
ಉತ್ಥಾನ ಆಗಸ್ಟ್ ಸಂಚಿಕೆಯಲ್ಲಿ ಏನೇನಿದೆ?
Month : July-2023 Episode : Author :
Month : July-2023 Episode : Author :
Month : July-2023 Episode : Author :
Month : July-2023 Episode : Author :
Month : July-2023 Episode : Author : ಎಂ.ಬಿ. ಹಾರ್ಯಾಡಿ
ನಿಷ್ಕಲ್ಮಶ ನಡೆನುಡಿಯ ಅವಿದ್ಯಾವಂತ ಬಿಲ್ಲವರು ತಮ್ಮ ಸಂಪ್ರದಾಯ ನಂಬಿಕೆ ಹಾಗೂ ಆರಾಧನೆಯನ್ನು ತ್ಯಜಿಸಿ ಕ್ರೈಸ್ತರಾಗುವ ಕಠಿಣ ನಿಲವನ್ನು ಹೊಂದಲು ಕಾರಣವಾಗುವ ಸನ್ನಿವೇಶಗಳು ಬಹಳ ಮುಖ್ಯವಾದವು. ಈ ಸಂದರ್ಭದಲ್ಲಿ ಒಂದು ಮಾತನ್ನು ನಾವು ನೇರವಾಗಿ ಹೇಳಬೇಕಾಗುತ್ತದೆ. “ಮತಾಂತರಗೊಳಿಸಿದ್ದಾರೆ ಎನ್ನುವುದಕ್ಕಿಂತಲೂ ಮತಾಂತರಕ್ಕೆ ಪೂರಕವಾದ ಅವಕಾಶವನ್ನು ಹಾಗೂ ಸನ್ನಿವೇಶವನ್ನು ನಾವು ಸೃಷ್ಟಿಸಿಕೊಟ್ಟಿರುವೆವು ಎನ್ನುವುದು ಸೂಕ್ತವಾದುದು.” ಅಂದರೆ ಅದಕ್ಕಾಗಿ ನಾವು ಅವರಿಗೆ ಕೃತಜ್ಞತೆ ಹೇಳಬೇಕೆ? ಈ ವಾದವನ್ನು ನಾವು ಎಡಪಂಥೀಯರು; ಬುದ್ಧಿಜೀವಿಗಳು ಸೇರಿದಂತೆ ಹಲವರಿಂದ ಕೇಳುತ್ತೇವೆ. ಮತಾಂತರ ಮಾಡಿಸಿದ್ದರಲ್ಲಿ ಏನೂ ತಪ್ಪಿಲ್ಲವೆ? ಮನೆಯ […]
Month : July-2023 Episode : Author : -ಎಸ್.ಆರ್.ಆರ್.
‘ಅಮೆರಿಕ ಇಂಗ್ಲೆಂಡುಗಳಂತಹ ದೇಶಗಳು ಭಾರತದಲ್ಲಿ ಪ್ರಜಾಪ್ರಭುತ್ವ ಕುಸಿದಿರುವತ್ತ ಲಕ್ಷ್ಯ ಹರಿಸಬೇಕು’ – ಎಂದು ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ಸಿನ ನಾಯಕ ರಾಹುಲ್ಗಾಂಧಿ ವಿದೇಶೀ ನೆಲದಲ್ಲಿ ಬಡಬಡಿಸಿದುದಕ್ಕೆ ಏನೆನ್ನಬೇಕು? ಈ ವಿಕೃತ ಮಂಡನೆಯನ್ನು ಸಾಂವಿಧಾನಿಕವೆನ್ನಲಾದೀತೆ? ಅದು ಸಂವಿಧಾನವನ್ನೇ ಅವಗಣನೆ ಮಾಡಿದಂತಾಗದೆ? ಇನ್ನೊಂದು ವಿಪರ್ಯಾಸವೂ ಇದೆ. ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರಗಳೇ ಇವೆಯಲ್ಲ. ಅವೆಲ್ಲ ಅಸಿಂಧುವಾದವೆಂದು ರಾಹುಲ್ಗಾಂಧಿಯವರೇ ಹೇಳಿದಂತಾಗಲಿಲ್ಲವೆ? ಸಂಸದೀಯ ರಾಜ್ಯಪದ್ಧತಿಯಲ್ಲಿ ನಡವಳಿಗಳ ಗುಣಮಟ್ಟವನ್ನು ಉಳಿಸುವ ಹೊಣೆಗಾರಿಕೆ ಎಲ್ಲರ ಮೇಲೂ ಇದೆ. ವಿರೋಧಪಕ್ಷಗಳೂ ಈ ಹೊಣೆಗಾರಿಕೆಯಿಂದ ಮುಕ್ತವಲ್ಲ. ಟೀಕೆಗಳಿಗೂ ಅವಕಾಶ […]
