಕ ಪರಿಸರವೂ ಆತನ […]
Month : October-2016 Episode : Author :
Month : October-2016 Episode : Author : ಎಸ್.ಆರ್. ರಾಮಸ್ವಾಮಿ
ಕೇವಲ ಆರ್ಥಿಕ ವಹಿವಾಟಿನ ಹೆಚ್ಚಳವಷ್ಟನ್ನೆ ಅಭಿವೃದ್ಧಿಯೆಂದು ಪರಿಗಣಿಸಲಾಗದು ಕಳೆದ (೨೦೧೬) ಮೇ ಅಂತ್ಯದಲ್ಲಿ ’ಈಗ ಶೇ. ೭.೬ರಷ್ಟು ವಾರ್ಷಿಕವೃದ್ಧಿವೇಗದಲ್ಲಿ ವರ್ಧಿಸುತ್ತಿರುವ ಭಾರತದ ಆರ್ಥಿಕತೆ ಅನ್ಯರಾಷ್ಟ್ರಗಳಿಗಿಂತ ಆರ್ಥಿಕವಾಗಿ ಉನ್ನತ ಸ್ತರದಲ್ಲಿ ಇದೆ” ಎಂದು ಕೇಂದ್ರ ಸರ್ಕಾರದಿಂದ ಹೊರಬಿದ್ದ ಹೇಳಿಕೆ ಹಲವು ವಲಯಗಳಲ್ಲಿ ಟೀಕೆಗೆ ಗುರಿಯಾಯಿತು. ತಥೋಕ್ತ ವೃದ್ಧಿವೇಗ ಮಂಡನೆ ಉತ್ಪ್ರೇಕ್ಷಿತವೆಂದು ಹಲವರು ತಜ್ಞರ ಅಭಿಮತವಿದೆ. ಆ ವೃದ್ಧಿವೇಗದ ಗಣನೆಗೆ ಆಧಾರವಾದ ತಃಖ್ತೆಗಳಲ್ಲಿ ರೂ. 1,40,000 ಕೋಟಿಗಳಷ್ಟು ವ್ಯತ್ಯಾಸವಿದೆ – ಎಂದು ಆರ್ಥಿಕತಜ್ಞ-ಪತ್ರಕರ್ತ ಅಭೀಕ್ ಬರ್ಮನ್ ಹೇಳಿದ್ದಿದೆ. ಇತರ ಹಲವರು […]
Month : October-2016 Episode : Author : ಅನಿಲ್ಕುಮಾರ್ ಮೊಳಹಳ್ಳಿ
“ಈ ದಿನ ನಾನು ಕೆಲವು ಮಂದಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ತಿಳಿಸಲು ಬಯಸುತ್ತೇನೆ. ಕೆಲವು ದಿನಗಳ ಹಿಂದೆ ಬಲೂಚಿಸ್ತಾನ, ಗಿಲ್ಗಿಟ್-ಬಾಲ್ಟಿಸ್ತಾನ ಹಾಗೂ ಪಾಕ್-ಆಕ್ರಮಿತ ಕಾಶ್ಮೀರದ ಜನರು ನನಗೆ ತಮ್ಮ ಕೃತಜ್ಞತೆಗಳನ್ನು, ಶುಭಹಾರೈಕೆಗಳನ್ನು ತಿಳಿಸಿದ್ದಾರೆ. ನನ್ನಿಂದ ಬಹುದೂರವಿರುವ, ನಾನೆಂದಿಗೂ ನೋಡದೆ, ಭೇಟಿಯಾಗದೆ ಇರುವ ಜನರು ಭಾರತದ ಪ್ರಧಾನಿಯನ್ನು, ಭಾರತದ 125 ಕೋಟಿ ಪ್ರಜೆಗಳನ್ನು ಪ್ರಶಂಸಿಸಿದ್ದಾರೆ. ಇದೊಂದು ಇಡೀ ದೇಶದ ಜನರಿಗೆ ಸಲ್ಲುವ ಗೌರವವಾಗಿದೆ.” ಇದು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯದಿನಾಚರಣೆಯಂದು ಕೆಂಪುಕೋಟೆಯ ಮೇಲಿನಿಂದ ದೇಶವನ್ನು ಉದ್ದೇಶಿಸಿ ಹೇಳಿದ […]
Month : October-2016 Episode : Author :
Month : October-2016 Episode : ಚಿತ್ರಕಲಾ ಸಂಚಯ Author : ಮಹೇಂದ್ರ ಡಿ.
