ತನ್ನ ನಾಲ್ವರು ಭಟರೊಂದಿಗೆ ಕುದುರೆಯೇರಿ ಹೊರಟಿದ್ದ ರುದ್ರ ಕುಪಿತನಾಗಿದ್ದ. ಅದಕ್ಕೆ ಒಂದು ಕಾರಣ, ನಗರದಲ್ಲಿದ್ದ ತನ್ನ ಪಡೆ ಇನ್ನೂ ತಮ್ಮನ್ನು ಕೂಡಿಕೊಂಡಿಲ್ಲ ಎಂಬುದು. ಇನ್ನೊಂದು ಅವರಿಗಾಗಿ ನಿರೀಕ್ಷಿಸುತ್ತ ತಮ್ಮ ನಡೆ ನಿಧಾನವಾದುದು. ಕುದುರೆಗಳಿಗೂ ಕಾಡಿನ ನಡುವೆ ಸಾಗುವುದು ಕಠಿಣವೇ ಆಗಿತ್ತು. ತಾವು ವಿಳಂಬಿಸಿದಷ್ಟೂ ಚಿತ್ರಕನ ಕುಟುಂಬ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಅವರು ಸಾಗಿದ ದಾರಿಯ ಕುರುಹುಗಳೂ ಅಳಿಯುತ್ತವೆ. ಹೇಗಾದರೂ ಅವರನ್ನು ಹಿಡಿದು ಬಂಧಿಸಿ ನಗರಕ್ಕೆ ಒಯ್ಯಬೇಕಲ್ಲ! ಬೆಳಗಾಯಿತು. ಶಂಖನೂ, ಚಿತ್ರಕನ ಕುಟುಂಬವೂ ಘೋಷದ ದಿಕ್ಕಿನಲ್ಲಿ ಹೆಜ್ಜೆಹಾಕತೊಡಗಿದರು. ಪೂರ್ವದಿಕ್ಕಿನ […]
ಬೇಟೆಯ ಮಿಕಗಳು
Month : November-2024 Episode : ಅಗ್ನಿಜಾಲ ಭಾಗ-8 Author : ರಾಧಾಕೃಷ್ಣ ಕಲ್ಚಾರ್