Month : July-2023 Episode : Author : ಡಾ|| ಎಸ್.ಎಲ್. ಭೈರಪ್ಪ
‘ರಾಜಕೀಯಕ್ಕೆ ಹೋಗುವುದಿಲ್ಲ’ ಎಂದು ಬರೆದುಕೊಟ್ಟು ಬಿಡುಗಡೆಯಾಗಿ ಹೊರಬಂದ ಸಾವರಕರ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಅವರು ಹಿಂದುಗಳಿಗೆ “ನೀವೆಲ್ಲ ಹೆಚ್ಚುಹೆಚ್ಚು ಸೈನ್ಯಕ್ಕೆ ಸೇರಿಕೊಳ್ಳಿ. ಆಗ ನಮ್ಮಲ್ಲಿ ಹೋರಾಟದ ಮನೋಭಾವ (fighting spirit) ಮೂಡುತ್ತದೆ. ಜೊತೆಗೆ ಬಂದೂಕು ಹಿಡಿಯುವುದು, ಹಿಡಿದು ನಾವೇನು ಮಾಡಬೇಕು ಎನ್ನುವುದು ತಿಳಿಯುತ್ತದೆ. ಇದು ಸ್ವಾತಂತ್ರ್ಯ ಚಳವಳಿಯನ್ನು ಮಾಡುವ ಹೊಸ ರೀತಿಯನ್ನು, ಹೊಸ ಮಾರ್ಗವನ್ನು ನಮಗೆ ತೋರಿಸಬಹುದು” – ಎಂದು ಕರೆಕೊಟ್ಟರು. ಸಾವರಕರ್ ಬಗೆಗಿನ ಅಪಪ್ರಚಾರಗಳು ಹಸಿಸುಳ್ಳುಗಳ ಕಂತೆಯೇ ಸರಿ. ಹೀಗೆ ಪ್ರಚಾರ ಮಾಡುವವರು ಸಾವರಕರರನ್ನು ಯಾರಿಗೆ ಹೋಲಿಸುತ್ತಾರೆ? […]
Month : July-2023 Episode : Author :
ಈಗ್ಗೆ ಮೂರು ವರ್ಷ ಹಿಂದೆ (ಮೇ ೨೦೨೦) ಮೋದಿ ಸರ್ಕಾರ ‘ಆತ್ಮನಿರ್ಭರ ಭಾರತ’ ಗುರಿಯನ್ನು ಘೋಷಿಸಿದಾಗ – ಅದೂ ಕೋವಿಡ್ ೧೯ ಸಾಂಕ್ರಾಮಿಕದ ವಿಘಾತದ ಹಿಂದುಗೂಡಿ – ಶಾಶ್ವತ ಸಿನಿಕತನಕ್ಕೆ ಹೆಸರಾದ ‘ವಿರೋಧಕ್ಕಾಗಿ ವಿರೋಧ’ವನ್ನು ಸ್ವಾಭಾವಿಕವಾಗಿಸಿಕೊಂಡ ಪಡೆಗಳಂತೂ ಎಂದಿನಂತೆ ಅದನ್ನು ಘೋಷಣೆ ಮಾತ್ರವೆಂದು ತಳ್ಳಿಹಾಕಿದುದು ಅವುಗಳ ಜಾಯಮಾನಕ್ಕೆ ಅನುಗುಣವಾಗಿತ್ತು. ಅನ್ಯ ವಲಯಗಳಲ್ಲಿಯೂ ಆ ಲಕ್ಷö್ಯದ ಬಗೆಗೆ ಅತ್ಯುತ್ಸಾಹವೇನೂ ತೋರಿರಲಿಲ್ಲ. ಅಲ್ಲಿಂದೀಚೆಗೂ ಪ್ರಮುಖ ವಿರೋಧಪಕ್ಷವು ಆರೂಢ ಸರ್ಕಾರದ ಪ್ರತಿಯೊಂದು ಉಪಕ್ರಮವನ್ನೂ ಟೀಕಿಸುತ್ತ ಬಂದಿರುವ ರೀತಿಯನ್ನು ನೋಡಿದರೆ ಅದರ ದೃಷ್ಟಿಯಲ್ಲಿ […]
Month : July-2023 Episode : Author :
ಶಾಂತಿಖಡ್ಗಃ ಕರೇ ಯಸ್ಯ ದುರ್ಜನಃ ಕಿಂ ಕರಿಷ್ಯತಿ | ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ || – ಮಹಾಭಾರತ, ಉದ್ಯೋಗಪರ್ವ “ಶಾಂತಿ ಎಂಬ ಖಡ್ಗಾಯುಧ ಯಾರ ಕೈಯಲ್ಲಿ ಇದೆಯೋ ಅಂತಹವನಿಗೆ ದುಷ್ಟನೂ ಕ್ರೂರಿಯೂ ಏನು ಹಾನಿ ಮಾಡಿಯಾನು? ಹುಲ್ಲಿನ ಮೇಲೆ ಬೀಳದಿರುವ ಬೆಂಕಿ ತಾನಾಗಿ ಶಾಂತವಾಗಿಬಿಡುತ್ತದೆ.” ಹುಲ್ಲು ಗ್ರಾಸವಾಗಿ ದೊರೆತರೆ ಮಾತ್ರ ಬೆಂಕಿಯ ಪ್ರತಾಪಕ್ಕೆ ಅವಕಾಶವಾಗುತ್ತದೆ. ರವೀಂದ್ರನಾಥ ಠಾಕೂರರು ಯಾವುದೊ ಗಂಭೀರ ಬರಹದಲ್ಲಿ ತಲ್ಲೀನರಾಗಿದ್ದರು. ಸಮಯ ನಡುರಾತ್ರಿ ದಾಟಿತ್ತು. ಏನನ್ನಾದರೂ ದೋಚಿಕೊಂಡು ಹೋಗಲು ಕಳ್ಳನೊಬ್ಬ ಕತ್ತಿ ಝಳಪಿಸುತ್ತ […]
Month : July-2023 Episode : Author : ಜಿ.ಎಂ. ಸಂಜಯ್
ಟಾರು ಕಾಣದ ರಸ್ತೆಯ ಸುತ್ತ ಮೂವತ್ತು, ನಲವತ್ತು ಮನೆಗಳು. ಅಲ್ಲೊಂದು ಇಲ್ಲೊಂದು ಗುಡಿಸಲು. ಅದರ ಮುಂದೆ ಕೋಳಿ, ದನ. ಊರ ಹೊರಗೆ ನೀಲಗಿರಿಯ ತೋಪು. ಅದರ ಪಕ್ಕದಲ್ಲಿ ತುಂಗಭದ್ರಾ ನದಿ. ಆದರೆ ಸೊರಗಿ ಹರಿಯುತ್ತಿದ್ದ ಅದನ್ನು ನದಿ ಅಂತ ಕರೆಯಲು ಕೂಡ ಹೆದರಿದಂತೆ ಆ ಊರಿನ ಜನ ಅದನ್ನು ‘ಹೊಳೆ’ ಅಂತಲೇ ಕರೆಯುತ್ತಿದ್ದರು. ತುಂಗಭದ್ರಾ ನೀರಿನ ಸವಿ ಉಂಡ ಭತ್ತ, ಕಬ್ಬುಗಳ ಹಸಿರು ನೋಡುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಊರೆಲ್ಲ ಸುತ್ತಿ, ಸಾಯಂಕಾಲದ ವೇಳೆಗೆ ಸಂಶೋಧಕರ ಟೆಂಟ್ […]
Month : July-2023 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ಅರ್ಜುನ, ಕಣ್ಣುಗಳಿಂದ ನೋಡುವಲ್ಲಿ, ಕಿವಿಯಿಂದ ಕೇಳುವಲ್ಲಿ, ಮನಸ್ಸಿನಿಂದ ಚಿಂತಿಸುವಲ್ಲಿ ಹಾಗೂ ಬಾಯಿಯಿಂದ ನುಡಿಯುವಲ್ಲಿ ಹೀಗೆ ನಡೆಯುವ ಎಲ್ಲ ವ್ಯವಹಾರಗಳಲ್ಲಿ, ಒಳಹೊರಗೆ ನನ್ನನ್ನೇ ಅನುಸರಿಸು. ಅಂದರೆ ಅವೆಲ್ಲವೂ ನನ್ನ ವಿಷಯವಾಗಿಯೇ ಇರಲಿ. ಹೀಗೆ ಮಾಡಲು, ಎಲ್ಲ ಕಾಲಗಳಲ್ಲಿ ಯಾವಾಗಲೂ ನಾನೇ ಇರುವೆನು. ಈ ಅಭ್ಯಾಸವನ್ನು ಒಳ್ಳೆಯ ರೀತಿಯಿಂದ ಚಿತ್ತಕ್ಕೆ ಅಂಟಿಸು. ಎಲೊ! ಪ್ರಯತ್ನದ ಬಲದಿಂದ ಹೆಳವನಾದರೂ ಗುಡ್ಡವನ್ನೇರಬಲ್ಲನು. ಅದರಂತೆ ಸತತವಾದ ಅಭ್ಯಾಸದಿಂದ ನಿನ್ನ ಚಿತ್ತಕ್ಕೆ ಪರಮಾತ್ಮನ ವಿಷಯವನ್ನು ಆಗ್ರಹದ್ದನ್ನಾಗಿ ಮಾಡಿಕೊ. ಅಷ್ಟಾದ ಬಳಿಕ ಶರೀರವು ಉಳಿಯಲಿ, ಇಲ್ಲವೆ ಹೋಗಲಿ. […]