
ಉತ್ಥಾನ ಫೆಬ್ರುವರಿ 2024ರ ಸಂಚಿಕೆಯಲ್ಲಿ ಏನೇನಿದೆ?
Month : January-2024 Episode : Author :
Month : January-2024 Episode : Author :
Month : January-2024 Episode : Author :
Month : January-2024 Episode : Author :
Month : January-2024 Episode : Author : ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು
ಶಾಂತಿ, ತೃಪ್ತಿ ಮತ್ತು ಸಂತೋಷ – ಇವುಗಳು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರಬೇಕಾದ ಸಹಜವಾದ ಗುಣಗಳು. ಆದರೆ, ಮನುಷ್ಯನು ಬಾಹ್ಯಪ್ರಪಂಚದ ವಸ್ತುಗಳಲ್ಲಿ ಇವುಗಳನ್ನು ತಪ್ಪುಕಲ್ಪನೆಯಿಂದಾಗಿ ಹುಡುಕುತ್ತಾನೆ. ಮನಸ್ಸು ಯಾವ ವಸ್ತುವನ್ನು ಹಂಬಲಿಸುವುದೋ ಅದನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾನೆ. ಅವಿರತವಾಗಿ ಬದಲಾಗುವ ಬಾಹ್ಯಪ್ರಪಂಚದ ಶಾಶ್ವತವಾದ ಸುಖವು ದೊರೆಯುತ್ತದೆ ಎಂದು ಆಶಾಭಾವನೆಯನ್ನು ಇಟ್ಟುಕೊಳ್ಳುತ್ತಾನೆ. ಪ್ರಾಪಂಚಿಕವಸ್ತುಗಳನ್ನು ಕಂಡು ಅವುಗಳನ್ನು ಪಡೆಯಲು ಪ್ರಯತ್ನಿಸಿದಾಗ ಮನಸ್ಸು ಪ್ರಕ್ಷುಬ್ಧವಾಗುತ್ತದೆ. ಅದು ದೊರೆತ ಕೂಡಲೇ, ಮನುಷ್ಯನು ಕ್ಷಣಿಕವಾದ ಸುಖವನ್ನು ಅನುಭವಿಸುತ್ತಾನೆ. ಮರುಭೂಮಿಯಲ್ಲಿ ಮರೀಚಿಕೆಯನ್ನು ಕಂಡು ಬಾಯಾರಿಕೆಯನ್ನು ತಣಿಸಿಕೊಳ್ಳುವ ಪ್ರಯತ್ನದಂತೆಯೇ ಈ […]
Month : January-2024 Episode : Author : ಸೂರ್ಯಕಾಂತ ಮಳಗೀಕರ
ಪ್ರಭೂ, ಏಕಿಷ್ಟು ತಡಮಾಡಿದಿರಿ ಆಗಮಿಸಲು ಅಯೋಧ್ಯೆಗೆ?, ತೆರಳಿದಿರಾ ಮತ್ತೆ ವನವಾಸಕ್ಕೆ, ಎಲ್ಲವನೂ ತೊರೆದು ಕಾಡಿಗೆ, ಕಾಯುತ್ತಿತ್ತು ಅಯೋಧ್ಯೆ ಮತ್ತೆ ನಿಮ್ಮ ಅರಸೊತ್ತಿಗೆಗೆ, ಬಂದಿರಲ್ಲ ಕಡೆಗೂ ನಮ್ಮೆಲ್ಲರ ನಾಡಿಗೆ, ಹೃದಯದ ಬಾಗಿಲಿಗೆ. ಎಲ್ಲರಲ್ಲಿತ್ತು ಅಚಲ ವಿಶ್ವಾಸ, ನಂಬಿಕೆ, ಅನ್ಯಾಯಕ್ಕೆ ವಿದಾಯ, ಕೋರ್ಟು, ಕಚೇರಿ, ಕಟೆಕಟೆಯ ಬೆನ್ನ ಹಿಂದಿತ್ತು ನಿಮ್ಮ ಅಭಯ, ಅದೆಷ್ಟು ಅಡೆತಡೆ, ಅಗ್ನಿಪರೀಕ್ಷೆ, ಸಫಲತೆಯ ನಿರೀಕ್ಷೆ, ಎಲ್ಲವನೂ ದಾಟಿಸಿದಿರಿ, ಕೈಹಿಡಿದು ನಡೆಸಿದಿರಿ, ಶ್ರೀರಾಮರಕ್ಷೆ. ಇಂದು ಸಂಭ್ರಮ ಎಲ್ಲೆಲ್ಲೂ ಅಯೋಧ್ಯೆಗೆ ಶ್ರೀರಾಮ ಬರುವನೆಂದು, ನಲಿಯುತಿವೆ ಜೀವಗಳು ಮತ್ತೆ ರಾಮರಾಜ್ಯ […]
Month : January-2024 Episode : Author : ದರ್ಶನ್ ಎಸ್.ಎನ್.
