
ಉತ್ಥಾನ ಜುಲೈ 2024
Month : September-2024 Episode : Author :
Month : September-2024 Episode : Author :
Month : September-2024 Episode : Author :
Month : September-2024 Episode : Author :
ಚುನಾವಣೆಯಷ್ಟರಿಂದಲೇ ‘ಪ್ರಜಾಪ್ರಭುತ್ವ ಮೈಗೂಡೀತೆ? – ಎಸ್.ಆರ್.ಆರ್. ಸವಾಲುಗಳ ಶಿಖರವನ್ನು ಮೆಟ್ಟಿನಿಂತ ಸಾಧಕರು – ಭಾರತಿ ನಾಗರಮಠ ಭಾರತೀಯತೆಯ ಆಶಯವುಳ್ಳ ’ಭಾರತ ಪಥ’ – ಅಜಕ್ಕಳ ಗಿರೀಶ ಭಟ್ ನೆಹರುರವರನ್ನು ನಡುಗಿಸಿದ ನಭ – ಬಿ.ಪಿ. ಪ್ರೇಮಕುಮಾರ್ ’ಕಪಟ’ದ ಜೊತೆ ನಿಜದ ’ಹ್ಯಾಪಿ ಬ್ಯಾಟಿಂಗ್! – ಹರ್ಷವರ್ಧನ ವಿ. ಶೀಲವಂತ ಬಾಲಿ: ಅಪ್ರತಿಮ ಪ್ರಕೃತಿಸೌಂದರ್ಯದೊಂದಿಗೆ ಬೆಸೆದುಕೊಂಡ ಹಿಂದೂಧರ್ಮ – ಗೀತಾ ಕುಂದಾಪುರ ’ಕ್ರಿಪ್ಟೋ’ ಮೇಲೆ ವಂಚಕರ ನೆರಳು – ಅನಂತ ರಮೇಶ್ ಕಥೆ ನಿಗೂಢ ಜಾಲ! – ಸಂಜಯ್ […]
Month : September-2024 Episode : Author : -ಎಸ್.ಆರ್.ಆರ್.
ಇತ್ತೀಚೆಗೆ ಯೂರೋಪಿನ ಹಲವೆಡೆಗಳಲ್ಲಿ (ಇಟಲಿ, ಹಾಲೆಂಡ್ ಇತ್ಯಾದಿ) ನಡೆದ ಚುನಾವಣೆಗಳಲ್ಲಿ ಮಿತವಾದಿ ಪಕ್ಷಗಳದೇ ಮೇಲುಗೈಯಾಗಿರುವುದನ್ನು ಆಕಸ್ಮಿಕವೆನ್ನಲಾಗದು. ಯೂರೋಪಿನ ಬಹುತೇಕ ದೇಶಗಳಲ್ಲಿ ವಲಸಿಗರ ಬಗೆಗೆ ಹಿಂದೆ ಇರುತ್ತಿದ್ದಷ್ಟು ಪ್ರಮಾಣದ ಗಡಸುತನ ಈಗ ಕಾಣುತ್ತಿಲ್ಲ. ಈ ಪರಿವರ್ತನೆ ಅರ್ಥಪೂರ್ಣವೆನಿಸುತ್ತದೆ. ಭಾರತವೂ ಸೇರಿದಂತೆ ಜಗತ್ತಿನ ಅಧಿಕ ಭಾಗದ ಮೇಲೆ ಒಂದೊಮ್ಮೆ ಬಗೆಬಗೆಯ ತಂತ್ರಗಳ ಮತ್ತು ಹಲವೊಮ್ಮೆ ನೇರ ಆಕ್ರಮಣಗಳ ಮೂಲಕ ತನ್ನ ಸಾಮ್ರಾಜ್ಯಾಧಿಕಾರವನ್ನು ಸ್ಥಾಪಿಸಿದ್ದ ಯೂರೋಪ್ ಮೂಲೆಯ ಪುಟ್ಟ ದೇಶ ಇಂಗ್ಲೆಂಡ್. ಮಾವುತನ ಅಂಕುಶ ಆನೆಯಷ್ಟೆ ಗಾತ್ರದ್ದಾಗಬೇಕಿಲ್ಲವೆಂಬುದನ್ನು ಪುರಾವೆಗೊಳಿಸಿದ್ದು ಯೂರೋಪ್ ದೇಶಗಳ […]
Month : September-2024 Episode : Author : -ಎಸ್.ಆರ್.ಆರ್.
ಈ ವರ್ಷ ನಡೆದ ಚುನಾವಣೆಯ ತರುವಾಯ ‘ಸ್ವಾತಂತ್ರ್ಯ ಹೋರಾಟಗಾರ’ ಕುಟುಂಬಗಳವರಿಗೆ ಸರ್ಕಾರೀ ನೌಕರಿಗಳಲ್ಲಿ ಶೇ. ೫೦ರಷ್ಟನ್ನು ಮೀಸಲಿಡಲು ಹಸೀನಾ ಉಜ್ಜುಗಿಸಿದ್ದು ಇತ್ತೀಚಿನ ವಿದ್ಯಾರ್ಥಿ ಆಂದೋಲನಗಳಿಗೆ ಸ್ಫೋಟಕವಾಯಿತು. ವಿರೋಧಪಕ್ಷವಾದ ಬಾಂಗ್ಲಾ ನ್ಯಾಶನಲಿಸ್ಟ್ ಪಾರ್ಟಿಯವರೂ ವಿದ್ಯಾರ್ಥಿ ನಾಯಕರೂ ಸೇರಿದಂತೆ ಎಲ್ಲರ ಮೇಲೂ ಹಸೀನಾ ಸೇನೆಯನ್ನು ಹರಿಯಬಿಟ್ಟರು. ಕಳೆದ ಆಗಸ್ಟ್ ೫ರ ವೇಳೆಗೆ ಮೃತರ ಸಂಖ್ಯೆ ೪೦೦ರಷ್ಟು ಆಗಿದ್ದಿತು. ಹೀಗೆ ಹಸೀನಾ ತಮ್ಮ ಪದಚ್ಯುತಿಯನ್ನು ತಾವೇ ತಂದುಕೊಂಡರು ಎನ್ನಿಸುತ್ತದೆ. ಕ್ರಮೇಣ ಸೇನೆಯೂ ಹಸೀನಾರವರ ಸ್ವೈರಾಚಾರದ ಆದೇಶಗಳನ್ನು ಪಾಲಿಸಲು ನಿರಾಕರಿಸತೊಡಗಿದ್ದವು. ಕಳೆದ ಆಗಸ್ಟ್ […]
Month : September-2024 Episode : Author :
ಎರಡೂವರೆ ತಿಂಗಳಿನಷ್ಟು ದೀರ್ಘ ಅವಧಿಯಲ್ಲಿ ಹರಡಿಕೊಂಡು ಯಶಸ್ವಿಯಾಗಿ ಮುಗಿದು ಫಲಿತಾಂಶವನ್ನೂ ಹೊರಹಾಕಿರುವ ಈಚಿನ ಸಾರ್ವತ್ರಿಕ ಚುನಾವಣೆಯತ್ತ ಹಿನ್ನೋಟ ಬೀರಿದಲ್ಲಿ ತ್ರಯಸ್ಥವಾಗಿ ಚಿಂತಿಸುವ ಯಾರೂ ವಿಸ್ಮಯಗೊಳ್ಳದಿರಲಾರರು. ಆರೋಪ-ಪ್ರತ್ಯಾರೋಪಗಳು, ಕೇಳರಿಯದ ಆಮಿಷ-ಪ್ರಲೋಭನೆಗಳು, ರಾಡಿಯ ವಿನಿಮಯವೇ ಸಂವಾದಭಾಷೆಯಾಗಿರುವುದು – ಇವೆಲ್ಲ ಹಾಗಿರಲಿ. ಈ ಯಾವವೂ ಚುನಾವಣೆಯ ಪ್ರಕ್ರಿಯೆಯನ್ನು ಶಿಥಿಲಗೊಳಿಸಲಿಲ್ಲ. ಚುನಾವಣೆಯ ಕಲಾಪದ ಗಾತ್ರವೇ ದಿಗ್ಭ್ರಮೆ ತರುವಂತಹದು – ೬೪.೨ ಕೋಟಿಯಷ್ಟು ಅಧಿಕ ಮತದಾರರು: ಎಂದರೆ ಜಿ-೭ ದೇಶಗಳ ಒಟ್ಟು ಮತದಾರರ ಒಂದೂವರೆಪಟ್ಟು; ಯೂರೋಪಿಯನ್ ಒಕ್ಕೂಟದ ಅಷ್ಟೂ ಮತದಾರರ ಎರಡೂವರೆಪಟ್ಟು. ಇದೊಂದು ವಿಶ್ವ […]
Month : September-2024 Episode : Author :