ರಾಗಮಾಲಾ ಚಿತ್ರಸರಣಿಯೂ ಸಂಗೀತಪ್ರಧಾನವಾಗಿ ಅದರಲ್ಲೂ ಸಾಹಿತ್ಯವನ್ನು ಪ್ರಧಾನವಾಗಿರಿಸಿಕೊಂಡು ಅಭಿವ್ಯಕ್ತಗೊಳ್ಳುತ್ತದೆ. ಅಂದಿನ ಜನರ ಗುಡ್ಡಗಾಡು ಪರಿಸರ, ಋತುಮಾನಗಳ ಪ್ರಕೃತಿ ಹಾಗೂ ಜೀವನವನ್ನು ತಮ್ಮೊಳಗೆ ತುಂಬಿಸಿಟ್ಟುಕೊಂಡು ಅನುಭೂತಿಗಳನ್ನು, ವಿಸ್ಮಯ ಹಾಗೂ ಕಲಾತ್ಮಕ ಮನಸ್ಸುಗಳ ಚಿಂತನೆಗಳ ಭಾವವನ್ನು ದೃಶ್ಯರೂಪದಲ್ಲಿ ತೆರೆದಿಟ್ಟ ಸಾಕ್ಷಿಗಳು ಇವು. ಭಾರತೀಯ ಇತಿಹಾಸದಲ್ಲಿ ರಾಗಮಾಲಾ ಚಿತ್ರಕಲೆಗೊಂದು ವಿಶೇಷ ಸ್ಥಾನವಿದೆ. ಹಿಂದೂಸ್ತಾನಿ ರಾಗಗಳನ್ನು ಅಸ್ವಾದಿಸುವ, ಅದರಲ್ಲೂ ’ಶೃಂಗಾರರಸ’ದ ದೃಶ್ಯನಿರೂಪಕ ಚಿತ್ರಗಳು ಭಾರತೀಯ ಕಲಾಪ್ರಕಾರದಲ್ಲಿ ಮಹತ್ತ್ವದ ಸ್ಥಾನ ಪಡೆದುಕೊಂಡಿವೆ. ಕಾಗದದ ಮೇಲೆ ಜಲವರ್ಣದಲ್ಲಿ ರೇಖಾ ಪ್ರಧಾನವಾಗಿ ಚಿತ್ರಿಸಲ್ಪಟ್ಟಿರುವ ಇವು ಆರಂಭವಾದ ಕಾಲವನ್ನು […]
Month : September-2016 Episode : Author : ಶ್ರೀಹರ್ಷ ಪೆರ್ಲ
ತಂತ್ರಜ್ಞಾನವನ್ನೇ ತೊಡುವ ಸಮಯ ಬಂದಿದೆ… ನಾವು ಮೈ ಮುಚ್ಚಿಕೊಳ್ಳಲು, ಫ್ಯಾಷನ್ಗಾಗಿ ಬಟ್ಟೆಬರೆಗಳನ್ನು ತೊಡುತ್ತೇವೆ. ಅದರ ಜೊತೆ ನಮ್ಮ ಉಪಯೋಗಕ್ಕೆ ಪಾಕೆಟ್ಗಳು ಇತ್ಯಾದಿ ಸೇರಿಸಿರುತ್ತೇವೆ. ಪಾದದ ರಕ್ಷಣೆಗೆ ಚಪ್ಪಲಿ, ಅವಶ್ಯ ವಸ್ತುಗಳಿಗೆ ಬ್ಯಾಗ್, ಸಮಯ ನೋಡಲು ವಾಚ್, ತಲೆಗೆ ಟೋಪಿ, ಅಲಂಕಾರಕ್ಕೆ ಸರ- ಬಳೆ-ಉಂಗುರಗಳು, ನಂಬಿಕೆಗೆ ನಾಮ, ಹರಳುಗಳು, ತಾಯತಗಳು ಹೀಗೆ ಏನೇನನ್ನೋ ಧರಿಸುತ್ತೇವೆ. ಈಗ ತಂತ್ರಜ್ಞಾನವನ್ನೇ ಧರಿಸಿಕೊಳ್ಳುವ ಕಾಲ! ಮಾತುಕತೆಗೆ, ಆರೋಗ್ಯಕ್ಕೆ, ಆಟಕ್ಕೆ ಬೇಕಾದ ಆಧುನಿಕ ತಂತ್ರಜ್ಞಾನ ಆಧಾರಿತ ಉಪಕರಣಗಳು ಮೈಯನ್ನೆಲ್ಲಾ ಆವರಿಸಲಿವೆ! ಕೈಗಡಿಯಾರ ಇದನ್ನು ಇನ್ನು […]
Month : September-2016 Episode : Author :