ರಾಮ ಬರುವನು ಎನ್ನ ರಾಮ ಬರುವನು || ಕ್ಲೇಶ ಕಳೆವನು ಮನಕೆ ಹರುಷ ತರುವನು || ಸುಪ್ರಜಾ ಪಾಲಕ ಜಗದ ಹಿತದಾಯಕ || ಅಸುರ ಕುಲ ನಾಶಕ ಪಿತೃವಾಕ್ಯ ಪರಿಪಾಲಕ || ಜಾನಕಿಯ ಪ್ರಾಣಕಾಂತ ಇವನ ಭಕ್ತ ಹನುಮಂತ || ಸರಳ ಸುಂದರ ವಿನಯವಂತ ಭಕ್ತಿಗೊಲಿವ ಭಗವಂತ || ಗುಹನ ಆತಿಥ್ಯ ಪಡೆದವನು ಶಬರಿ ಭಕ್ತಿಗೊಲಿದವನು || ಸುಪ್ತ ಪ್ರಜ್ಞೆಯಾಗಿರುವವನು ಸರ್ವಾಭೀಷ್ಟ ಪ್ರದಾಯಕನು ||
Month : January-2024 Episode : ಕಥಾಸ್ಪರ್ಧೆ 2023-ಪ್ರಥಮ ಬಹುಮಾನ Author : ಕರುಣಾಕರ ಹಬ್ಬುಮನೆ
ಆ ಹಳೆಯ ಪತ್ರ ಸಿಕ್ಕಿ ಬಹಳ ದಿನವಾಗಿರಲಿಲ್ಲ. ನಾಗಪ್ಪ ಮಾಮ ತೀರಿಕೊಂಡಿದ್ದ. ಅವನ ವೈಕುಂಠಸಮಾರಾಧನೆಗೆಂದು ಗೋಕರ್ಣಕ್ಕೆ ಹೋದಾಗ ವಚ್ಚಲತ್ತೆ ಬಂದಿದ್ದಳು. ಲೋಕಾಭಿರಾಮದ ಮಾತಿನ ನಂತರ ಅವಳ ಬಳಿ ಭೀಮಬೊಪ್ಪನ ಸಾವಿನ ಬಗ್ಗೆ ಕೇಳಿದ್ದೆ. ಅವಳು ನನ್ನಿಂದ ನಿರೀಕ್ಷಿಸದ ಪ್ರಶ್ನೆಗೆ ಗಾಬರಿಯಾಗಿದ್ದಳು. ನಿನ್ನ ಹಳೆಯ ಪತ್ರ ಸಿಕ್ಕಿತು ಅದರಲ್ಲಿ ನೋಡಿದೆ ಎಂದೆ. ವಚ್ಚಲತ್ತೆ ಅಬ್ಬಾ ಎಂದು ದಂಗಾದಳು. “ಕಾಣಕೋಣದ ನಮ್ಮ ಮನೆಗೆ ಬಾ. ಅಲ್ಲಿ ಮಲ್ಲಿಕಾರ್ಜುನ ದೇವರ ದರ್ಶನ ಮಾಡಿದಂತೆಯೂ ಆಯಿತು, ಹಾಗೇ ಒಂದಿಡೀ ರಾತ್ರಿ ಕುಳಿತು ಭೀಮಬೊಪ್ಪನ […]
Month : January-2024 Episode : Author : ಜೋಗಿ
ಸಣ್ಣಕತೆಯ ಜಗತ್ತಿನಷ್ಟು ಪರಿವರ್ತನಶೀಲವಾದ ಸಾಹಿತ್ಯಪ್ರಕಾರ ಮತ್ತೊಂದಿಲ್ಲ. ವರ್ಷದಿಂದ ವರ್ಷಕ್ಕೆ ಸಣ್ಣಕತೆಗಳು ವಸ್ತು, ಆಶಯ, ನಿರೂಪಣಾ ವಿಧಾನವನ್ನು ಬದಲಾಯಿಸಿಕೊಳ್ಳುತ್ತಲೇ ನಡೆದಿವೆ. ಆಧುನಿಕತೆಯ ಅಂಶಗಳನ್ನು ಕೂಡ ಕತೆಗಳು ಮೈಗೂಡಿಸಿಕೊಳ್ಳುತ್ತಿವೆ. ಇವತ್ತು ಬರುತ್ತಿರುವ ವೆಬ್ಸೀರೀಸ್ಗಳಿಂದ ಹಿಡಿದು, ಕಿರುಚಿತ್ರಗಳ ತನಕ ದೃಶ್ಯಮಾಧ್ಯಮ ನಿರ್ವಹಿಸುವ ವಸ್ತುಗಳು ಕೂಡ ಒಂದು ಸಣ್ಣಕತೆಯಂತೆಯೇ ಇರುವುದನ್ನು ನಾವು ಗಮನಿಸಬಹುದು. ಇಂಥ ಹೊತ್ತಲ್ಲಿ ಉತ್ಥಾನ ಕಥಾಸ್ಪರ್ಧೆಯ ಕೊನೆಯ ಸುತ್ತಿಗೆ ಬಂದ ೩೦ ಕತೆಗಳನ್ನು ಓದುವ ಅವಕಾಶವನ್ನು ಪತ್ರಿಕೆಯ ಸಂಪಾದಕರು ನನಗೆ ಕಲ್ಪಿಸಿಕೊಟ್ಟಿದ್ದಾರೆ. ಅನೇಕ ಕಾರಣಗಳಿಗೆ ಮತ್ತು ಸ್ವಂತ ಆಸಕ್ತಿಯಿಂದ ಸಣ್ಣಕತೆಗಳನ್ನು […]
