ಅಂದು… ‘ನಿನ್ನ ಗುಟ್ಟಿನ ಪ್ರೀತಿಯಲಿ ನಾನಿಲ್ಲವೇ?’ ಎಂದು ನಕ್ಕಾಗ ನಾನು ನಾಚಿದ್ದೆ ಮರುಕ್ಷಣ ಮೌನಕ್ಕೆ ಶರಣು. ಬಯಕೆಗಳ ಹೊಸಕಿ ದೂರ ಸರಿದಿದ್ದೆ ಬೇಲಿ ದಾಟುವ ಬಲವಿಲ್ಲದೆ. ಇಂದು… ನೀನು ನಿಂತಲ್ಲೇ ಇರುವೆ ಮರೆಯಲಾಗದ ನೆನಪಾಗಿ ನನ್ನೆದೆಯ ದನಿಯಾಗಿ ಬಡಿದಾಡುವ ನೂರಾರು ಪ್ರಶ್ನೆಗಳ ಉತ್ತರವಾಗಿ. ಈಗ, ಟಿಸಿಲೊಡೆದಿದೆ ಮರುಚಿಂತನೆ ಕಳೆದುಹೋದ ಕನಸುಗಳ ಮತ್ತೆ ಹೆಣೆಯಬೇಕಿದೆ ಬೇಲಿ ಹಾರಿ ನಿನ್ನ ಸೇರುವ ಕಸುವಿದೆ!
ಬೇಲಿ
Month : November-2024 Episode : Author : ಕೆ.ವಿ. ರಾಜಲಕ್ಷ್ಮಿ