
ತೆಲುಗಿನಲ್ಲಿ: ಪುಟ್ಟಗಂಟಿ ಗೋಪೀಕೃಷ್ಣ ಕನ್ನಡಕ್ಕೆ: ಎಸ್.ಆರ್. ರಾಮಸ್ವಾಮಿ ಮಯಾಂಕ್ನನ್ನೂ ದೇವಯಾನಿಯನ್ನೂ ಅವರ ಮೆಮೊರಿಯನ್ನು ಅಳಿಸಿಹಾಕುವುದಕ್ಕಾಗಿ ಪರಿಕರಗಳಿದ್ದ ಕೋಣೆಯೊಂದಕ್ಕೆ ಕರೆದೊಯ್ದರು. ಅದಕ್ಕೆ ಮುಂಚೆಯೆ ಅವರಿಬ್ಬರೂ ಕ್ಯಾಂಪಸಿಗೆ ಬಂದಾಗ ಅವರಿಂದ ವಶಪಡಿಸಿಕೊಂಡಿದ್ದ ಅವರ ಸಾಮಾನುಗಳನ್ನೆಲ್ಲ ಅವರಿಗೆ ಹಿಂದಿರುಗಿಸುವುದಕ್ಕಾಗಿ ಅಣಿಮಾಡಿರಿಸಿದ್ದರು. ಆ ಕೋಣೆಯಲ್ಲಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಪ್ರದರ್ಶನಕ್ಕೆ ಇರಿಸಿದಂತೆ ತೋರುತ್ತಿದ್ದವೇ ವಿನಾ ಆಪರೇಶನ್ ಥಿಯೇಟರಿನ ಸಜ್ಜಿಕೆಯಂತೆ ಇರಲಿಲ್ಲ. ಸೋಜಿಗದಿಂದ ಮಯಾಂಕ್ ಮತ್ತು ದೇವಯಾನಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇಲ್ಲಿಯ ಮೆಮೊರಿ ವೈಪ್ ಕಲಾಪ ಮುಗಿದರೆ ಕಳೆದ ಮೂರು ತಿಂಗಳಲ್ಲಿ ಈ ಕ್ಯಾಂಪಸಿನಲ್ಲಿ […]