
ಆಂಗ್ಲರಿಂದ ಪಡೆದ ಬಿಡುಗಡೆಯನ್ನು ಸ್ವಾತಂತ್ರ್ಯವೆಂದು ಪರಿಗಣಿಸಿ ಆಗಸ್ಟ್ ೧೫ರಂದು ಒಂದಷ್ಟು ಸಂಭ್ರಮಿಸುತ್ತೇವಷ್ಟೆ. ಇದು ಪ್ರಸ್ತುತ ಕಂಡುಬರುವ ಚಿತ್ರಣ. ಇದೀಗ ಈ ನೆಲೆಯಿಂದಲೇ ತೊಡಗೋಣವಂತೆ. ಕೈಯಲ್ಲಿಲ್ಲದ ಹೃದಯವ್ಯಾಪಾರಕ್ಕಾಗಿ ಬಂದ ಆಂಗ್ಲರು ತಕ್ಕಡಿಯ ಜತೆಗೆ ವ್ಯಾಪಾರದ ರಕ್ಷಣೆಗೆಂದು ಸೈನ್ಯವನ್ನೂ ತಂದಿರಿಸಿಕೊಂಡರು. ಇದಕ್ಕೆ ನಮ್ಮಲ್ಲಿಯ ರಾಜರು ’ಉದಾರ’ವಾಗಿ ಒಪ್ಪಿಗೆಯನ್ನೂ ಸೂಚಿಸಿದರು. ಸೈನ್ಯವನ್ನು ವಿಸ್ತರಿಸಿಕೊಳ್ಳುತ್ತ, ಅದಕ್ಕೆ ಒಪ್ಪಿಗೆ ನೀಡದ ರಾಜರುಗಳನ್ನು ಮಟ್ಟಹಾಕಲು ಅದೇ ಸೈನ್ಯವನ್ನು ಬಳಸಿಕೊಂಡರು. ಕೊನೆಯಲ್ಲಿ ಆದುದೇನೆಂದರೆ ಇಲ್ಲಿಯ ಸಮಗ್ರ ಶಾಸನವು ಅನಾಯಾಸವಾಗಿ ಆಂಗ್ಲರ ಕೈಗೆ ಹೋದುದು. ಆಂಗ್ಲರು ಮತ್ತವರ ಓರಗೆಯ […]