ಉತ್ಥಾನ ಸಂಕ್ರಾಂತಿ ವಿಶೇಷಾಂಕ 2024: “ಸಾಕಾರಗೊಂಡ ರಾಮಮಂದಿರ”
Month : December-2023 Episode : Author :
Month : December-2023 Episode : Author :
Month : December-2023 Episode : Author : ಸಂತ ಜ್ಞಾನೇಶ್ವರ ಮಹಾರಾಜರು
ಈ ಜಗತ್ತೆಂಬುದು ನನ್ನ ವಿಸ್ತಾರವಲ್ಲವೆ? ಹಾಲು ಹೆಪ್ಪುಗಟ್ಟಿ ಮೊಸರಾಗುವುದು. ಅಥವಾ ಬೀಜವೇ ಗಿಡವಾಗುವುದು, ಅಥವಾ ಬಂಗಾರವೇ ಅಲಂಕಾರವಾಗುವುದು. ಅದರಂತೆ ಈ ಜಗತ್ತೆಂದರೆ, ನನ್ನೊಬ್ಬನ ವಿಸ್ತಾರವೇ ಅಹುದು. ಇದು ಜಗದುತ್ಪತ್ತಿಯ ಮೊದಲು ಅವ್ಯಕ್ತತೆಯಿಂದ ಹೆಪ್ಪುಗಟ್ಟಿರುವುದು. ಬಳಿಕ ಅದೇ ವಿಶ್ವದ ರೂಪದಿಂದ ಹಬ್ಬುವುದು. ಇಂತು ಅವ್ಯಕ್ತ ರೂಪದಿಂದಿರುವ ನಾನೇ ನಾನು ತ್ರೈಲೋಕ್ಯದ ರೂಪದಿಂದ ವಿಸ್ತಾರಗೊಂಡಿರುವೆನೆಂದು ತಿಳಿ. ನೀರಿನ ಮೇಲೆ ಬುರುಗು (ನೊರೆಯು) ಭಾಸವಾಗುವಂತೆ, ಮಹತ್ತತ್ತ್ವದಿಂದ ದೇಹದವರೆಗಿನ ಎಲ್ಲ ಭೂತಗಳು ನನ್ನ ಆಶ್ರಯದ ಮೇಲೆ ಭಾಸವಾಗುವವು. ನನ್ನ ಆಶ್ರಯದ ಮೇಲೆ ಈ […]
Month : December-2023 Episode : ಬೇತಾಳ ಕಥೆಗಳು - 3 Author : ಎಚ್.ಆರ್. ವಿಶ್ವಾಸ
ಹರ್ಷವತಿ ಎಂಬ ನಗರದಲ್ಲಿ ಧರ್ಮದತ್ತನೆಂಬ ವರ್ತಕನಿದ್ದನು. ಅವನು ಕೋಟೀಶ್ವರ. ಅವನಿಗೆ ವಸುದತ್ತೆಯೆಂಬ ರೂಪವತಿಯಾದ ಮಗಳಿದ್ದಳು. ಅವಳು ಪ್ರಾಪ್ತವಯಸ್ಕಳಾದಾಗ ಧರ್ಮದತ್ತನು ತಾಮ್ರಲಿಪಿಯಲ್ಲಿದ್ದ ಸಮುದ್ರದತ್ತನೆಂಬ ವರನಿಗೆ ಅವಳನ್ನು ಕೊಟ್ಟು ಮದುವೆ ಮಾಡಿದನು. ಸಮುದ್ರದತ್ತನು ರೂಪವಂತನೂ, ಗುಣವಂತನೂ, ಎಲ್ಲ ದೃಷ್ಟಿಯಿಂದ ಅವಳಿಗೆ ಅನುರೂಪನೂ ಆಗಿದ್ದನು. ಆದರೆ ವಸುದತ್ತೆಯೇ ಚಪಲಚಿತ್ತೆ ಆಗಿದ್ದಳು. ಛಲ ಬಿಡದ ತ್ರಿವಿಕ್ರಮಸೇನನು ಮತ್ತೆ ಅದೇ ಮುಳ್ಳುಮುತ್ತುಗದ ಮರದ ಬಳಿಗೆ ಬಂದು, ಅದರ ಬುಡದಲ್ಲಿ ಬಿದ್ದಿದ್ದ ಹೆಣವನ್ನು ಹೆಗಲಮೇಲೆ ಹೊತ್ತುಕೊಂಡು, ಮೌನವಾಗಿ ಸ್ಮಶಾನಾಭಿಮುಖವಾಗಿ ನಡೆದನು. ಹೆಣದೊಳಗಿದ್ದ ಬೇತಾಳನು ಈಗ ಮತ್ತೊಂದು […]
Month : December-2023 Episode : Author : ದೀಕ್ಷಿತ್ ನಾಯರ್, ಮಂಡ್ಯ
ಈ ಅಭಿಯಾನದಿಂದ ತಂಡ ಯಾವುದೇ ಲಾಭವನ್ನು ನಿರೀಕ್ಷಿಸಿಲ್ಲ. ಕೇವಲ ಮಾರಾಟದ ದೃಷ್ಟಿಯಿಂದಲೂ ಈ ಅಭಿಯಾನವನ್ನು ನಡೆಸುತ್ತಿಲ್ಲ. ಕ್ಷೀಣಿಸುತ್ತಿರುವ ಓದುಗರ ವರ್ಗವನ್ನು ಹೆಚ್ಚಿಸುವುದಕ್ಕಾಗಿಯೇ ನಿಃಸ್ವಾರ್ಥದಿಂದ ರಸ್ತೆಗಿಳಿದಿದ್ದಾರೆ. ಈಗಾಗಲೇ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಸೇರಿದಂತೆ ಹಲವೆಡೆ ‘ಬಾ ಗುರು ಬುಕ್ ತಗೋ’ ಅಭಿಯಾನವನ್ನು ತಂಡ ನಡೆಸಿದೆ. ನಾಡಿನಾದ್ಯಂತ ಈ ಅಭಿಯಾನವನ್ನು ಕೊಂಡೊಯ್ಯುವ ಮಹತ್ತ್ವಾಕಾಂಕ್ಷೆ ತಂಡದ್ದಾಗಿದೆ. “ಬಾ ಗುರು ಬುಕ್ ತಗೋ” ಎಂಬ ಕೂಗಿನೊಂದಿಗೆ ಕಳೆದ ಹಲವು ತಿಂಗಳುಗಳಿಂದ ಕನ್ನಡದ ಭರವಸೆಯ ಹಲವರು ಲೇಖಕರು ರಸ್ತೆಯಲ್ಲಿ ನಿಂತು ಪುಸ್ತಕಗಳನ್ನು ಮಾರುತ್ತಿದ್ದಾರೆ; […]
Month : December-2023 Episode : Author : ಪು. ರವಿವರ್ಮ
ಶ್ರೀ ಮದ್ರಾಮಾಯಣಕ್ಕೆ ರಾಷ್ಟ್ರೀಯ ಮಹಾಕಾವ್ಯ ಎಂಬ ಗೌರವದ ಸ್ಥಾನವನ್ನು ಭಾರತೀಯ ಸಮಾಜ ಶತಮಾನಗಳ ಹಿಂದೆಯೇ ನೀಡಿದೆ. ಭಾರತೀಯ ಸಮಾಜದ ಮೇಲೆ ರಾಮಾಯಣ ಮಾಡಿರುವಷ್ಟು ಪ್ರಭಾವವನ್ನು ಬೇರೆ ಯಾವ ಗ್ರಂಥವೂ ಬೇರೆ ಯಾವ ದೇಶದ ಮೇಲೂ ಮಾಡಿಲ್ಲ. ಈ ದೇಶದ ಜನ ಶ್ರೀರಾಮ, ಸೀತೆ, ಲಕ್ಷ್ಮಣ, ಹನುಮಂತ – ಇವರೆಲ್ಲರನ್ನು ಕಾವ್ಯದ ಮಹಾಪಾತ್ರಗಳಷ್ಟೇ ಎಂಬಂತೆ ಎಂದೂ ಕಂಡಿಲ್ಲ; ಅವರೆಲ್ಲ ಕಣ್ಣೆದುರಿಗಿರುವ ವ್ಯಕ್ತಿಗಳಷ್ಟೇ ವಾಸ್ತವ ಎಂಬುದಾಗಿ ಪರಿಗಣಿಸಿ ಅವರ ಬಗ್ಗೆ, ರಾಮಾಯಣದ ಬಗ್ಗೆ ಅನುಪಮವಾದ ಪ್ರೀತಿಯನ್ನು ಇರಿಸಿದ್ದಾರೆ. ಹೀಗಿರುವುದರಿಂದಲೇ ರಾಮಾಯಣ […]
Month : December-2023 Episode : Author : ನಾರಾಯಣ ಶೇವಿರೆ
ನಮ್ಮ ಮಿತ್ರರು ಪಾಠಶಾಲೆಯೊಂದರಲ್ಲಿ ಅಧ್ಯಾಪಕರು. ಶ್ರಮದ ಅನುಭವ ಕಿಂಚಿತ್ತೂ ಇಲ್ಲದವರು. ಅವರ ಬದುಕಿನಲ್ಲಿ ಅದರ ಅಗತ್ಯ ಕಿಂಚಿತ್ತೂ ಉಂಟಾಗದೇ ಹೋಯಿತು. ರೊಕ್ಕದಿಂದ ನಮಗೆ ಬೇಕಾದ ಶ್ರಮವನ್ನು ಖರೀದಿಸುವ ಸನ್ನಿವೇಶ ಇರುವಾಗ ಇಂಥ ಅಗತ್ಯ ಉಂಟಾಗಲಾರದು ಕೂಡಾ. ಅವರ ಮನೆಯ ಕಟ್ಟಡನಿರ್ಮಾಣಕಾರ್ಯದಲ್ಲಿಯೂ ಇದೇ ಬಗೆಯಲ್ಲಿ ಶ್ರಮದ ಖರೀದಿ ನಡೆದೇ ಇದೆ. ಆದರೆ ನಿರ್ಮಾಣವಾಗುತ್ತಿರುವ ಆ ಮನೆ ತಮ್ಮ ಮನೆ ಎಂದೆನಿಸಬೇಕಿದ್ದರೆ ತಮ್ಮಿಂದ ಸಾಧ್ಯವಾಗಬಹುದಾದ ಶ್ರಮವನ್ನಾದರೂ ಖರೀದಿಸದೆ ತಾವೇ ಸ್ವತಃ ಹಾಕಬೇಕು ಎಂಬ ನಿಲವಿನಿಂದ ತೊಡಗಿದರು. ಮಿತ್ರರೊಬ್ಬರು ಮನೆ ಕಟ್ಟಿಸುತ್ತಿದ್ದರು. […]
Month : December-2023 Episode : Author : ಎಚ್ ಮಂಜುನಾಥ ಭಟ್
ಗಾಯಕ ಎಂ.ಡಿ.ಆರ್. ಸಂಗೀತವನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿರಲಿಲ್ಲ; ಅದು ಅದ್ವಿತೀಯ. ಸಂಗೀತರಸಿಕರ ಮೇಲೆ ಅವರು ಮೋಡಿಯನ್ನೇ ಮಾಡಿದ್ದರು. ಅವರೊಬ್ಬ ನಾದೋಪಾಸಕರಾಗಿದ್ದು, ಸಂಗೀತಕ್ಕಾಗಿ ಸಂಗೀತವನ್ನು ಹಾಡುತ್ತಿದ್ದರು. ಶ್ರೋತೃಗಳ ಸಂಖ್ಯೆ ಕಡಮೆಯಿದ್ದರೆ ಅವರಿಗೇನೂ ಚಿಂತೆಯಿಲ್ಲ. ತನ್ನ ಶೈಲಿಯನ್ನು ಯಾರಾದರೂ ಆಕ್ಷೇಪಿಸಿದರೆ ಅದಕ್ಕೆ ತಲೆಕೆಡಿಸಿಕೊಳ್ಳುವವರೂ ಅಲ್ಲ. ಮುಖ್ಯವಾಗಿ ಅವರು ತನ್ನ ತೃಪ್ತಿಗಾಗಿ ಹಾಡುತ್ತಿದ್ದರು. ಭಾವನೆಗಳಿಂದ ಶ್ರೀಮಂತವಾಗಿ ಶಾಂತಿಯನ್ನು ನೀಡುವ ಸಂಗೀತ ಅವರದಾಗಿದ್ದು, ಆ ರೀತಿಯಲ್ಲಿ ಅವರು ಹೆಚ್ಚಿನ ಸಮಕಾಲೀನರಿಗಿಂತ ಭಿನ್ನವಾಗಿದ್ದರು. ಅವರದ್ದು ಸೌಮ್ಯ, ಶುದ್ಧ ಮತ್ತು ಮನಸ್ಸಿಗೆ ಸಮಾಧಾನ ತರುವ […]
Month : December-2023 Episode : Author : ರಾಧಾಕೃಷ್ಣ ಕಲ್ಚಾರ್
ನನ್ನಂತಹವಳಿಗೆ ಯಾವ ಊರಿನ ಅರಮನೆಯಾದರೇನು? ಜೀವನದಲ್ಲಿ ವ್ಯತ್ಯಾಸವೇನೂ ಆಗುವುದಿಲ್ಲವಷ್ಟೆ? ನನ್ನ ಬದುಕಿನಲ್ಲೂ ಬದಲಾವಣೆಯೇನೂ ಆಗಲಿಲ್ಲ. ಹಿಂದೆ ರಾಜಕುಮಾರಿಯಾಗಿದ್ದು ಈಗ ರಾಣಿಯೆನಿಸಿದ ಅಂಬಿಕೆಯ ಪರಿಚರ್ಯೆಯಲ್ಲಿ ದಿನಗಳು ಸಾಗುತ್ತಿದ್ದವು. ಹಸ್ತಿನಾವತಿಯ ಮಹಾರಾಜ ವಿಚಿತ್ರವೀರ್ಯನ ಕೈಹಿಡಿದ ಕುಮಾರಿಯರಿಬ್ಬರೂ ಸುಖವಾಗಿ ಇದ್ದರು ಎನ್ನಬಹುದು. ಮಹಾರಾಜ ಅವರ ಅಂತಃಪುರವನ್ನು ಬಿಟ್ಟು ಹೊರಗೆ ಹೋಗುತ್ತಲೇ ಇರಲಿಲ್ಲ. ಹಗಲಿರುಳು ಅಲ್ಲಿಯೇ ಇರುತ್ತಿದ್ದ. ತನ್ನ ಮಡದಿಯರ ಚೆಲುವಿಗೆ ಮರುಳಾಗಿದ್ದನೋ ಅಥವಾ ಅವನ ಸ್ವಭಾವವೇ ಹಾಗಿತ್ತೋ ಹೇಳುವುದು ಕಷ್ಟ. ನನಗೆ ಹೆಸರಿಲ್ಲ. ಹೆಸರಿಲ್ಲ ಎಂದರೆ ಹೆತ್ತವರು ಕರೆಯುವುದಕ್ಕಾದರೂ ಒಂದು ಹೆಸರಿಡಲಿಲ್ಲವೋ […]
Month : December-2023 Episode : Author : ಆರತಿ ಪಟ್ರಮೆ
