ನಿಮ್ಮ ನಿಜವಾದ ಸಮಾಧಾನ ಕೇವಲ ಭಗವಂತನ ಹತ್ತಿರವೇ ಇರುತ್ತದೆ ಎಂಬ ವಿಶ್ವಾಸವನ್ನು ಹೊಂದಿದವರಾಗಿ ಪ್ರಪಂಚದಲ್ಲಿ ವ್ಯವಹರಿಸಿರಿ. ಜನರು ಲಾಭವಾಗಬೇಕೆಂಬ ಉದ್ದೇಶದಿಂದಲೇ ವ್ಯಾಪಾರ ಮಾಡುತ್ತಾರೆ. ವ್ಯಾಪಾರದಲ್ಲಿ ಲಾಭವಾಗದಿದ್ದರೆ ಆ ವ್ಯಾಪಾರಕ್ಕೆ ಏನೂ ಅರ್ಥವಿಲ್ಲದಂತೆ. ಇದರಂತೆ ಪ್ರಪಂಚದಲ್ಲಿ ಸಮಾಧಾನವು ನಿಜವಾದ ಲಾಭವಿರುತ್ತದೆ. ಇಂಥ ಸಮಾಧಾನವು ಪ್ರಾಪ್ತವಾಗದಿದ್ದರೆ ಪ್ರಪಂಚದ ಬಗ್ಗೆ ಆಸಕ್ತಿ ಹೊಂದಿರುವುದರಿಂದ ಆಗುವ ಲಾಭವೇನು? ನಿನ್ನ ಅಸಮಾಧಾನಕ್ಕೆ ನಿಶ್ಚಿತವಾದ ಕಾರಣವೇನು ಹೇಳು ಎಂದು ನಾವು ಯಾರನ್ನಾದರೂ ಕೇಳಿದರೆ, ಅವನಿಗೆ ನಿಶ್ಚಿತವಾದ ಕಾರಣವನ್ನು ಹೇಳಲು ಸಾಧ್ಯವಿಲ್ಲ. ಇದರ ಅರ್ಥವೇನೆಂದರೆ ತಾತ್ತ್ವಿಕ ದೃಷ್ಟಿಯಿಂದ […]
ಪ್ರಪಂಚವನ್ನು ಕೇವಲ ಕರ್ತವ್ಯವೆಂದು ಮಾಡಬೇಕು
Month : October-2021 Episode : Author : ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು