
ವಿಧಾನಸೌಧಕ್ಕೆ ಕೂಗಳತೆ ದೂರದಲ್ಲಿಯೇ ಒಂದು ಜಾಗವನ್ನು ಕೆಂಗಲ್ಲರು ವಿಶ್ವನಾಥನಿಗೆ ೯೯ ವರ್ಷದ ಗುತ್ತಿಗೆಯ ಆಧಾರದ ಮೇಲೆ ಮಂಜೂರು ಮಾಡಿದರು. ವಿಧಾನಸೌಧದ ಜೊತೆಜೊತೆಯಲ್ಲಿಯೇ ವಿಶ್ವನಾಥನ ಸುಲಭಶೌಚಾಲಯವೂ ನಿರ್ಮಾಣವಾಗತೊಡಗಿತು. ಮುಖ್ಯಮಂತ್ರಿಯ ಜೊತೆಯಲ್ಲಿ ಅಡ್ಡಾಡುವ ವ್ಯಕ್ತಿ ಎಂಬ ಕಾರಣಕ್ಕೆ ಶೌಚಾಲಯ ನಿರ್ಮಾಣಕ್ಕೆ ಶಾಸನಸಭೆಯ ಸೌಧ ಕಟ್ಟುತ್ತಿದ್ದ ಗುತ್ತಿಗೆದಾರರೇ ಸ್ವಲ್ಪ ರಿಯಾಯ್ತಿ ದರದಲ್ಲಿ ಕಲ್ಲು ಮರಳು ಪೂರೈಸಿ ತುಂಬ ಚೆಂದ ಅನ್ನುವಹಾಗೆ ಕಟ್ಟಿಯೂ ಕೊಟ್ಟರು. ಶೌಚಾಲಯದ ಉದ್ಘಾಟನೆಗೆ ಮುಖ್ಯಮಂತ್ರಿಗಳಾದ ತಾವು ಬರುವುದು ಬೇಡ ಎಂದು ವಿಶ್ವನಾಥ ಹೇಳಿದರೂ, ಇದು ಜನರಿಗೆ ಅನುಕೂಲ ಒದಗಿಸುವ […]