
ಕರ್ಮಣಾ ಜಾಯತೇ ಸರ್ವಂ ಕರ್ಮೈವ ಗತಿಸಾಧನಂ | ತಸ್ಮಾತ್ ಸರ್ವಪ್ರಯತ್ನೇನ ಸಾಧು ಕರ್ಮ ಸಮಾಚರೇತ್ || – ವಿಷ್ಣುಪುರಾಣ “ಜಗತ್ತಿನಲ್ಲಿ ಎಲ್ಲವೂ ಆಗುವುದು ಕರ್ಮಾಚರಣೆಯ ಮೂಲಕವೇ. ಉನ್ನತಿಗೋ ಅಧೋಗತಿಗೋ ಎಲ್ಲಕ್ಕೂ ಕಾರಣವಾಗುವುದು ಕರ್ಮಾಚರಣೆಯೇ. ಆದುದರಿಂದ ಇಷ್ಟಾನಿಷ್ಟಗಳಿಗೆ ಬಲಿಬೀಳದೆ ಆಲಸ್ಯ-ಅಲಕ್ಷ್ಯಗಳಿಗೆಡೆಗೊಡದೆ ವಿವೇಚನಪೂರ್ವಕವಾಗಿ ಲಬ್ಧ ಕರ್ಮಗಳನ್ನು ಪಾಲುಮಾರದೆ ನಡೆಸಬೇಕು.” ನಮ್ಮ ಇಡೀ ಜೀವನವಷ್ಟೂ ಕರ್ಮಾವಲಂಬಿಯಾದದ್ದು. ಇದರಿಂದ ಯಾರಿಗೂ ವಿನಾಯತಿ ಇಲ್ಲವೆಂಬುದು ಪ್ರಕೃತಿನಿಯಮ. ಆದರೆ ನಮ್ಮ ಪಾಲಿಗೆ ಬಂದ ಕೆಲಸವನ್ನು ಮನಃಪೂರ್ವಕವಾಗಿಯೂ ಉತ್ಸಾಹಪೂರ್ಣವಾಗಿಯೂ ಮಾಡುವುದರಿಂದ ಧನ್ಯತಾಭಾವವೂ ಪ್ರಸನ್ನತೆಯೂ ಉಂಟಾಗುತ್ತವೆ. ಒದಗಿದ ಕರ್ತವ್ಯದ […]