ನಿಷೇವತೇ ಪ್ರಶಸ್ತಾನಿ ನಿಂದಿತಾನಿ ನ ಸೇವತೇ | ಅನಾಸ್ತಿಕಃ ಶ್ರದ್ದಧಾನ ಏತತ್ ಪಂಡಿತಲಕ್ಷಣಮ್ || – ಮಹಾಭಾರತ, ಉದ್ಯೋಗಪರ್ವ “ಯಾರು ಸದಾ ಒಳ್ಳೆಯ ಕೆಲಸಗಳಲ್ಲಿ ನಿರತನಾಗಿರುತ್ತಾನೋ, ಯಾರು ಕೆಟ್ಟ ಕರ್ಮಗಳಿಂದ ದೂರವಿರುತ್ತಾನೋ, ಯಾರು ಆಸ್ತಿಕನೂ ಶ್ರದ್ಧಾವಂತನೂ ಆಗಿರುತ್ತಾನೋ ಅವನು ಪಂಡಿತನೆನಿಸುತ್ತಾನೆ.” ಪಂಡಿತನ ಲಕ್ಷಣಗಳನ್ನು ಹೇಳಹೊರಟ ಈ ವಾಕ್ಯದಲ್ಲಿ ವಿವಿಧ ಜ್ಞಾನಸಂಗ್ರಹ ಶಾಸ್ತ್ರ ಜ್ಞಾನಾದಿಗಳಿಂದ ಪಕ್ಕಕ್ಕೆ ಸರಿದು ಅಂತರಂಗಸಂಸ್ಕಾರವನ್ನು ಪ್ರತಿಫಲಿಸುವ ಅಂಶಗಳನ್ನು ವಿಶೇಷಿಸಿ ಹೇಳಿರುವುದನ್ನು ಗಮನಿಸಬೇಕು. ಹತ್ತೊಂಬತ್ತನೇ ಶತಮಾನದ ನಡುಭಾಗದಲ್ಲಿ ಅಮೆರಿಕದ ಅಧ್ಯಕ್ಷನಾಗಿದ್ದ ಆ್ಯಂಡ್ರೂ ಜಾನ್ಸನನನ್ನು ಮಿತ್ರನೊಬ್ಬನು “ಮೂರ್ಖನು ಯಾರು, […]
Month : September-2024 Episode : Author : ಆಚಾರ್ಯ ವೀರನಾರಾಯಣ ಪಾಂಡುರಂಗಿ
ಋಗ್ವೇದದ ನಿಜವಾದ ಅರ್ಥವನ್ನು ತಿಳಿಸಿಕೊಟ್ಟು ವೇದವಾಙ್ಮಯದ ಬಗೆಗೆ ನಮ್ಮ ಜನರಲ್ಲಿ ಗೌರವಭಾವವನ್ನು ಮೂಡಿಸಲು ಎಸ್. ಕೆ. ರಾಮಚಂದ್ರರಾಯರು ‘ಋಗ್ವೇದದರ್ಶನ’ವನ್ನು ೩೨ ಸಂಪುಟಗಳಲ್ಲಿ ಬರೆಯಬೇಕೆಂದು ಸಂಕಲ್ಪಿಸಿದರು. ಆದರೆ ಅವರು ತಮ್ಮ ಕಡೆಯ ವರ್ಷಗಳಲ್ಲಿ ಇದನ್ನು ಬರೆಯಲು ಆರಂಭ ಮಾಡಿದ್ದರಿಂದ ಕೇವಲ ೧೬ ಸಂಪುಟಗಳನ್ನು ಬರೆಯಲಾಯಿತು. ಉಳಿದ ಸಂಪುಟಗಳಲ್ಲಿ ಋಗ್ವೇದದ ಎಲ್ಲ ಮಂತ್ರಗನ್ನೂ ವ್ಯಾಖ್ಯಾನ ಮಾಡಬೇಕೆಂದು ಅವರ ಸಂಕಲ್ಪ ಇದ್ದರೂ ಅದು ಸಫಲವಾಗಲಿಲ್ಲ ಎಂಬುದು ಭಾರತೀಯರ ದುರ್ದೈವವೇ ಸರಿ. ಈ ೧೬ ಸಂಪುಟಗಳನ್ನು ೧೩ ಸಂಪುಟಗಳಾಗಿ ಮತ್ತೊಮ್ಮೆ ಎಸ್.ಕೆ. ರಾಮಚಂದ್ರರಾವ್ […]
Month : September-2024 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ಯಾರಿಗೆ ಸರಿಯಾಗಿ ಸತ್ಯದ ಜ್ಞಾನವಾಗಿರುತ್ತದೆಯೊ ಅವನು ಸರ್ವಜ್ಞನೇ ಆಗಿರುತ್ತಾನೆ. ಹಾಗೂ ಯಾರು ಈ ಸತ್ಯವನ್ನು ಆಶ್ರಯಿಸಿಕೊಂಡಿರುತ್ತಾರೊ, ಅವರು ಸಂತರಾಗುತ್ತಾರೆ. ಸಂತರು ನಮಗೆ ಮಾರ್ಗ ತೋರಿಸಲು ಸಿದ್ಧರಿರುತ್ತಾರೆ, ಆದರೆ ನಮ್ಮ ಅಭಿಮಾನವೇ ಅದಕ್ಕೆ ಅಡ್ಡ ಬರುತ್ತದೆ. ಅಲ್ಲದೆ ನಾವು ಆ ಸಂತರನ್ನೇ ದೂಷಿಸುತ್ತೇವೆ! ಒಬ್ಬನು ಸಂತರನ್ನು ಉದ್ದೇಶಿಸಿ “ನೀವು ನಮಗೆ ಹಾನಿ ಮಾಡುತ್ತೀರಿ. ಅಪಕಾರ ಮಾಡುವವರಿಗೂ ಉಪಕಾರ ಮಾಡಲು ಹೇಳಿ ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತೀರಿ” ಎಂದು ಹೇಳಿದನಂತೆ. ವಾಸ್ತವಿಕವಾಗಿ ಸಂತರೂ ಕರ್ಮದ ರಾಶಿಯನ್ನೇ ಹಾಕಿರುತ್ತಾರೆ. ಆದರೆ ಅವರ ಹಾಗೂ […]
Month : September-2024 Episode : Author : ಬಿ.ಎನ್. ಶಶಿಕಿರಣ್
ರೇಖಾಚಿತ್ರಗಳು ರಾಯರ ಹೆಚ್ಚಿನ ಬರೆಹಗಳ ಅವಿಭಾಜ್ಯ ಅಂಗಗಳು, ಅಂದದ ಅಲಂಕೃತಿಗಳು. ಅವರ ‘ಚಿತ್ರಕ’ ಶೈಲಿಗೆ ಇವುಗಳ ಕೊಡುಗೆಯೂ ಇಲ್ಲದಿಲ್ಲ. ಇವನ್ನು ರಾಯರೇ ರಚಿಸುತ್ತಿದ್ದುದು ವಿಶೇಷ. ಈ ಮೂಲಕ ಒಂದು ಮಾಧ್ಯಮದಲ್ಲಿ ಮೂಡಿದ ವಿವರ ಮತ್ತೊಂದು ಮಾಧ್ಯಮದಲ್ಲಿ ಹೇಗೆ ತೋರುತ್ತದೆ ಎಂದು ತಾಳೆ ನೋಡಿ ತಿಳಿಯುವ ಅನನ್ಯ ಅವಕಾಶ ಓದುಗರಿಗೆ ದಕ್ಕುತ್ತದೆ. ಎರಡೂ ಭೂಮಿಕೆಗಳಲ್ಲಿ ರಾಯರ ಅಭಿವ್ಯಕ್ತಿ ಏಕಪ್ರಕಾರವಾದ ಸೌಂದರ್ಯ–ಸೌಷ್ಠವಗಳನ್ನು ಬಿಂಬಿಸಿರುವುದು ಒಡಕಿಲ್ಲದ ಅವರ ಅಂತರAಗಕ್ಕೂ ಮೇರೆಯರಿಯದ ಅವರ ಕೌಶಲಕ್ಕೂ ದಿಕ್ಸೂಚಿ ಎನ್ನಬಹುದು. ಅಳಿಯದೆ ಉಳಿಯಬೇಕೆಂಬ ಬಯಕೆ ಒಂದಲ್ಲ […]