
ಬಂತು ಬಂತು ಶಿವರಾತ್ರಿ
ಅರಿಯದಿರೆ ನವೆ ಖಾತ್ರಿ
ಜಾತ್ರೆ ಭಜನೆ ಚೌಕಿ
ಗಣಪ ಸ್ಕಂದರ ವೃತ್ತ ನರ್ತನ
ವೃತ್ತದಲಿ ಚೌಕವೊ
ಚೌಕದಲಿ ವೃತ್ತವೊ?
ಹಳೆಪ್ರಶ್ನೆಯ ಸಮಾಧಿ
ಬರಲಿದೆ ಯುಗಾದಿ
ವೃತ್ತದಲಿ ಚೌಕ ಸುತ್ತುತಿದೆ
ಅನಂತ ನಾಗನೆ ಸರಿಯುತಿದೆ
ಎರಡರ ಕೇಂದ್ರ ಒಂದೆ
ಕೃತ್ತಿಕೆ ಬಂದಳು ಹೊಸ ಅಗ್ನಿಯ ತಂದಳು
ಅರುಣಿ ಬರಲಿ ನವಭರಣಿ ಬರಲಿ
ಮೂಲಾಧಾರ ಸಹಸ್ರಾರ ಏಕದಂಡ
ವಿನಾಯಕನ ಪಕ್ಕಕ್ಕೆ ರ್ಮುಗ
ಇಬ್ಬರ ನಡುವೆ ಆಟ,
ಶಿವಶಿವೆಯರ ಸುತ್ತುವ ಓಟ
ಓಟ ಆಟ ಎಲ್ಲ ಆರುಮುಖದವನ ಸ್ವತ್ತು
ಗಣಪತಿಗಿದೆ ಬೇರೆ ಗಮ್ಮತ್ತು
ಪ್ರಣವವ ಸುತ್ತುತ್ತಿದೆ ಭೂಗೋಳ
ಶಿವಶಕ್ತಿಯರೆ ಓಂದಂತಿಯ ಮೂಲ
ದ್ವೆöÊಮಾತುರನಿಗಿಲ್ಲ ಆತುರ
ಬರಲಿ ಸಕಲರಿಗೆ ಆರಾಮ
ರಾಮಾs ರಾಮಾs ಕೃಷ್ಣ ಕೃಷ್ಣ
ನೀನೆ ಶಿವ ರಾಮ ಕೃಷ್ಣ
ಓಂ ಪ್ರಥಮಾಯ ನಮಃ
ಓಂ ಪ್ರಮಥಾಯ ನಮಃ
ಶಿವಶಿವೆಯರ ಇರುಳಿನ ಗರ್ಭ
ನವ ಯುಗಾದಿಗೆ ಬೀಜ
ಹೊಸ ವರುಷದ ಭರಣಿ
ತೆರೆದನು ಥಳಥಳಿಸುವ ತರಣಿ
ಬಂತು ಬಂತು ಶಿವರಾತ್ರಿ
ಬಂತು ಬಂತು ನವರಾತ್ರಿ
ಅರಿಯದಿರೆ ನವೆ ಖಾತ್ರಿ