೨೦೨೬ – ಅನಾದಿಕಾಲದಿಂದಲೂ ಭಾರತೀಯರ ಪವಿತ್ರಕ್ಷೇತ್ರ. ಜ್ಯೋತಿರ್ಲಿಂಗಗಳಲ್ಲೊಂದಾದ ಸೋಮನಾಥ ದೇವಾಲಯದ ಇತಿಹಾಸದಲ್ಲಿ ಮಹತ್ತ್ವದ ವರ್ಷ. ವಿದೇಶೀ ದಾಳಿಕೋರರ ಮೊಹಮ್ಮದ್ ಗಜನಿಯಿಂದ ಈ ಪುಣ್ಯಕ್ಷೇತ್ರದ ಮೇಲೆ ಮೊದಲ ದಾಳಿ ನಡೆದು (೧೦೨೬ ಜನವರಿಯಲ್ಲಿ) ಒಂದು ಸಾವಿರ ವರ್ಷಗಳೇ ಕಳೆದವು. ಇನ್ನೊಂದು – ಭಾರತದ ಪುನರುತ್ಥಾನದ ಸಂಕೇತ ನಾಂದಿ ಎಂಬಂತೆ ಭವ್ಯ ಸೋಮನಾಥ ಮಂದಿರ ಮರುನಿರ್ಮಾಣಗೊಂಡು (ಮೇ ೧೧, ೧೯೫೧) ೭೫ ವರ್ಷಗಳು ಪೂರೈಸಿದೆ. ವಿದೇಶೀ ದಾಳಿಕೋರರ ಆಕ್ರಮಣಕ್ಕೆ ಸೋಮನಾಥ ಮಂದಿರ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಆಫಘನಿಸ್ತಾನದ ಮೊಹಮ್ಮದ್ ಗಜನಿ(೧೦೨೬)ಯಿಂದ […]





