ಇತಿಹಾಸ

ಇತಿಹಾಸಗಳ ಪ್ರತಿಸೃಷ್ಟಿಸೋಣ

ಕಟ್ಟಳೆಗಳ ಒಡೆದು ದಾಸ್ಯವನು ಕಿತ್ತುಹಾಕೋಣ.

ಮಲಗಿರಲಿ ಅವರು ತಮ್ಮ ಸಿದ್ಧಾಂತಗಳಡಿಯಲ್ಲಿ

ತಾವೇ ಕಟ್ಟಿಕೊಂಡ ಸೆರೆಮನೆಗಳಲ್ಲಿ.

ನೋಡಲಿ ಜಗವು ನಮ್ಮ ಈ ಕಾರ್ಯವ

ಬರೆದಿಡಲಿ ಹೋರಾಟದ ಕೆಚ್ಚೆದೆಯ ಕಾಯಕವ.

ಶತಮಾನಗಳವರೆಗೆ ಬಂಧಿಸಿದ ಶೃಂಖಲೆಗಳ ಕಡಿದುಹಾಕೋಣ

ಜಗದ ಇರುವಿಕೆಗೆ ಹೊಸ ಸೃಷ್ಟಿ ನೀಡೋಣ.

ವಿದ್ಯೆಯ ಶಸ್ತ್ರವನು ಕೈಹಿಡಿದು ನಡೆಯೋಣ

ಎದೆಯಲಿರುವ ಛಲವೆಂಬ ಬಯಕೆಯ ದೇದೀಪ್ಯಗೊಳಿಸೋಣ.

ನವ ಭವಿತವ್ಯದ ಎಡೆಗೆ ಮುಂದಡಿ ಹಾಕೋಣ

ಇತಿಹಾಸದ ಪ್ರತಿಸೃಷ್ಟಿಯಲಿ ಕ್ರಾಂತಿಯಾಗೋಣ.

–ವಿಜಯ ನಾಗ್ ಜಿ.

Facebook
X
WhatsApp
Print
Email