
ಸಾವರಕರರ ವಿವಿಧ ಸಂದರ್ಭಗಳಲ್ಲಿನ ನಿಲವುಗಳನ್ನು ಅರಿಯಲು ಆಗಿನ ಸನ್ನಿವೇಶಗಳ ಯಥಾರ್ಥ ಗ್ರಹಿಕೆ ಅವಶ್ಯವಾಗುತ್ತದೆ. 20ನೇ ಶತಮಾನದ ಆರಂಭದ ವರ್ಷಗಳಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ಕುರಿತ ಪ್ರತಿಪಾದನೆಗಳು ಪ್ರಚಲಿತವಿದ್ದವು. ಲೋಕಮಾನ್ಯ ತಿಲಕರೂ ಆ ದಿಶೆಯಲ್ಲಿ ಹಲವೊಮ್ಮೆ ಮಾತನಾಡಿದ್ದುದುಂಟು. ಆದರೆ 1920ರ ದಶಕದಲ್ಲಿ ಇಂತಹ ಪ್ರಯಾಸಗಳು ನಿರೀಕ್ಷಿತ ಫಲಿತವನ್ನು ನೀಡಿರಲಿಲ್ಲವೆಂದು ಗಾಂಧಿಯವರೇ ಹಲವು ಬಾರಿ ಹೇಳಬೇಕಾಗಿಬಂದಿತು. ಇಂತಹ ಸಾಮಾಜಿಕ ಪ್ರವೃತ್ತಿಗಳು ಸುಲಭವಾಗಿಯಾಗಲಿ ಅಲ್ಪಕಾಲದಲ್ಲಾಗಲಿ ಬದಲಾಗುವ ಸಂಭವ ಕಡಮೆಯಿತ್ತು. ಈ ಭೂಮಿಕೆಯಲ್ಲಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಬೇಕಾದುದು ಅನಿವಾರ್ಯವೆಂದು ಸಾವರಕರರು ನಿರ್ಣಯಿಸಿ ಹಿಂದೂ ಮಹಾಸಭೆಯನ್ನು […]