ಪ್ರಭೂ, ಏಕಿಷ್ಟು ತಡಮಾಡಿದಿರಿ ಆಗಮಿಸಲು ಅಯೋಧ್ಯೆಗೆ?,
ತೆರಳಿದಿರಾ ಮತ್ತೆ ವನವಾಸಕ್ಕೆ, ಎಲ್ಲವನೂ ತೊರೆದು ಕಾಡಿಗೆ,
ಕಾಯುತ್ತಿತ್ತು ಅಯೋಧ್ಯೆ ಮತ್ತೆ ನಿಮ್ಮ ಅರಸೊತ್ತಿಗೆಗೆ,
ಬಂದಿರಲ್ಲ ಕಡೆಗೂ ನಮ್ಮೆಲ್ಲರ ನಾಡಿಗೆ, ಹೃದಯದ ಬಾಗಿಲಿಗೆ.
ಎಲ್ಲರಲ್ಲಿತ್ತು ಅಚಲ ವಿಶ್ವಾಸ, ನಂಬಿಕೆ, ಅನ್ಯಾಯಕ್ಕೆ ವಿದಾಯ,
ಕೋರ್ಟು, ಕಚೇರಿ, ಕಟೆಕಟೆಯ ಬೆನ್ನ ಹಿಂದಿತ್ತು ನಿಮ್ಮ ಅಭಯ,
ಅದೆಷ್ಟು ಅಡೆತಡೆ, ಅಗ್ನಿಪರೀಕ್ಷೆ, ಸಫಲತೆಯ ನಿರೀಕ್ಷೆ,
ಎಲ್ಲವನೂ ದಾಟಿಸಿದಿರಿ, ಕೈಹಿಡಿದು ನಡೆಸಿದಿರಿ, ಶ್ರೀರಾಮರಕ್ಷೆ.
ಇಂದು ಸಂಭ್ರಮ ಎಲ್ಲೆಲ್ಲೂ ಅಯೋಧ್ಯೆಗೆ ಶ್ರೀರಾಮ ಬರುವನೆಂದು,
ನಲಿಯುತಿವೆ ಜೀವಗಳು ಮತ್ತೆ ರಾಮರಾಜ್ಯ ಬರಲಿದೆಯೆಂದು,
ಸ್ವೀಕರಿಸಿ ಪ್ರಭೂ ನಮ್ಮೆಲ್ಲರ ಆರತಿ, ನಮನಗಳನ್ನು,
ತಂಪೆರೆಯಿರಿ ಹೃದಯಗಳಿಗೆ, ನಾಡಿಗೆ, ನೊಂದಿರುವ ಪ್ರಜೆಗಳಿಗಿನ್ನು.