Month : January-2024 Episode : Author : ಅಣಕು ರಾಮನಾಥ್
ನರಸಿಂಹಯ್ಯನವರ ‘ರಾಮಾಯಣಕೊಕ್ಕೆ’ ಬುದ್ಧಿಯನ್ನು ಕಂಡು ಬೇಸತ್ತ ಜನರು ಹೇಗಾದರೂ ಮಾಡಿ ಅವರ ಈ ಹುಚ್ಚನ್ನು ಬಿಡಿಸಬೇಕೆಂದು ನಿರ್ಧರಿಸಿದರು. ಪಂಡಿತರೂ ಪಾಮರರೂ ಒಗ್ಗೂಡಿದರು. ‘ದೇವನು ರುಜು ಮಾಡಿದನು’ ಎಂಬ ಕುವೆಂಪುರವರ ಕವನವನ್ನು ಕೊಟ್ಟು ಲಿಂಕ್ ಮಾಡಲು ಹೇಳಿದರೆ ಹೇಗೆ?’ – ಎಂದರೊಬ್ಬ ಪಂಡಿತರು. ಅರಮನೆಯ ಸುಖವನ್ನೇ ಬಿಟ್ಟ ಸೀತೆ ಚಿನ್ನದ ಜಿಂಕೆಗಾಗಿ ಆಸೆ ಪಟ್ಟಿದ್ದೇಕೆ?’ ‘ಅಂದು ಅಕ್ಷಯ ತದಿಗೆಯಂತೆ.’ ‘ಭರತನು ಪಾದರಕ್ಷೆಯನ್ನು ಕೊಂಡೊಯ್ದs ಮೇಲೆ ರಾಮನಿಗೆ ಕಲ್ಲುಮುಳ್ಳಿನ ಹಾದಿಯಲ್ಲಿ ಓಡಾಡಲು ಕಷ್ಟ ಆಗಲಿಲ್ಲವೆ?’ ‘ರಾಮನ ಪಾದ ತಗುಲಿದರೆ ಬಂಡೆಯೇ […]
Month : January-2024 Episode : Author : ಡಾ. ಪಿ.ಎಂ. ಗಿರಿಧರ ಉಪಾಧ್ಯಾಯ
ಶ್ರೀರಾಮಮಂದಿರ ನಿರ್ಮಾಣವು ನಿಸ್ಸಂದೇಹವಾಗಿ ಅಯೋಧ್ಯೆ ಮಾತ್ರವಲ್ಲದೇ ಸಂಪೂರ್ಣ ಉತ್ತರಪ್ರದೇಶದ ಆರ್ಥಿಕ ಬೆಳವಣಿಗೆಯ ವೇಗವರ್ಧಕವಾಗಿ ಹೊರಹೊಮ್ಮುತ್ತಿದೆ. ಇದು ವಿವಿಧ ಕ್ಷೇತ್ರಗಳಲ್ಲಿ ಹೊಸಅಲೆಯನ್ನು ಸೃಷ್ಟಿಸಿದ್ದು, ಆರ್ಥಿಕ ಸಮೃದ್ಧಿಯ ಹೊಸಯುಗಕ್ಕೆ ನಾಂದಿ ಹಾಡಿದೆ. ಹೀಗೆ ಅಯೋಧ್ಯೆಯು ಮುಂದಿನ ಪೀಳಿಗೆಯ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಕೇಂದ್ರವಾಗಿ ವಿಕಸನಗೊಳ್ಳುವುದರಲ್ಲಿ ಯಾವ ಸಂದೇಹವೂ ಇಲ್ಲ. ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣವು ಭಾರತದ ಇತಿಹಾಸದ ಮಹತ್ತ್ವದ ಕ್ಷಣವಾಗಿದೆ. ಇದು ಕೇವಲ ಕಟ್ಟಡದ ನಿರ್ಮಾಣವಲ್ಲ, ಬದಲಿಗೆ ಆಧ್ಯಾತ್ಮಿಕ, ಸಾಮಾಜಿಕ ಮತ್ತು ಆರ್ಥಿಕ ಪುನರುಜ್ಜೀವನದ ಪ್ರತೀಕವಾಗಿದೆ. ಮಂದಿರ ನಿರ್ಮಾಣವು ಭಾರತದ […]