ಬದುಕಿನಲ್ಲಿ ನಮ್ಮೊಡನಿರುತ್ತಾರೆ
ಬಣ್ಣಬಣ್ಣದ ಮನಸ್ಸಿನವರು
ಮಣ್ಣು ಮಸಿ ಬಳಿಯುವವರು.
ಬದುಕಿನಲ್ಲಿ ನಮ್ಮೊಡನಿರುತ್ತಾರೆ
ಜನ್ಮದಾತರು, ಒಡಹುಟ್ಟಿದವರು
ದಾಯಾದಿಗಳಾಗುವವರು.
ಬದುಕಿನಲ್ಲಿ ನಮ್ಮೊಡನಿರುತ್ತಾರೆ
ಸಂತಸ ಸೂತಕ ಆಚರಿಸುವವರು
ಬರಿ ನೆನಪಿಗಷ್ಟೇ ಇರುವವರು.
ಬದುಕಿನಲ್ಲಿ ನಮ್ಮೊಡನಿರುತ್ತಾರೆ
ಏನಾದರೂ ಸರಿ ನಾನಿರುವೆನೆಂದು
ಭರವಸೆ ತುಂಬುವ ಒಲವುಗಳು.
ಬದುಕಿನಲ್ಲಿ ನಮ್ಮೊಡನಿರುತ್ತಾರೆ
ಕಟ್ಟುಪಾಡಿಗಂಜಿ ಬದುಕುವವರು
ನಿಷ್ಪçಯೋಜಕ, ಧೂರ್ತರು.
ಬದುಕಿನಲ್ಲಿ ನಮ್ಮೊಡನಿರುತ್ತಾರೆ
ಬಾಲ್ಯದ, ಹರೆಯದ ಸ್ನೇಹಿತರು
ಸಿಕ್ಕಾಗ ನಕ್ಕು ಹಗುರಾಗಿಸುವರು.
ಬದುಕಿನಲ್ಲಿ ನಮ್ಮೊಡನಿರುತ್ತಾರೆ
ಆತ್ಮಘಾತಕರು, ಮುಖವಾಡದವರು
ಮಾನವೀಯತೆ ಇರದ ರಕ್ಕಸರು.
ಬದುಕಿನಲ್ಲಿ ನಮ್ಮೊಡನಿರುತ್ತಾರೆ
ಆತ್ಮಬಂಧುಗಳೆಂಬ ದೇವತೆಗಳು
ಅಧೀರರಾಗದಂತೆ ಕಾಪಾಡುವವರು.
ಬದುಕಿನಲ್ಲಿ ನಮ್ಮೊಡನಿರುತ್ತಾರೆ.
ಇಂತಹ ಎಷ್ಟೆಷ್ಟೋ ಗುಣಮಣಿಗಳು
ಗೇರಿದಾಗ ಸಿಗುವ ಹಿತೈಷಿಗಳನ್ನು.