ಶ್ರಾದ್ಧಕ್ಕೇ ಆದರೂ ತೀರಾ ಅನಿವಾರ್ಯವಾಗಿ ಬರಲೇಬೇಕಾದವರು ಆಯಾ ದಿನಕ್ಕೆ ಬಂದುಹೋದರೆ ಹೆಚ್ಚು. ಇಲ್ಲದಿದ್ದರೆ ತಾವಿದ್ದಲ್ಲಿಂದಲೇ ತಿಲೋದಕ ಬಿಡುವ ಹೊತ್ತಿಗೆ ವಿಡಿಯೋಕಾಲ್ ಮಾಡಿದರೂ ಆಯಿತು ಎನ್ನುವವರೂ ಇಲ್ಲದಿಲ್ಲ! ನಮ್ಮ ಬದುಕು ಎತ್ತೆತ್ತಲೋ ಓಡುತ್ತಿರುವುದಕ್ಕೆ ಮತ್ತೆ ಮಮತೆಯ ಬೇಡಿ ಬಿಗಿದು ಕಟ್ಟಿಹಾಕಿಕೊಳ್ಳದಿದ್ದರೆ ಮುಂದಕ್ಕೆ ಉಳಿಯುವುದೇನು? ಎಲ್ಲರೂ ಒಂದೊಂದು ದ್ವೀಪವಾಗಿ ಬದಲಾಗುತ್ತಿದ್ದೇವೆಯೇ? ಸಂಬಂಧಗಳನ್ನು ನವೀಕರಿಸಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆಯೇ? ಯೋಚಿಸಬೇಕಿದೆ. ನಾವು ಬಹಳ ಚಿಕ್ಕವರಿದ್ದಾಗಿನ ಒಂದು ನೆನಪು. ಅಮ್ಮ ಬಾವಿಯಿಂದ ನೀರು ಸೇದಿ ಬಟ್ಟೆಯೊಗೆಯುತ್ತಿದ್ದರು. ಹಾಸಿಗೆ ಹಿಡಿದಿದ್ದ ಅಜ್ಜ ಅವರಷ್ಟಕ್ಕೆ ಮಲಗಿದ್ದರು. ಅಪ್ಪ […]
Month : December-2023 Episode : Author : ದಿನೇಶ್ ನಾಯಕ್
ಜಾಗತಿಕಮಟ್ಟದಲ್ಲಿ ಯೋಗ ನಗರಿಯೆಂದೇ ಪ್ರಖ್ಯಾತಿ ಹೊಂದಿರುವ ಋಷಿಕೇಶ ತನ್ನ ವೈವಿಧ್ಯಮಯ ಗುಡಿ-ಗೋಪುರಗಳು ಹಾಗೂ ಆಶ್ರಮಗಳಿಗೂ ಹೆಸರುವಾಸಿ. ಹಾಗೆ ನೋಡಿದರೆ, ಇಡೀ ನಗರವೇ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧನಾಕೇಂದ್ರಗಳಿಂದ ತುಂಬಿತುಳುಕುತ್ತಿದೆ. ಇಲ್ಲಿ ಹೆಜ್ಜೆಗೊಂದು ಮಂದಿರ ಮತ್ತು ಯೋಗಶಾಲೆ ಕಾಣಸಿಗುವುದು ಸಾಮಾನ್ಯ. ಆದರೆ ನಗರಪ್ರದೇಶದಿಂದ ಒಂದಿಷ್ಟು ದೂರದಲ್ಲಿ ಹರಡಿಕೊಂಡಿರುವ ಶಿವಾಲಿಕ್ ಪರ್ವತಶ್ರೇಣಿಗಳ ವನಸಿರಿಯ ನಡುವೆ ಇರುವ ಕೆಲವೊಂದು ಅಪೂರ್ವ ಗುಹಾಲಯಗಳ ಬಗ್ಗೆ ಹೆಚ್ಚಿನ ಪ್ರವಾಸಿಗರಿಗೆ ತಿಳಿದಿಲ್ಲ. ಸನಾತನ ಹಿಂದೂಧರ್ಮದ ಶ್ರದ್ಧಾಕೇಂದ್ರಗಳ ಪೈಕಿ ದೇವಸ್ಥಾನಗಳು ಮತ್ತು ಮಂದಿರಗಳಿಗೆ ಇರುವಷ್ಟೆ ಪ್ರಾಮುಖ್ಯ ಮತ್ತು […]